Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪೆಟ್ರೋಲ್ ಪಂಪ್‌ನಲ್ಲಿ ಕಾರ್ಡ್ ಬಳಸಿ ಪೇಮೆಂಟ್ ಮಾಡ್ತೀರಾ? ₹1 ಲಕ್ಷ ಕಳೆದುಕೊಂಡ ವ್ಯಕ್ತಿ..
ದೇಶದ ಯುವ ಸಮುದಾವನ್ನು ಬಹಳವಾಗಿ ಕಾಡುತ್ತಿರುವ ಹಲವು ಸಮಸ್ಯೆಗಳಲ್ಲಿ ಆನ್‌ಲೈನ್ ಚೀಟಿಂಗ್ ಕೂಡ ಈಗ ಒಂದಾಗಿದೆ. ಡಿಜಿಟಲ್ ಸ್ಕ್ಯಾಮ್ ಅನ್ನೋದು ಈಗ ವೈರಸ್‌ನಂತೆ ಹರಡುತ್ತಿದೆ. ನಿಮ್ಮ ಡೆಬಿಟ್, ಕ್ರೆಟಿಟ್ ಕಾರ್ಡ್, ಆನ್‌ಲೈನ್ ವಹಿವಾಟು ನಡೆಸುವಾಗ ಎಷ್ಟು ಜಾಗೃತೆ ವಹಿಸಿದರು ಒಂದಲ್ಲಾ ಒಂದು ರೀತಿಯ ವಂಚನೆಗಳಿಗೆ ಒಳಗಾಗುತ್ತಿರುವುದನ್ನು ನೋಡಬಹುದು. ಕೆಲವೊಮ್ಮೆ ವಂಚಕರು ನಿಮ್ಮನ್ನು ಮೊಬೈಲ್ ಮೂಲಕ ಹಲವು ಬಗೆಯಲ್ಲಿ ಸಂಪರ್ಕಿಸಿ ಹಣ ಕೀಳಲು ಮುಂದಾಗುವುದು ನೋಡಬಹುದು.
ಮತ್ತೊಂದು ಕಡೆ ನೀವಾಗಿಯೇ ವಂಚಕರ ಜಾಲದಲ್ಲಿ ಸಿಲುಕುವುದು ಕೂಡ ನೋಡಬಹುದು. ಅದರಲ್ಲಿ ನಾವಿಂದು ಈ ಕ್ರೆಡಿಟ್ ಕಾರ್ಡ್ ಬಳಸುವಾಗ ವ್ಯಕ್ತಿಯೊಬ್ಬ 1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಹೌದು ಪೆಟ್ರೋಲ್‌ನಲ್ಲಿ ಪಂಪ್‌ನಲ್ಲಿ ಕ್ರೆಡಿಟ್ ಕಾರ್ಡ್ ಬಳಸಿದ ಆತನಿಗೆ ಬರೋಬ್ಬರಿ 1 ಲಕ್ಷ ರೂಪಾಯಿ ಕಳೆದುಕೊಂಡರುವ ಘಟನೆ ನಡೆದಿದೆ.

ಹಾಗಾದ್ರೆ ಪೆಟ್ರೋಲ್ ಪಂಪ್‌ನಲ್ಲಿ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಹೇಗೆ ವಂಚನೆ ಮಾಡುತ್ತಾರೆ. ಆತ 1 ಲಕ್ಷ ರೂಪಾಯಿ ಕಳೆದುಕೊಂಡಿದ್ದು ಹೇಗೆ ಅನ್ನೋದನ್ನು ವ್ಯಕ್ತಿಯೊಬ್ಬರು ವಿಡಿಯೋ ಮೂಲಕ ವಿವರಿಸಿದ್ದಾರೆ. ಸಾರ್ಥಕ್ ಅಹುಜಾ ಎಂಬ ಸಿಎ ಹಾಗೂ ಫಿನಾನ್ಷಿಯಲ್ ಇನ್‌ಫ್ಲೂಯೆನ್ಸರ್ ಈ ಕುರಿತು ಹಂಚಿಕೊಂಡಿದ್ದಾರೆ. ಪೆಟ್ರೋಲ್ ಪಂಪ್‌ನಲ್ಲಿ ಕ್ರೆಡಿಟ್ ಕಾರ್ಡ್ ಬಳಸುವಾಗ ಯಾವ ರೀತಿ ಮೋಸ ನಡೆಯಲಿದೆ ಎಂಬುದನ್ನು ಕೂಡ ವಿವರಿಸಿದ್ದಾರೆ.
ಪೆಟ್ರೋಲ್ ಪಂಪ್‌ನಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಪೇಮೆಂಟ್ ಮಾಡಬೇಡಿ. ಏಕೆ ಅನ್ನೋದನ್ನು ನಾನಿಂದು ನಿಖರವಾಗಿ ಹೇಳುತ್ತೇನೆ ಎನ್ನುವುದರ ಮೂಲಕ ವಿಡಿಯೋ ಆರಂಭವಾಗುತ್ತದೆ. ಇಂಟರ್‌ಸಿಟಿಯಲ್ಲಿ ಪ್ರಯಾಣಿಸುವಾಗ ಅವರು ಪೆಟ್ರೋಲ್ ಹಾಕಿಸಲು ಕಾರು ನಿಲ್ಲಿಸಿದ್ದರು. ಕಾರಿಗೆ ಪೆಟ್ರೋಲ್ ಹಾಕಿದ ಬಳಿಕ ಕ್ರೆಡಿಟ್ ಕಾರ್ಡ್ ಬಳಸಿ ಪೇಮೆಂಟ್ ಮಾಡಲು ಮುಂದಾಗಿದ್ದಾರೆ.
