ಗಗನಕ್ಕೇರಿದ ಚಿನ್ನದ ದರ: ಭಾರತಕ್ಕಿಂತ ಈ ದೇಶಗಳಲ್ಲಿ ಚಿನ್ನ ಬಹಳ ಅಗ್ಗ..!

ಭೂಮಿ ಮೇಲೆ ಸಿಗುವ ನೈಸರ್ಗಿಕ ವಸ್ತುಗಳಲ್ಲಿ ಅತ್ಯಂತ ದುಬಾರಿ ಅಂದರೆ ಅದರು ಚಿನ್ನ. ಚಿನ್ನವನ್ನು ಭೂಮಿಯಿಂದ ಹೊರತೆಗೆಯುವುದು ದೊಡ್ಡ ಸಾಹಸದ ಕಾರ್ಯ. ಹಾಗೆ ವಿಶ್ವದ ಹಲವು ದೇಶಗಳಲ್ಲಿ ಚಿನ್ನಕ್ಕೆ ದುಬಾರಿ ಬೆಲೆಯ ಜೊತೆಗೆ ಬೇಡಿಕೆ ಕೂಡ ಗಗನಕ್ಕೇರಿರಲಿದೆ. ಅದರಲ್ಲೂ ಭಾರತದಲ್ಲಿ ಚಿನ್ನ ಖರೀದಿ ಹಾಗೂ ಅದರ ದರ ಎರಡೂ ಕೂಡ ಏರಿಕೆ ಪ್ರಮಾಣದಲ್ಲೇ ಇರಲಿದೆ. ಯಾವ ದೇಶದಲ್ಲಿ ಚಿನ್ನದ ಸಂಗ್ರಹ ಅಧಿಕವಾಗಿರುತ್ತದೆಯೋ ಆ ದೇಶ ಆರ್ಥಿಕವಾಗಿಯೂ ಸದೃಢವಾಗಿರಲಿದೆ.

ಇನ್ನು 24 ಕ್ಯಾರೆಟ್ ಚಿನ್ನದ ಬೆಲೆ ಈಗ 1 ಲಕ್ಷ ರೂಪಾಯಿ ತಲುಪಿರುವುದು ಭಾರತೀಯ ಮಾರುಕಟ್ಟೆಯಲ್ಲಿ ಬಹಳ ತಲ್ಲಣಕ್ಕೆ ಕಾರಣ‍ವಾಗಿದೆ. ಸಾಮಾನ್ಯರು ಖರೀದಿಸಲಾಗದ ಸ್ಥಿತಿಗೆ ಚಿನ್ನದ ದರ ಏರಿಕೆಯಾಗುತ್ತಿದೆ. ಚಿನ್ನದ ಮೇಲೆ ಹೂಡಿಕೆ ಮಾಡಿದ್ದವರು ಸಂತಸಗೊಂಡಿದ್ದರೆ, ಮದುವೆ, ಶುಭ ಕಾರ್ಯಗಳಿಗೆ ಚಿನ್ನ ಖರೀದಿಸಲು ಮುಂದಾಗುವವರಿಗೆ ಆಘಾತ ತರುತ್ತಿದೆ.

Countries With Cheaper Gold Rates Than India

ಭಾರತೀಯ ಸಂಸ್ಕೃತಿಯಲ್ಲಿ ಚಿನ್ನ ಸಂಪತ್ತಿನ ಪ್ರತೀಕವಾಗಿ ಮಾತ್ರ ಉಳಿದಿಲ್ಲ ಬದಲಾಗಿ ಚಿನ್ನವು ಸಾಂಸ್ಕೃತಿಕವಾಗಿ, ಆಚರಣೆಯ ಭಾಗವಾಗಿ ಸೇರಿಕೊಂಡಿದೆ. ಹೀಗಾಗಿ ದರ ಏರಿಕೆಯ ನಡುವೆಯೂ ಜನ ಚಿನ್ನ ಖರೀದಿಗೆ ಮುಂದಾಗುತ್ತಾರೆ. ಇನ್ನು ಅಕ್ಷಯ ತೃತಿಯದಂತಹ ಸಮಯದಲ್ಲಿ ಚಿನ್ನ ಖರೀದಿಗೆ ಜನರು ಮುಗಿಬೀಳುವುದು ಸಹ ನೋಡಬಹುದು.

