Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಗಣೇಶನನನ್ನು ವಿಸರ್ಜನೆ ಮಾಡುವುದೇಕೆ? ಇದರ ಹಿಂದಿರುವ 3 ಪ್ರಮುಖ ಕಾರಣಗಳೇನು?
ಗಣೇಶ ಚತುರ್ಥಿಯಂದು ಗಣೇಶನ ಪ್ರತಿಷ್ಠಾಪನೆ ಮಾಡಿ ನಂತರ ವಿಸರ್ಜನೆ ಮಾಡಲಾಗುವುದು. ಕೆಲವರು ಪ್ರತಿಷ್ಠಾಪನೆ ಮಾಡಿದ ದಿನದಂದೇ ವಿಸರ್ಜನೆ ಮಾಡಿದರೆ ಇನ್ನು ಕೆಲವರು 3, 7, 10ನೇ ದಿನಕ್ಕೆ ವಿಸರ್ಜನೆ ಮಾಡಲಾಗುವುದು. ಗಣೇಶನನ್ನು ಏಕೆ ನೀರಿನಲ್ಲಿ ವಿಸರ್ಜನೆ ಮಾಡಬೇಕು ಇದರ ಹಿಂದಿರುವ ಕಾರಣವೇನು ಎಂದು ನೋಡುವುದಾರೆ, ದಾರ್ಮಿಕ ಕಾರಣದ ಜೊತೆಗೆ ಇದರಿಂದ ಪರಿಸರಕ್ಕೂ ಕೆಲವೊಂದು ಗುಣಗಳಿವೆ ( ಪ್ಲಾಸ್ಟರ್ ಆಫ್ ಪ್ಯಾರೀಸ್‌ನ ಮೂರ್ತಿಗಳಲ್ಲ).
ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಪರಿಸರಕ್ಕೆ ಹಾನಿಕಾರಕ. ಯಾವತ್ತಿಗೂ ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸಬೇಕು, ಆವಾಗ ಮಾತ್ರ ಗಣೇಶನಿಗೂ ಇಷ್ಟವಾಗುವುದು. ನಾವು ಪರಿಸರಕ್ಕೆ ಹಾನಿಯುಂಟಾಗುವ ಗಣೇಶನ ಮೂರ್ತಿಗಳನ್ನು ಬಳಸುವುದು ಒಳ್ಳೆಯದಲ್ಲ. ಜೇಡಿಮಣ್ಣಿನಿಂದ ಮಾಡಿದ ಗಣೇಶನನ್ನು ಬಳಸಿ.
ಗಣೇಶ ಚತುರ್ಥಿಗೆ ಬಳಸಿದ ಗಣೇಶನನ್ನು ನೀರಿನಲ್ಲಿ ಮುಳುಗಿಸಿ ವಿಸರ್ಜನೆ ಮಾಡಲಾಗುವುದು. ಏಕೆ ಗಣೇಶನನ್ನು ವಿಸರ್ಜನೆ ಮಾಡಬೇಕು, ಇದರ ಹಿಂದಿರುವ ಕಾರಣಗಳೇನು ಎಂದು ನೋಡೋಣ ಬನ್ನಿ:

1. ಧಾರ್ಮಿಕ ಕಾರಣ
ಗಣೇಶನನ್ನು ಮನೆಗೆ ತರುವ ತುಂಬಾನೇ ಸಂತೋಷ-ಸಂಭ್ರಮದಿಂದ ತರುತ್ತೇವೆ, ಆದರೆ ಬೀಳ್ಗೊಡುವಾಗ ತುಂಬಾನೇ ದುಃಖವಾಗುತ್ತದೆ, ನೀರು ಅನಂತದ ಸಂಕೇತ, ಸಮುದ್ರಕ್ಕೆ ಕೊನೆಯಿಲ್ಲ, ಆದ್ದರಿಂದ ಗಣೇಶನನ್ನು ನೀರಿನಲ್ಲಿ ವಿಸರ್ಜನೆ ಮಾಡಲಾಗುವುದು. ಗಣೇಶನನ್ನು ನೀರಿನಲ್ಲಿ ಮುಳುಗಿಸಿದ ಮೇಲೆ ಗಣೇಶ ಸ್ವರ್ಗದ ಕಡೆಗೆ ಹೋಗುತ್ತಾನೆ ಎಂದು ಹೇಳಲಾಗಿದೆ. ಅಲ್ಲದೆ ಈ ಆಚರಣೆಯು ಹುಟ್ಟು-ಜೀವನ-ಮರಣದ ಚಕ್ರವನ್ನು ಕೂಡ ಸೂಚಿಸುತ್ತದೆ. ಉತ್ತರ ಪೂಜೆಯನ್ನು ಮಾಡಿದ ಬಳಿಕ ಗಣೇಶನನ್ನು ನೀರಿನಲ್ಲಿ ವಿಸರ್ಜನೆ ಮಾಡಲಾಗುವುದು.
