Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಏನಿದು ವಿಚಿತ್ರ..! ರಾಮ ಲಲ್ಲಾನ ಗರ್ಭಗುಡಿಯೊಳಗೆ ಗರುಡ..! ವಿಡಿಯೋ ವೈರಲ್
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದಾಗಿನಿಂದ ಸಾವಿರಾರು ಮಂದಿ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಜೊತೆಗೆ ರಾಮ ಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ನಿತ್ಯವು ರಾಮನಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಲೇ ಬಂದಿದೆ. ಹೀಗಾಗಿ ಅಯೋಧ್ಯೆ ಈಗ ದೇಶದ ಪ್ರಮುಖ ಪ್ರವಾಸಿ ತಾಣಗಲ್ಲಿ ಒಂದಾಗಿದೆ.
ಇದೀಗ ಅಯೋಧ್ಯೆ ರಾಮನ ದೇವಾಲಯದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ರಾಮ ಮಂದಿರ ಗರ್ಭಗುಡಿಯ ಒಳಗೆ ಗರುಡ ರೀತಿಯ ಪಕ್ಷಿಯೊಂದು ಹಾರಾಡುತ್ತಿರುವ ವಿಡಿಯೋ ಇದಾಗಿದ್ದು, ಭಾರೀ ವೈರಲ್ ಆಗಿದೆ.

ರಾಮ್ ದರ್ಬಾರ್ ನಲ್ಲಿ ಗರುಡ?
ಮಧ್ಯಾಹ್ನ ಪೂಜೆಯ ನಂತರ ಗರ್ಭಗುಡಿಯಲ್ಲಿ ಈ ಪಕ್ಷಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಒಂದು ವಾರದ ಹಿಂದೆ ಈ ಪಕ್ಷಿ ಹಾರಾಟ ನಡೆಸಿದ್ದು ಅದರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ. ದೇವಾಲಯದ ಮಧ್ಯಭಾಗದಲ್ಲಿ ಗರ್ಭಗುಡಿ ಇದ್ದು ಈವರೆಗೆ ಆ ಪಕ್ಷಿ ಹಾರಿ ಬಂದಿರುವುದು ಹೇಗೆ ಎಂಬುದು ಭದ್ರತಾ ಸಿಬ್ಬಂದಿಗೆ ದೊಡ್ಡ ಪ್ರಶ್ನೆಯಾಗಿದೆ.
ಗರ್ಭಗುಡಿಯಿಂದ ಹೊರಹೋಗದ ಪಕ್ಷಿ
ಪಕ್ಷಿ ಗರ್ಭಗುಡಿ ಪ್ರವೇಶಿಸಿರುವುದು ತಿಳಿದ ಕೂಡಲೇ ಭದ್ರತಾ ಸಿಬ್ಬಂದಿ ಅದನ್ನು ಓಡಿಸಲು ಯತ್ನಿಸಿದ್ದಾರೆ, ಆದರೆ ಇಡೀ ದಿನ ಪಕ್ಷಿ ಗರ್ಭಗುಡಿಯಲ್ಲೇ ಹಾರಾಟ ನಡೆಸಿದೆ. ಆದರೆ ಅದು ಹೊರಹೋಗಲು ಎಲ್ಲಾ ಪ್ರಯತ್ನ ಮಾಡಿದ್ದರೂ ಏನು ಉಪಯೋಗವಾಗಿರಲಿಲ್ಲ. ಆರೆ ರಾತ್ರಿ ವೇಳೆ ಗರ್ಭ ಗುಡಿಯ ಭಾಗಿಲು ಮುಚ್ಚುವ ಸಮಯದಲ್ಲಿ ಪಕ್ಷಿ ತಾನಾಗಿಯೇ ಹೊರಗೆ ಹಾರಿ ಹೋಗಿದೆ ಎಂದು ದೇವಾಲಯ ಅರ್ಚಕರು ತಿಳಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಸುಮಾರು 10 ರಿಂದ 15 ಸೆಕೆಂಡುಗಳ ಸಣ್ಣ ವಿಡಿಯೋಗಳು ವೈರಲ್ ಆಗಿದ್ದು, ವಿಡಿಯೋದಲ್ಲಿ ಪಕ್ಷಿಯೊಂದು ಗರ್ಭಗುಡಿಯಲ್ಲಿ ಸುತ್ತುತ್ತಿರುವುದು ಕಂಡುಬರುತ್ತದೆ. ಅದರಲ್ಲೂ ರಾಮನ ಮೂರ್ತಿಯ ಮೇಲೆ ಕುಳಿತು ಅಲ್ಲಿಂದ ಹಾರಾಡುವುದು ಸಹ ವಿಡಿಯೋದಲ್ಲಿ ಸೆರೆಯಾಗಿದೆ. ಅದು ಹೊರ ಹೋಗಲು ಜಾಗ ಹುಡುಕುತ್ತಿದ್ದಂತೆ ಕಂಡುಬಂದಿದೆ.