ಒಂದು ಕಡೆ ಚಿನ್ನದ ದರ ಗಗನಕ್ಕೇರುತ್ತಿದೆ. ಹಾಗೆ ಇನ್ನೊಂದು ಕಡೆ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಚಿನ್ನದ ದರ ಭಾರತಕ್ಕಿಂತ ತೀರ ಕಡಿಮೆಯಾಗಿದೆ. ಅಲ್ಲಿ ಚಿನ್ನ ಕೂಡ ದುಬಾರಿ ವಸ್ತು ಎಂಬ ಭಾವನೆ ಮೂಡುವುದಿಲ್ಲ. ಹಾಗಾದ್ರೆ ಭಾರತಕ್ಕೆ ಹೋಲಿಸಿದರೆ ಉಳಿದ ಯಾವೆಲ್ಲಾ ದೇಶದಲ್ಲಿ ಚಿನ್ನದ ದರ ಕಡಿಮೆಯಾಗಿದೆ. ಯಾವ ದೇಶದಲ್ಲಿ ಚಿನ್ನ ಖರೀದಿಸಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಅಮೆರಿಕ

ಚಿನ್ನದ ಕಡಿಮೆ ದರವನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಏಕೆಂದರೆ ಅಲ್ಲಿ ಚಿನ್ನದ ದರ ಭಾರತದಂತೆ ಯಾವಾಗಲು ಏರಿಕೆಯಾಗುವುದಿಲ್ಲ. ಅಲ್ಲಿನ ಸ್ಥಿರ ಆರ್ಥಿಕತೆ, ಡಾಲರ್ ಮೌಲ್ಯದಲ್ಲಿನ ಏರಿಕೆಯು ಚಿನ್ನದ ದರ ಸುಸ್ಥಿರದಲ್ಲಿರುವಂತೆ ನೋಡಿಕೊಳ್ಳಲಿದೆ. ಹೀಗಾಗಿ ಭಾರತಕ್ಕಿಂತ ಕಡಿಮೆ ದರಕ್ಕೆ ಅಲ್ಲಿ ಚಿನ್ನ ಮಾರಾಟವಾಗುತ್ತದೆ. ಆದರೆ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಚಿನ್ನವನ್ನು ತರಲು ಸಾಧ್ಯವಿಲ್ಲ. ಪುರುಷರು 20 ಗ್ರಾಮ್ ಹಾಗೆ ಮಹಿಳೆಯರು 40 ಗ್ರಾಮ್‌ನಷ್ಟು ಚಿನ್ನವನ್ನು ಅಮೆರಿಕದಿಂದ ಖರೀದಿಸಿ ತರಬಹುದು. ಆದರೆ ಇದು ಸಿದ್ಧ ಆಭರಣ ಆಗಿರಬೇಕು. ಗೋಲ್ಡ್ ಬಿಸ್ಕೇಟ್, ಚಿನ್ನದ ನಾಣ್ಯಕ್ಕೆ ಬೇರೆ ಮಾಪನಗಳಿವೆ.

ಆಸ್ಟ್ರೇಲಿಯಾ

ಆಸ್ಟ್ರೇಲಿಯಾದಲ್ಲಿ ಚಿನ್ನ ದುಬಾರಿ ಅಲ್ಲ. ಆಸ್ಟ್ರೇಲಿಯಾದಲ್ಲಿ ಹಲವು ಚಿನ್ನದ ಗಣಿಗಳಿವೆ. ಹೀಗಾಗಿ ಅಲ್ಲಿ ನಿರಂತರ ಚಿನ್ನದ ಪೂರೈಕೆ ಇದೆ. ಹೇರಳ ಚಿನ್ನ ಪೂರೈಕೆ ಮಾಡುವ ಕಾರಣ ಅಲ್ಲಿ ಚಿನ್ನ ದುಬಾರಿ ಅಲ್ಲ. ಹಾಗೆ ಚಿನ್ನದ ದರವನ್ನು ಅಲ್ಲಿನ ಸರ್ಕಾರ ಹಾಗೂ ವ್ಯಾಪಾರಿಗಳ ಮಧ್ಯಸ್ಥಿಕೆಯಲ್ಲಿ ನಿರ್ಧರಿತವಾಗುತ್ತದೆ. ಅಲ್ಲಿನ ಆರ್ಥಿಕತೆ ಕೂಡ ಸುಸ್ಥಿತಿಯಲ್ಲಿರುವುದರಿಂದ ಭಾರತಕ್ಕೆ ಹೋಲಿಸಿದರೆ ಅಲ್ಲಿ ಚಿನ್ನದ ದರ ಬಹಳ ಕಡಿಮೆಯಾಗಿದೆ.

