Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಕ್ರಿಸ್ಮಸ್ ಟ್ರೀ ಹುಟ್ಟಿಕೊಂಡಿದ್ದು ಹೇಗೆ? ಇಲ್ಲಿದೆ ಕೆಲ ಅಚ್ಚರಿ ವಿಚಾರಗಳು!
ವಿಶ್ವದಾದ್ಯಂತ ಜನ ಕ್ರಿಸ್‌ಮಸ್ ಆಚರಣೆಗೆ ಕಾದಿದ್ದಾರೆ. ಜೀಸಸ್ ಹುಟ್ಟುಹಬ್ಬವನ್ನು ಕ್ರಿಸ್‌ಮಸ್ ಎಂದು ಆಚರಿಸಲಾಗುತ್ತದೆ ಎಂಬುದು ನಾವೆಲ್ಲರೂ ತಿಳಿದಿರುವ ವಿಚಾರವಾಗಿದೆ. ಕ್ರಿಸ್‌ಮಸ್ ಹಿಂದಿನ ದಿನ ಸಾಂಟಾ ಕ್ಲಾಸ್ ಬಂದು ಮಕ್ಕಳಿಗೆ ಉಡುಗೊರೆ ನೀಡುತ್ತಾನೆ ಎಂಬುದಷ್ಟೇ ನಮಗೆ ತಿಳಿದಿದೆ. ಆದ್ರೆ ಕ್ರಿಸ್‌ಮಸ್ ಬಗ್ಗೆ ನಮಗೆ ತಿಳಿದಿರವ ಒಂದಿಷ್ಟು ಮಾಹಿತಿ ಇಲ್ಲಿದೆ.

ಯಾವಾಗಲು ಡಿ.25ಕ್ಕೆ ಕ್ರಿಸ್‌ಮಸ್ ಬರುವುದಿಲ್ಲ
ಜೀಸಸ್ ಹುಟ್ಟಿದ ದಿನವನ್ನು ಕ್ರಿಸ್‌ಮಸ್ ಎಂದು ಆಚರಿಸಲಾಗಿತ್ತಿದ್ದರೂ ಜೀಸಸ್ ಯಾವಾಗ ಹುಟ್ಟಿದ್ದ ಎಂಬ ಬಗ್ಗೆ ನಿಖರವಾದ ಉಲ್ಲೇಖವಿಲ್ಲ. ಬೈಬಲ್‌ನಲ್ಲಿ ಡಿಸೆಂಬರ್ 25ರ ಕುರಿತು ಎಲ್ಲಿಯೂ ಉಲ್ಲೇಖವಿಲ್ಲ. ಆದರೆ ಅನೇಕ ಇತಿಹಾಸಕಾರರು ಜೀಸಸ್ ಚಳಿಗಾಳದ ಪರ್ವದಿನದಲ್ಲಿ ಜನಿಸಿದ ಎಂದು ನಂಬುತ್ತಾರೆ. ಹಾಗಾಗಿ ವಿಂಟರ್‌ನಲ್ಲಿಯೇ ಕ್ರಿಸ್‌ಮಸ್ ಆಚರಿಸಲಾಗುತ್ತದೆ. ಈ ದಿನಾಂಕದಂದು ಸ್ಯಾಟರ್ನಾಲಿಯಾ ಎಂಬ ಪೇಗನ್ ಹಬ್ಬದೊಂದಿಗೆ ಹೊಂದಿಕೆಯಾಗುತ್ತದೆ, ಇದೊಂದು ಕೃಷಿ ಭೂಮಿಗೆ ಸಂಬಂಧಿಸಿದ ದೇವರು ಎಂದು ನಂಬಲಾಗಿದ್ದು, ಇದೇ ದಿನವನ್ನು ಉಡುಗೊರೆ ನೀಡಲು ಶುಭಕೋರಲು ಮುಂದೆ ಆರಂಭಿಸಲಾಯಿತು ಎಂಬ ಮಾತಿದೆ.
ಕ್ರಿಸ್‌ಮಸ್ ಟ್ರೀ ಹುಟ್ಟಿದ್ದೇಗೆ?
