Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
2019-2024ರವರೆಗಿನ ಬಜೆಟ್‌ನಲ್ಲಿ ಹಣಕಾಸು ಸಚಿವೆಯ ಸೀರೆ ಲುಕ್? ಈ ಸೀರೆ ವಿಷಯ ಇಷ್ಟೊಂದು ಗಮನ ಸೆಳೆಯುವುದು ಏಕೆ?
ಪ್ರತಿವರ್ಷ ಕೇಂದ್ರ ಬಜೆಟ್ ದಿನ ಜನರು ಈ ದಿನ ಯಾವೆಲ್ಲಾ ಯೋಜನೆಗಳ ಬಗ್ಗೆ ಹೇಳಲಿದ್ದಾರೆ ಎಂಬುವುದರ ಜೊತೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಲುಕ್ ಬಗ್ಗೆಯೂ ಗಮನ ನೀಡುತ್ತಾರೆ. ಪ್ರತೀ ವರ್ಷ ಅವರು ಧರಿಸಿ ಬರುವ ಸೀರೆ ಟಾಕ್ ಆಫ್ ದಿ ಟೌನ್ ಆಗುತ್ತದೆ. 2024 ಕೇಂದ್ರ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ನೀಲಿ ಬಣ್ಣದ ಸೀರೆಗೆ ಕೆನೆ ಬಣ್ಣದ ಬ್ಲೌಸ್ ಮ್ಯಾಚ್ ಮಾಡಿದ್ದಾರೆ.
2024 ತುಸ್ಸಾರ್ ಸಿಲ್ಕ್ ಸೀರೆಯಲ್ಲಿ ಮಿಂಚಿದ ಸೀತಾರಾಮನ್
ವೋಕಲ್ ಫಾರ್ ಲೋಕಲ್‌ಗೆ ಪರ್ಫೆಕ್ಟ್ ಕಾನ್ಸೆಪ್ಟ್ ಇದಾಗಿದೆ. ತುಸ್ಸಾರ್ ಸಿಲ್ಕ್ ವಿಭಿನ್ನ ಫ್ಯಾಭ್ರಿಕ್ ಬಟ್ಟೆಯಾಗಿದೆ. ಇದು ಪಶ್ಚಿಮ ಬಂಗಾಳದ ಸಾಂಪ್ರದಾಯಕ ಸೀರೆಯಾಗಿದೆ. ಇದನ್ನು ನೇಕಾರರು ನೇಯ್ದು ಮಾಡುವ ಸೀರೆಯಾಗಿದೆ.

2023ರಲ್ಲಿ ಮೆರೂನ್ ಬಣ್ಣದ ಸೀರೆಯಲ್ಲಿ ಬಂದ ಹಣಕಾಸು ಸಚಿವೆ
2023ರಲ್ಲಿ ಧಾರವಾಡ ಕಸೂತಿ ಕಲೆಯಿರುವ ಸೀರೆಯುಟ್ಟು ಬಜೆಟ್ ಮಂಡನೆ ಮಾಡಿದ್ದರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಕರ್ನಾಟಕದ ನವಲಗುಂದ ಕಸೂತಿ ಕಲೆಯ ಆ ಸೀರೆ ದೇಶದ ಗಮನ ಸೆಳೆದಿತ್ತು. ದನ್ನು ತಯಾರಿಸಲು ಧಾರವಾಡದ ನಾರಾಯಣಪುರದಲ್ಲಿ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಫ್ಟ್‌ನ 210 ಮಹಿಳೆಯರು ಕೈಯಿಂದ ತಯಾರಿಸಿದ ಸೀರೆ ಇದಾಗಿದೆ. ಇದನ್ನು ಆರತಿ ಹಿರೇಮಠ ಅವರು ನಿರ್ಮಲಾ ಸೀತಾರಾಮನ್ ಅವರಿಗೆ ನೀಡಿದ ಉಡುಗೊರೆ ಇದಾಗಿದೆ.
2022ರ ಕೇಂದ್ರ ಬಜೆಟ್
2022ರಲ್ಲಿ ಬಜೆಟ್ ಮಂಡನೆ ಮಾಡುವಾಗ ಮೆರೂನ್ ಬಣ್ಣದ ಹ್ಯಾಂಡ್ಯೂಲೂಮ್ ಸೀರೆ ಧರಿಸಿ ಬಂದಿದ್ರು. ಈ ಸೀರೆಯನ್ನು ಬೋಮ್ಕಿ ಸೀರೆ ಎಂದು ಕರೆಯಲಾಗುವುದು. ಇದು ಒಡಿಸ್ಸಾ ಸಂಪ್ರದಾಯದ ಸೀರೆಯಾಗಿದೆ. ಈ ಮೂಲಕ ಆ ಸೀರೆಗೆ ತುಂಬಾನೇ ಪ್ರಚಾರ ಸಿಕ್ಕಿತ್ತು.
