ದೆಹಲಿಯಲ್ಲಿ ನಡೆದ ಗ್ಯಾಂಗ್‌ಸ್ಟರ್‌, ಲೇಡಿಡಾನ್‌ ಮದುವೆ: ಪೊಲೀಸರಿಂದ ಸರ್ಪಗಾವಲು

ಆತನೊಬ್ಬ ದೊಡ್ಡ ಡಾನ್, ಆಕೆಯೂ ಏನೂ ಕಡಿಮೆಯಿಲ್ಲ ಲೇಡಿ ಡಾನ್‌... ಇಬ್ಬರ ಮದುವೆ ಬಹಳ ಅದ್ಧೂರಿಯಾಗಿ ನಡೆಯುತ್ತದೆ, ಆ ಮದುವೆಗೆ ಪೊಲೀಸರ ಸರ್ಪಗಾವಲು, ಇದು ಯಾವುದೋ ಸಿನಿಮಾ ಕತೆಯಲ್ಲ, ಫೆಬ್ರವರಿ 12ರಲ್ಲಿ ದೆಹಲಿಯಲ್ಲಿ ನಡೆದ ಕುಖ್ಯಾತ ರೌಡಿಯ ಮದುವೆಯ ಕತೆಯಿದು.

ಆ ಡಾನ್‌ ಹೆಸರು ಕಲಾ ಜತೇಡಿ, ಲೇಡಿ ಡಾನ್ ಹೆಸರು ಅನುರಾಧಾ ಚೌಧರಿ, ಇವರ ಮದುವೆ ದೆಹಲಿಯ ಸಂತೋಷ್‌ ಪ್ಯಾಲೇಸ್‌ನಲ್ಲಿ ನಡೆಯಿತು, ಮದುಮಗಳು ಕಪ್ಪು ಕಾರಿನಲ್ಲಿ ಮದು ಮಗಳ ಡ್ರೆಸ್‌ನಲ್ಲಿ ಮದುವೆಗೆ ಹಾಲ್‌ಗೆ ತಾನೇ ಡ್ರೈವ್ ಮಾಡಿ ಬಂದಿದ್ದಾಳೆ. ಇವರ ಮದುವೆಯಲ್ಲಿ ಅತಿಥಿಗಳಿಗಿಂತ ಹೆಚ್ಚಾಗಿ ಪೊಲೀಸರೇ ಇದ್ದಾರೆ. ಗನ್‌ ಹಿಡಿದಿರುವ ಪೊಲೀಸರು ಅತ್ತಿತ್ತ ಓಡಾಡುತ್ತಿದ್ದಾರೆ, ಪೊಲೀಸ್‌ ನಾಯಿಯಿದೆ, ಪೊಲೀಸರು ಈ ಮದುವೆಯಲ್ಲಿ ಯಾವುದೇ ಕೆಟ್ಟ ಘಟನೆ ಸಂಭವಿಸಿದಿರಲು ಕಟ್ಟೆಚ್ಚರವಹಿಸಿದ್ದಾರೆ. ಈ ಮದುವೆ ವೀಡಿಯೋ ಈಗ ವೈರಲ್ ಆಗುತ್ತಿದೆ.

Gangster Kala Jatheri

ಆತನ ಹೆಸರು ಗ್ಯಾಂಗ್‌ಸ್ಟರ್‌ ಸಂದೀಪ್‌ ಅಲಿಯಾಸ್‌ ಕಲಾ ಜತೇಡಿ ಹಾಗೂ ಆಕೆಯ ಹೆಸರು ಅನುರಾಧಾ ಚೌಧರಿ ಅಲಿಯಾಸ್‌ ಮಿಂಜ್. ಇಬ್ಬರೂ ಅಪರಾಧಿಗಳು, ಮಿಂಜಾ ಈಗ ಕಾನೂನು ಪದವಿ ಓದುತ್ತಿದ್ದಾರೆ. ತನ್ನ ಪ್ರಿಯತಮ ಕಾನೂನು ಪ್ರಕರಣವನ್ನು ಈಕೆಯೇ ನೋಡಿಕೊಳ್ಳುತ್ತಿದ್ದಾಳೆ. ಇಬ್ಬರು 3 ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರು ಕೋವಿಡ್‌ ಸಮಯದಲ್ಲಿ ಭೇಟಿಯಾಗುತ್ತಾರೆ, ಇಬ್ಬರು ಕ್ರಿಮಿನಲ್‌ ಮನಸ್ಥಿತಿಯವರು, ಬೇಗನೆ ಹತ್ತಿರವಾಗುತ್ತಾರೆ, 2021ರಲ್ಲಿ ಈಕೆಯನ್ನೂ ಪೊಲೀಸರು ಬಂಧಿಸಿದ್ದರು, ಆದರೆ ಜಾಮೀನು ಪಡೆದು ಹೊರ ಬರುತ್ತಾಳೆ, ತನ್ನ ಪ್ರಿಯತಮನನ್ನು ಆಗಾಗ ಜೈಲಿಗೆ ಹೋಗಿ ಭೇಟಿ ಮಾಡುತ್ತಿದ್ದಳು.

