Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
Gold Rate In 2026: 2026ರಲ್ಲಿ ಚಿನ್ನದ ದರ ಏನಾಗುತ್ತೆ! 2 ಲಕ್ಷ ತಲುಪುತ್ತಾ?
ವಿಶ್ವದಾದ್ಯಂತ ಈಗ ಚಿನ್ನದ ದರ ಏರಿಕೆಯ ಮೇಲೆ ಮಾರುಕಟ್ಟೆ ಪಂಡಿತರು ಕಣ್ಣಿಟ್ಟಿದ್ದಾರೆ, ಕೆಲ ವರ್ಷದಿಂದ ಏರಿಕೆಯಲ್ಲಿರುವ ಚಿನ್ನದ ಬೆಲೆ 2025ರಲ್ಲಿ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದೆ. ಬಡ ಹಾಗೂ ಮಧ್ಯಮ ವರ್ಗವು ಚಿನ್ನ ಖರೀದಿಗೆ ಈಗ ಲಕ್ಷ ಲಕ್ಷ ರೂಪಾಯಿ ಒಟ್ಟು ಮಾಡಬೇಕಾದ ಅನಿವಾರ್ಯಕ್ಕೆ ಸ್ಥಿತಿಗೆ ಬಂದಿದ್ದಾರೆ. 10 ಗ್ರಾಮ್ ಚಿನ್ನದ ಬೆಲೆ ಈಗ 1 ಲಕ್ಷ ರೂಪಾಯಿ ದಾಟಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಜಾಗತಿಕವಾಗಿ ಚಿನ್ನದ ದರ ಏರಿಕೆಯು ಭಾರತೀಯ ಮಾರುಕಟ್ಟೆ ಮೇಲೆಯೂ ಪ್ರಭಾವ ಉಂಟು ಮಾಡಿದೆ. ಚಿನ್ನ ಖರೀದಿಸುವವರಿಗೆ ಇದು ತಲೆನೋವು ತಂದಿದೆ, ಆದ್ರೆ ಹೂಡಿಕೆದಾರರಿಗೆ ಇದು ಸಂತಸ ತರಿಸಿದೆ. ಇತ್ತೀಚಿಗೆ ಡಾಲರ್ ಮೌಲ್ಯ ಹೆಚ್ಚಳ ಹಿನ್ನಲೆಯಲ್ಲಿ ಭಾರತದಲ್ಲೂ ಚಿನ್ನ ದುಬಾರಿಯಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 2025ರ ಜನವರಿ 1ರಂದು ಪ್ರತಿ ಔನ್ಸ್ ಚಿನ್ನದ ಬೆಲೆ ಸುಮಾರು $2,600 ಇತ್ತು. ಆದರೆ ಇದು ವರ್ಷದ ಅಂತ್ಯದ ಸಮಯದಲ್ಲಿ $4,300ಕ್ಕೆ ತಲುಪಿದೆ.

ಹೀಗೆ ಚಿನ್ನದ ದರ ಏರುಗತಿಯಲ್ಲಿರುವಾಗ ಅನೇಕರು ಮುಂಬರುವ ದಿನಗಳಲ್ಲಿ ಚಿನ್ನದ ದರ ಇಳಿಮುಖವಾಗಲಿದೆ ಎಂದು ವಿಶ್ಲೇಷಿಸುತ್ತಾರೆ. ಅದ್ರಲ್ಲೂ 2026ರಲ್ಲಿ ಚಿನ್ನದ ದರ ಏನಾಗಲಿದೆ ಎಂಬುದು ಹಲವರಿಗೆ ಕುತೂಹಲ ಮೂಡಿಸಿದೆ. 2025ರಲ್ಲಿ ಭಾರತದಲ್ಲಿ ಶೇ.72ರಷ್ಟು ಚಿನ್ನದ ದರ ಏರಿಕೆಯಾಗಿದೆ, ಇದು ಚಿನ್ನದ ದರ ಇತಿಹಾಸದಲ್ಲೇ ಅತೀ ಹೆಚ್ಚು ಏರಿಕೆಯಾಗಿದೆ.
ಹಾಗೆ 2026ರಲ್ಲಿ ಚಿನ್ನದ ದರ ಏನಾಗಲಿದೆ ಎಂಬುದನ್ನು ವಿಶ್ಲೇಷಕರು ಹಾಗೂ ಮಾರುಕಟ್ಟೆಯ ಪಂಡಿತರು ವಿವರಿಸುತ್ತಾರೆ. ಅದ್ರಲ್ಲೂ 2026ರಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಈ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ ಸುಮಾರು $5,000 ಮೀರಬಹುದು ಎಂದು ಅಂದಾಜಿಸಲಾಗಿದೆ.
