Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 3 ರಾಶಿಯವರಿಗೆ ನವೆಂಬರ್‌ನಲ್ಲಿ ಗಜಕೇಸರಿ ಯೋಗವಿದೆ!
ನವೆಂಬರ್ 5 ಗ್ರಹಗಳ ಸಂಚಾರವಿದೆ, ಈ ಗ್ರಹಗಳ ಸಂಚಾರವು ಗಜಕೇಸರಿ ಯೋಗ ರೂಪಿಸಲಿದೆ. ಈ ಗಜಕೇಸರಿ ಯೋಗವಿರುವುದರಿಂದ ಈ ಮೂರು ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.'
ಮಿಥುನ ರಾಶಿ
ಗಜಕೇಸರಿ ಯೋಗದಿಂದಾಗಿ ಮಿಥುನ ರಾಶಿಯವರಿಗೆ ತುಂಬಾನೇ ಒಳ್ಳೆಯದಿದೆ. ಕೆಲವೊಂದು ಸವಾಲುಗಳು ಇದ್ದರೂ ವೃತ್ತಿಯಲ್ಲಿ, ವ್ಯಾಪಾರದಲ್ಲಿ ಉತ್ತಮ ಪ್ರಯೋಜನ ಪಡೆಯುವಿರಿ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುತ್ತಿರುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಬಹುದು. ಅಲ್ಲದೆ ಪೋಷಕರಾಗಿದ್ದರೆ ಈ ತಿಂಗಳಿನಲ್ಲಿ ಮಕ್ಕಳಿಂದ ಖುಷಿಯ ಸುದ್ದಿ ಸಿಗಲಿದೆ. ಈ ರಾಶಿಯ ಮಹಿಳಾ ಉದ್ಯೋಗಿಗಳಿಗೆ ಉತ್ತಮ ಗೌರವ ಸಿಗಲಿದೆ. ಈ ಅವಧಿಯಲ್ಲಿ ಸಾಮಾಜಿಕವಾಗಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ.

ಕರ್ಕ ರಾಶಿಗೆ ಗಜಕೇಸರಿ ಹಾಗೂ ಶಾಶ ಯೋಗ
ಈ ತಿಂಗಳಿನಲ್ಲಿ ಕರ್ಕ ರಾಶಿಯವರಿಗೆ ಗಜಕೇಸರಿ ಯೋಗ ಹಾಗೂ ಶಾಶ ಯೋಗದಿಂದಾಗಿ ತುಂಬಾ ಚೆನ್ನಾಗಿರಲಿದೆ. ನೀವು ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಬಯಸುವುದಾದರೆ ಈ ಅವಧಿ ನಿಮಗೆ ತುಂಬಾ ಅನುಕೂಲಕರವಾಗಿದೆ. ಸ್ಟಾಕ್ ಮಾರ್ಕೆಟ್‌ನಲ್ಲಿ ತೊಡಗಿಸಿಕೊಂಡವರು ಉತ್ತಮ ಲಾಭ ಪಡೆಯುತ್ತೀರಿ. ನೀವು ಈ ಅವಧಿಯಲ್ಲಿ ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಉದ್ಯೋಗ ಹುಡುಕುತ್ತಿರುವವರು ಉತ್ತಮ ಅವಕಾಶ ಪಡೆಯುತ್ತೀರಿ.
ಮಕರ ರಾಶಿ
ನವೆಂಬರ್ ತಿಂಗಳಿನಲ್ಲಿ ಮಕರ ರಾಶಿಯವರು ತುಂಬಾ ಅನುಕೂಲಕರ ಫಲಿತಾಂಶವನ್ನು ಪಡೆಯಬಹುದು. ಈ ಗಜಕೇಸರಿ ಯೋಗದಿಂದಾಗಿ ನೀವು ತುಂಬಾನೇ ಅನುಕೂಲಕರವಾದ ಪ್ರಯೋಜನವನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿ ಜೊತೆ ಪ್ರೀತಿ ತುಂಬಾ ಗಟ್ಟಿಯಾಗಲಿದೆ. ನೀವು ವೃತ್ತಿ ಜೀವನದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುವುದು. ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಊಹಿಸಿದಕ್ಕಿಂತಲೂ ಉತ್ತಮ ಪ್ರಯೋಜನ ಪಡೆಯುತ್ತೀರಿ. ಹಳೆಯ ಸಾಲವನ್ನು ತೀರಿಸಲು ಸಾಧ್ಯವಾಗುವುದು. ಆರ್ಥಿಕವಾಗಿ ತುಂಬಾ ಯಶಸ್ಸು ಕಾಣುವಿರಿ. ನಿಮ್ಮ ಜೀವನದಲ್ಲಿ ಅನೇಕ ಧನಾತ್ಮಕ ಬದಲಾವಣೆಯಾಗಲಿದೆ.
