Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಬೆಂಗಳೂರು ಬೀದಿಗೆ ಬಂತು ಚಿನ್ನ-ಬೆಳ್ಳಿಯ ಪಾನಿಪೂರಿ..! ವಿಡಿಯೋ ನೋಡಿ
ಪಾನಿಪೂರಿಯೆಂದರೆ ಹೆಚ್ಚಿನವರು ಇಷ್ಟಪಡುವಂತಹ ತಿಂಡಿ. ಅದರಲ್ಲೂ ಇದರೊಂದಿಗೆ ನೀಡುವಂತಹ ಸಿಹಿ ಹಾಗೂ ಖಾರ ಮಿಶ್ರಿತ ಪಾನಿ ಎಲ್ಲರಿಗೂ ಅಚ್ಚುಮೆಚ್ಚು. ಹೀಗಾಗಿ ಬೀದಿ ಬೀದಿಯಲ್ಲಿ ನಾವಿಂದು ಪಾನಿ ಪೂರಿ ಅಂಗಡಿ ನೋಡಬಹುದು. ಜೊತೆಗೆ ಈ ಪಾನಿಪೂರಿಯಲ್ಲಿ ಹತ್ತಾರು ವಿಧಗಳು ಸಹ ಬಂದುಬಿಟ್ಟಿವೆ.
ಭಾರತದೆಲ್ಲೆಡೆ ಪಾನಿಪೂರಿಯನ್ನು ಗೋಲ್ ಗಪ್ಪೆ, ಪುಕ್ಚಾ, ಗಪ್ ಚುಪ್ ಇತ್ಯಾದಿ ಹೆಸರುಗಳಿಂದ ಕರೆಲಾಗುತ್ತದೆ. ಸಂಜೆಯಾಗುತ್ತಲೇ ರಸ್ತೆಬದಿಯ ಗಾಡಿಯಲ್ಲಿ ಸಿಗುವಂತಹ ಪಾನಿಪೂರಿ ಸೇವಿಸಲು ಹಲವಾರು ಮಂದಿ ಸಾಲು ನಿಲ್ಲುವರು. ಕೆಲವರು ಇದು ಆರೋಗ್ಯಕ್ಕೆ ಹಾನಿಕಾರಕವೆಂದು ಹೇಳಿದರೆ, ಇನ್ನು ಕೆಲವರು ಇದು ಆರೋಗ್ಯಕಾರಿ ಎನ್ನುವರು. ಪಾನಿಪೂರಿಯಲ್ಲಿ ಪೋಷಕಾಂಶಗಳು ಇದೆಯಾ? ಪೂರಿಯನ್ನು ರವೆ ಮತ್ತು ಹಿಟ್ಟಿನಿಂದ ಮಾಡಲಾಗುವುದು. ಇದರಲ್ಲಿ ರವೆಯು ಪ್ರಮುಖವಾಗಿರುವುದು. ಇದರಲ್ಲಿ ನಾರಿನಾಂಶ, ವಿಟಮಿನ್ ಬಿ ಸಂಕೀರ್ಣ, ವಿಟಮಿನ್ ಇ, ಕ್ಯಾಲ್ಸಿಯಂ ಮತ್ತು ಮೆಗ್ನಿಶಿಯಂ ಇದೆ.

ಪೂರಿಯ ಒಳಗಡೆ ಆಲೂಗಡ್ಡೆ ಮತ್ತು ಕಡಲೆ ಹಾಕಲಾಗುತ್ತದೆ. ಹುಳಿಯಾಗಿರುವಂತಹ ನೀರಿನಲ್ಲಿ ಹುಣಸೆಹುಳಿ ಮತ್ತು ಪುದೀನಾ ಎಲೆಗಳು ಇರುವುದು. ಕಡಲೆಯಲ್ಲಿ ಉನ್ನತ ಮಟ್ಟದ ನಾರಿನಾಂಶ, ಪ್ರೋಟೀನ್ ಮತ್ತು ಹಲವಾರು ರೀತಿಯ ವಿಟಮಿನ್ ಗಳು ಮತ್ತು ಖನಿಜಾಂಶಗಳು ಇವೆ. ಬಟಾಟೆಯಲ್ಲಿ ವಿಟಮಿನ್ ಬಿ6, ವಿಟಮಿನ್ ಸಿ, ಮ್ಯಾಂಗನೀಸ್, ಫೋಸ್ಪರಸ್, ನಿಯಾಸಿನ್ ಮತ್ತು ಪಾಂಟೊಥೆನಿಕ್ ಆಮ್ಲವಿದೆ. ರಸ್ತೆ ಬದಿಯಲ್ಲಿ ಸಿಗುವಂತಹ ಪಾನಿಪೂರಿಯನ್ನು ಅನಾರೋಗ್ಯಕರ ರೀತಿಯಲ್ಲಿ ತಯಾರಿಸಿರಬಹುದು. ಆದರೆ ಇದಕ್ಕೆ ಬಳಸಲಾಗುವಂತಹ ಸಾಮಗ್ರಿಗಳು ಆರೋಗ್ಯಕರ. ರವೆಯಿಂದ ಮಾಡಲಾಗುವಂತಹ ಪೂರಿಯು ಕರಿದು ಕುರುಕಲಾಗಿರುವುದು. ಇದಕ್ಕೆ ಹುಣಸೆ ಹುಳಿ ಚಟ್ನಿ, ಮೆಣಸು, ಚಾಟ್ ಮಸಾಲ, ಜೀರಿಗೆ ಹುಡಿ, ಬಟಾಟೆ, ಈರುಳ್ಳಿ ಅಥವಾ ಕಡಲೆ ಹಾಕಲಾಗುತ್ತದೆ.
