Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಭೂಮಿಯತ್ತ ಸಾಗಿದೆ 2024 YR4 ಕ್ಷುದ್ರಗ್ರಹ..! ಫುಟ್‌ಬಾಲ್ ಗಾತ್ರದ ಮಹಾ ಸ್ಪೋಟಕವಿದು..!!
ಸೌರವ್ಯೂಹ ರಚನೆಯಾದಾಗಿನಿಂದ ಇಂದಿನವರೆಗೂ ಅದೆಷ್ಟೋ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸಿರುವುದು ನೋಡಬಹುದು. ಭೂಮಿಯ ರಚನೆಯಲ್ಲೂ ಅವುಗಳ ಕೊಡುಗೆ ಇದೆ ಎನ್ನಬಹುದು. ಹಾಗೆ ಡೈನೋಸಾರ್‌ಗಳ ಅಳಿವಿಗೂ ಈ ಕ್ಷುದ್ರಗ್ರಗಳು ಅಪ್ಪಳಿಸಿದ್ದೇ ಕಾರಣ. ಇನ್ನು ಲಕ್ಷಾಂತರ ವರ್ಷದಿಂದಲೂ ಈ ಕ್ಷುದ್ರಗ್ರಹಗಳು ಭೂಮಿಯತ್ತ ಸಾಗಿ ಬರುವುದು, ಅತ್ಯಂತ ಸಮೀಪದಲ್ಲಿ ಹಾದು ಹೋಗುವುದು ನಡೆಯುತ್ತಲೇ ಇದೆ.
ಸದ್ಯ ಈಗೊಂದು ಕ್ಷುದ್ರಗ್ರಹ ಕೂಡ ಭೂಮಿ ಸಮೀಪದಲ್ಲೇ ಹಾದು ಹೋಗಲಿದೆ. 2024 YR4 ಎಂದು ಕರೆಯಲ್ಪಡುವ ಒಂದು ದೈತ್ಯ ಕ್ಷುದ್ರಗ್ರಹವು ಭೂಮಿಗೆ ಸಮೀಪಿಸುತ್ತಿದೆ ಎಂದು ನಾಸಾ ತಿಳಿಸಿದೆ. ಇದು ಅತ್ಯಂತ ವೇಗವಾಗಿ ಭೂಮಿಯ ಕಡೆಗೆ ಚಲಿಸುತ್ತಿದ್ದು, ಒಂದು ಫುಟ್‌ಬಾಲ್ ಮೈದಾನದಷ್ಟು ದೊಡ್ಡದಾಗಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಯಾವಾಗ ಭೂಮಿಯತ್ತ ಬರಲಿದೆ?
2023ರಲ್ಲಿ ಪತ್ತೆ ಮಾಡಲಾಗಿರುವ ಈ ಕ್ಷುದ್ರಗ್ರಹಕ್ಕೆ 2024 YR4 ಎಂದು ಹೆಸರಿಡಲಾಗಿದೆ. ಇದು 2032ರ ಡಿಸೆಂಬರ್‌ನಲ್ಲಿ ಮೇಲ್ಮೈಗೆ ಅಪ್ಪಳಿಸಬಹುದು ಎಂದು ಅಂದಾಜಿಸಲಾಗಿದೆ. ಇದು ಭೂಮಿ ಮೇಲೆ ಹಾನಿಗೂ ಕಾರಣವಾಗುವ ಆತಂಕ ಹುಟ್ಟಿಸಿದೆ. ಖಗೋಳಶಾಸ್ತ್ರಜ್ಞರು ಡಿಸೆಂಬರ್ 2023 ರಲ್ಲಿ ಚಿಲಿಯ ಎಲ್ ಸಾಸ್ ವೀಕ್ಷಣಾಲಯದಲ್ಲಿ ದೂರದರ್ಶಕಗಳನ್ನು ಬಳಸಿಕೊಂಡು ಕ್ಷುದ್ರಗ್ರಹವನ್ನು ಪತ್ತೆಹಚ್ಚಿದರು. ಇದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಕೇವಲ 1.2ರಷ್ಟು ಎಂದು ಅಂದಾಜಿಸಲಾಗಿತ್ತು. ಆದರೆ ನಂತರದ ಲೆಕ್ಕಾಚಾರದಲ್ಲಿ ಈ ಪ್ರಮಾಣ ಶೇ.2.3ಕ್ಕೆ ಏರಿಕೆ ಕಂಡಿದೆ. ಅಂದರೆ ಭೂಮಿಗೆ ಅಪ್ಪಳಿಸುವ ಸಾಧ್ಯತೆ 43ರಲ್ಲಿ ಒಂದು ಎಂದು ಅಂದಾಜಿಸಲಾಗಿದೆ.