ಕ್ರಿಸ್‌ಮಸ್‌ನಲ್ಲಿ ಸಾಂಟಾ ಕ್ಲಾಸ್ ಬಳಿಕ ಮತ್ತೊಂದು ಆಕರ್ಷಣೆ ಎಂದರೆ ಅದು ಕ್ರಿಸ್‌ಮಸ್ ಟ್ರೀ ಆಗಿದೆ. ಮೊದಲು ಪ್ರಾಚೀನ ಈಜಿಪ್ಟ್ ಹಾಗೂ ರೋಮ್ ಮೂಲಕ ಈ ಟ್ರೀ ಬಳಕೆಗೆ ಬಂದಿತು ಎನ್ನಲಾಗಿದೆ. ಅವರು ಚಳಿಗಾಲದಲ್ಲಿ ಸಕ್ರಾಂತಿ ಕಾಲದಲ್ಲಿ ಹಸಿರು ಬಣ್ಣದಿಂದ ಈ ಮರವು ಅಲಂಕೃತಗೊಂಡಂತೆ ಕಾಣುತ್ತಿತ್ತು. ಇದು ಹೊಸ ವಸಂತದ ಸೂಚಕವಾಗಿದೆ.
ಮೊಟ್ಟ ಮೊದಲ ಬಾರಿಗೆ ಜರ್ಮನಿಯ ರಾಜಕುಮಾರ ಆಲ್ಬರ್ಟ್ ತನ್ನ ಪತ್ನಿ ಇಂಗ್ಲೆಂಡ್‌ನ ರಾಣಿ ವಿಕ್ಟೋರಿಯಾಗೆ ಮರವನ್ನು ಉಡುಗೊರೆಯಾಗಿ ನೀಡಿದ್ದ ಎಂಬ ಮಾತಿದೆ. ಬಳಿಕ ಇದೊಂದು ಸಂಪ್ರದಾಯವಾಗಿ ಇಡೀ ವಿಶ್ವದಾದ್ಯಂತ ಹಬ್ಬಿತಂತೆ. ಕ್ರಿಸ್ಮಸ್ ವೃಕ್ಷದ ಮುಂದೆ ದಂಪತಿಗಳ ರೇಖಾಚಿತ್ರವು ಮೊದಲು 1848 ರಲ್ಲಿ ಇಲ್ಲಸ್ಟ್ರೇಟೆಡ್ ಲಂಡನ್ ನ್ಯೂಸ್‌ನಲ್ಲಿ ಕಾಣಿಸಿಕೊಂಡಿತು. ಅದರ ನಂತರ, ಹೆಚ್ಚು ಹೆಚ್ಚು ಜನರು ಅದನ್ನು ಅನುಸರಿಸಲು ಪ್ರಾರಂಭಿಸಿದರು.
ಸಾಂಟಾ ಕ್ಲಾಸ್ ಆದ ನಿಕೋಲರ್
ಸೈಂಟ್ ನಿಕೋಲಸ್ ಎಂಬಾತನಿಂದ ಈ ಸಾಂಟಾ ಕ್ಲಾಸ್ ಎಂಬ ಕಲ್ಪನೆ ಹುಟ್ಟಿಕೊಂಡಿತು. ಆತ ಮಕ್ಕಳ ರಕ್ಷಣೆ ಮಾಡುತ್ತಾ, ಅವರಿಗೆ ಉಡುಗೊರೆ ಕೊಡುತ್ತಾ ಸಂತ ಎಂದು ಕರೆಸಿಕೊಂಡಿದ್ದ, ಬಳಿಕ ಆತ ಯಾವ ರೀತಿ ಇದ್ದ ಎಂಬ ಬಗ್ಗೆ ಹಲವು ಚಿತ್ರಗಳು ಕಾಣಿಸಿಕೊಂಡವು ಅದರಲ್ಲೊಂದು ಈ ಕೆಂಪು ಬಣ್ಣದ ಬಿಳಿ ಗಡ್ಡದ ಚಿತ್ರ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಈಗ ಸಾಂಟಾ ಕ್ಲಾಸ್ ಅನ್ನು ನಾವು ಈ ರೀತಿ ಕಾಣುತ್ತಿದ್ದೇವೆ.