2021ರ ಕೇಂದ್ರ ಬಜೆಟ್
2021ರ ಬಜೆಟ್‌ನಲ್ಲಿ ಕೆಂಪು ಹಾಗೂ ಬಿಳಿ ಮಿಶ್ರಿತ ಪೋಚಂಪಲ್ಲಿ ಸ್ಯಾರಿಯಲ್ಲಿ ಗಮನ ಸೆಳೆದಿದ್ದರು, ಆ ಸೀರೆಯ ಸೆರಗು ಹಸಿರು ಬಣ್ಣದಲ್ಲಿದ್ದು ಅದಕ್ಕೆ ಕೆಂಪು ಮ್ಯಾಚಿಂಗ್ ಕೆಂಪು ಬಣ್ಣದ ಬ್ಲೌಸ್ ಧರಿಸಿದ್ದರು. ಈ ಸೀರೆ ಕೂಡ ಆ ವರ್ಷದ ಬಜೆಟ್‌ನಲ್ಲಿ ತುಂಬಾನೇ ಗಮನ ಸೆಳೆದಿತ್ತು.
2020ರ ಕೇಂದ್ರ ಬಜೆಟ್
2020ರಲ್ಲಿ ಬಜೆಟ್ ಮಂಡನೆ ಮಾಡುವಾಗ ಗೋಲ್ಡ್ ಜರಿಯ ಹಳದಿ ಬಣ್ಣದ ಸೀರೆಯ ಮೂಲಕ ಗಮನ ಸೆಳೆದಿದ್ದರು, ಸೀರೆಗೆ ತಕ್ಕ ಮ್ಯಾಚಿಂಗ್ ಬ್ಲೌಸ್ ಧರಿಸಿದ್ದರು. ಹಳದಿ ಬಣ್ಣ ಎನ್ನುವುದು ಶುಭ ಸಂಕೇತ.
2019ರಲ್ಲಿ ನಿರ್ಮಲಾ ಸೀತಾರಾಮನ್ ಲುಕ್
ಮೊತ್ತ ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡುವಾಗ ಬ್ರೈಟ್ ಪಿಂಕ್ ಬಣ್ಣದ ಸೀರೆ ಧರಿಸಿ ಗಮನ ಸೆಳೆದಿದ್ದರು. ಮೊತ್ತ ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡುವಾಗ ನಿರ್ಮಲಾ ಸೀತಾರಾಮನ್ ಹಳೆಯ ಪದ್ಧತಿಗಳನ್ನು ಬ್ರೇಕ್ ಮಾಡಿದ್ದರು, ಅಷ್ಟು ವರ್ಷಗಳಿಂದ ಬಜೆಟ್ ಮಂಡನೆ ಮಾಡುವಾಗ ಬ್ರೀಫ್‌ಕೇಸ್‌ನಲ್ಲಿ ಬಜೆಟ್ ಪೇಪರ್ ತರುತ್ತಿದ್ದರು, ಆದರೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲು ಬರುವಾಗ ಕೆಂಪು ಬಣ್ಣದ ರೇಷ್ಮೆಯ ಬಟ್ಟೆಯಲ್ಲಿ ಲ್ಯಾಪ್ ಸುತ್ತಿ ತರುವ ಮೂಲಕ ಗಮನ ಸೆಳೆದಿದ್ದರು. ಆ ಬಟ್ಟೆಯ ಮೇಲೆ ದೇಶದ ಲಾಂಛನವಿತ್ತು.
ಕೈಮಗ್ಗ ಸೀರೆಗಳಿಗೆ ಉತ್ತೇಜನ ನೀಡಲು ಹಾಗೂ ಸ್ಥಳೀಯ ಉತ್ಪನ್ನಗಳ ವ್ಯವಹಾರ ಸಾಮರ್ಥ್ಯ ಹೆಚ್ಚಿಸಲು ನಿರ್ಮಲಾ ಸೀತಾರಾಮನ್ ಪ್ರತಿವರ್ಷ ಕೈಮಗ್ಗ ಸೀರೆ ಧರಿಸಿ ಬಜೆಟ್ ಮಂಡಿಸುತ್ತಿದ್ದಾರೆ.



Click it and Unblock the Notifications