2. ಗಣೇಶ ಚತುರ್ಥಿಯೆಂಬುವುದು ಬರೀ ಹಿಂದೂಗಳ ಆಚರಣೆಯಲ್ಲ, ಈ ಆಚರಣೆಗೂ ಪ್ರಕೃತಿಗೂ ಸಂಬಂಧವಿದೆ.
ಮಳೆಗಾಲದಲ್ಲಿ ಕೆರೆ, ಕೊಳ ಅಥವಾ ಇತರ ನೀರಿನ ಮೂಲಗಳಿಂದ ಹಳೆಯ ಜೇಡಿಮಣ್ಣು ತೆಗೆಯಬೇಕು. ಈ ಜೇಡಿ ಮಣ್ಣಿನಿಂದ ಗಣೇಶನ ಮೂರ್ತಿಗಳನ್ನು ಮಾಡಲಾಗುವುದು. ಗಣೇಶನ ವುಸರ್ಜನೆ ಮಾಡುವ ಸಮಯದಲ್ಲಿ ದೊಡ್ಡ ಮಳೆಗಾಲ ಮುಗಿದಿರುತ್ತದೆ, ಈ ಅವಧಿಯಲ್ಲಿ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುವುದು. ಗಣೇಶ ಮೂರ್ತಿಗೆ ಅರಿಶಿಣ ಹಚ್ಚಲಾಗಿರುತ್ತದೆ, ಹೂಗಳಿಂದ ಅಲಂಕಾರ ಮಾಡಲಾಗಿರುತ್ತದೆ. ನಾವು ಗಣೇಶ ಮೂರ್ತಿಯನ್ನು ನೀರಿನಲ್ಲಿ ಬಿಟ್ಟಾಗ ಹೂಗಳು, ಅರಿಶಿಣ ಇವುಗಳಲ್ಲಿರುವ ಔಷಧೀಯ ಗುಣಗಳು ಜಲಚರ ಪ್ರಾಣಿಗಳಿಗೆ ಸಿಗುತ್ತದೆ.
ಆದ್ದರಿಂದ ನೀವು ಗಣೇಶ ಮೂರ್ತಿಗಳಿಗೆ ರಾಸಾಯನಿಕ ಬಳಸಬೇಡಿ, ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳನ್ನು ಬಳಸಬೇಡಿ ಎಂದು ಹೇಳಲಾಗುವುದು.
3. ಪೂಜಿಸಿದ ಗಣೇಶನ ಮೂರ್ತಿಯನ್ನು ಮತ್ತೆ ಬಳಸಬಾರದು
ಈ ವರ್ಷ ಬಳಸಿದ ಗಣೇಶನ ಮೂರ್ತಿಯನ್ನು ಮುಂದಿನ ವರ್ಷ ಬಳಸಬಾರದು ಈ ಕಾರಣದಿಂದ ಕೂಡ ಗಣೇಶನ ಮೂರ್ತಿಗಳನ್ನು ಬಳಸಬಾರದು.



Click it and Unblock the Notifications











