Latest Updates
-
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್! -
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್!
ಪ್ರವಾಹದಲ್ಲಿ ತೇಲಿಬಂದ ಬಂದ ನಾಲ್ಕು ಕಣ್ಣಿನ ಮೀನು: ವಿಡಿಯೋ ವೈರಲ್
ಕೆಲವೊಮ್ಮೆ ನಿಸರ್ಗದಲ್ಲಿ ಯಾವ ರೀತಿಯ ವಿಚಿತ್ರಗಳು ನಡೆಯುತ್ತೆ ಅಂದ್ರೆ ನಾವು ಅದನ್ನು ಊಹಿಸಲು ಸಹ ಸಾಧ್ಯವಿಲ್ಲ. ಯಾಕಂದ್ರೆ ನಿಸರ್ಗವು ನಮ್ಮ ನಿಲುವಿಗೂ ಮೀರಿದ ಅಚ್ಚರಿಗೆ ಕಾರಣವಾಗುತ್ತದೆ. ಇಂತಹ ಹಲವು ರೀತಿಯ ಘಟನೆಗಳು ನಮ್ಮ ಗಮನ ಸೆಳೆಯುತ್ತವೆ.
ಇದೇ ರೀತಿ ಇಲ್ಲೊಂದು ಮೀನು ಈಗ ಎಲ್ಲರ ಗಮನ ಸೆಳೆಯುತ್ತಿದೆ. ನೀವು ಎರಡು ಕಣ್ಣುಗಳಿರುವ ಮೀನುಗಳನ್ನು ನೋಡಿರುತ್ತೀರಿ. ಆದ್ರೆ ಇಲ್ಲೊಂದು ಮೀನಿಗೆ 4 ಕಣ್ಣುಗಳಿವೆ. ಹೌದು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಬಂದಿದ್ದು, ಜನರ ಅಚ್ಚರಿಗೆ ಕಾರಣವಾಗಿದೆ.

ಆಲ್ ಇಂಡಿಯಾ ರೇಡಿಯೋ ನ್ಯೂಸ್ ಈ ವಿಚಿತ್ರ ಮೀನಿನ ವಿಡಿಯೋವನ್ನು ಹಂಚಿಕೊಂಡಿದೆ. ಅಸ್ಸಾಂನ ಕರೀಮ್ಗಂಜ್ ಜಿಲ್ಲೆಯ ಪ್ರವಾಹದ ನಡುವೆ, ಮೀನುಗಾರರೊಬ್ಬರ ಬಲೆಗೆ ಈ ಅಪರೂಪದ ಮೀನು ಸಿಕ್ಕಿಬಿದ್ದಿದೆ. ಈ ಮೀನು ಕಂಡ ಜನರು ಕುತೂಹಲಕ್ಕೆ ಒಳಗಾಗಿದ್ದಾರೆ.
ಅದರ ಕಣ್ಣುಗಳು ಅದರ ತಲೆಯ ಮೇಲೆ ಸ್ವಲ್ಪ ಎತ್ತರದಲ್ಲಿವೆ ಆದರೆ ನಾಲ್ಕು ಕಣ್ಣಿನಂತೆ ಕಂಡುಬರುತ್ತದೆ. ಅದರ ರೆಕ್ಕೆಗಳು ವಿಮಾನದ ರೆಕ್ಕೆಗಳಂತೆ ನಯವಾದ ವಿನ್ಯಾಸವನ್ನು ಹೊಂದಿವೆ. ಈ ಮೀನು ನೋಡಲು ಸುತ್ತಲು ಜನ ಸೇರಿಕೊಂಡಿದ್ದಾರೆ. ಇದು ಅಪರೂಪದ ಮೀನಾಗಿರುವ ಕಾರಣ ಜನರಲ್ಲಿ ಅಚ್ಚರಿ ಮೂಡಿಸಿದೆ.
ಸಾಮಾನ್ಯವಾಗಿ ನಾಲ್ಕು ಕಣ್ಣುಗಳನ್ನು ಹೊಂದಿರುವ ಮೀನು ಅನಾಬಲ್ಪ್ಸ್ ಅನಾಬ್ಲೆಪ್ಸ್ ಆಗಿದೆ. ನೀರಿನ ರೇಖೆಯ ಮೇಲೆ ಮತ್ತು ಕೆಳಗೆ ಏಕಕಾಲದಲ್ಲಿ ದೃಷ್ಟಿಗೋಚರವಾಗಬಲ್ಲ ಉಬ್ಬುವ, ಮಂಡಲದಂತಹ ಕಣ್ಣುಗಳನ್ನು ಹೊಂದಿರುವ ಅದರ ವಿಶಿಷ್ಟ ಲಕ್ಷಣದಿಂದಾಗಿ ಗಮನ ಸೆಳೆಯುತ್ತದೆ. ಅಚ್ಚರಿ ಏನೆಂದರೆ ಇವು ವಾಸ್ತವವಾಗಿ ನಾಲ್ಕು ಕಣ್ಣುಗಳ ಹೊಂದಿರುವುದಿಲ್ಲ.
ಹೌದು ಇವು ನಾಲ್ಕು ಕಣ್ಣುಗಳನ್ನು ಹೊಂದಿರುವುದಿಲ್ಲ. ಆದರೆ ತಲೆಯ ಮೇಲೆ ಕಣ್ಣಿನ ಆಕೃತಿಯ ರಚನೆಗಳಿರುತ್ತವೆ. ಆದರೆ ಈ ಕಣ್ಣುಗಳಲ್ಲಿ ವಿಭಾಗವು ತನ್ನದೇ ಆದ ಕಾರ್ನಿಯಾ ಮತ್ತು ಶಿಷ್ಯವನ್ನು ಹೊಂದಿದ್ದು, ನೀರಿನ ಮೇಲ್ಮೈಯಿಂದ ಮೇಲೆ ಮತ್ತು ಕೆಳಗಿನಿಂದ ಬೆಳಕನ್ನು ಸೆರೆಹಿಡಿಯಲು ಮೀನುಗಳಿಗೆ ಅನುವು ಮಾಡಿಕೊಡುತ್ತದೆ.