ಹ್ಯಾಂಗಿಂಗ್ ಸ್ಟಾಕ್ಸ್ ಆರಂಭವಾಗಿದ್ದು ಹೇಗೆ?
ಕಥೆಯ ಪ್ರಕಾರ ನಾವು ಚಿಮಣಿಯ ಬಳಿ ಸ್ಟಾಕಿಂಗ್ಸ್ ಅನ್ನು ಕಾಳಜಿಯಿಂದ ನೇತುಹಾಕುತ್ತೇವೆ ಏಕೆಂದರೆ ಒಂದು ವರ್ಷ ಬಡ ತಂದೆ ತಮ್ಮ ಮೂರು ಹೆಣ್ಣುಮಕ್ಕಳ ವರದಕ್ಷಿಣೆಗೆ ಸಾಕಷ್ಟು ಹಣವನ್ನು ಒಟ್ಟು ಮಾಡುತ್ತಿದ್ದ, ಅದೇ ವೇಳೆ ರಾಜ ಸೇಂಟ್ ನಿಕ್ ಒಂದು ರಾತ್ರಿ ತಮ್ಮ ಚಿಮಣಿಯ ಕೆಳಗೆ ಚಿನ್ನ ತುಂಬಿದ್ದ ಚೀಲವನ್ನು ಬೀಳಿಸಿದ್ದ, ಆದರೆ ಆ ಚೀಲ ನೇರವಾಗಿ ಬಂದು ತೊಳೆದು ಒಣಗಿಸಲು ಹಾಕಿದ್ದ ಸ್ಟಾಕಿಂಗ್ಸ್‌ನಲ್ಲಿ ಬಿತ್ತು. ಹೀಗಾಗಿ ಕ್ರಿಸ್‌ಮಸ್‌ನಲ್ಲಿ ನಿಮಗೆ ಇಷ್ಟದ ಉಡುಗೊರೆ ಕೇಳಿ ಸ್ಟಾಕ್ಸ್ ನೇತುಹಾಕುವ ಸಂಪ್ರದಾಯ ನಡೆದುಕೊಂಡು ಬಂದಿತು.
ಜಿಂಗಲ್ ಬೆಲ್ಸ್ ಹಾಡು
ಕ್ರಿಸ್‌ಮಸ್ ವೇಳೆ ನಾವು ಜಿಂಗಲ್ ಬೆಲ್ಸ್ ಹಾಡನ್ನು ಎಲ್ಲಾ ಕಡೆ ಕೇಳುತ್ತೇವೆ. ಜೇಮ್ಸ್ ಲಾರ್ಡ್ ಪಿಯರ್‌ಪಾಂಟ್ 19ನೇ ಶತಮಾನದ ಮಧ್ಯಭಾಗದಲ್ಲಿ ತನ್ನ ಚರ್ಚ್‌ನ ಥ್ಯಾಂಕ್ಸ್‌ಗಿವಿಂಗ್ ಕನ್ಸರ್ಟ್‌ಗಾಗಿ "ಒನ್ ಹಾರ್ಸ್ ಓಪನ್ ಸ್ಲೀ" ಎಂಬ ಹಾಡನ್ನು ಬರೆದರು. ನಂತರ 1857 ರಲ್ಲಿ, ಈ ಹಾಡನ್ನು ನಾವೆಲ್ಲರೂ ಕೇಳಿರುವ ಜಿಂಗಲ್ ಬೆಲ್ಸ್ ಶೀರ್ಷಿಕೆಯಡಿಯಲ್ಲಿ ಮರು-ಬಿಡುಗಡೆ ಮಾಡಲಾಯಿತು ಮತ್ತು ಇದು ಇಂದಿಗೂ ಅತ್ಯಂತ ಜನಪ್ರಿಯ ಕ್ರಿಸ್ಮಸ್ ಹಾಡುಗಳಲ್ಲಿ ಒಂದಾಗಿದೆ.



Click it and Unblock the Notifications