Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಗಣೇಶ ಚತುರ್ಥಿ 2023: ಗಣೇಶನಿಗೆ ಪ್ರಿಯವಾದ 8 ಹೂವುಗಳಿವು
ಎಲ್ಲೆಲ್ಲಿ ನೋಡಿದರು ಸಡಗರವೋ.. ಸಂಭ್ರಮ... ಗೌರಿ-ಗಣೇಶ ಹಬ್ಬದ ಕಳೆಕಟ್ಟಿದೆ. ಗಣೇಶ ಚತುರ್ಥಿಯನ್ನು ಎಲ್ಲಾ ಕಡೆ ತುಂಬಾ ಅದ್ಧೂರಿಯಿಂದ ಆಚರಿಸಲಾಗುವುದು. ಶ್ರೀ ಗಣೇಶನನ್ನು ಹೂವಿನಿಂದ ಅಲಂಕರಿಸಿರುವುದನ್ನು ನೋಡುವುದೇ ಆಕರ್ಷಕ.
ವಿಷ್ಣುವಿನ ಪೂಜೆಯಲ್ಲಿ ತುಳಸಿ, ಶಿವನ ಪೂಜೆಯಲ್ಲಿ ಬಿಲ್ವೆಪತ್ರೆ ಹೇಗೆ ಕಡ್ಡಾಯವೋ ಅದೇ ರೀತಿ ಗಣೇಶನಿಗೆ ಗರಿಕೆ ಅರ್ಪಿಸಲೇಬೇಕು. ಗರಿಕೆ ಅರ್ಪಿಸದೆ ನೀವು ಏನೇ ಅರ್ಪಿಸಿದರೂ ಆ ಪೂಜೆ ಪೂರ್ಣವಾಗುವುದಿಲ್ಲ. ಗರಿಕೆ ಜೊತೆಗೆ ನೀವು ಗಣೇಶನಿಗೆ ಪ್ರಿಯವಾದ ಹೂಗಳನ್ನು ಅರ್ಪಿಸಿ.

ಗಣೇಶನಿಗೆ ಪ್ರಯವಾದ ಹೂಗಳೆಂದರೆ
ಮಲ್ಲಿಗೆ ಹೂ
ಗಣೇಶನಿಗೆ ಮಲ್ಲಿಗೆ ಹೂವೆಂದರೆ ತುಂಬಾನೇ ಇಷ್ಟ, ನೀವು ಗಣೇಶ ಚತುರ್ಥಿ ಪೂಜೆಯಲ್ಲಿ ಮಲ್ಲಿಗೆಯನ್ನು ಅರ್ಪಿಸಿದರೆ ಕುಟುಂಬದಲ್ಲಿ ಸದಸ್ಯರು ಹೊಂದಾಣಿಕೆಯಿಂದ ಇರುತ್ತಾರೆ ಎಂದು ಹೇಳಲಾಗುವುದು.
ಗೋಕರ್ಣ ಹೂ
ಇದನ್ನು ಶಂಖ ಹೂವೆಂದು ಕೂಡ ಕರೆಯಲಾಗುವುದು. ಕಡು ನೀಲಿ ಬಣ್ಣದ ಬಳ್ಳಿಯಲ್ಲಿ ಬೆಳೆಯುವ ಈ ಹೂವುಗಳನ್ನು ನೀವು ಗಣೇಶನ ಪೂಜೆಗೆ ಬಳಸಬಹುದು. ಇದನ್ನು ಆಯುರ್ವೇದದಲ್ಲಿ ಔಷಧಿಯನ್ನಾಗಿ ಕೂಡ ಬಳಸಲಾಗುವುದು.
ಚೆಂಡು ಹೂ
ಚೆಂಡು ಹೂಗಳನ್ನು ಗಣೇಶನ ಪೂಜೆಗೆ ಬಳಸಿ. ಚಿನ್ನದ ಬಣ್ಣದ ಚೆಂಡು ಹೂವುಗಳನ್ನು ನೋಡುವುದೇ ಆಕರ್ಷಕ.
ಸೇವಂತಿಗೆ
ನೀವು ಗಣೇಶನ ಪೂಜೆಯಲ್ಲಿ ಸೇವಂತಿಗೆ ಹೂಗಳನ್ನು ಬಳಸಿ. ಈ ಹೂಗಳನ್ನು ಅರ್ಪಿಸುವುದರಿಂದ ನೆಗೆಟಿವ್ ಎನರ್ಜಿಗಳ ತೊಂದರೆ ದೂರಾಗುವುದು ಎಂದು ಹೇಳಲಾಗುವುದು.
ಪಾರಿಜಾತ
ರಾತ್ರಿ ಅರಳಿ ಬೆಳಗೆ ಉದುರಿ ಬೀಳುವ ಈ ಹೂಗಳನ್ನು ನೀವು ಗಿಡದಿಂದಲೇ ಕುಯ್ದು ಶ್ರೀ ಗಣೇಶನಿಗೆ ಅರ್ಪಿಸಿ.
ದಾಳಿಂಬೆ ಹೂ
ದಾಳಿಂಬೆಯ ಹೂಗಳು ಈ ಸಮಯದಲ್ಲಿ ಬಿಡುತ್ತದೆ, ಇವುಗಳನ್ನು ನೀವು ಗಣೇಶ ಪೂಜೆಯಲ್ಲಿ ಬಳಸಬಹುದು.
ಗ್ಲೋರಿ ಲಿಲ್ಲಿ
ನೀವು ಗಣೇಶನಿಗೆ ಗ್ಲೋರಿ ಲಿಲ್ಲಿ ಹೂಗಳನ್ನು ಅರ್ಪಿಸಿಬಹುದು. ಕೆಂಪು ಬಣ್ಣದ ಈ ಹೂ ಆಕರ್ಷಕವಾಗಿರುತ್ತದೆ.
ದಾಸವಾಳದ ಹೂ
ನೀವು ದಾಸವಾಳದ ಹೂಗಳನ್ನು ಶ್ರೀ ಗಣೇಶನಿಗೆ ಅರ್ಪಿಸಬಹುದು. ದಾಸವಾಳದಲ್ಲಿ ಹಲವು ಬಣ್ಣದ ಹೂಗಳು ದೊರೆಯುತ್ತದೆ. ಇವುಗಳನ್ನು ನೀವು ಶ್ರೀ ಗಣೇಶನ ಪೂಜೆಗೆ ಬಲಸಬಹುದು.



Click it and Unblock the Notifications
