Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಎಐ ಮೂಲಕ ಪ್ಯಾನ್-ಆಧಾರ್ ಕಾರ್ಡ್: ಫೋಟೋ ನೋಡಿ ಶಾಕ್ ಆದ ಮಂದಿ!!
ಎಐ ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂಬುದನ್ನು ನಾವೀಗ ನೋಡುತ್ತಿದ್ದೇವೆ. ಎಲ್ಲಾ ಕ್ಷೇತ್ರದಲ್ಲೂ ಈಗ ಎಐ ತಂತ್ರಜ್ಞಾನ ಅನ್ನೋದು ಬಹಳ ಸದ್ದು ಮಾಡುತ್ತಿದೆ. ಹಾಗೆ ಹಲವರಿಗೆ ಇದು ಸಹಕಾರಿಯಾಗಿದ್ದರೆ ಮತ್ತೆ ಕೆಲವು ಕಡೆಗಳಲ್ಲಿ ಹೊಸ ರೀತಿ ಅಪಾಯಗಳ ತಂದಿಟ್ಟಿದೆ. ಉದ್ಯೋಗ ನಷ್ಟದಿಂದ ಹಿಡಿದು ವೈಯಕ್ತಿಕ ಮಾಹಿತಿ ಸೋರಿಕೆವರೆಗೂ ಎಐನಿಂದ ಹಲವು ರೀತಿ ಅಪಾಯ ಎದುರಿಸಬೇಕಾಗಿದೆ.
ಸದ್ಯ ಇತ್ತೀಚಿಗೆ ಎಐನಿಂದ ಅನುಕೂಲಗಳು ಹೆಚ್ಚಾಗುತ್ತಿದ್ದರೂ ಅದರ ಪರಿಣಾಮಕಾರಿ ಬಳಕೆಯಲ್ಲಿ ಹಲವು ರೀತಿಯ ಅಪಾಯಗಳನ್ನು ಕೂಡ ಗುರುತಿಸಲಾಗುತ್ತದೆ. ಅದ್ರಲ್ಲಿ ಮುಖ್ಯವಾಗಿ ಜನರ ವೈಯಕ್ತಿಕ ದಾಖಲೆಗಳು ಅಥವಾ ಅವರ ಮಾಹಿತಿ ಎಐ ಕೈ ಸೇರುತ್ತಿರುವುದು ಸಹ ಸೇರಿದೆ. ಎಲ್ಲಾ ದೊಡ್ಡ ದೊಡ್ಡ ಕಂಪನಿಗಳು ಕೂಡ ಎಐ ತಂತ್ರಜ್ಞಾನದಲ್ಲಿ ಕೋಟಿ ಕೋಟಿ ರೂಪಾಯಿ ಹೂಡಿಕೆ ಮಾಡಿ ತಮ್ಮ ಹೊಸ ಹೊಸ ಮಾಡೆಲ್‌ಗಳ ಹೊರತಂದಿವೆ.

ಅದರಲ್ಲೂ ಗೂಗಲ್ ಹೊರತಂದಿರುವ ಜೆಮಿನಿ ಎಐ ಒಂದು ಹೆಜ್ಜೆ ಮುಂದೆ ಸಾಗಿದೆ. ಇತ್ತೀಚಿಗೆ ಜೆಮಿನಿ ಎಐನ ನ್ಯಾನೋ ಬನಾನ ಎಂಬ ಟ್ರೆಂಡ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಅದಕ್ಕೂ ಮೊದಲು ಚಾಟ್ ಜಿಪಿಟಿಯ ಗಿಬ್ಲಿ ಆರ್ಟ್ ಕೂಡ ಬಹಳ ವೈರಲ್ ಆಗಿತ್ತು. ನ್ಯಾನೋ ಬನಾನದಲ್ಲಿ ನಿಮ್ಮ ಫೋಟೋವನ್ನು ಜೆಮಿನಿಗೆ ಅಪ್‌ಲೋಡ್ ಮಾಡಿದರೆ ಅದು ನಿಮಗೆ ಬೇಕಾದ ರೀತಿಯಲ್ಲಿ ನಿಮ್ಮನ್ನು ಚಿಕ್ಕವರಾಗಿ ಅಥವಾ ಚಿಕ್ಕ ಆಟಿಕೆಯಂತಹ ರೀತಿಯಲ್ಲಿ ಮರಳಿ ಫೋಟೋವನ್ನು ನೀಡುತ್ತಿತ್ತು.
