Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವಿಮಲ್ ಬ್ಯಾಗ್‌ಗೂ ಬಂತು ಬೆಲೆ..! ವಿದೇಶಿಗರ ಕೈಯಲ್ಲಿ ಟ್ರೆಂಡಿ ವಿಮಲ್ ಬ್ಯಾಗ್!
ನಿಮ್ಮ ಮನೆಯಲ್ಲಿ ವಿಮಲ್ ಬ್ಯಾಗ ಬಳಸಿರಬಹುದು, ಹಾಗೆ ಈಗಲೂ ಅದನ್ನು ಬಳಸುತ್ತಿರಬಹುದು. ಬಹುತೇಕ ಭಾರತೀಯರ ಮನೆಯಲ್ಲಿ ಈ ವಿಮಲ್ ಬ್ಯಾಗ್ ಇದ್ದೇ ಇರುತ್ತೆ. ಅಂಗಡಿಗಳಿಂದ ಯಾವುದಾದರು ವಸ್ತುಗಳು, ದಿನಸಿಗಳ ತರಲು ಹಾಗೆ ಮನೆಯಲ್ಲಿ ಯಾವುದಾದರು ವಸ್ತುವನ್ನು ಹಾಕಿ ಇಡಲು ಬಳಸುವುದು ಕಾಮನ್.
ಆದ್ರೆ ಈ ವಿಮಲ್ ಬ್ಯಾಗ್‌ಗಳು ಈಗ ವಿದೇಶದಲ್ಲೂ ಸುದ್ದಿಯಾಗುತ್ತಿವೆ. ಭಾರತೀಯರ ಮನೆಯಲ್ಲಿ ಸಾಮಗ್ರಿಗಳ ಹಾಕಿಡುತ್ತಿದ್ದ ಬ್ಯಾಗ್‌ಗಳು ಈಗ ಫ್ಯಾಷನ್ ಲೋಕದಲ್ಲಿ ದೊಡ್ಡ ಮಟ್ಟ ಗಮನಸೆಳೆದಿವೆ. ಡಿಸೈನರ್‌ಗಳು ಈ ಬ್ಯಾಗ್ ಹಿಡಿದು ಹೆಜ್ಜೆ ಹಾಕುತ್ತಿರುವುದು ನೋಡಬಹುದು. ಫ್ಯಾಷನ್ ಲೋಕದಲ್ಲಿ ದುಬಾರಿ ಬೆಲೆಯೆ ಬ್ಯಾಗ್‌ಗಳಿಗೆ ಮಾತ್ರವೇ ಜಾಗವಿತ್ತು.

ಗುಸ್ಸಿ, ಪ್ರಾಡಾ, ಲೂಯಿ ವಿಟಾನ್, ಡಿಯರ್, ಶನೆಲ್ ಹೀಗೆ ಹತ್ತಾರು ಐಷಾರಾಮಿ ಬ್ಯಾಗ್ ತಯಾರಿಕಾ ಕಂಪನಿಗಳು ದುಬಾರಿ ಬೆಲೆಯ ಬ್ಯಾಗ್‌ಗಳ ಹೊರತರುತ್ತವೆ. ಹಾಗೆ ಫ್ಯಾಷನ್ ಪ್ರಿಯರಿಗೆಂದೇ ವಿಶೇಷ ಡಿಸೈನ್‌ಗಳಲ್ಲಿ ಬರುತ್ತವೆ. ಅವುಗಳ ಬೆಲೆ ಸಹ ದುಬಾರಿಯೇ. ಆದ್ರೆ ಈ ಎಲ್ಲಾ ಐಷಾರಾಮಿ ಬ್ಯಾಗ್‌ಗಳ ನಡುವೆ ಈಗ ವಿಮಲ್ ಬ್ಯಾಗ್‌ಗಳು ಎಲ್ಲರ ಗಮನಸೆಳೆದಿವೆ.
ಇಲ್ಲಿ ಡಿಸೈನರ್‌ಗಳು ಈ ಐಷಾರಾಮಿ ಬ್ಯಾಗ್‌ಗಳ ಪ್ರದರ್ಶನ ಮಾಡದೆಯೇ ದೇಶೀಯ ಉತ್ಪನ್ನ ಎಂದು ಕರೆಯಲಾಗುವ ವಿಮಲ್ ಬ್ಯಾಗ್ ಪ್ರದರ್ಶಿಸಿದ್ದಾರೆ. ಆದ್ರೆ ಭಾರತದಲ್ಲಿ ಇವು ಪಾನ್ ಅಂಗಡಿಗಳಲ್ಲಿ ನೇತು ಹಾಕಿರಲಾಗುತ್ತದೆ. ಹಾಗೆ ಕೇವಲ 10 ರಿಂದ 20 ರೂಪಾಯಿಯಲ್ಲಿ ಈ ಬ್ಯಾಗ್ ಸಿಗುತ್ತವೆ.
