Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
150 ರೂಪಾಯಿ ಫೋಟೋದಿಂದ ₹43 ಕೋಟಿ ದುಡಿದ ವ್ಯಕ್ತಿ..! ಇದು ಹೇಗೆ ಸಾಧ್ಯ ಗೊತ್ತಾ?
ಕೆಲವೊಮ್ಮೆ ಯಾರಿಗೆ ಹೇಗೆಲ್ಲಾ ಹಣ ಸಿಗುತ್ತದೆ, ಜಾಕ್‌ಪಾಟ್ ಹೊಡೆಯುತ್ತೆ ಅನ್ನೋದನ್ನ ನಾವು ಊಹಿಸಲು ಕೂಡ ಸಾಧ್ಯವಿರುವುದಿಲ್ಲ. ಹಾಗೆ ಕೆಲವೊಮ್ಮೆ ಒಂದಿಷ್ಟು ವಸ್ತುಗಳು ಅವವುಗಳ ನೈಜ ಬೆಲೆಗಿಂತ ಅಧಿಕ ಬೆಲೆಗೆ ಮಾರಾಟವಾಗುವುದು, ಅದೊಂದು ಅಪರೂಪದ ವಸ್ತು ಎಂದು ಪರಿಗಣಿಸಿ ಅದಕ್ಕೆ ಕೋಟಿ ಕೋಟಿ ರೂಪಾಯಿ ಹಣ ನೀಡುವುದನ್ನು ನಾವು ನೋಡಿರಬಹುದು.
ಹಾಗೆ ಇಲ್ಲೊಂದು ಘಟನೆ ಕೂಡ ಇಂತಹ ವಿಚಿತ್ರಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ರಸ್ತೆ ಬದಿ ಅಂಗಡಿಯಲ್ಲಿ ವ್ಯಕ್ತಿಯೊಬ್ಬ ಕೇವಲ 150 ರೂ ನೀಡಿ ಖರೀಸಿದ್ದ ಫೋಟೋವೊಂದು ಈಗ ಆತನಿಗೆ ಬರೋಬ್ಬರಿ 43 ಕೋಟಿ ಜಾಕ್‌ಪಾಟ್ ತಂದುಕೊಟ್ಟಿದೆ. ಇದನ್ನು ಕೇಳಿ ನಿಮಗೆ ಅಚ್ಚರಿ ಎನಿಸಬಹುದು. ಹಾಗಾದ್ರೆ ಆ ಫೋಟೋದಲ್ಲಿ ಅಂತಹದ್ದೇನಿತ್ತು ಎಂಬ ಅಚ್ಚರಿ ನಿಮಗೆ ಕಾಡಬಹುದು.

ಒಂದು ಹಳೆಯ ಕಪ್ಪು ಬಿಳುಪಿನ ಫೋಟೋ ಬರೋಬ್ಬರಿ 43 ಕೋಟಿ ರೂಪಾಯಿ ತಂದುಕೊಟ್ಟಿದೆ. ಹಾಗಾದ್ರೆ ಆ ಫೋಟೋ ಯಾರದ್ದು? ಯಾಕೆ ಇಷ್ಟೊಂದು ಹಣ ನೀಡಲಾಗಿತ್ತು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಈ ಕಥೆ ಆರಂಭವಾಗೋದು 2015ರಲ್ಲಿ. ಅಮೆರಿಕದ ರಾಂಡಿ ಗುಜಾರೋ ಎಂಬ ವ್ಯಕ್ತಿ ಕೇವಲ ಎರಡು ಡಾಲರ್ ನೀಡಿ ಒಂದು ಹಳೆಯ ಫೋಟೋ ಖರೀದಿಸಿದ್ದ. ಆದ್ರೆ ಆ ಫೋಟೋದಲ್ಲಿ ಇರುವ ವ್ಯಕ್ತಿ ಯಾರು ಎಂಬುದು ಆತನಿಗೆ ತಿಳಿದಿರಲಿಲ್ಲ. ಹಾಗೆ ಮಾರಾಟ ಮಾಡಿದ್ದ ವ್ಯಕ್ತಿಗೂ ಕೂಡ ತಿಳಿದಿರುವ ಸಾಧ್ಯತೆ ಕಡಿಮೆ. ಆದ್ರೆ ಈ ಫೋಟೋವನ್ನು ಗಮನಿಸಿದ ರಾಂಡಿಗೆ ಇದು ಸಾಮಾನ್ಯ ಫೋಟೋ ಅಲ್ಲವೇ ಅಲ್ಲ ಎಂಬ ಅನುಮಾನ ಮೂಡಿತ್ತು.
ಹೀಗಾಗಿ ಆ ಫೋಟೋ ಹಿಡಿದುಕೊಂಡು ಆತ ಅದರ ಹಿಂದಿನ ಇತಿಹಾಸ ತಿಳಿಯಲು ಮುಂದಾದ. ಹೀಗಾಗಿ ಫೋಟೋದ ಸತ್ಯ ತಿಳಿಯಲು ಮುಂದಾದ ಆತನಿಗೆ ಅಚ್ಚರಿ ಜೊತೆಗೆ ಆಘಾತ ಕೂಡ ಕಾದಿತ್ತು.
