Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
100 ವರ್ಷ ಪೂರೈಸಿದ್ದ ಅಮೆರಿಕ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ನಿಧನ.! ಭಾರತಕ್ಕೂ ಇದೇ ಅವರ ನಂಟು!
100 ವರ್ಷ ಪೂರೈಸಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ನಿಧನರಾಗಿದ್ದಾರೆ. ಸೋಮವಾರ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಗಳಾಗಿವೆ. ಕಳೆದೊಂದು ವರ್ಷದಿಂದ ವಯೋಸಹಜ ಕಾಯಿಲೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ. 1977ರಿಂದ 1981ರ ವರೆಗೆ ಅವರು ಅಮೆರಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಸಾರ್ವಜನಿಕ ಸೇವೆ ಮತ್ತು ಮಾನವತೆಯ ಸೇವೆಯ ಹಿನ್ನೆಲೆಯಿಂದ ಅಧ್ಯಕ್ಷೀಯ ಪದವಿಗೆ ಏರಿದವರು. ಅವರ ಅಧಿಕಾರವಧಿಯಲ್ಲಿ ಅಮೆರಿಕ ಮಾತ್ರವಲ್ಲ ಇಡೀ ವಿಶ್ವದಲ್ಲಿ ಅವರು ಹೆಸರಾಗಿದ್ದರು. ಪ್ರಮಾಣಿಕತೆ ಹಾಗೂ ಕೆಲಸದ ಕಡೆಗೆ ಅವರಿಗಿದ್ದ ಬದ್ಧತೆಯಿಂದ ಹೆಸರಾದರು. ಅವರ ಚುನಾವಣೆ ಪ್ರಚಾರಗಳಲ್ಲಿ ಕಾಣುತ್ತಿದ್ದ ವಿಶೇಷತೆಗಳಿಂದ ಸುದ್ದಿಯಾಗುತ್ತಿದ್ದರು.

ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಅವರು ನೀಡಿದ್ದ ಆಶ್ವಾಸನೆಗಳನ್ನು ಪ್ರಾಮಾಣಿಕವಾಗಿ ಜನರಿಗೆ ನೀಡಿದ್ದ ಅಧ್ಯಕ್ಷ ಎಂಬ ಕೀರ್ತಿ ಪಡೆದಿದ್ದರು. ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಜನರಿಂದಲೇ ಹಣ ಸಂಗ್ರಹ ಮಾಡಿದ್ದರು. ಈ ರೀತಿ ದೇಣಿಗೆ ಸಂಗ್ರಹಿಸಿ ಆ ಚುನಾವಣೆಯಲ್ಲಿ ಜಯಿಸಿ ಅಧ್ಯಕ್ಷರಾದ ಮೊದಲ ವ್ಯಕ್ತಿ ಎಂಬ ಕೀರ್ತಿ ಕೂಡ ಪಡೆದಿದ್ದರು.
ಜಿಮ್ಮಿ ಕಾರ್ಟರ್ ಭಾರತದ ನಂಟು..!
ಜಿಮ್ಮಿ ಕಾರ್ಟರ್ ಅಧ್ಯಕ್ಷರಾಗಿದ್ದಾಗ ಭಾರತಕ್ಕೆ ಬಂದಿದ್ದರು. ಅಮೆರಿಕದ ಮೂರನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಅವರು ಭಾರತದ ಹರಿಯಾಣಕ್ಕೆ ಭೇಟಿ ನೀಡಿದ್ದರು. ಹರಿಯಾಣದ ಸಣ್ಣ ಗ್ರಾಮವೊಂದಕ್ಕೆ ಅವರು ಆಡಳಿತಾತ್ಮಕ ಭೇಟಿ ಮಾಡಿದ್ದರು. ಅವರ ಭಾರತ ಭೇಟಿಯ ಸವಿ ನೆನಪಿಗಾಗಿ ಈ ಗ್ರಾಮಕ್ಕೆ ಕಾರ್ಟರ್‌ಪುರಿ ಎಂದು ಹೆಸರಿಡಲಾಗಿತ್ತು.
ಅಮೆರಿಕದಲ್ಲಿ ಅತೀ ದೊಡ್ಡ ಕುಟುಂಬ ಹೊಂದಿರುವ ಅವರು 11 ಮಂದಿ ಮೊಮ್ಮಕ್ಕಳು ಹಾಗೂ 14 ಮರಿಮೊಮ್ಮಕ್ಕಳನ್ನು ಹೊಂದಿದ್ದಾರೆ. 100 ವರ್ಷ ಜೀವಿಸಿದ್ದ ಏಕೈಕ ಮಾಜಿ ಅಧ್ಯಕ್ಷರು ಕೂಡ ಇವರೇ ಆಗಿದ್ದಾರೆ.
