Latest Updates
-
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ! -
ಮಳೆಗಾಲದ ಪ್ರಯಾಣ: ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಲು 7 ನಿಮಿಷದ ಸರಳ ವ್ಯಾಯಾಮಗಳು -
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು
Friendship Day 2023 : ನಿಮ್ಮ ಸ್ನೇಹಿತರಿಗಾಗಿ ಈ ರೀತಿ ಸಪ್ರೈಸ್ ನೀಡಿ!
ಎಲ್ಲರ ಬದುಕಲ್ಲೂ ಒಬ್ಬ ಬೆಸ್ಟ್ ಫ್ರೆಂಡ್ ಖಂಡಿತ ಇದ್ದೇ ಇರ್ತಾರೆ. ಅವರು ನಮ್ಮ ಜೀವಕ್ಕೆ ಜೀವ ಕೊಡೋ ಸ್ನೇಹಿತ. ನಮ್ಮ ಕಷ್ಟಕ್ಕೆ ಹೆಗಲಾಗುವ ಪ್ರಾಣ ಸ್ನೇಹಿತನಾಗಿರುತ್ತಾನೆ. ಅಂತಹ ಫ್ರೆಂಡ್ ಅನ್ನು ನಿಮ್ಮ ಜೀವನದಲ್ಲಿ ಯಾವತ್ತಿಗೂ ಬಿಟ್ಟು ಕೊಡೋದಕ್ಕೆ ಹೋಗಬೇಡಿ. ಫ್ರೆಂಡ್ ಆದ್ಮೇಲೆ ಆತ ನಮ್ಮ ಜೀವನದಲ್ಲಿ ತುಂಬಾನೇ ಸ್ಪೆಷಲ್ ಆಗಿರ್ತಾನೆ.

ಈ ಫ್ರೆಂಡ್ ಶಿಪ್ ಡೇ ನಿಮ್ಮ ಫ್ರೆಂಡ್ ಅನ್ನು ನೀವು ಖುಷಿಯಾಗಿ ಇಟ್ಟುಕೊಳ್ಬೇಕು ಅಂತ ಆಲೋಚಿಸುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ನಿಮಗಾಗಿ ಟಿಪ್ಸ್..
1. ಎಲ್ಲಾದರೂ ಹೊರಗಡೆ ಸುತ್ತಾಡೋದಕ್ಕೆ ಹೋಗಿ
ನಿಮ್ಮ ಸ್ನೇಹಿತರಿಗೆ ಏನು ಇಷ್ಟ? ಅವರು ಯಾವ ಜಾಗಗಳಿಗೆ ಹೋಗೋದಕ್ಕೆ ಇಷ್ಟ ಪಡುತ್ತಾರೆ ಅನ್ನೋದು ಖಂಡಿತ ನಿಮಗೆ ಗೊತ್ತಿರುತ್ತೆ. ಹೀಗಾಗಿ ಈ ಫ್ರೆಂಡ್ ಶಿಪ್ ಡೇ ಗೆ ನಿಮ್ಮ ಸ್ನೇಹಿತರನ್ನು ಅವರಿಗೆ ಇಷ್ಟ ಆಗುವ ಜಾಗಕ್ಕೆ ಕರೆದುಕೊಂಡು ಹೋಗಿ. ಅವರಿಗೆ ಅಡ್ವೆಂಚರ್ಸ್ ಚಟುವಟಿಕೆ ಇಷ್ಟ ಆದ್ರೆ ಅದನ್ನು ಮಾಡಿಸಿ. ಇಲ್ಲ ಅಂದ್ರೆ ರೋಡ್ ಟ್ರಿಪ್, ಸೈಕ್ಲಿಂಗ್ ಗೆ ಕೂಡ ಹೋಗಬಹುದು. ಈ ರೀತಿ ಸಪ್ರೈಸ್ ಕೊಟ್ರೆ ಅವರ ದಿನ ಮತ್ತಷ್ಟು ಚೆನ್ನಾಗಿರುತ್ತೆ.
2. ವಿಶೇಷ ಉಡುಗೊರೆ ಕೊಡಿ
ಈ ಫ್ರೆಂಡ್ ಶಿಪ್ ಡೇ ಗೆ ನಿಮ್ಮ ಸ್ನೇಹಿತರಿಗಾಗಿ ನೀವು ವಿಶೇಷ ಉಡುಗೊರೆಯನ್ನು ಸಿದ್ಧಪಡಿಸಿ. ಆದಷ್ಟು ನಿಮ್ಮ ಕೈಯಿಂದ ತಯಾರಿಸಿ ಕೊಟ್ರೆ ಒಳ್ಳೆಯದು. ಯಾವುದಾದರೂ ಕ್ರಾಫ್ಟ್ ಸಿದ್ಧಪಡಿಸಿ. ಅಥವಾ ಆಭರಣವನ್ನು ತಯಾರಿಸಿ ಕೊಡಿ. ಇಲ್ಲದಿದ್ದರೆ ಗ್ರಿಟಿಂಗ್ ಬುಕ್ ನಲ್ಲಿ ನಿಮ್ಮ ನೆನಪುಗಳನ್ನು ಬರೆದು ಕೊಡಿ. ಅಥವಾ ನಿಮ್ಮಿಬ್ಬರ ಹಳೆಯ ಎಲ್ಲಾ ಫೋಟೋಗಳನ್ನು ಜೋಡಿಸಿ ಕೊಡಿ.