ಇಷ್ಟು ಪ್ರಮಾಣದಲ್ಲಿ ಏರಿಕೆಯಾದರೆ ಭಾರತದಲ್ಲಿ ಚಿನ್ನ ಮತ್ತಷ್ಟು ದುಬಾರಿಯಾಗಲಿದೆ. ಪ್ರತಿ 10 ಗ್ರಾಮ್ ಚಿನ್ನದ ದರ 1,50,000 ತಲುಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದ್ರೆ ಇದು ಕೇಂದ್ರ ಬ್ಯಾಂಕ್ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆ ಸಂಬಂಧ ಹೊಂದಿದೆ, ಹೀಗಾಗಿ ಮುಂದಿನ ವರ್ಷವೂ ಏರಿಕೆ ನೋಡಬಹುದಾದದರು ಯಾವ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
2026ರಲ್ಲಿ ಚಿನ್ನದ ಬೆಲೆ 1 ಔನ್ಸ್‌ಗೆ 5,000 ಡಾಲರ್ ಮುಟ್ಟಬಹುದು. ಒಂದು ಔನ್ಸ್‌ಗೆ 28.35 ಗ್ರಾಮ್ ಆಗುತ್ತದೆ. ಈ ಲೆಕ್ಕಾಚಾರದಲ್ಲಿ ಒಂದು ಗ್ರಾಮ್ ಚಿನ್ನದ ಬೆಲೆ 2026ರಲ್ಲಿ ಸುಲಭವಾಗಿ 15,000-16,0000 ರೂ ಶ್ರೇಣಿಯಲ್ಲಿ ಇರಬಹದು. ಇನ್ನು ಹಲವು ದೇಶಗಳಲ್ಲಿಯೂ ಇದೇ ರೀತಿ ಏರಿಕೆ ನೋಡಬಹುದು. ಆದ್ರೆ ಕೆಲವ ದೇಶಗಳಲ್ಲಿ ಚಿನ್ನದ ದರ ಏರಿಕೆ ಪ್ರಮಾಣದಲ್ಲಿ ಸ್ಥಿರತೆ ಸಹ ನೋಡಬಹುದು. ಅದ್ರಲ್ಲೂ ದುಬೈ ಅಂತಹ ದೇಶಗಳಲ್ಲಿ ಚಿನ್ನದ ದರ ಸ್ಥಿರತೆ ಸಾಧಿಸುವ ಸಂಭವವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಿಶ್ವದಲ್ಲಿ ಅತೀ ಹೆಚ್ಚು ಚಿನ್ನ ಹೊಂದಿರುವ ದೇಶಗಳು ಯಾವುದು?
ಅಮೆರಿಕ
ಅಮೆರಿಕವು ವಿಶ್ವದಲ್ಲೇ ಅತಿ ಹೆಚ್ಚು ಚಿನ್ನದ ಸಂಗ್ರಹ ಹೊಂದಿದೆ. ಅಮೆರಿಕದ ಬಳಿ ಒಟ್ಟು 8,133.46 ಟನ್ ಚಿನ್ನವಿದೆ. ಇದರ ನಿವ್ವಳ ಮೌಲ್ಯ $ 6.06 ಬಿಲಿಯನ್ ಆಗಿದೆ. ಇದು ವಿಶ್ವದ ಹಲವು ದೇಶಗಳ ಒಟ್ಟಾರೆ ಚಿನ್ನದ ಸಂಗ್ರಹಕ್ಕೆ ಸಮವಾಗಿದೆ.
ಜರ್ಮನಿ
ಚಿನ್ನ ದೇಶವಾಗಿದ್ದರೂ ಜರ್ಮನಿಯಲ್ಲಿ ಚಿನ್ನ ಸಂಗ್ರಹ ಹೆಚ್ಛಾಗಿದೆ. ಆರ್ಥಿಕ ಸಂಕಷ್ಟ ಎದುರಿಸಿದ್ದ ಜರ್ಮನಿ ಬಳಿಕ ಚಿನ್ನದ ಸಂಗ್ರಹ ಹೆಚ್ಚಾಗಿಸಿದೆ. ಜರ್ಮನಿಯಲ್ಲಿ 3,351.53 ಟನ್ ಚಿನ್ನವಿದೆ. ಇದರ ನಿವ್ವಳ ಮೌಲ್ಯ $ 2.51 ಬಿಲಿಯನ್ ಆಗಿದೆ.
ಭಾರತ
ಭಾರತ ಚಿನ್ನ ಸಂಗ್ರಹದಲ್ಲಿ 8ನೇ ಸ್ಥಾನದಲ್ಲಿದೆ. ಭಾರತದ ಬಳಿ 84.76 ಟನ್ ಚಿನ್ನವಿದೆ. ಇದರ ಮೌಲ್ಯ $630 ಮಿಲಿಯನ್ ಆಗಿದೆ. ಭಾರತದಲ್ಲಿ ರಿಸರ್ವ್ ಬ್ಯಾಂಕ್ ಮೂಲಕ ಚಿನ್ನದ ವ್ಯವಹಾರ ನಡೆಯಲಿದೆ.



Click it and Unblock the Notifications