ಫೋಟೋದಲ್ಲಿದ್ದ ಕುಖ್ಯಾತ ಅಪರಾಧಿ
ಅಮೆರಿಕನ್ ಇತಿಹಾಸ ತೆಗೆದರೆ ಅಲ್ಲಿ ಅತ್ಯಂತ ಕ್ರೂರ ಅಪರಾಧಿಗಳು ಕಾಣಸಿಗುತ್ತಾರೆ, ಇಂತಹ ಕ್ರೂರಿಗಳಲ್ಲಿ ಈ ಫೋಟೋದಲ್ಲಿದ್ದ ವ್ಯಕ್ತಿ ಕೂಡ ಒಬ್ಬನಾಗಿದ್ದ. 19 ನೇ ಶತಮಾನದ ಕುಖ್ಯಾತ ಮತ್ತು ಸೀರಿಯಲ್ ಕಿಲ್ಲರ್ 'ಬಿಲ್ಲಿ ದಿ ಕಿಡ್' ಎಂಬ ಕೊಲೆಗಾರನದಾಗಿತ್ತು. ನಿಮಗೆ ಈ ಬಿಲ್ಲಿ ದಿ ಕಿಡ್ ಅಥವಾ ಹೆನ್ರಿ ಮೆಕ್ಕಾರ್ಟಿ ಅಲಿಯಾಸ್ ವಿಲಿಯಂ ಹೆಚ್. ಬೊನಿ ಯಾರೆಂದು ತಿಳಿದಿರದಿದ್ದರೆ ಒಂದಿಷ್ಟು ವಿಚಾರ ಹೇಳುತ್ತೇವೆ ಕೇಳಿ. ಈ ಫೋಟೋದಲ್ಲಿ ನಿಮ್ಮ ಎಡಬದಿಯಲ್ಲಿ ನಿಂತಿರುವ ವ್ಯಕ್ತಿ ಈ ಬಿಲ್ಲಿ ದಿ ಕಿಡ್.
ಬಿಲ್ಲಿ ದಿ ಕಿಡ್ ಅಮೆರಿಕನ್ ಇತಿಹಾಸದಲ್ಲಿ ಅತ್ಯಂತ ಕ್ರೂರ ಕೊಲೆಗಾರ. 1859ರಲ್ಲಿ ಜನಿಸಿದ್ದ ಆತ ವಿಲಿಯಂ ಬೊನ್ನಿ, ಆತ ತನ್ನ 21 ವರ್ಷ ತುಂಬುವ ಮುನ್ನವೇ 21 ಮಂದಿಯ ಭೀಕರ ಕೊಲೆ ಮಾಡಿಬಿಟ್ಟಿದ್ದ. ಆಗ್ನೇಯ ಮೆಕ್ಸಿಕೋ ಭಾಗದಲ್ಲಿ ಈ ಹುಡುಗ ಎಲ್ಲರ ಭಯಕ್ಕೆ ಕಾರಣವಾಗಿದ್ದ. ಆತನ ಕೊಲೆಗಳ ಕಂಡು ಇಡೀ ಪೊಲೀಸ್ ಇಲಾಖೆ ಬೆಚ್ಚಿಬಿದ್ದಿತ್ತು. ಆತ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಎಂದು ಹೇಳಲಾಗುತ್ತದೆ. ಆದ್ರೆ ಎಲ್ಲಾ ಕೊಲೆಗಳನ್ನು ಪ್ಲಾನ್ ಮಾಡಿ ಮಾಡುತ್ತಿದ್ದ 1881ರಲ್ಲಿ ಪೊಲೀಸರ ಗುಂಡಿಗೆ ಆತ ಬಲಿಯಾಗಿದ್ದ.
ಆತನ ಒಂದೊಂದು ಕಥೆಗಳು ಬೆಚ್ಚಿ ಬೀಳಿಸುವಂತಿದೆ. ಆದ್ರೆ ಈ ಫೋಟೋದಲ್ಲಿರುವ ವ್ಯಕ್ತಿ ಅದೇ ಕೊಲೆಗಾರ ಬಿಲ್ಲಿ ದಿ ಕಿಡ್ ಎಂದು ತಿಳಿದುಬಂದಿದೆ. ಆದ್ರೆ ಆತನ ಫೋಟೋಗೆ ಅನಂತರ ಹರಾಜು ಹಾಕಲಾಗಿತ್ತು ಅದರಲ್ಲಿ 5 ಮಿಲಿಯನ್ ಡಾಲರ್ ನೀಡಿ ಖರೀದಿಸಲಾಗಿತ್ತು.



Click it and Unblock the Notifications