Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ನೆಲದ ಮೇಲೆ ಮಲಗಿದ್ದ ಮಗುವನ್ನೇ ದಿಟ್ಟಿಸಿ ನೋಡುತ್ತಿದೆ ನೆರಳು..! ಏನಿದು ಭೂತ..ಪ್ರೇತದ ಕಥೆ..
ನೀವು ಆಗಾಗ ದೆವ್ವ ಭೂತದ ಕಥೆ ಕೇಳಿರುತ್ತೀರಿ. ಎಲ್ಲಾದರೂ ವಿಡಿಯೋದಲ್ಲಿ ಫೋಟೋದಲ್ಲಿ ದೆವ್ವ ಭೂತ ಕಾಣಿಸಿಕೊಂಡ ಕುರಿತು ನೋಡಿರುತ್ತೀರಿ. ಯಾವಾಗೆಲ್ಲಾ ಈ ರೀತಿ ದೃಶ್ಯಗಳು ಕಂಡುಬರುತ್ತವೋ ಆವಾಗೆಲ್ಲಾ ಚರ್ಚೆ ಆರಂಭವಾಗುತ್ತದೆ. ಜೊತೆಗೆ ಒಂದಿಷ್ಟು ಪೋಸ್ಟ್‌ಗಳು ವೈರಲ್ ಆಗುತ್ತವೆ.
ಹೀಗಿದ್ದಾಗ ಇಲ್ಲೊಂದು ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೋಡುಗರಿಗೆ ಅಚ್ಚರಿ ಮೂಡಿದೆ. ಮಗುವೊಂದು ಮಲಗಿದ್ದರೆ ಅದೇ ಮಗುವನ್ನ ದಿಟ್ಟಿಸಿ ನೋಡುತ್ತಿರುವ ನೆರಳಿನಂತಹ ಆಕೃತಿಯ ದೃಶ್ಯ ಇದಾಗಿದ್ದು, ನೋಡುಗರಲ್ಲಿ ಭಯ ಮೂಡಿಸಿದೆ.
ಮಿಚಿಗನ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮನೆಯ ಮಾಲೀಕ ಈ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಆತ ತನ್ನ ಮನೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳ ಹಂಚಿಕೊಂಡ ಬಳಿಕ ವೈರಲ್ ಆಗಿದ್ದು, ಈ ದೃಶ್ಯ ಕಂಡ ಜನತೆ ಶಾಕ್‌ಗೆ ಒಳಗಾಗಿದ್ದಾರೆ.

ಜಾನ್ ಕಿಪ್ಕೆ ಎಂಬುವರ ಕಿರಿಯ ಪುತ್ರ ನೆಲದ ಮೇಲೆ ಮಲಗಿದ್ದರೆ ಆತನನ್ನೇ ನೋಡುತ್ತಿರುವ ನೆರಳಿನಂತಹ ಒಂದು ಆಕೃತಿ ಅಲ್ಲಿರುವುದು ಕಾಣಬಹುದು. ನ್ ಕಿಪ್ಕೆ ಅವರ 100 ವರ್ಷ ಹಳೆಯದಾದ ಫಾರ್ಮ್‌ಹೌಸ್‌ನಲ್ಲಿ ಭದ್ರತಾ ಕ್ಯಾಮೆರಾದಿಂದ ಸೆರೆಹಿಡಿಯಲಾದ ವಿಲಕ್ಷಣ ಫೋಟೋ ವೀಕ್ಷಕರಲ್ಲಿ ಭಯ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ.
ಡೈಲಿ ಸ್ಟಾರ್‌ನ ವರದಿಯ ಪ್ರಕಾರ, ಈ ಭಯಾನಕ ಚಿತ್ರವು ಯುಎಸ್‌ನ ಮಿಚಿಗನ್‌ನಲ್ಲಿ ವಾಸಿಸುವ ವ್ಯಕ್ತಿಯದ್ದಾಗಿದೆ. ಮಗುವಿನ ಅಜ್ಜನ ಮರಣದ ಸುಮಾರು ಒಂದು ತಿಂಗಳ ನಂತರ ಈ ಘಟನೆ ಸಂಭವಿಸಿದೆ ಎಂದು ವಿವರಿಸಲಾಗಿದೆ. ಮನೆಯಲ್ಲಿ ಅಳವಡಿಸಲಾದ ಐದು ಕ್ಯಾಮೆರಾಗಳಲ್ಲಿ ಒಂದರಿಂದ ಮಾತ್ರ ಆಕೃತಿಯನ್ನು ಸೆರೆಹಿಡಿಯಲಾಗಿದೆ, ಇದು ವೀಡಿಯೊವನ್ನು ರೆಕಾರ್ಡ್ ಮಾಡುವ ಬದಲು ಸ್ನ್ಯಾಪ್‌ಶಾಟ್‌ಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ.