ಸಾಮಾನ್ಯ ಹುಡುಗಿ ಡಾನ್‌ ಆಗಿ ಬೆಳೆದ ಕತೆ

ಅನುರಾಧ ಸಾಮಾನ್ಯ ಮಧ್ಯಮ ವರ್ಗದ ಹುಡುಗಿಯಾಗಿದ್ದಳು, ಷೇರು ಮಾರುಕಟ್ಟೆಯಲ್ಲಿ ಆಸಕ್ತಿ ಹೊಂದಿ ಅದರಲ್ಲಿ ತೊಡಗಿಸಿಕೊಂಡಿರುತ್ತಾಳೆ, ಆದರೆ ಆಕೆಯ ಪಾಲುದಾರರು ಆಕೆಯನ್ನು ವಂಚನೆ ಮಾಡುತ್ತಾರೆ, ಬರೋಬರಿ 1 ಕೋಟಿ ಸಾಲಗಾರಳು ಆಗಬೇಕಾಗುತ್ತದೆ. ಆಕೆ ಒಳ್ಳೆಯ ಶಿಕ್ಷಣ ಪಡೆದಿದ್ದಾರೆ, ತನಗೆ ಮೋಸವಾದ ಮೇಲೆ ಅಪರಾಧ ಜಗತ್ತಿಗೆ ಇಳಿಯುತ್ತಾಳೆ. ಆದರೆ ಈಗ ಅಪರಾಧ ಜಗತ್ತಿನಿಂದ ಸಂಪೂರ್ಣ ಹೊರ ಬಂದಿರುವುದಾಗಿ ಹೇಳುತ್ತಾಳ, ತನ್ನ ಪತಿಯನ್ನು ನ ಜೈಲಿನಿಂದ ಹೊರತರಲು ಕಾನುನು ಪದವಿ ಕೂಡ ಮಾಡುತ್ತಿದ್ದಾಳೆ.

ಮಹಾ ಗ್ಯಾಂಗ್‌ಸ್ಟರ್ ಸಂದೀಪ್

ದೊಡ್ಡ ಗ್ಯಾಂಗ್‌ಸ್ಟರ್ ಈತ. ಈತ ದೆಹಲಿಯಲ್ಲಿ ಕೊಲೆ ಸುಲಿಗೆ ಹೀಗೆ ಅನೇಕ ಅಪರಾಧ ಕೃತ್ಯ ಎಸಗಿದ್ದಾನೆ, ಈತ ಪ್ರಸಿದ್ಧ ಕುಸ್ತಿಪಟು ಸಾಗರ್‌ ಧನಖಡ್‌ನ ಕೊಂಡ ಆರೋಪಿ. ಕುಸ್ತಿಪಟು ಸುಶೀಲ್ ಕುಮಾರ್‌ಗೂ ಬೆದರಿಕೆ ಹಾಕಿರುವ ಆರೋಪವಿದೆ. ಈತನ ಬಗ್ಗೆ ಹಲವು ರಾಜ್ಯಗಳಲ್ಲಿ ಕೇಸ್‌ಗಳಿವೆ, ಇಂಥ ದೊಡ್ಡ ಗ್ಯಾಂಗ್‌ಸ್ಟರ್‌ ಮದುವೆ ಮಾಡಿಕೊಳ್ಳಲು ಪರೋಲ್‌ನಲ್ಲಿ ಹೊರ ಬಂದಿದ್ದಾನೆ. ಈತನ ಕೃತ್ಯದಿಂದಾಗಿ ಈತನಿಗೂ ಪ್ರಾಣ ಬೆದರಿಕೆ ಇದೆ, ಹಾಗಾಗಿ ಆತನ ಭದ್ರತೆಗೆ ದೆಹಲಿ ಪೊಲೀಸರಿಗೆ ನ್ಯಾಯಾಲಯ ಸೂಚನೆಯಿದೆ.

ಅತಿಥಿಗಳನ್ನೂ ಸಂಪೂರ್ಣ ಪರೀಕ್ಷಿಸಿ ಒಳ ಬಿಡಲಾಗುತ್ತಿತ್ತು

ಈ ಮದುವೆಗೆ ಬರುವ ಅತಿಥಿಗಳನ್ನು ಪ್ರವೇಶ ದ್ವಾರದಲ್ಲಿ ಈ ಮೆಟ್ರೋ ಮತ್ತಿತರ ಕಡೆ ಚೆಕ್‌ ಮಾಡುತ್ತಾರೆ ಅಲ್ಲ ಆ ರೀತಿ ಸೆಕ್ಯೂರಿಟಿ ಚೆಕ್ ಮಾಡಿ, ಅವರು ಏನಾದರೂ ಗನ್, ಚೂರಿ ತಂದಿದ್ದೀರಾ ಎಂದು ಪರೀಕ್ಷೆ ಮಾಡಿ ಒಳ ಬಿಡಲಾಗಿತ್ತು. ಈ ಮದುವೆ ದಿನ ಅಲ್ಲಿ ಸಮೀಪದಲ್ಲಿರುವ ಅಂಗಡಿಗಳನ್ನು ಮುಚ್ಚಲಾಗಿತ್ತು, ಬಿಗಿ ಭದ್ರತೆಯಲ್ಲಿ ಈ ಗ್ಯಾಂಗ್‌ಸ್ಟರ್‌ ಜೋಡಿಯ ಮದುವೆ ನಡೆದಿದೆ. ಥೇಟ್‌ ಸಿನಿಮಾದಲ್ಲಿ ಕಂಡು ಬರುವಂತೆಯೇ ಇದೆ ಅಲ್ವಾ?

English summary

Gangster Kala Jatheri And 'lady don' Anuradha Got Married In Delhi With Amid Tight Security

Viral video: Gangster Kala Jatheri And 'lady don' Anuradha Got Married In Delhi With Amid Tight Security, the video goes viral
X
Desktop Bottom Promotion