1977ರ ಜನವರಿ 20ಕ್ಕೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಜಿಮ್ಮಿ ಕಾರ್ಟರ್ ಅವರು, 1981ರ ಜನವರಿ 20ರ ತನಕ ತಮ್ಮ ಆಡಳಿತ ನಡೆಸಿದ್ದರು. ಈ ಸಮಯದಲ್ಲಿ ಅಮೆರಿಕದಲ್ಲಿ ಹಲವು ರೀತಿಯ ಬದಲಾವಣೆಗಳು, ಯೋಜನೆಗಳ ಜಾರಿ ಮಾಡಿ ಸೈ ಎನಿಸಿಕೊಂಡಿದ್ದರು. ಜಾಗತಿಕ ಶಾಂತಿ, ವಿದೇಶಿ ನಿಯಮಗಳು, ಹಣಕಾಸು ನಿಯಮಗಳಲ್ಲಿ ಅವರು ತಂದಿದ್ದ ಸುಧಾರಣೆಯನ್ನು ವಿಶ್ವದ ಹಲವು ದೇಶಗಳು ಅನುಸರಿಸಿದವು. ಜಿಮ್ಮಿ ಕಾರ್ಟರ್ ಅವರ ನಿಧನದ ಸುದ್ದಿ ಜಾಗತಿಕ ನಾಯಕರು ಸಂತಾಪ ಸೂಚಿಸಿದ್ದಾರೆ.
ಭಾರತದಲ್ಲಿ ವೈರಲ್ ಆಗಿತ್ತು ಜಿಮ್ಮಿ ಕಾರ್ಟರ್ ಹೆಸರು
ಭಾರತದಲ್ಲಿ ವಿಚಿತ್ರ ಕಾರಣಕ್ಕೆ ಜಿಮ್ಮಿ ಕಾರ್ಟರ್ ಹೆಸರು ಚಿಕ್ಕಾಪಟ್ಟೆ ವೈರಲ್ ಆಗಿತ್ತು. ಅದು ಕೂಡ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾದಿಂದಾಗಿ ಜಿಮ್ಮಿ ಕಾರ್ಟರ್ ಹೆಸರು ಮತ್ತೆ ಮುನ್ನಲೆಗೆ ಬಂದಿತ್ತು. ಕೆಜಿಎಫ್ ಸಿನಿಮಾದಲ್ಲಿನ ಒಂದು ಪಾತ್ರದ ಹೆಸರು ಜಿಮ್ಮಿ ಕಾರ್ಟರ್ ಎಂಬುದಾಗಿತ್ತು. ಅದರಲ್ಲಿ ಡೆಲ್ವರ್ ಸ್ಟೀಲ್ ಟೆಕ್ಸಾಸ್‌ನ ಸಿಇಓ ಎಂಬುದಾಗಿ ಪರಿಚಯ ಮಾಡಿಕೊಳ್ಳಲಾಗಿತ್ತು.
ಇದಾದ ಬಳಿಕ ಈ ಜಿಮ್ಮಿ ಕಾರ್ಟರ್‌ಗೂ ಅಮೆರಿಕ ಅಧ್ಯಕ್ಷರಿಗೂ ಇರುವ ಸಂಬಂಧವೇನು? ಯಾರು ಈ ಜಿಮ್ಮಿ ಕಾರ್ಟರ್ ಎಂಬುದಾಗಿ ಭಾರತೀಯರು ಹುಡುಕಾಡಿದ್ದರು. ಇದೇ ಅಮೆರಿಕ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ಪಾತ್ರವನ್ನು ಸಿನಿಮಾದಲ್ಲಿ ತೋರಿಸಲಾಗಿದೆ ಎಂದೇ ಭಾವಿಸಲಾಗಿತ್ತು. ಆದ್ರೆ ಇಲ್ಲಿ ಜಿಮ್ಮಿ ಕಾರ್ಟರ್ ಹೆಸರಿನ ಪಾತ್ರಕ್ಕೂ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್‌ಗೂ ಯಾವುದೇ ಸಂಬಂಧವಿರಲಿಲ್ಲ. ಆದ್ರೆ ಜಿಮ್ಮಿ ಕಾರ್ಟರ್ ಹೆಸರು ಮಾತ್ರ ಭಾರತದಲ್ಲಿ ವೈರಲ್ ಟ್ರೆಂಡ್ ಆಗಿತ್ತು. ಆಗಲೆ ಹಲವರಿಗೆ ಈ ಹೆಸರಿನಲ್ಲಿ ಅಮೆರಿಕದ ಅಧ್ಯಕ್ಷರೊಬ್ಬರು ಇದ್ದರು ಎಂಬುದು ತಿಳಿದುಬಂದಿತ್ತು.



Click it and Unblock the Notifications