Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
2025ರಲ್ಲಿ ಪತ್ತೆಯಾದ 4 ಅಚ್ಚರಿಯ ಜೀವಿಗಳು! ನೀವು ಸಹ ಈ ಬಗ್ಗೆ ಕೇಳಿರಲ್ಲ!
2025ರಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಹಲವು ರೀತಿಯ ಅಚ್ಚರಿಯ ಬೆಳವಣಿಗೆಯನ್ನು ನೋಡಿರುತ್ತೀರಿ. ಅದ್ರಲ್ಲೂ ವಿಜ್ಞಾನಿಗಳು 2025ರಲ್ಲಿ ಹೊಸ ಜೀವಿಗಳನ್ನು ಕೂಡ ಪತ್ತೆ ಮಾಡಿದ್ದಾರೆ. ಈ ವರ್ಷ ಸಂಶೋದಕರು ನೀವೆಂದು ನೋಡಿರದ ಹಾಗೆ ಕೇಳಿರದಂತಹ ಹೊಸ ಜೀವಿಗಳ ಪತ್ತೆ ಮಾಡಿದ್ದಾರೆ. ಅದ್ರಲ್ಲೂ ಕೆಲವು ಜೀವಿಗಳು ನಶಿಸಿ ಹೋಗಿವೆ. ಹಾಗೆ ಮತ್ತೆ ಕೆಲವು ಈಗಷ್ಟೇ ಪತ್ತೆ ಮಾಡಲಾದ ಅಪರೂಪದ ಜೀವಿಗಳಾಗಿವೆ.
ವಿಜ್ಞಾನಿಗಳ ಹುಡುಕಾಟದಲ್ಲಿ ಈ ವರ್ಷ ಪರ್ವತಗಳಿಂದ ಹಿಡಿದು ಸಮುದ್ರದ ಆಳದಲ್ಲೂ ಹುಡುಕಿ ಜೀವಿಗಳ ಪತ್ತೆ ಮಾಡಿದ್ದಾರೆ. ಹಾಗಾದ್ರೆ 2025ರಲ್ಲಿ ವಿಜ್ಞಾನಿಗಳ ಕಣ್ಣಿಗೆ ಬಿದ್ದ ಹೊಸ ಜೀವಿಗಳು ಯಾವುದು ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಕಡಲ ಹಸು
ನೀವು ಕಡಲ ಕುದುರೆ, ಕಡಲ ಸಿಂಹ ಹೀಗೆ ಹಲವು ಪ್ರಾಣಿಗಳ ಕುರಿತು ತಿಳಿದಿರಬಹುದು. ಆದ್ರೆ ಕಡಲ ಹಸುಗಳ ಬಗ್ಗೆ ಕೇಳಿದ್ದೀರಾ? ಹೌದು ಇತ್ತೀಚಿಗೆ ಕಡಲ ಹಸು ಹಿಂದೊಮ್ಮೆ ಸಮುದ್ರದ ಆಳದಲ್ಲಿ ನೆಲೆಸಿತ್ತು ಎಂಬುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದರು. ಈ ಕಡಲ ಹಸುವಿನ ಪಳೆಯುಳಿಕೆ ಅವಶೇಷಗಳನ್ನು ಕತಾರ್‌ನ ಅಲ್ ಮಸ್ಝಾಬಿಯಾದಲ್ಲಿ ಪತ್ತೆ ಮಾಡಲಾಗಿತ್ತು. ಇದು ವಿಶ್ವದ ಅತ್ಯಂತ ಶ್ರೀಮಂತ ಪಳೆಯುಳಿಕೆ ಕಡಲ ಹಸು ನಿಕ್ಷೇಪ ಎಂದು ತಿಳಿದುಬಂದಿದೆ. ಇಂದಿನ ಮನಾಟೀಸ್ ಮತ್ತು ಡುಗಾಂಗ್‌ಗಳಂತೆ ಇದು ಸಮುದ್ರದಾಳದ ಹುಲ್ಲುಗಳ ಸೇವನೆ ಮಾಡುತ್ತಿತ್ತು ಎಂದು ತಿಳಿದುಬಂದಿದೆ. ಕಳೆದ 21 ಮಿಲಿಯನ್ ವರ್ಷಗಳಿಂದ ವಿಶ್ವದ ಈ ಭಾಗವು ಪ್ರಮುಖ ಕಡಲ ಹಸುಗಳ ಆವಾಸಸ್ಥಾನವಾಗಿದೆ. ಕಾಲಾನಂತರದಲ್ಲಿ ಕಡಲ ಹಸುವಿನ ಪಾತ್ರವನ್ನು ವಿವಿಧ ಜಾತಿ ಪ್ರಾಣಿಗಳು ಆಕ್ರಮಿಸಿಕೊಂಡವು ಎಂದು ತಿಳಿದುಬಂದಿದೆ.