ಇದನ್ನು ಅವರು ಇವರು ಎನ್ನದೆ ಎಲ್ಲರು ಒಮ್ಮೆ ಪ್ರಯತ್ನಿಸಿ ಖುಷಿ ಪಟ್ಟಿದ್ದರು. ಬಳಿಕ ಇದೊಂದು ನಮ್ಮ ವೈಯಕ್ತಿಕ ಮಾಹಿತಿ ಪಡೆಯುವ ತಂತ್ರ ಎಂಬ ಮಾತುಗಳು ಸಹ ಕೇಳಿಬಂದವು. ಆದ್ರೆ ಎಐ ಎಂಬುದೀಗ ಎಷ್ಟು ಅಪಾಯಕಾರಿಯಾಗುತ್ತಿದೆ ಎಂಬುದನ್ನು ಬೆಂಗಳೂರಿ ಟೆಕ್ಕಿಯೊಬ್ಬರು ಉದಾಹರಣೆ ಸಹಿತ ವಿವರಿಸಿದ್ದಾರೆ.
ಎಐ ಮೂಲಕ ನೀವು ನಕಲಿ ಪ್ಯಾನ್ ಕಾರ್ನ್ ಹಾಗೂ ಆಧಾರ್ ಕಾರ್ಡ್ ಪಡೆಯಬಹುದು ಎಂಬ ವಿಚಾರವನ್ನು ಟೆಕ್ಕಿ ವಿವರಿಸಿದ್ದಾರೆ. ಇದು ಆತಂಕ ಹಾಗೆ ಎಐ ಅಪಾಯದ ಮಿತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಹರ್ವೀನ್ ಸಿಂಗ್ ಚಾಧಾ ಎಂಬ ವ್ಯಕ್ತಿ, ನಕಲಿ ಗುರುತಿನ ದಾಖಲೆಗಳ AI- ರಚಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಆದ್ರೆ ಅವರು ತಮ್ಮ ನೈಜ ಹೆಸರನ್ನು ನೀಡದೆ ಟ್ವಟರ್‌ಪ್ರೀತ್ ಸಿಂಗ್ ಎಂದು ನೀಡಿದ್ದಾರೆ. ಆದ್ರೆ ಇದು ಗಂಭೀರ ಅಪಾಯವನ್ನುಂಟು ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಅತ್ಯಂತ ನಿಖರತೆಯೊಂದಿಗೆ ಜೆಮಿನಿಯು ನಕಲಿ ವೈಯಕ್ತಿಕ ಮಾಹಿತಿಯ ಕಾರ್ಡ್‌ಗಳ ರಚಿಸುತ್ತದೆ, ಇದು ಪರಿಶೀಲನ ವ್ಯವಸ್ಥೆಗೂ ಸವಾಲು ಒಡ್ಡಲಿದೆ ಎಂದಿದ್ದಾರೆ.
ಅವರು ನಕಲಿ ಪ್ಯಾನ್ ಮತ್ತು ಆಧಾರ್ ಕಾರ್ಡ್‌ಗಳ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮೊದಲಿಗೆ ಅವು ಅಸಲಿ ಎಂಬಂತೆ ಕಾಣುತ್ತವೆ. ಆದ್ರೆ
ಗಮನವಿಟ್ಟು ನೋಡಿದಾಗ ಮಾತ್ರ ಅವು ನಕಲಿ ಎಂದು ತಿಳಿದುಬರುತ್ತದೆ. ಅದ್ರಲ್ಲೂ ಫೋಟೋದ ಕೊನೆಯ ಅಂಚಿನಲ್ಲಿ ಗೂಗಲ್ ಜೆಮಿನಿಯ ಸಣ್ಣ ಲೋಗೋ ಕಾಣಸಿಗುತ್ತದೆ. ಅದನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಮಾಹಿತಿಯು ಸೇರಿ ಅದರ ರಚನೆ ನೈಜ ಕಾರ್ಡ್‌ಗಳಂತೆಯೇ ಇರಲಿದೆ.
ಈ ಎರಡು ಫೋಟೋಗಳ ನೋಡಿದ ಮಂದಿ ಅಚ್ಚರಿಗೊಳಗಾಗಿದ್ದಾರೆ. ಸರ್ಕಾರದಿಂದ ಅಧಿಕೃತವಾಗಿ ಪಡೆದಿರುವ ಕಾರ್ಡ್‌ನಂತೆಯೇ ಈ ಕಾರ್ಡ್‌ಗಳಿವೆ. ಹೀಗಾಗಿ ಜನರು ಇಲ್ಲಿಂದ ನಕಲಿ ಕಾರ್ಡ್ ಪಡೆದು ಸುಲಭವಾಗಿ ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಅದರ ಅಪಾಯದ ಕುರಿತಾಗಿ ಆತಂಕ ಹೊರಹಾಕಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಈ ಕಾರ್ಡ್ ಅನ್ನು ಅವರು ಹೇಗೆ ಪಡೆದಿದ್ದಾರೆ ಎಂಬ ಕುರಿತು ಹೆಚ್ಚಿನ ಮಾಹಿತಿ ಇಲ್ಲಿ ಹಂಚಿಕೊಂಡಿಲ್ಲ. ಆದ್ರೆ ಇದು ಯಾರಿಗೂ ತಿಳಿಯದಷ್ಟು ಕಷ್ಟಕರವಾದ ವಿಧಾನವೇನಲ್ಲ.



Click it and Unblock the Notifications