ಕಿಪ್ಕೆ ಫೇಸ್‌ಬುಕ್‌ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ, ತನ್ನ ತಂದೆಯ ಮರಣದ ನಂತರ ಅಧಿಸಾಮಾನ್ಯವಾದ ಏನನ್ನೂ ಅನುಭವಿಸದಿದ್ದರೂ, ತನ್ನ ಮಗುವನ್ನು ಒಳಗೊಂಡ ಈ ಘಟನೆಯು ಅವನನ್ನು ಗೊಂದಲಕ್ಕೀಡು ಮಾಡಿದೆ ಎಂದು ಪೋಸ್ಟ್‌ನಲ್ಲಿ ಅವರು ವಿವರಿಸಿದ್ದಾರೆ.
''ಇದು ಏನೆಂದು ನನಗೆ ಖಚಿತವಿಲ್ಲ ಆದರೆ ನನ್ನ ಒಳಗಿನ ಕ್ಯಾಮೆರಾಗಳಲ್ಲಿ ಇದು ಸೆರೆಯಾಗಿರುವ ಒಂದು ದೃಶ್ಯ ಇದಾಗಿದೆ. ದುರದೃಷ್ಟವಶಾತ್, ಒಳಗಿನ ಕ್ಯಾಮರಾ ವಿಡಿಯೋ ತೆಗೆದುಕೊಳ್ಳುವುದಿಲ್ಲ ಅದು ಫೋಟೊ ಮಾತ್ರ ಸೆರೆಹಿಡಿಯುತ್ತೆ. ನನಗೆ ತಿಳಿದಿರುವಂತೆ, ನಾನು ಎಂದಿಗೂ ಈ ರೀತಿ ವಿದ್ಯಮಾನಕ್ಕೆ ಎದುರಾಗಿಲ್ಲ ಅಥವಾ ನನ್ನ ಮನೆಯಲ್ಲಿ ನನಗೆ ಯಾವುದೇ ವಿಚಿತ್ರ ಘಟನೆಗಳು ಸಂಭವಿಸಿಲ್ಲ. ನಾನು 100 ವರ್ಷಗಳಷ್ಟು ಹಳೆಯದಾದ ಫಾರ್ಮ್‌ಹೌಸ್‌ನಲ್ಲಿ ವಾಸಿಸುತ್ತಿದ್ದೇನೆ'' ಎಂದು ಬರೆದುಕೊಂಡಿದ್ದಾರೆ.
ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ, ಕೆಲವರು ಕುಟುಂಬವು ತಕ್ಷಣ ಮನೆಯಿಂದ ಹೊರಹೋಗುವಂತೆ ಸೂಚಿಸಿದ್ದಾರೆ. ಆಕೃತಿಯನ್ನು ವಯಸ್ಸಾದ ಮಹಿಳೆ ಎಂದು ಗುರುತಿಸುವುದರಿಂದ ಹಿಡಿದು ಅದು ಕ್ಯಾಪ್ ಧರಿಸಿರುವ ಸಂಭಾವಿತ ವ್ಯಕ್ತಿಯಾಗಿರಬಹುದು ಎಂದು ಊಹಿಸುವವರೆಗೆ ಕಾಮೆಂಟ್‌ಗಳು ಹರಿದಾಡಿವೆ. ಆದರೆ ಅಲ್ಲಿ ಕಾಣುತ್ತಿರುವುದು ಏನು ಎಂಬುದು ಯಾರಿಗೂ ಸ್ಪಷ್ಟವಾಗಿಲ್ಲ.
ಆದರೆ ಅಲ್ಲಿ ವಿಚಿತ್ರವಾಗಿ ಯಾವುದೋ ನೆರಳು ಮಾತ್ರ ಸುಳಿದಾಡಿದೆ ಎಂದು ಹಲವರು ವಾದಿಸಿದ್ದಾರೆ. ಈ ಘಟನೆ ಪದೇ ಪದೇ ನಡೆಯುತ್ತಿದ್ಯಾ ಅಥವಾ ಒಂದೇ ಬಾರಿಗೆ ನಡೆದಿದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಮನೆಗೆ ವಿಡಿಯೋ ಚಿತ್ರೀಕರಿಸುವಂತಹ ಕ್ಯಾಮರಾಗಳ ಬಳಸುವಂತೆ ಅವರಿಗೆ ಸೂಚಿಸಲಾಗಿದೆ.
ಮತ್ತೆ ಕೆಲವರು ಇದು ಬೆಳಕಿನ ಹಾಗೂ ರಾತ್ರಿಯಲ್ಲಿ ಸ್ಟಿಲ್ ಕ್ಯಾಮರಾಗಳು ನೆರಳನ್ನು ಸರಿಯಾಗಿ ಗ್ರಹಿಸುವುದಿಲ್ಲ. ಇದೊಂದು ಕ್ಯಾಮರಾದ ತಪ್ಪಾದ ಗ್ರಹಿಕೆ ಅಷ್ಟೇ. ಇಲ್ಲಿ ಯಾವ ಭೂತ, ಪ್ರೇತ ಯಾವುದು ಇಲ್ಲ ಎಂದಿದ್ದಾರೆ.



Click it and Unblock the Notifications