ಗಜಕೇಸರಿ ಯೋಗ ಪ್ರಖ್ಯಾತಿ ತಂದು ಕೊಡುವುದೇ?
ಗಜಕೇಸರಿ ಯೋಗ, ಪಂಚ ಮಹಾಪುರುಷ ಯೋಗ ಮತ್ತು ಆದಿ ಯೋಗ ನಿಮಗೆ ಪ್ರಖ್ಯಾತಿ ತರುತ್ತದೆ.
ಗಜಕೇಸರಿ ಯೋಗದ ಪ್ರಯೋಜನಗಳು
* ಯಾರ ಕುಂಡಲಿಯಲ್ಲಿ ಗಜಕೇಸರಿ ಯೋಗವಿದೆಯೋ ಅವರು ವೃತ್ತಿ ಜೀವನದಲ್ಲಿ ತುಂಬಾ ಎತ್ತರಕ್ಕೆ ಬೆಳೆಯುತ್ತಾರೆ.
* ಈ ಯೋಗದ ಸಮಯದಲ್ಲಿ ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರುವುದು
* ಈ ಸಮಯ ಆರ್ಥಿಕವಾಗಿ ಮಾತ್ರವಲ್ಲ, ನಿಮ್ಮ ಕುಟುಂಬದಲ್ಲಿಯೂ ಸಂತೋಷದ ವಾತಾವರಣ ಇರಲಿದೆ. ಗಜಕೇಸರಿ ಯೋಗದಿಂದಾಗಿ ನೀವು ಆಸ್ತಿ ಖರೀದಿಸುವ ಅದೃಷ್ಟ ನಿಮಗೆ ದೊರೆಯಲಿದೆ.
* ನಿಮ್ಮ ಸೌಕರ್ಯಗಳು ಹೆಚ್ಚಾಗುವುದು
* ನಿಮ್ಮ ಖ್ಯಾತಿ ಹೆಚ್ಚಾಗುವುದು.
ಮಹಿಳೆಯರಲ್ಲಿ ಗಜಕೇಸರಿ
ಮಹಿಳೆಯರಿಗೆ ಗಜಕೇಸರಿ ಯೋಗವಿದ್ದರೆ ಅವರ ಸೌಕರ್ಯ ಹೆಚ್ಚಾಗಲಿದೆ, ಜೀವನದಲ್ಲಿ ಸಂತೋಷ ಹೆಚ್ಚಾಗಿಲಿದೆ. ಅವಳು ಉತ್ತಮ ಹೆಸರು ಗಳಿಸುತ್ತಾಳೆ, ಈ ಯೋಗ ನಿಮಗೆ ತುಂಬಾ ಶುಭವಾಗಿದೆ.
ಪುರುಷರಿಗೆ ಗಜಕೇಸರಿ ಯೋಗ
ನಿಮ್ಮಲ್ಲಿ ಧೈರ್ಯ, ಬುದ್ಧಿವಂತಿಕೆ ಹೆಚ್ಚಾಗಲಿದೆ. ಗಜಕೇಸರಿ ಯೋಗದಿಂದಾಗಿ ನಿಮ್ಮ ವ್ಯವಹಾರದಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ಅದರಲ್ಲೂ 4ನೇ ಅಥವಾ 10ನೇ ಮನೆಯಲ್ಲಿ ಗಜಕೇಸರಿ ಯೋಗ ಉಂಟಾದರೆ ಆರ್ಥಿಕವಾಗಿ ತುಂಬಾ ಬೆಳೆಯುತ್ತೀರಿ.
7ನೇ ಮನೆಯಲ್ಲಿ ಗಜಕೇಸರಿ ಯೋಗ
ನಿಮ್ಮ 7ನೇ ಮನೆಯಲ್ಲಿ ಗಜಕೇಸರಿ ಯೋಗವಿದ್ದರೆ ಅವಾಹಿತರಿಗೆ ವಿವಾಹ ಭಾಗ್ಯ ಕೂಡಿ ರಬಲಿದೆ. ವಿವಾಹಿತರ ವೈವಾಹಿಕ ಜೀವನ ಚೆನ್ನಾಗಿರಲಿದೆ.



Click it and Unblock the Notifications