ಆದ್ರೆ ಸ್ವೈಪಿಂಗ್ ಮೆಷಿನ್‌ಗೆ ಕಾರ್ಡ್ ಹಾಕಿ ಪಿನ್ ಎಂಟರ್ ಮಾಡಿದಾಗ ಎರಡು ಬಾರಿಯೂ ವಹಿವಾಟು ವಿಫಲವಾಗಿದೆ. ಡಿಕ್ಲೈನ್ ಎಂಬ ಸಂದೇಶ ಕಾಣಿಸಿಕೊಂಡಿದೆ. ಹೀಗಾಗಿ ಮೂರನೆ ಬಾರಿ ಪ್ರಯತ್ನಿಸಿದಾಗ ವಹಿವಾಟು ಯಶಸ್ವಿಯಾಗಿದೆ. ಬಳಿಕ ಸಾರ್ಥಕ್ ಪೆಟ್ರೋಲ್ ಪಂಪ್‌ನಿಂದ ತೆರಳಿದ್ದಾರೆ. 1 ದಿನದ ವರೆಗೂ ಎಲ್ಲವೂ ಸರಿಯಾಗಿಯೇ ಇತ್ತು. ಆದ್ರೆ 1 ವಾರದ ನಂತರ ತಮ್ಮ ಕ್ರೆಡಿಟ್ ಕಾರ್ಡ್‌ನಿಂದ ಮತ್ತೆ 1 ಲಕ್ಷ ರೂಪಾಯಿ ವ್ಯವಹಾರ ಆಗಿರುವ ಕುರಿತು ಸಂದೇಶ ಸ್ವೀಕರಿಸಿದ್ದಾರೆ. ಈ ಮೆಸೇಜ್ ನೋಡಿ ಶಾಕ್ ಆಗಿದ್ದಾರೆ.
ತಕ್ಷಣ ಎಚ್ಚೆತ್ತ ಅವರು ಬ್ಯಾಂಕ್ ಸಂಪರ್ಕಿಸಿದ್ದಾರೆ. ಹಾಗೆ ದೂರು ಸಹ ನೀಡಿದ್ದಾರೆ. ಪೆಟ್ರೋಲ್ ಪಂಪ್‌ನಲ್ಲಿ ಅವರು ಕ್ರೆಡಿಟ್ ಕಾರ್ಡ್ ಬಳಸಿದಾಗ ವಹಿವಾಟು ವಿಫಲವಾದ ಸಂದೇಶ ಬಂದಿತ್ತು. ಈ ಸಮಯದಲ್ಲಿ ಅವರ ಕಾರ್ಡ್ ಮಾಹಿತಿ ಹಾಗೂ ಪಿನ್ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅಲ್ಲಿ ಕಾರ್ಡ್ ಕ್ಲೋನಿಂಗ್ ಆಗಿರುವ ಕುರಿತು ಮಾಹಿತಿ ಖಚಿತವಾಗಿತ್ತು.
ಇದು ಸ್ವೈಪಿಂಗ್ ಮೆಷಿನ್‌ನಿಂದ ಆಗುವ ಸಮಸ್ಯೆ ಅಲ್ಲ ಬದಲಿಗೆ ಕಾರ್ಡ್ ಕ್ಲೋನಿಂಗ್ ಎಂಬ ಹೊಸ ರೀತಿಯ ವಂಚನೆಯ ವಿಧಾನ ಆಗಿದೆ ಎಂದು ಅವರು ವಿವರಿಸಿದ್ದಾರೆ. ಹೀಗಾಗಿ ಅಂತಾರಾಷ್ಟ್ರೀಯ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳಿಂದ ಸ್ವೈಪಿಂಗ್ ಮಾಡದಿರುವುದು ಬಹಳ ಉತ್ತಮ. ಅದಕ್ಕಿಂತ ಯುಪಿಐ ಪಾವತಿ ಅತ್ಯಂತ ಸುತರಕ್ಷಿತ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಹೀಗಾಗಿ ಕಾರ್ಡ್ ಸ್ವೈಪ್ ಮಾಡುವ ಬದಲಾಗಿ ಟ್ಯಾಪಿಂಗ್, ಯುಪಿಐ ಬಹಳ ಸುರಕ್ಷಿತ ನೀವು ಬೇರೊಬ್ಬರ ಮೆಷಿನ್‌ನಲ್ಲಿ ಪಿನ್ ನಮೂದಿಸಿ ಮಾಡುವಂತಹ ಎಲ್ಲಾ ವಹಿವಾಟುಗಳು ಸುರಕ್ಷಿತವಲ್ಲ. ಅದರಲ್ಲೂ ಈ ಸ್ವೈಪಿಂಗ್ ಮೆಷಿನ್‌ಗಳು ಅಪಾಯಕಾರಿಯಾಗಿವೆ. ಹೀಗಾಗಿ ನೀವು ಕೂಡ ಕ್ರೆಡಿಟ್ ಕಾರ್ಡ್ ಬಳಸಿ ಎಂದಿಗೂ ಪೆಟ್ರೋಲ್ ಪಂಪ್‌ಗಳಲ್ಲಿ ವಹಿವಾಟು ನಡೆಸಬೇಡಿ ಎಂದು ಅವರು ಸಲಹೆ ನೀಡಿದ್ದಾರೆ.



Click it and Unblock the Notifications
