Latest Updates
-
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ -
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ?
ಪ್ಲೇ ಬಾಯ್ ಮಾಗಜೀನ್ನ ಮುಖಪುಟಕ್ಕೆ ಫೋಸ್ ಕೊಟ್ಟ ಫ್ರಾನ್ಸ್ ಸಚಿವೆ!
ಫ್ರಾನ್ಸ್ ಸರಕಾರದ ಸಚಿವೆ 40 ವರ್ಷದ ಮರ್ಲಿನ್ ಶಿಯಪ್ಪ ಅವರು ಪ್ಲೇ ಬಾಯ್ ಎಂಬ ಪುರುಷರ ಮ್ಯಾಗಜೀನ್ ನಲ್ಲಿ ಮುಖಪುಟದಲ್ಲಿ ಕಾಣಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಅವರ ಈ ನಡೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದು, ಆದರೂ ಕೂಡ ಮರ್ಲಿನ್ ಶಿಯಪ್ಪ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮರ್ಲಿನ್ ಶಿಯಪ್ಪ ಅವರು ಸಾಮಾಜಿಕ ಆರ್ಥಿಕತೆ ಹಾಗೂ ಫ್ರೆಂಚ್ ಅಸೋಸಿಯೇಷನ್ನ ಮುಖ್ಯಸ್ಥರಾಗಿದ್ದಾರೆ. ಈ ಹಿಂದೆ ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಇವರ ನಡೆಗೆ ಫ್ರಾನ್ಸ್ನ ಪ್ರಧಾನ ಮಂತ್ರಿ ಎಲಿಜಬೆತ್ ಬೋರ್ನೆ ಸೇರಿದಂತೆ ರಾಜಕಾರಣಿಗಳು ಟೀಕಿಸಿದ್ದಾರೆ.

ಮಾಜಿ ಹಾಗೂ ಮೊದಲ ಲಿಂಗ ಸಮಾನತೆ ಸಚಿವರಾಗಿದ್ದ ಮರ್ಲಿನ್ ಶಿಯಪ್ಪ ಅವರು 2018 ರಲ್ಲಿ ಕ್ರಾಂತಿಕಾರಿ ಕಾನೂನು ಒಂದನ್ನು ಪರಿಚಯಿಸಿದ್ದರು. ಇದು ಮಹಿಳೆಯರಿಗೆ ರಕ್ಷಣೆ ಒದಗಿಸುವುದಕ್ಕೆ ಸಂಬಂಧ ಪಟ್ಟಿತ್ತು. ಆದರೆ ಇತ್ತೀಚಿಗೆ ಇವರು ಪ್ಲೇ ಬಾಯ್ ಮ್ಯಾಗಜೀನ್ನ ಮುಖಪುಟದಲ್ಲಿ ಕಾಣಿಸಿಕೊಂಡಿದ್ದು ಎಲ್ಲರನ್ನೂ ಕೆರಳುವಂತೆ ಮಾಡಿದೆ. ಮಹಿಳಾ ಹಕ್ಕುಗಳ ಬಗ್ಗೆ ಮಾತನಾಡುವವರೇ ಈ ರೀತಿ ಮಾಡುವುದು ಸರಿ ಅಲ್ಲ ಎಂದು ವಿರೋಧ ಪಕ್ಷಗಳು ಕಿಡಿ ಕಾರುತ್ತಿದ್ದಾರೆ.
ಪ್ರಧಾನಿ ಎಲಿಜಬೆತ್ ಬೋರ್ನೆ ಮಾತನಾಡುತ್ತಾ ಮರ್ಲಿನ್ ಶಿಯಪ್ಪ ಅವರ ನಿರ್ಧಾರವು ವಿಶೇಷವಾಗಿ ಈ ಅವಧಿಯಲ್ಲಿ ಸೂಕ್ತವಲ್ಲ," ಎಂದು ಬಿಎಫ್ಎಂಟಿವಿ ವರದಿ ಮಾಡಿದೆ. ಇತ್ತೀಚಿಗಷ್ಟೇ ಫ್ರಾನ್ಸ್ ಸರ್ಕಾರ ನಿವೃತ್ತಿ ವಯಸ್ಸನ್ನು ಎರಡು ವರ್ಷಗಳ ಕಾಲ ಹೆಚ್ಚಿಸಿತ್ತು. ಹೀಗಾಗಿ ಫ್ರಾನ್ಸ್ನ ತುಂಬೆಲ್ಲಾ ಪ್ರತಿಭಟನೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸುಖಾ ಸುಮ್ಮನೇ ಶಿಯಪ್ಪಾ ಅವರು ವಿವಾದವನ್ನು ಮೈ ಮೇಲೆ ಎಳೆದುಕೊಂಡಿರೋದು ವಿರೋಧ ಪಕ್ಷಗಳಿಗೆ ಮಾತನಾಡೋದಕ್ಕೆ ಅವಕಾಶ ಕೊಟ್ಟಂತಾಗಿದೆ.
ಇನ್ನೂ ಈ ಬಗ್ಗೆ ಟ್ವಿಟ್ ಮಾಡಿರೋ ಮರ್ಲಿನ್ ಶಿಯಪ್ಪ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. "ಎಲ್ಲಾ ಕಡೆ ಹಾಗೂ ಎಲ್ಲಾ ಸಮಯದಲ್ಲಿ ಮಹಿಳೆಯರು ತಮ್ಮ ದೇಹದ ಮೇಲೆ ನಿಯಂತ್ರಣ ಹೊಂದುವ ಹಕ್ಕನ್ನು ರಕ್ಷಿಸುವಂತವರಾಗಿದ್ದಾರೆ". ಹಾಗೂ ಫ್ರಾನ್ಸ್ನ ಮಹಿಳೆಯರು ಈ ವಿಚಾರದಲ್ಲಿ ಸ್ವತಂತ್ರರು ಎಂದು ಟ್ವಿಟ್ ಮಾಡಿದ್ದಾರೆ.



Click it and Unblock the Notifications