ಆದ್ರೆ ನಾವಿಂದು ಹೊಸದಾದ ಪಾನಿಪೂರಿ ಬಗ್ಗೆ ಹೇಳುತ್ತಿದ್ದೇವೆ. ಬೆಂಗಳೂರಿನ ಒಂದು ಅಂಗಡಿಯಲ್ಲಿ ಚಿನ್ನ, ಬೆಳ್ಳಿಯ ಪಾನಿಪೂರಿ ಸಿಗುತ್ತಿದೆ. ಹೌದು ಚಿನ್ನ ಮತ್ತು ಬೆಳ್ಳಿ ಕೋಟಿಂಗ್ ಇರುವ ಪಾನಿ ಪೂರಿ ಇದಾಗಿದ್ದು, ಭಾರೀ ಅಚ್ಚರಿ ಮೂಡಿಸಿರುವ ಜೊತೆಗೆ ಟೀಕೆಗೂ ಗುರಿಯಾಗಿದೆ.
ಈ ವಿಚಿತ್ರ ಪಾನಿಪೂರಿಯನ್ನು ಖುಷ್ಬು ಪರ್ಮಾರ್ ಎಂಬುವರು Instagram ನಲ್ಲಿ ಹಂಚಿಕೊಂಡಿದ್ದಾರೆ. ಇದು ಚಿನ್ನದ ಬಣ್ಣದ ಟ್ರೇ ಮತ್ತು ಗ್ಲಾಸ್‌ಗಳ ಮೇಲೆ ಹುರಿದ ಪೂರಿಗಳನ್ನು ಇಟ್ಟಿರುವುದನ್ನು ನಾವು ನೋಡಬಹುದು. ನಂತರ ಅವರು ಈರುಳ್ಳಿ ಜಾಗೂ ಮಸಾಲೆಗಳು ಮತ್ತು ಜೇನುತುಪ್ಪದಿಂದ ಪೂರಿಗಳನ್ನು ತುಂಬುತ್ತಾರೆ. ಬಳಿಕ ಪೂರಿಯ ಒಳಗೆ ಪಾನಿಯನ್ನು ಹಾಕಿ ಅಂತಿಮವಾಗಿ ಪೂರಿಗಳ ಮೇಲೆ ತಿನ್ನಬಹುದಾದ ಚಿನ್ನ ಮತ್ತು ಬೆಳ್ಳಿಯ ಕೋಟಿಂಗ್ ಇರುವ ಪೇಪರ್ ಹಾಕುತ್ತಾನೆ. ಬಳಿಕ ಸವಿಯಲು ನೀಡಲಾಗುತ್ತದೆ.
ಈ ವೀಡಿಯೊವನ್ನು ಕೆಲವೇ ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಇದು ಸುಮಾರು ಮೂರು ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಕೆಲವರು ಈ ಚಿನ್ನ, ಬೆಳ್ಳಿಯ ಪಾನಿಪೂರಿಯನ್ನು ಮೆಚ್ಚಿಕೊಂಡಿದ್ದರೆ ಹಲವರು ಟೀಕಿಸಿದ್ದಾರೆ. ಈ ರೀತಿ ಚಿನ್ನ, ಬೆಳ್ಳಿ ಕೋಟಿಂಗ್ ಇರುವ ಪಾನಿಪೂರಿ ಮಾಡುವ ಮತ್ತು ಸೇವಿಸುವ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.
ಏಕೆಂದರೆ ಚಿನ್ನ ಮತ್ತು ಬೆಳ್ಳಿಯ ಕೋಟಿಂಗ್‌ನಿಂದಾಗಿ ಈ ಪಾನಿಪೂರಿಗೆ ವಿಶೇಷ ರುಚಿ ಬರುವುದಿಲ್ಲ. ಹಾಗಿದ್ದ ಮೇಲೆ ಇದಕ್ಕೆ ಇಷ್ಟು ದುಬಾರಿ ಬೆಲೆ ನೀಡಿ ಸೇವಿಸುವುದೇಕೆ? ಎಂಬುದು ನೆಟ್ಟಿಗರ ಪ್ರಶ್ನೆಯಾಗಿದೆ.
ಜೊತೆಗೆ ಇದೊಂದು ಅನಗತ್ಯ ಆಹಾರ ಪದ್ಧತಿ ಸೇವಿಸಲು ಯೋಗ್ಯವಿರುವ ಆಹಾರಗಳಿಗೆ ಈ ರೀತಿ ಚಿನ್ನ, ಬೆಳ್ಳಿ ಕೋಟಿಂಗ್ ಎದು ಜನರನ್ನು ಮರಳು ಮಾಡಲಾಗುತ್ತದೆ. ಇದು ಅವರ ವ್ಯಾಪಾರಾದ ಜಾಲ ಎಂದು ಹಲವರು ಆರೋಪಿಸಿದ್ದಾರೆ. ಆದರೆ ಕೆಲವರು ಈ ಜಾಗಕ್ಕೆ ತೆರಳಿ ಒಮ್ಮೆಯಾದರು ಈ ಪಾನಿಪೂರಿ ಸವಿಯಲೇಬೇಕು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.



Click it and Unblock the Notifications
