Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಮಾನವೀಯತೆಯನ್ನೇ ಕಳೆದುಕೊಂಡಿತಾ ಯುವ ಸಮುದಾಯ..!! ಮೊಬೈಲ್ ಎಷ್ಟು ಕೆಟ್ಟ ಪ್ರಭಾವ ಬೀರಿದೆ ನೋಡಿ!
ಸಾಮಾಜಿಕ ಜಾಲತಾಣ ಇಂದು ಯುವ ಸಮುದಾಯವನ್ನ ತನ್ನಲ್ಲಿ ಮುಳುಗಿಸಿದೆ. ಯುವ ಸಮುದಾಯ ಈಗ ಮೊಬೈಲ್ ಇಲ್ಲದೆ ಬದುಕುವುದೇ ಕಷ್ಟ ಎಂಬ ಜಾಲದೊಳಗೆ ಸಿಲುಕಿದ್ದಾರೆ. ಹೀಗಾಗಿ ಮೊಬೈಲ್ ಬಳಕೆಯ ಅಪಾಯಗಳು ಸಹ ಈಗ ಏರಿಕೆಯಾಗಿದೆ. ಸೆಲ್ಫಿ ತೆಗೆಯುವಾಗ ಅಪಾಯಗಳ ಎದುರಿಸುವುದು, ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದು ನಡೆದೇ ಇದೆ.
ಇನ್ನು ಯಾರಾದರು ಸಮಸ್ಯೆಯಲ್ಲಿ ಸಿಲುಕಿದ್ದರೆ ಅಥವಾ ಸಹಾಯಕ್ಕಾಗಿ ಅಂಗಲಾಚುವಾಗಲೂ ಈಗ ಮೊಬೈಲ್ ತೆಗೆದು ವಿಡಿಯೋ ರೆಕಾರ್ಡ್ ಮಾಡಲು ಮುಂದಾಗುತ್ತಾರೆ. ಇತ್ತೀಚಿಗೆ ಇಂತಹ ಹತ್ತು ಹಲವರು ಪ್ರಕರಣಗಳನ್ನ ನಾವು ನೋಡುತ್ತಲೇ ಇರುತ್ತೇವೆ. ಅದರಲ್ಲೂ ಯುವ ಜನತೆ ಹೆಚ್ಚಾಗಿ ಇಂತಹ ಗೀಳಿಗೆ ಬಿದ್ದಿದ್ದಾರೆ.

ಈಗ ಇಂತಹದ್ದೆ ಘಟನೆಯೊಂದು ನಡೆದಿದ್ದು, ಯುವಜನತೆ ಈ ಮೊಬೈಲ್ ಗೀಳಿನಿಂದಾಗಿ ಸೂಕ್ಷ್ಮ ತನವನ್ನೇ ಕಳೆದುಕೊಂಡಿದ್ದಾರಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಹುಡುಗಿಯೊಬ್ಬಳು ರೀಲ್ಸ್ ಮಾಡುತ್ತಿರುವುದು ನೋಡಬಹುದು ಇಷ್ಟೇ ಆಗಿದ್ದರೆ ಸಮಸ್ಯೆಯಲ್ಲ ಆದರೆ ಆಕೆಯ ಮುಂದೆಯೇ ಮೂವರು ಪರಸ್ಪರ ಹೊಡೆದಾಡುತ್ತಿದ್ದಾರೆ.
ಅಲ್ಲಿ ಪ್ರೀತಿಯ ವಿಚಾರವಾಗಿ ಇಬ್ಬರು ಯುವತಿಯರು ಹಾಗೂ ಓರ್ವ ಯುವಕ ನಡುಬೀದಿಯಲ್ಲಿ ಕಿತ್ತಾಡುತ್ತಿದ್ದಾರೆ ಆದರೆ ಓರ್ವ ಯುವತಿ ಈ ಗಲಾಟೆಯ ನಡುವೆಯೂ ಮೊಬೈಲ್‌ನಲ್ಲಿ ರೀಲ್ಸ್ ಮಾಡುತ್ತಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೋಡಿದವರು ಆ ಜಗಳ ಆಡುತ್ತಿದ್ದವರ ಬದಲು ರೀಲ್ಸ್ ಮಾಡಿದ ಯುವತಿಯ ಮನಸ್ಥಿತಿಯ ಕುರಿತು ಆತಂಕ ಹೊರಹಾಕಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಸೆರೆಹಿಡಿಯಲಾದ ಈ ವಿಡಿಯೋದಲ್ಲಿ ವಿಲಕ್ಷಣ ಘಟನೆ ನಡೆದಿರುವುದು ನೋಡಬಹುದು. ಇನ್‌ಸ್ಟಾಗ್ರಾಮ್ ರೀಲ್ ಅನ್ನು ರೆಕಾರ್ಡ್ ಮಾಡುವ ಹುಡುಗಿಯೊಬ್ಬಳು ಕಾಣಿಸಿಕೊಂಡಿದ್ದಾಳೆ ಮತ್ತು ಅದು ಈಗ ಇಂಟರ್ನೆಟ್‌ನಲ್ಲಿ ಆಕೆಯ ಉದ್ದೇಶಗಳ ಪ್ರಶ್ನಿಸುತ್ತಿದೆ. ಒಬ್ಬ ಹುಡುಗನಿಗಾಗಿ ಇಬ್ಬರು ಯುವತಿಯರು ನಡು ಬೀದಿಯಲ್ಲಿ ಪರಸ್ಪರ ಕೂದಲು ಹಿಡಿದು ಎಳೆದಾಡುತ್ತಿದ್ದಾರೆ. ಇಬ್ಬರು ಯುವತಿಯರ ಬಿಡಿಸಲು ಹುಡುಗ ಪ್ರಯತ್ನಿಸುತ್ತಿದ್ದಾನೆ. ಆದರೆ ಮತ್ತೊಬ್ಬ ಯುವತಿ ಈ ಸಮಯದಲ್ಲಿ ವಿಡಿಯೋ ಮಾಡುತ್ತಿದ್ದಾಳೆ.