ಮಿನಿ ಮಾರ್ಸ್ಪಿಯಲ್
ಮಾರ್ಮೋಸಾ ಚಾಚಪೋಯಾ ಎಂದು ಕರೆಯಲ್ಪಡುವ ಈ ಹೊಸ ಜಾತಿಯ ಮೌಸ್ ಒಪೊಸಮ್, ಈ ವರ್ಷ ಪತ್ತೆ ಮಾಡಲಾದ ಹೊಸ ಜಾತಿಯ ಪ್ರಾಣಿಯಾಗಿದೆ. ಕೆಂಪು ಬಣ್ಣದ ಚರ್ಮ ಮತ್ತು ಉದ್ದ ಮತ್ತು ಸೂಕ್ಷ್ಮವಾದ ಮೂತಿಯನ್ನು ಹೊಂದಿದೆ. ಪೆರುವಿಯನ್ ಆಂಡಿಸ್‌ನಲ್ಲಿ ಎತ್ತರದ ಪ್ರದೇಶದಲ್ಲಿ ಈ ಪ್ರಾಣಿಯನ್ನು ಪತ್ತೆ ಮಾಡಲಾಗಿತ್ತು. ಇದೊಂದು ಸಸ್ತನಿ ಪ್ರಾಣಿಯಾಗಿದ್ದು, ಇಲಿಯಂತೆ ಕಂಡುಬರುತ್ತದೆ. ಆದ್ರೆ ಇದು ಹೊಸ ಜಾತಿಗೆ ಸೇರಿದ ಪ್ರಾಣಿ ಎಂಬುದನ್ನು ಗುರುತಿಸಲಾಗಿತ್ತು.
ಕ್ಯಾಲಿಫೋರ್ನಿಯಾದ ರಹಸ್ಯ ಜೇಡ
ಪ್ರತಿ ವರ್ಷವು ಜೇಡ ಪ್ರಬೇದದಲ್ಲಿ ಹೊಸ ಹೊಸ ಜಾತಿಯ ಜೇಡಗಳು ಪತ್ತೆಯಾಗುತ್ತವೆ. ಕಳೆದ ವರ್ಷ ಸಹ ಕ್ಯಾಲಿಫೋರ್ನಿಯಾ ರಹಸ್ಯ ಜೇಡ ಎಂಬ ಹೊಸ ಜಾತಿಯ ಜೇಡವನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾದಲ್ಲಿ ನದಿಯ ಬಳಿ ಹದಿನೈದು ವರ್ಷಗಳ ನಂತರ, ಸ್ಯಾನ್ ಡಿಯಾಗೋ ಸ್ಟೇಟ್ ಯೂನಿವರ್ಸಿಟಿಯ ಜೀವಶಾಸ್ತ್ರದ ಪ್ರಾಧ್ಯಾಪಕರು ಅಂತಿಮವಾಗಿ ಅದನ್ನು ಸಂಪೂರ್ಣವಾಗಿ ಹೊಸ ಜಾತಿಯ ಜೇಡ ಎಂದು ಗುರುತಿಸುವಲ್ಲಿ ಯಶಸ್ವಿಯಾದರು, ಅದನ್ನು ಅವರು ತಮ್ಮ ಸಿಸ್ಕಿಯು ಕೌಂಟಿಯ ಮನೆಯ ಹೆಸರಿನಿಂದ ಕರೆಯಲಾಗಿದೆ.

ನಗುಮುಖದ ಮೀನು
ಆಳ ಸಮುದ್ರದಲ್ಲಿ ಯಾವ ರೀತಿಯ ಜೀವಿಗಳಿವೆ ಎಂಬ ಕುರಿತಾದ ಅಧ್ಯಯನ ನಡೆಯುತ್ತಲೇ ಇದೆ. ಈ ನಡುವೆ 2025ರಲ್ಲಿ ನಗು ಮುಖದ ಆಳ ಸಮುದ್ರ ಮೀನು ಪತ್ತೆಯಾಗಿದೆ. ಸುಮಾರು 11,000 ಅಡಿ ಆಳ ಸಮುದ್ರದಲ್ಲಿ, ವಿಜ್ಞಾನಿಗಳು ಹೊಸ ಪ್ರಭೇದವನ್ನು ಕಂಡುಹಿಡಿದರು. ಮಧ್ಯ ಕ್ಯಾಲಿಫೋರ್ನಿಯಾದ ತೀರದಿಂದ ನಡೆಸಿದ ಹುಡುಕಾಟದಲ್ಲಿ ಮಾಂಟೆರಿ ಬೇ ಅಕ್ವೇರಿಯಂ ಸಂಶೋಧನಾ ಸಂಸ್ಥೆಯ ಸಂಶೋಧಕರು ಈ ಉಬ್ಬು ಬಸವನ ಮೀನುಗಳನ್ನು ವೀಡಿಯೊದಲ್ಲಿ ಸೆರೆಹಿಡಿದಿದ್ದರು. ದೊಡ್ಡ ಕಣ್ಣುಗಳು, ಗರಿಗಳಂತಹ ರಚನೆಯ ರೆಕ್ಕೆ ಅದರ ಮುಖವು ನಗುವಿನಂತೆ ಕಾಣುವುದು ನೋಡಬಹುದು.



Click it and Unblock the Notifications