ಒಂದು ವೇಳೆ ಇದು ಭೂಮಿಗೆ ಅಪ್ಪಳಿಸಿದರೆ 15 ಮೆಗಾಟನ್‌ಗಳಷ್ಟು ಟಿಎನ್‌ಟಿ ಉತ್ಪಾದಿಸುವ ಸ್ಪೋಟಕ್ಕೆ ಕಾರಣವಾಗಬಹುದು. ಅಂದರೆ ಹಿರೋಷಿಮಾದ ಮೇಲೆ ಬಳಸಲಾದ ಅಣುಬಾಂಬ್‌ಗಿಂತ ಸುಮಾರು 100 ಪಟ್ಟು ಹೆಚ್ಚಿನ ಪರಿಣಾಮ ಉಂಟು ಮಾಡಲಿದೆ, ಅಂದರೆ ನೀವೆ ಅಂದಾಜಿಸಿ ನೋಡಿ ಇಡೀ ಒಂದು ನಗರ ಈ ಕ್ಷುದ್ರಗ್ರಹಕ್ಕೆ ಸಿಲುಕಿ ನಲುಗಬಹುದು.
ಅಪ್ಪಳಿಸಲ್ಪಟ್ಟ ಕೇಂದ್ರ ಬಿಂದುವಿನಿಂದ ಸುಮಾರು 8.8 ಕಿ,ಮೀಟರ್ ದೂರದವರೆಗೆ ಪರಿಣಾಮಕಾರಿ ಹಾನಿ ಹಾಗೂ 19 ಕಿ,ಮೀ ವರೆಗೂ ಪ್ರಾಣಹಾನಿಗೆ ಇದು ಕಾರಣವಾಗಬಹುದು. ನಾಸಾ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಸಾವಿರಾರು ಕ್ಷುದ್ರಗ್ರಹಗಳ ಮೇಲೆ ಕಣ್ಣಿಟ್ಟಿವೆ. ಆರಂಭದಲ್ಲಿ 2024 YR4 ಅಪಾಯಕಾರಿ ಅಲ್ಲ ಎಂದು ವರ್ಗೀಕರಿಸಲಾಗಿತ್ತು, ಆದರೆ ನಂತರದ ಅಧ್ಯಯನದಲ್ಲಿ ಈ ಕ್ಷುದ್ರಗ್ರಹ ಅಪಾಯದ ಪ್ರಮಾಣ ಹೆಚ್ಚಿಸಿಕೊಂಡಿದೆ. ಹೀಗಾಗಿ ವೇಗವನ್ನು ಹೆಚ್ಚಿಸಿಕೊಂಡು ಭೂಮಿ ಕಡೆ ಸಾಗಿಬರುತ್ತಿರುವ ಈ ಕ್ಷುದ್ರಗ್ರಹದ ಮೇಲೆ ಹೆಚ್ಚಿನ ಅಧ್ಯಯನ ನಡೆಯುತ್ತಿದೆ.
ಇದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಎಷ್ಟಿದೆಯೋ ಅದೇ ರೀತಿ ಸೌರಮಂಡಲದಲ್ಲಿ ಇದು ಕಣ್ಮರೆಯಾಗುವ ಸಾಧ್ಯತೆ ಕೂಡ ಇದೆ. ಅದರ ದಾರಿಯಲ್ಲಿ ಯಾವುದಾದರು ಕ್ಷುದ್ರಗ್ರಹ ಅಡ್ಡಿಯಾದರೆ ಇಲ್ಲವೆ ಯಾವುದಾದರು ಗ್ರಹದ ಗುರುತ್ವಾಕರ್ಷಣೆಗೆ ಸಿಲುಕಿದರು, ಭೂಮಿಯತ್ತ ಸಾಗಿ ಬರುವ ಸಾಧ್ಯತೆ ಮತ್ತೆ ಕಡಿಮೆಯಾಗುತ್ತದೆ.
ಒಂದು ವೇಳೆ ಇದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದ್ದರೂ ಯಾವ ಪ್ರದೇಶದಲ್ಲಿ ಬೀಳಬಹುದು ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಸದ್ಯ ಈ ಕುರಿತ ಸಾಧನಗಳು, ಅಧ್ಯಯನಗಳು ನಡೆಯುತ್ತಿವೆ. ಹೆಚ್ಚಾಗಿ ಸಾಗರದ ಮೇಲೆ ಬೀಳುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.



Click it and Unblock the Notifications











