Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ವಿಶ್ವದ ಅತ್ಯಂತ ಭೀಕರ ವಿಮಾನ ದುರಂತಗಳಿವು..! ಒಂದೊಂದು ನಡುಕ ಹುಟ್ಟಿಸುತ್ತೆ!
ಗುಜರಾತ್‌ನ ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನಗೊಂಡಿದೆ. ವಿಮಾನದಲ್ಲಿ ಸುಮಾರು 242 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಲಂಡನ್‌ಗೆ ತೆರಳಬೇಕಿದ್ದ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ಪತನಗೊಂಡಿದೆ ಎಂದು ವರದಿಯಾಗಿದೆ. ವಿಮಾನ ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ AI171 ವಿಮಾನವು ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ.
ವಿಮಾನಯಾನವು ಪ್ರಯಾಣ ವ್ಯವಸ್ಥೆಯಲ್ಲಿ ಅತ್ಯಂತ ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಆದ್ರೆ ವಿಮಾನ ಅಪಘಾತಗಳು ಸಂಭವಿಸಿದರೆ ಸಾವು ನೋವುಗಳ ಪ್ರಮಾಣ ಕೂಡ ಹೆಚ್ಚಾಗುತ್ತದೆ. ಹಾಗೆ ವಿಶ್ವದ ಬಹುತೇಕ ಕಡೆಗಳಲ್ಲಿ ಅಪಾಯಕಾರಿ ಹಾಗೆ ಅತ್ಯಂತ ಭೀಕರ ವಿಮಾನ ಅಪಘಾತಗಳು ಸಂಭವಿಸಿರುವುದು ನೋಡಬಹುದು.

ಅದರಲ್ಲೂ ಅತ್ಯಂತ ಭೀಕರ ಎನಿಸುವ ವಿಮಾನ ದುರಂತಗಳ ಕುರಿತು ನಾವು ಮುಂದೆ ಹೇಳಲಿದ್ದೇವೆ. ಹೌದು ವಿಶ್ವದ ಹಲವು ಭಾಗದಲ್ಲಿ ಈ ರೀತಿಯ ದುರಂತಗಳು ನಡೆದಿದೆ. ಹಾಗಾದ್ರೆ ಯಾವೆಲ್ಲಾ ಘಟನೆಗಳು ಒಂದಕ್ಕಿಂತ ಒಂದು ಭೀಕರವಾಗಿವೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ನೇಪಾಳ ವಿಮಾನ ದುರಂತ
ಜನವರಿ 15 2023ರಲ್ಲಿ ಸಂಭವಿಸಿದ ಈ ಭೀಕರ ವಿಮಾನ ದುರಂತದಲ್ಲಿ 72 ಮಂದಿ ಮೃತಪಟ್ಟಿದ್ದರು. ನೇಪಾಳ ಕಳೆದ 30 ವರ್ಷಗಳಲ್ಲೇ ಹಿಂದೆಂದು ಕೇಳರಿಯದಂತಹ ವಿಮಾನ ಅಪಘಾತ ಎನ್ನಲಾಗಿತ್ತು. ಪೈಲಟ್‌ಗಳಿಂದ ಉಂಟಾದ ಸಮಸ್ಯೆಯಿಂದ ಈ ದುರಂತ ಸಂಭವಿಸಿತ್ತು ಎಂದು ಸರ್ಕಾರ ನೇಮಿಸಿದ್ದ ಸಮಿತಿ ವರದಿ ನೀಡಿತ್ತು.
ಮಲೇಷ್ಯಾ ಏರ್‌ಲೈನ್ಸ್ ಫ್ಲೈಟ್
ಆಮ್ಸ್ಟರ್‌ಡ್ಯಾಮ್‌ನಿಂದ ಕೌಲಾಲಂಪುರಕ್ಕೆ ಹೋಗುತ್ತಿದ್ದ ಅಂತರರಾಷ್ಟ್ರೀಯ ವಿಮಾನ ಜುಲೈ 17 2014 ರಂದು ಉಕ್ರೇನ್‌ನಲ್ಲಿ ಹೊಡೆದುರುಳಿಸಲ್ಪಟ್ಟಿತು, ಎಲ್ಲಾ 298 ಪ್ರಯಾಣಿಕರು ಸಾವನ್ನಪ್ಪಿದರು. ಇದು ಯುದ್ಧ ಭೀತಿಗೆ ಕಾರಣವಾಗಿದ್ದಲ್ಲದೆ ರಷ್ಯಾ ಪ್ರಜೆಗಳಾದ ಇಗೊರ್ ಗಿರ್ಕಿನ್ ಮತ್ತು ಸೆರ್ಗೆ ಡುಬಿನ್ಸ್ಕಿ ಮತ್ತು ಉಕ್ರೇನಿಯನ್ ಲಿಯೊನಿಡ್ ಖಾರ್ಚೆಂಕೊ ಈ ದುರಂತಕ್ಕೆ ನೇರ ಹೊಣೆ ಎಂದು ಜೀವಾವಧಿ ಶಿಕ್ಷೆ ನೀಡಲಾಗಿತ್ತು.