ರಾಮ ಮಂದಿರದ ಸಹಾಯಕ ಅರ್ಚಕ ಹೇಳಿದ್ದೇನು?
ರಾಮ ಮಂದಿರದ ಸಹಾಯಕ ಅರ್ಚಕರಾಗಿರುವ ಸಂತೋಷ್ ಕುಮಾರ್ ತಿವಾರಿ ಅವರು, ಇದು ಗರುಢ ಪಕ್ಷಿಯಾಗಿದ್ದು, ಉತ್ತರ ದ್ವಾರದ ಮೂಲಕ ದೇವಾಲಯವನ್ನು ಪ್ರವೇಶಿಸಿದೆ. ಮೊದಲು ಗುಡಿ ಮಂಟಪಕ್ಕೆ ಪ್ರದಕ್ಷಿಣೆ ಹಾಕಿ ನಂತರ ನೇರವಾಗಿ ಗರ್ಭಗುಡಿ ಪ್ರವೇಶಿಸಿದೆ ಎಂದಿದ್ದಾರೆ. ಆದರೆ ಸಂಜೆ ತಾನಾಗಿಯೆ ದೇವಾಲಯದಿಂದ ತೆರಳಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಮೊದಲು ಒಳಬಂದಿತ್ತು ಕೋತಿ
ಅಯೋಧ್ಯೆಯ ಹೊಸ ರಾಮ ಮಂದಿರದ ಗರ್ಭಗುಡಿಗೆ ಈ ಮೊದಲು ಕೋತಿಯೊಂದು ಪ್ರವೇಶಿಸಿತ್ತುಯ. ಈ ಮಾಹಿತಿಯನ್ನು ದೇವಾಲಯದ ಟ್ರಸ್ಟ್ ತನ್ನ ಟ್ವಿಟರ್ (ಎಕ್ಸ್) ಖಾತೆಯಲ್ಲಿ ಹಂಚಿಕೊಂಡಿತ್ತು. ಬಾಲರಾಮನ ಪ್ರತಿಷ್ಠಾಪನೆಯಾದ ಕೆಲ ದಿನದ ಬಳಿಕ ಕೋತಿಯೊಂದು ಗರ್ಭಗುಡಿಗೆ ಬಂದಿತ್ತು. ರಾಮ್ ಲಲ್ಲಾನ ದರ್ಶನಕ್ಕಾಗಿ ಭಗವಾನ್ ಹನುಮಂತನು ಬಂದಿದ್ದಾನೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿತ್ತು. ಈಗ ಗರುಡವೊಂದು ಕಾಣಿಸಿಕೊಂಡಿರುವುದು ಸಹ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಒಂದು ತಿಂಗಳಿಗೆ 25 ಕೋಟಿ ರೂ ದೇಣಿಗೆ ಸಂಗ್ರಹ
ರಾಮ ಮಂದಿರ ಉದ್ಘಾಟನೆಗೊಂಡು ಸರಿ ಸುಮಾರು ಒಂದು ತಿಂಗಳು ಕಳೆದ ಬಳಿಕ ದೇವಾಲಯಕ್ಕೆ ಸುಮಾರು 25 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ. 25 ಕೆ.ಜಿ ಚಿನ್ನ, ಬೆಳ್ಳಿ ಆಭರಣ ಸೇರಿದಂತೆ ಒಟ್ಟು 25 ಕೋಟಿ ದೇಣಿಗೆ ಹರಿದು ಬಂದಿದೆ ಎಂದು ದೇವಾಲಯ ಟ್ರಸ್ಟ್ ಮಾಹಿತಿ ಹಂಚಿಕೊಂಡಿದೆ. ಆದರೆ ಚೆಕ್, ನಗದು, ಆನ್‌ಲೈನ್ ವ್ಯವಹಾರದಿಂದ ಮತ್ತಷ್ಟು ಹಣ ಸೇರ್ಪಡೆಯಾಗಲಿದ್ದು, ಈ ಕುರಿತ ಮಾಹಿತಿ ಲಭ್ಯವಾಗಿಲ್ಲ.



Click it and Unblock the Notifications