ರೊಸಾಲ್ಬಾ ಪೆರೆಜ್ ಮತ್ತು ಜಾಕ್ವೆಲಿನ್ ಮೊರೇಲ್ಸ್ ಅವರು ಭಾರತದ ಬೀದಿಗಳಲ್ಲಿ ಅಡ್ಡಾಡುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇವರುಗಳು ಬಣ್ಣ ಬಣ್ಣದ ಡಿಸೈನರ್ ಬಟ್ಟೆ ಧರಿಸಿ ಕೈಯಲ್ಲಿ ವಿಮಲ್ ಬ್ಯಾಗ್ ಹಿಡಿದು ಓಡಾಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗೆ ಗುಸ್ಸಿ ಅಲ್ಲ, ಪ್ರಾಡಾ ಅಲ್ಲ, ಎಲ್‌ವಿ ಅಲ್ಲ, ಇದು ವಿಮಲ್ ಮಾತ್ರ ಎಂದು ಬರೆದುಕೊಳ್ಳಲಾಗಿದೆ.
ಈ ವಿಡಿಯೋಗಳು 30 ಮಿಲಿಯನ್ಗೂ ಅಧಿಕ ವೀಕ್ಷಣೆ ಕಂಡಿವೆ. ಅವರ ಮತ್ತೊಂದು ವಿಡಿಯೋದಲ್ಲಿ ಬ್ಯಾಗ್‌ಗಳ ಹಿಡಿದು ಮೆಟ್ರೋ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಮಂದಿ ಅಚ್ಚರಿಗೊಳಗಾಗಿದ್ದಾರೆ. ಈ ವಿಡಿಯೋ ನೋಡಿದವರು ಇನ್ನು ವಿಮಲ್ ಬ್ಯಾಗಿನ ದರ ಕೂಡ ಗಗನಕ್ಕೇರಲಿದೆ ಎಂದು ಕಮೆಂಟ್ ಮಾಡಿದ್ದಾರೆ.
ಈ ವಿಡಿಯೋಗೆ ಜನರು ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸಾವಿರಾರು ಕಮೆಂಟ್‌ಗಳು ಎಲ್ಲರ ಗಮನ ಸೆಳೆದಿವೆ. ಕೆಲವರು ಇಂತಹ ಫ್ಯಾಷನ್‌ನ ಅಗತ್ಯವಿದೆ ಎಂದಿದ್ದಾರೆ. ಹಾಗೆ ಇದು ನಾನು ನೋಡಿದ ಅತ್ಯಂತ ಸುಂದರ ಫ್ಯಾಷನ್ ಟ್ರೆಂಡ್ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಭಾರತದಲ್ಲಿ ಎಲ್ಲವೂ ಸಾಧ್ಯ, ಇನ್ನು ಮುಂದೆ ವಿಮಲ್ ಬ್ಯಾಗ್‌ನ ದರ ಏರಿಕೆಯಾಗದಿದ್ದರೆ ಸಾಕು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಈ ಬ್ಯಾಗ್‌ನ ಮುಂದೆ ವಿದೇಶಿ ಬ್ರಾಂಡ್‌ಗಳು ಯಾವುದೂ ಇಲ್ಲ, ಇದು ನಮ್ಮ ಬ್ರಾಂಡ್, ಈ ವಿದೇಶಿಗರು ಭಾರತೀಯ ಪೌರತ್ವ ಪಡೆಯಲು ಅರ್ಹರು ರಂದು ಕಮೆಂಟ್ ಮಾಡಿದ್ದಾರೆ. ಹಾಗೆ ಇವರಿಗೆ ಯಾರಾದರು ಆಧಾರ್ ಕಾರ್ಡ್ ಮಾಡಿಸಿ ಕೊಡಿ ಇವರು ಈಗ ಭಾರತೀಯರು ಎಂದು ಬರೆದುಕೊಂಡಿದ್ದಾರೆ. ಇದು ಸಹ ವಿಮಲ್‌ನ ಜಾಹೀರಾತು ಇರಬಹುದು, ಬಾಯಲ್ಲಿ ಹೇಳಿ ಕೇಸರಿ ಎಂದು ಮತ್ತೊಬ್ಬರು ಬರೆದಿದ್ದಾರೆ.
ಕಳೆದ ವರ್ಷ ಅಮೆರಿಕದ ಸಲೂನ್‌ನಲ್ಲಿ ಬಾಸ್ಮತಿ ಅಕ್ಕಿ ಚೀಲದಿಂದ ಮಾಡಿದ ಟೋಟ್ ಬ್ಯಾಗ್ ಕಾಣಿಸಿಕೊಂಡಿತ್ತು. ಹಾಗೆ ಮಾಲ್‌ಗಳಲ್ಲಿ ಗೋಣಿ ಚೀಲದಿಂದ ಮಾಡಿದ ಡ್ರೆಸ್‌ಗಳು, ಬಾಸ್ಮಿತಿ ಅಕ್ಕಿಚ ಚೀಲದಿಂದ ಮಾಡಿದ ಬಟ್ಟೆಗಳು ಕಾಣಿಸಿಕೊಂಡಿದ್ದವು, ಇದು ಕೂಡ ನೋಡುಗರನ್ನು ಅಚ್ಚರಿಗೆ ತಳ್ಳಿತ್ತು, ಈಗ ವಿಮಲ್ ಬ್ಯಾಗ್‌ಗಳು ಎಲ್ಲರ ಗಮನಸೆಳೆದಿವೆ.



Click it and Unblock the Notifications