ಏರ್ ಇಂಡಿಯಾ ಫ್ಲೈಟ್ 182
ಜೂನ್ 23 1985 ರಂದು ಐರ್ಲೆಂಡ್ ಕರಾವಳಿಯಲ್ಲಿ ಕೆನಡಾದಿಂದ ಲಂಡನ್ ಮೂಲಕ ಭಾರತಕ್ಕೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಪತನಗೊಂಡಿತ್ತು, ವಿಮಾನದಲ್ಲಿದ್ದ ಎಲ್ಲಾ 329 ಪ್ರಯಾಣಿಕರು ಮೃತಪಟ್ಟರು. ವಿಮಾನದ ಹಿಂಬದಿಯಲ್ಲಿ ಬಾಂಬ್ ಇಟ್ಟಿದ ಚೀಲ ಇಡಲಾಗಿತ್ತು. ಸಮುದ್ರದಲ್ಲಿ ಈ ವಿಮಾನ ಪತನಗೊಂಡ ಪರಿಣಾಮ ಮೃತದೇಹಗಳನ್ನು ಕೂಡ ಹೊರತೆಗೆಯಲು ಆಗಿರಲಿಲ್ಲ. ಕೇವಲ 131 ಶವಗಳ ಪತ್ತೆ ಮಾಡಲಾಗಿತ್ತು.
ಏರ್ ಫ್ರಾನ್ಸ್ ಫ್ಲೈಟ್ 447
ಜೂನ್ 1 2009 ರಂದು 228 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಫ್ರಾನ್ಸ್ ಫ್ಲೈಟ್ 447 ವಿಮಾನವು ಅಟ್ಲಾಂಟಿಕ ಸಾಗರದ ಮೇಲೆ ಪತನಗೊಂಡಿತ್ತು. ಬ್ರೆಜಿಲ್‌ನ ರಿಯೊ ಡಿ ಜನೈರ್‌ನಿಂದ ಪ್ಯಾರಿಸ್‌ಗೆ ಈ ವಿಮಾನ ತೆರಳುತ್ತಿತ್ತು. ಆದ್ರೆ ಸಮುದ್ರದಲ್ಲಿ ಪತನಗೊಂಡ ಕಾರಣ ಈ ವಿಮಾನ ಪತ್ತೆ ಮಾಡಲು ಸಾಧ್ಯವಾಗಲಿಲ್ಲ.
ಟರ್ಕಿಶ್ ಏರ್ಲೈನ್ಸ್ ವಿಮಾನ 981
ಮಾರ್ಚ್ 3 1974ರಲ್ಲಿ ಮೆಕ್‌ಡೊನೆಲ್ ಡೌಗ್ಲಾಸ್ DC-10 ರ ಟರ್ಕಿಶ್ ಏರ್ಲೈನ್ಸ್ ವಿಮಾನ 981 ಫ್ರಾನ್ಸ್‌ನಲ್ಲಿ ಅಪಘಾತಕ್ಕೀಡಾಯಿತು. ವಿಮಾನದಲ್ಲಿ ಲಗೇಡ್ ಬಾಕ್ಸ್‌ನ ಬಾಗಿಲಿನಲ್ಲಿ ಕಂಡುಬಂದ ದೋಷದಿಂದ ಈ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ 346 ಮಂದಿ ಪ್ರಾಣಕಳೆದುಕೊಂಡಿದ್ದರು.
ಜಪಾನ್ ಏರ್ಲೈನ್ಸ್ ವಿಮಾನ 123
ಆಗಸ್ಟ್ 12 1985ರಲ್ಲಿ ಟೋಕಿಯೊದಿಂದ ಒಸಾಕಾಗೆ ತೆರಳುತ್ತಿದ್ದ ಈ ವಿಮಾನವು ಅಪಘಾತಕ್ಕೀಡಾಗಿ ಬರೋಬ್ಬರಿ 520 ಮಂದಿ ಮೃತಪಟ್ಟಿದ್ದರು. ಇದು ಇಂದಿಗು ವಾಯುಯಾನದ ಇತಿಹಾಸದಲ್ಲೇ ಅತ್ಯಂತ ಮಾರಕ ಅಪಘಾತ ಎಂದು ಪರಿಗಣಿಸಲಾಗಿದೆ.
ಮಲೇಷ್ಯಾ ಏರ್ಲೈನ್ಸ್ 370
ಮಾರ್ಚ್ 8 2014ರಲ್ಲಿ ನಡೆದಿದ್ದ ಈ ಭೀಕರ ಅಪಘಾತ ಇಂದಿಗೂ ರಹಸ್ಯವಾಗಿ ಉಳಿದಿದೆ. 239 ಪ್ರಯಾಣಿಕರ ಹೊತ್ತು ಸಾಗಿದ್ದ ಈ ವಿಮಾನ ರಾಡಾರ್ ವಲಯದಿಂದ ನಾಪತ್ತೆಯಾಗಿತ್ತು. ಆಫ್ರಿಕಾದ ಕರಾವಳಿಯಲ್ಲಿ ಕೆಲವು ಬಿಡಿ ಭಾಗ ಸಕ್ಕಿದ್ದು ಬಿಟ್ಟರೆ ಈ ವಿಮಾನದ ಸುಳಿವೇ ಇಲ್ಲದಂತಾಗಿದೆ.



Click it and Unblock the Notifications