3. ಸ್ನೇಹಿತರಿಗಾಗಿ ವಿಶೇಷ ಪತ್ರ ಬರೆಯಿರಿ
ನೀವು ನಿಮ್ಮ ಸ್ನೇಹಿತರ ಜೊತೆಗೆ ಎಷ್ಟೋ ಸುಮಧುರ ಕ್ಷಣಗಳನ್ನು ಕಳೆದಿರುತ್ತೀರಿ. ಅದರ ಜೊತೆಗೆ ಎಷ್ಟೋ ನೋವುಗಳನ್ನು ಅವರ ಜೊತೆಗೆ ಹಂಚಿಕೊಂಡಿರುತ್ತೀರಿ. ನಿಮ್ಮ ಕಷ್ಟ ಕಾಲದಲ್ಲಿ ಅವರು ನಿಮಗೆ ಹೆಗಲಾಗಿ ನಿಂತಿರಬಹುದು. ಈ ಎಲ್ಲದರ ಕುರಿತು ನಿಮ್ಮ ಸ್ನೇಹಿತನಿಗೆ ಒಂದು ಪತ್ರ ಬರೆಯಿರಿ. ಆ ಪತ್ರ ನಿಮ್ಮಿಬ್ಬರ ಸ್ನೇಹದ ನಿಜವಾದ ಅರ್ಥವನ್ನು ತಿಳಿಸುವಂತಿರಬೇಕು.
4. ಬೆಸ್ಟ್ ಫ್ರೆಂಡ್ ಜೊತೆಗೆ ಡೇಟ್ ಗೆ ಹೋಗಿ
ಹೆಚ್ಚಿವರು ಆಹಾರ ಪ್ರೀಯರಾಗಿರುತ್ತಾರೆ. ನಿಮ್ಮ ಫ್ರೆಂಡ್ ಕೂಡ ಆಹಾರ ಪ್ರಿಯರಾಗಿದ್ದರೆ ಅವರಿಗೆ ಲಂಚ್ ಡೇಟ್ ಖಂಡಿತ ಇಷ್ಟ ಆಗುತ್ತೆ. ನಿಮ್ಮ ಬೆಸ್ಟ್ ಫ್ರೆಂಡ್ ಅನ್ನು ಸಪ್ರೈಸ್ ಆಗಿ ಡೇಟ್ ಗೆ ಕರೆದುಕೊಂಡು ಹೋಗಿ. ಎಲ್ಲಾದರೂ ಆಚೆ ಹೋಗಿ ಊಟ ಮಾಡಿ. ಅಥವಾ ನೀವಿಬ್ಬರೂ ಮನೆಯಲ್ಲಿ ಸ್ಪೆಷಲ್ ಆಹಾರವನ್ನು ತಯಾರು ಮಾಡಿ ಊಟ ಮಾಡಬಹುದು.
5. ಅವರಿಗೆ ಇಷ್ಟವಾಗೋ ವಸ್ತುಗಳನ್ನು ಕೊಟ್ಟು ಸಪ್ರೈಸ್ ಮಾಡಿ
ಗಿಫ್ಟ್ ಅಂದ್ರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಹೇಳಿ. ಉಡುಗೊರೆಯನ್ನು ಎಲ್ಲರೂ ಇಷ್ಟ ಪಡುತ್ತಾರೆ. ಅದ್ರಲ್ಲೂ ನಮಗೆ ಇಷ್ಟ ಆದ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ರೆ ನಮ್ಮ ಖುಷಿಗೆ ಪಾರವೇ ಇರೋದಿಲ್ಲ. ನಿಮ್ಮ ಸ್ನೇಹಿತರಿಗಾಗಿ ನೀವು ವಿಶೇಷ ಚಾಕಲೇಟ್, ಸ್ನಾಕ್ಸ್, ಪರ್ಫ್ಯೂಮ್, ತಾಜಾ ಹೂವುಗಳನ್ನು ಸಪ್ರೈಸ್ ಗಿಫ್ಟ್ ಆಗಿ ನೀಡಬಹುದು.
6. ಗೆಟ್ ಟು ಗೆದರ್ ಪಾರ್ಟಿ ಮಾಡಿ
ನೀವು ಮತ್ತು ನಿಮ್ಮ ಬೆಸ್ಟ್ ಫ್ರೆಂಡ್ ಗೆ ಅನೇಕ ಜನ ಇತರ ಸ್ನೇಹಿತರು ಇರುತ್ತಾರೆ. ಅವರನ್ನೆಲ್ಲಾ ಕರೆದು ಒಂದು ಗೆಟ್ ಟು ಗೆದರ್ ಪಾರ್ಟಿ ಸಿದ್ಧ ಪಡಿಸಿ. ಎಲ್ಲರಿಗೂ ಒಟ್ಟಿಗೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಖುಷಿ ಪಡಬಹುದು. ನಿಮ್ಮ ಬೆಸ್ಟ್ ಫ್ರೆಂಡ್ ಗೂ ಕೂಡ ಎಲ್ಲರನ್ನೂ ಭೇಟಿಯಾದಾಗ ಮನಸ್ಸಿಗೆ ಖುಷಿಯಾಗಬಹುದು.
ಈ ರೀತಿ ಸಪ್ರೈಸ್ ಗಳನ್ನು ಕೊಟ್ರೆ ಖಂಡಿತ ನಿಮ್ಮ ಸ್ನೇಹಿತರು ಸಂತೋಷ ಪಡುತ್ತಾರೆ. ಹಾಗೂ ಈ ಫ್ರೆಂಡ್ ಶಿಪ್ ಡೇ ಗೆ ಅವರನ್ನು ನೀವು ಖುಷಿಯಾಗಿ ಇಡಬಹುದು.



Click it and Unblock the Notifications