ಸಿಂಗಾಪುರ್

ಈ ಸಣ್ಣ ದೇಶದಲ್ಲಿ ತೆರಿಗೆ ಸಂಬಂಧ ಕಠಿಣನ ನಿಯಮಗಳಿವೆ. ಹಾಗೆ ಅಲ್ಲಿ ಸರ್ಕಾರದ ತೆರಿಗೆ ಬಹಳ ಕಡಿಮೆ, ಚಿನ್ನವು ಅಲ್ಲಿನ ಜಿಎಸ್‌ಟಿ ನಿಯಮದಡಿ ತರುವುದಿಲ್ಲ. ಹೀಗಾಗಿ ಚಿನ್ನ ಕಡಿಮೆ ದರಕ್ಕೆ ಸಿಗುತ್ತದೆ. ಸಿಂಗಾಪುರ್ ಚಿನ್ನದ ಭದ್ರತೆ ಹಾಗೂ ಅದರ ನಿರ್ವಹಣೆಯನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಯತ್ತದೆ. ಹೀಗಾಗಿ ಅಲ್ಲಿ ಚಿನ್ನದ ದರ ಏರಿಳಿತವಾಗುವುದು ಬಹಳ ಕಡಿಮೆ.

ಯುಎಇ

ಅರಬ್ ರಾಷ್ಟ್ರ ಯುಎಇಯಲ್ಲಿ ಚಿನ್ನದ ದರ ಕಡಿಮೆಯಾಗಿದೆ. ಅಲ್ಲಿ ಪ್ರತಿಯೊಂದು ಐಷಾರಾಮಿ ವಸ್ತುಗಳು ಭಾರತಕ್ಕೆ ಹೋಲಿಸಿದರೆ ಬಹಳ ಕಡಿಮೆಯಾಗಿದೆ. ಅಲ್ಲಿ ಚಿನ್ನ ಖರೀದಿಗೆ ಯಾವುದೇ ಹೆಚ್ಚುವರಿ ತೆರಿಗೆಗಳಿಲ್ಲದಿರುವುದು ಚಿನ್ನ ಖರೀದಿಗೆ ಈ ದೇಶ ಸ್ವರ್ಗವಾಗಿದೆ. ಆದರೆ ಅಲ್ಲಿಂದ ಭಾರತಕ್ಕೆ ಚಿನ್ನ ಹೆಚ್ಚು ತರುವಂತಿಲ್ಲ. ಕೇವಲ 20 ಹಾಗೂ 49 ಗ್ರಾಮ್‌ನಷ್ಟು ಮಾತ್ರವೇ ಖರೀದಿಸಿ ತರಬಹುದು.

ಇಂಡೋನೇಷ್ಯಾ

ಇಂಡೋನೇಷ್ಯಾ ಚಿನ್ನವನ್ನು ರಫ್ತು ಸಹ ಮಾಡುವ ದೇಶ. ಅಲ್ಲಿ ಅತೀ ಹೆಚ್ಚು ಚಿನ್ನದ ನಿಕ್ಷೇಪಗಳಿವೆ. ಅಲ್ಲಿ ಚಿನ್ನದ ದರ ಕೂಡ ಬಹಳ ಕಡಿಮೆ. ಆದರೆ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಕಾರಣ ಅಲ್ಲಿನ ಜನರಿಗೆ ಈ ಚಿನ್ನದ ದರ ಕೂಡ ಅಧಿಕ ಎನಿಸುತ್ತದೆ. ಹೆಚ್ಚುವರಿ ಶುಲ್ಕ ಪಾವತಿಸದೆ ಅಲ್ಲಿ ಚಿನ್ನ ಖರೀದಿಸಬಹುದಾಗಿದೆ.

English summary

Gold Rate Hits All Time High: Countries With Cheaper Gold Rates Than India

In Indian culture, gold is not just a symbol of wealth, but has become a part of culture and ritual. Therefore, people are willing to buy gold despite the rising prices.
X
Desktop Bottom Promotion