Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ?
ಕೊಟ್ಟಿಗೆಯಲ್ಲಿ ಸಿಕ್ಕಿಬಿತ್ತು ಮೈ ನಡುಗಿಸುವಷ್ಟು ದೈತ್ಯಾಕಾರದ ಹೆಬ್ಬಾವು...!
ಭೂಮಿ ಮೇಲೆ ಎಷ್ಟು ದೊಡ್ಡ ದೊಡ್ಡ ಹಾವುಗಳು ಇವೆ ಅಂದ್ರೆ ನೀವು ನಂಬಲು ಸಾಧ್ಯವಾಗುವುದಿಲ್ಲ. ಇತ್ತೀಚಿಗೆ ಈಕ್ವೆಡರ್‌ನ ಮಳೆ ಕಾಡಿನಲ್ಲಿ ವಿಶ್ವದ ಅತ್ಯಂತ ದೊಡ್ಡ ಅನಾಕೊಂಡ ಹಾವು ಪತ್ತೆಯಾಗಿತ್ತು. ಇನ್ನು ಮಕ್ಕಳನ್ನು ಸಹ ಕೇಳಿದರು ಅತೀ ದೊಡ್ಡ ಹಾವು ಅನಾಕೊಂಡ ಎಂದೇ ಹೇಳುತ್ತಾರೆ.
ಅನಾಕೊಂಡ ಅಷ್ಟು ದೊಡ್ಡ ಮತ್ತು ಭಯಾನಕ ಹಾವುಗಳಲ್ಲಿ ಒಂದಾಗಿದೆ. ಅವು ತಮ್ಮ ದೇಹದದ ಗಾತ್ರದಷ್ಟೇ ದೊಡ್ಡ ಗಾತ್ರದ ಜೀವಿಗಳನ್ನು ಕ್ಷಣಾರ್ಧದಲ್ಲಿ ತಿಂದು ಮುಗಿಸುತ್ತವೆ. ಆದ್ರೆ ಈ ಹಾವುಗಳ ಸಂಖ್ಯೆ ಈಗ ಕಡಿಮೆಯಾಗಿದ್ದು, ಅಮೇಜಾನ್‌ನಂತಹ ದೊಡ್ಡ ಅರಣ್ಯಗಳಲ್ಲಿ ಮಾತ್ರ ಕಂಡುಬರುತ್ತಿವೆ. ಆದರೆ ಇದಕ್ಕಿಂತ ಗಾತ್ರದಲ್ಲಿ ಸ್ವಲ್ಪ ಚಿಕ್ಕದಾಗಿರುವ ಹೆಬ್ಬಾವುಗಳು ಎಲ್ಲಾ ಕಡೆಗಳಲ್ಲಿ ಕಂಡುಬರುತ್ತವೆ.

ಆದ್ರೆ ಇಲ್ಲೊಂದು ವೈರಲ್ ಆಗಿರುವ ವಿಡಿಯೋದಲ್ಲಿ ದೈತ್ಯ ಹೆಬ್ಬಾವೊಂದು ಮನೆಯವರಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿದೆ. ಈ ಹಾವು ಆಹಾರ ಅರಸಿ ನಾಡಿಗೆ ಬಂದು ಹೊಟ್ಟೆ ಬಿರಿಯುವಷ್ಟು ತಿಂದು ಬಳಿಕ ಹಗ್ಗವೊಂದಕ್ಕೆ ಸಿಕ್ಕಿಬಿದ್ದು ಒದ್ದಾಡುತ್ತಿರುವ ವಿಡಿಯೋ ಇದಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹಾವಿನ ಗಾತ್ರ ಕಂಡು ಬೆಚ್ಚಿಬಿದ್ದಿದ್ದಾರೆ.
ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಸಂತ ನಂದಾ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಾವು ನೋಡಿದ ಮಂದಿ ಬೆಚ್ಚಿಬಿದ್ದಿದ್ದಾರೆ. ಈ ಹೆಬ್ಬಾವು ವಿಷಪೂರಿತ ಅಲ್ಲದಿದ್ದರೂ ಅದರ ಹಿಡಿತಕ್ಕೆ ಸಿಕ್ಕರೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಇಲ್ಲಿಯೂ ಸಹ ಆ ಹೆಬ್ಬಾವು ಆಹಾರ ಅರಸಿ ಬಂದು ಕೊಟ್ಟಿಗೆಯಲ್ಲಿದ್ದ ಕರುವನ್ನೋ, ಕುರಿಯನ್ನೋ ತಿಂದು ಬಿಟ್ಟಿದೆ. ಆದರೆ ಹೊಟ್ಟೆ ತುಂಬಿದ ಬಳಿಕ ಈ ಹಾವುಗಳು ವಿಶ್ರಾಂತಿಗೆ ಒಳಗಾಗುತ್ತವೆ. ಏಕೆಂದರೆ ಹೊಟ್ಟೆಯ ಬಾರದ ನಡುವೆ ಅವು ತೆವಳಿಕೊಂಡು ಹೋಗುವುದು ಕಷ್ಟ. ಆದ್ರೆ ಈ ಶೆಡ್‌ನಲ್ಲಿ ಆಹಾರ ಸಿಕ್ಕ ಬಳಿಕ ಹೆಬ್ಬಾವಿನ ಕುತ್ತಿಗೆಗೆ ಹಗ್ಗವೊಂದು ಬಿಗಿದುಕೊಂಡಿದೆ. ಇದು ಆಕಸ್ಮಿಕವಾಗಿ ಬಿಗಿದಿದ್ದೋ ಅಥವಾ ಅಲ್ಲಿನ ಜನರೇ ಹಾವು ಹಿಡಿಯಲು ಜಾಲ ಹಾಕಿದ್ದರೂ ತಿಳಿದಿಲ್ಲ.