ಆದಕೆ ಬರಿ ವಿಡಿಯೋ ಮಾಡುತ್ತಿಲ್ಲ ಬದಲಾಗಿ ರೀಲ್ಸ್‌ಗೆ ಹೆಜ್ಜೆ ಹಾಕುತ್ತಿದ್ದಾಳೆ. ಈ ಪರಿಸ್ಥಿತಿಯಲ್ಲಿ ಯುತಿಯೊಬ್ಬಳ ವರ್ತನೆ ಕಂಡು ಜನ ಆತಂಕಗೊಂಡಿದ್ದಾರೆ. ಯುವ ಜನತೆ ಈ ರೀಲ್ಸ್ ಗೀಳಿಗೆ ಬಿದ್ದು ಸೂಕ್ಷ್ಮತೆಯನ್ನೇ ಕಳೆದುಕೊಂಡಿದ್ದಾರೆ ಎಂದು ನೋಡಿದವರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಕಳೆದ 2-3 ವರ್ಷಗಳಲ್ಲಿ, ಶಿಮ್ಲಾದ ರಿಡ್ಜ್ ಪ್ರಾಂತ್ಯವು ಭಯಂಕರ ಚಟುವಟಿಕೆಗಳಿಗೆ ಹಾಟ್‌ಸ್ಪಾಟ್ ಆಗಿದೆ" ಎಂಬ ಬರಹದಡಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಜೊತೆಗೆ ಇಂತಹ ಘಟನಗಳಿಗೆ ಬ್ರೇಕ್ ಹಾಕಬೇಕಿದೆ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಇನ್ನು ಈ ವಿಡಿಯೋ ನೋಡಿದ ಮಂದಿ ಯುವತಿಯ ವರ್ತನೆಗೆ ಎಲ್ಲರು ಅಚ್ಚರಿಗೊಂಡಿದ್ದಾರೆ.
ಯುವತಿಯ ಅಮಾನವೀಯ ಕಾರ್ಯ ನೋಡಿದರೆ ಅಚ್ಚರಿಯಾಗುತ್ತೆ. ಆಕೆ ತನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ ಎನಿಸುತ್ತಿದೆ. ಯಾರು ಸಹ ಇಂತಹ ಪರಿಸ್ಥಿತಿಯಲ್ಲಿ ವಿಡಿಯೋ ಮಾಡಲು ಸಾಧ್ಯವಿಲ್ಲ ಇದು ಸಮಸ್ಯೆಯ ಸೂಚನೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
ಅಲ್ಲದೆ ಯಾರು ಸಹ ಸಂಕಷ್ಟದ ಸಮಯದಲ್ಲಿ ಸಂಯೋಷದಿಂದ ಇರುವುದನ್ನು ನೋಡಿದ್ದೀರಾ? ಇಲ್ಲವೇ ಇಲ್ಲ, ಆದ್ರೆ ಕೆಲವರು ಇಂತಹ ಪರಿಸ್ಥಿತಿಯಲ್ಲೂ ಸಂತೋಷದಿಂದ ಕುಣಿಯುತ್ತಾರೆ ಅಂದರೆ ಅವರ ಮನಸ್ಥಿತಿ ಏನಾಗಿರಬಹುದು ಎಂಬುದನ್ನು ನೀವೇ ಒಮ್ಮೆ ಆಲೋಚಿಸಿ ನೋಡಿ. ಇದು ನಿಜಕ್ಕೂ ಚಿಂತಿಸಬೇಕಾದ ಸಮಸ್ಯೆಯಾಗಿದೆ.
ಕ್ಲಿಪ್ ಅನ್ನು ಎರಡು ದಿನಗಳ ಹಿಂದೆ ಅಪ್‌ಲೋಡ್ ಮಾಡಲಾಗಿದೆ ಮತ್ತು ಹಂಚಿಕೊಂಡಾಗಿನಿಂದ, ಇದು 11,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಈ ಸಾಂಪ್ರದಾಯಿಕ ತಾಣಗಳು ಗೌರವ ಮತ್ತು ಸಂರಕ್ಷಣೆಗೆ ಅರ್ಹವಾಗಿವೆ. ಕನಿಷ್ಠ, ಗೃಹರಕ್ಷಕರು ಅಥವಾ ಪೊಲೀಸ್ ಸಿಬ್ಬಂದಿ ಅಲ್ಲಿಯೇ ಠಿಕಾಣಿ ಹೂಡಬೇಕು ಮತ್ತು ಅಂತಹ ದುರುಪಯೋಗವನ್ನು ತಡೆಗಟ್ಟಬೇಕು. ಇಷ್ಟಾದರೆ ಜನರಿಗೆ ನಾಗರಿಕ ಪ್ರಜ್ಷೆ ಸ್ವಲ್ಪವಾದರು ಬರಬಹುದು ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.



Click it and Unblock the Notifications