ಈ ವಿಶಿಷ್ಟ ಆಪ್ಟಿಕಲ್ ಅಳವಡಿಕೆಯು ನೆಲದ ಮೇಲೆ ಹಾಗೂ ನೀರಿನ ಒಳಗಿನ ಪ್ರಾಣಿಗಳ ನೋಡಲು ಹಾಗೂ ಬೇಟೆಯಾಡಲು ಈ ಮೀನಿಗೆ ಸಹಾಯ ಮಾಡುತ್ತವೆ. ಅಸ್ಸಾಂನಲ್ಲಿ ಕಂಡುಬರುವ ಮೀನುಗಳು ಅನಾಬ್ಲೆಪ್ಸ್ ಅನಾಬ್ಲೆಪ್ಸ್ಗಿಂತ ಸಾಕಷ್ಟು ಭಿನ್ನವಾಗಿದೆ, ಇದು ತನ್ನದೇ ಆದ ವಿಶಿಷ್ಟ ಗುರುತುಗಳ ಹೊಂದಿದೆ. ಇದು ಸಕರ್ಮೌತ್ ಕ್ಯಾಟ್ ಫಿಶ್ ಎಂದು ಕರೆಯಲ್ಪಡುವ ಈಶಾನ್ಯ ದಕ್ಷಿಣ ಅಮೆರಿಕ ಸಮುದ್ರದಲ್ಲಿ ಕಂಡುಬರುವ ಅಪರೂಪದ ಮೀನಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಮೀನು ಈಗ ಭಾರತದ ಕರಾವಳಿಗಳಲ್ಲಿ ಕಂಡುಬಂದಿರುವುದು ಅಚ್ಚರಿ ಮೂಡಿಸಿದೆ.
ಹೆಚ್ಚಾಗಿ ಈ ಜಾತಿಯ ಮೀನುಗಳನ್ನು ದೊಡ್ಡ ದೊಡ್ಡ ಅಕ್ವೇರಿಯಂನಲ್ಲಿ ಸಾಕಲಾಗುತ್ತದೆ. ಆದರೆ ಈ ಕ್ರೋಕ್ ಫಿಶ್ ಜಾತಿಗೆ ಸೇರಿದ ನೂರಾರು ಮೀನುಗಳಿವೆ, ಇವು ನೋಡಲು ಒಂದೇ ರೀತಿ ಕಂಡುಬರುತ್ತವೆ. ಕೆಲವು ಮೀನುಗಳು ಸೇವನೆಗೆ ನಿಷಿದ್ಧ ಏಕೆಂದರೆ ಅವು ವಿಷಕಾರಿ ಅಂಶಗಳನ್ನು ಸಹ ತಮ್ಮ ದೇಹದಲ್ಲಿ ಹೊಂದಿರುತ್ತವೆ.
ಇದಕ್ಕೂ ಮೊದಲು ಅಮೆರಿಕದ ಒರೆಗಾನ್ ಸ್ಟೇಟ್ನ ಕ್ಯಾನನ್ ಬೀಚ್ನಲ್ಲಿ ವಿಚಿತ್ರ ಮೀನೊಂದು ಕಂಡುಬಂದಿತ್ತು. ತಲೆಯ ಮೇಲೆ ಸಣ್ಣ ಕೂದಲಿನಂತಹ ಆಕೃತಿ ಹೊಂದಿರುವ ಈ ಕಪ್ಪು ಮೀನನ್ನು ಪೆಸಿಫಿಕ್ ಫುಟ್ವಾಲ್ ಫಿಶ್ ಎಂದು ಕರೆಯಲಾಗಿದೆ. ಇದರ ವೈಜ್ಞಾನಿಕ ಹೆಸರು ಹಿಮಾಂಟೊಲೋಫಸ್ ಸಾಗಮಿಯಸ್ ಎಂದು ಕರೆಯಲಾಗುತ್ತದೆ.
ಇದು ಸಮುದ್ರದ ಆಳದಲ್ಲಿ ಕಂಡು ಬರುವ ಜೀವಿಯಾಗಿದ್ದು, ಬರೋಬ್ಬರಿ 2,000-3,300ಕ್ಕೂ ಹೆಚ್ಚೂ ಆಳ ಸಮುದ್ರದಲ್ಲಿ ಇದು ಜೀವಿಸುತ್ತದೆ ಎಂದು ತಿಳಿದುಬಂದಿದೆ. ಪೆಸಿಫಿಕ್ ಫುಟ್ಬಾಲ್ ಮೀನು ಅತ್ಯಂತ ಅಪರೂಪ ಆಳದಲ್ಲಿ ಸಂಪೂರ್ಣ ಕತ್ತಲೆಯಲ್ಲಿ ವಾಸಿಸುತ್ತದೆ. ಈ ಮೀನನ್ನು ಮನುಷ್ಯ ಜೀವಂತವಾಗಿ ಸೆರೆಹಿಡಿದ ಅಥವಾ ನೋಡಿದ ಉದಾಹರಣೆ ಇಲ್ಲವಂತೆ. ಆದರೆ ಈ ಮೀನು ಸಮುದ್ರದ ದಡಕ್ಕೆ ಬಂದು ಬಿದ್ದಿತ್ತು.



Click it and Unblock the Notifications