ಹೀಗಾಗಿ ಹಗ್ಗ ಬಿದಿರುವುದರಿಂದ ಹಾವು ಹೊರಬರಲಾಗದೆ, ತಪ್ಪಿಸಿಕೊಳ್ಳಲಾಗದೆ ಪರದಾಡುತ್ತಿದೆ. ಇತ್ತ ಹಾವಿನ ಗಾತ್ರ ನೋಡಿದರೆ ಅದರ ಹತ್ತಿರ ಸುಳಿಯಲು ಭಯವಾಗುವಂತಿದೆ. ಇವು ಮನುಷ್ಯರನ್ನೂ ನುಂಗಿರುವ ಉದಾಹರಣೆ ಇರುವಾಗ ಈ ಹಾವಿನ ಹತ್ತಿರ ಸುಳಿಯಲು ಧೈರ್ಯ ಮಾಡುವುದು ಮೂರ್ಖತನ.
ಈ ವಿಡಿಯೋ ನೋಡಿದ ಮಂದಿನ ನಮ್ಮ ಮುಂದೆ ಈ ಘಟನೆ ನಡೆದಿದ್ದರೆ ಸ್ಥಳದಲ್ಲೇ ಹೃದಯಾಘಾತವಾಗಿ ನಾನೂ ಆ ಹಾವಿಗೆ ಆಹಾರವಾಗುತ್ತಿದೆ ಎನ್ನುತ್ತಿದ್ದಾರೆ. ಚಿಕ್ಕ ಪುಟ್ಟ ಹಾವುಗಳ ಕಂಡು ಮಾರು ದೂರ ಓಡುವ ಮಂದಿ ಇಷ್ಟು ದೈತ್ಯ ಹಾವು ನೋಡಿದರೆ ಕುಸಿದು ಬೀಳುವುದರಲ್ಲಿ ಅನುಮಾನವೇ ಇಲ್ಲ.
ಅಮೆಜಾನ್ ಕಾಡಿನಲ್ಲಿ ದೈತ್ಯ ಹಾವು ಪತ್ತೆ
ನಾವು ಮೊದಲೇ ಹೇಳಿದಂತೆ ಹೆಬ್ಬಾವುಗಳಿಗಿಂತಲೂ ಅನಾಕೊಂಡ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಆದರೆ ಇತ್ತೀಚಿಗೆ ವಿಶ್ವದ ಅತ್ಯಂತ ದೊಡ್ಡ ಹಾವನ್ನು ಪತ್ತೆ ಮಾಡಲಾಗಿತ್ತು. ಅಮೆಜಾನ್ ಮಳೆಕಾಡಿನ ಮಧ್ಯೆ ವಿಶ್ವದ ಅತಿ ದೊಡ್ಡ ಹಾವನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಈ ಹಿಂದೆ ದಾಖಲೆಗಳಿಲ್ಲದ ದೈತ್ಯ ಅನಕೊಂಡವನ್ನು ಇತ್ತೀಚೆಗೆ ಟಿವಿ ವನ್ಯಜೀವಿ ನಿರೂಪಕ ಪ್ರೊಫೆಸರ್ ಫ್ರೀಕ್ ವೊಂಕ್ ಅವರು ನ್ಯಾಷನಲ್ ಜಿಯಾಗ್ರಫಿಕ್ ಸರಣಿಯ ಸಮಯದಲ್ಲಿ ಕಂಡುಹಿಡಿದರು. ಬೃಹತ್ ಅನಕೊಂಡವು 26 ಅಡಿ ಉದ್ದ ಹಾಗೂ 440 ಪೌಂಡ್‌ಗಳಷ್ಟು ತೂಕವಿದೆ ಮತ್ತು ಅದರ ತಲೆಯು ಮಾನವನ ತಲೆಯಷ್ಟೇ ದೊಡ್ಡದಾಗಿದೆ ಎಂದು ಹೇಳಲಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಪ್ರೊಫೆಸರ್ ವೊಂಕ್ ದೈತ್ಯ ಅನಕೊಂಡದ ಜೊತೆಗೆ ಈಜುತ್ತಿದ್ದಾರೆ. ''ನಾನು ನೋಡಿದ ಅತಿದೊಡ್ಡ ಅನಕೊಂಡವನ್ನು ವಡಿಯೋದಲ್ಲಿ ನೋಡಬಹುದು, ಕಾರಿನ ಟೈರ್‌ನಷ್ಟು ದಪ್ಪ, ಎಂಟು ಮೀಟರ್ ಉದ್ದ ಮತ್ತು 200 ಕೆಜಿಗಿಂತ ಹೆಚ್ಚು ಭಾರ - ನನ್ನ ತಲೆಯಷ್ಟು ದೊಡ್ಡ ತಲೆ ಹೊಂದಿದೆ. ದೈತ್ಯಾಕಾರದ ಸಂಪೂರ್ಣ ವಿಸ್ಮಯವಿದು'' ಎಂದು ಅವರು ಬರೆದುಕೊಂಡಿದ್ದರು.



Click it and Unblock the Notifications











