Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಆಕಾಶದಿಂದ ಬಿದ್ದವು ಮೀನುಗಳು...! ಮೀನಿನ ಮಳೆ ವಿಡಿಯೋ ವೈರಲ್
ಜಗತ್ತಲ್ಲಿ ಕೆಲವೊಮ್ಮೆ ಎಷ್ಟು ವಿಚಿತ್ರ ಘಟನೆಗಳು ನಡೆಯುತ್ತವೆ ಅಂದ್ರೆ ನೀವು ನಂಬಲು ಸಹ ಸಾಧ್ಯವಾಗುವುದಿಲ್ಲ. ಅದರಲ್ಲೂ ನೈಸರ್ಗಿಕವಾಗಿ ನಮ್ಮ ಅರಿವಿಗೆ ಬಾರದೆ ಇರುವ ಅದೆಷ್ಟೋ ವಿಚಾರಗಳಿವೆ. ನಿಸರ್ಗವೇ ಒಂದು ವಿಚಿತ್ರ ಎನಿಸುತ್ತೆ. ಕೆಲವೊಮ್ಮೆ ನಿಸರ್ಗದಲ್ಲಿ ನಡೆಯುವ ಘಟನೆಗಳು ನಮ್ಮನ್ನು ಚಿಂತೆಗೆ ತಳ್ಳುತ್ತವೆ.
ಇಲ್ಲಿಯೂ ಸಹ ಅದೇ ರೀತಿಯ ಘಟನೆ ನಡೆದಿದೆ. ನೀವು ಸಹ ಕೇಳಿರಬಹುದು ಮೀನಿನ ಮಳೆಯಾಗಿದೆ ಅಂತ. ಇಲ್ಲೊಂದು ಕಡೆ ಸಹ ಮೀನಿನ ಮಳೆಯಾಗಿದೆ. ಆಕಾಶದಿಂದ ದೊಡ್ಡ ದೊಡ್ಡ ಮೀನುಗಳು ಬೀಳುತ್ತಿರುವ ವಿಡಿಯೋ ವೈರಲ್ ಆಗಿದೆ. ಮಳೆಬರುವಾಗ ಆಲಿಕಲ್ಲು ಬೀಳುವುದು ಸಾಮಾನ್ಯ ಆದ್ರೆ ಇಲ್ಲಿ ದೊಡ್ಡ ಮೀನುಗಳು ಬೀಳುತ್ತಿವೆ.

ಈ ರೀತಿ ಮೀನಿನ ಮಳೆ ಬೀಳುತ್ತಿರುವುದು ಕಂಡುಬಂದಿದ್ದು ಇರಾನ್‌ನಲ್ಲಿ ಎಂದು ತಿಳಿದುಬಂದಿದೆ. ಈ ವೈರಲ್ ಆಗಿರುವ ವಿಡಿಯೋದಲ್ಲಿ ಮೀನುಗಳ ಬೀಳತ್ತಿರುವುದನ್ನು ನಾವು ನೋಡಬಹುದು. ಇದನ್ನು ವಿಡಿಯೋ ಮಾಡುತ್ತಿರುವವರು ಕೆಳಗೆ ಬಿದ್ದ ಮೀನನ್ನು ಎತ್ತಿ ಹಿಡಿಯುತ್ತಿದ್ದಾರೆ. ಎಲ್ಲಿ ನೋಡಿದರೂ ಮೀನುಗಳು ಬಿದ್ದಿರುವುದನ್ನು ನಾವು ನೋಡಬಹುದು.
ಮೀನಿನ ಮಳೆಯಾಗಿರುವುದು ಇದೇನು ಮೊದಲಲ್ಲ, ಹಲವು ಕಡೆಗಳಲ್ಲಿ ಹಲವು ಬಾರಿ ಮೀನಿನ ಮಳೆಯಾಗಿದೆ. ಇದಕ್ಕೆ ಸಮುದ್ರದ ಮೇಲೆ ಏಳುವ ಸುಂಟರಗಾಳಿ ಎಂದು ನಂಬಲಾಗಿದೆ. ಅದೇ ರೀತಿ ಇರಾನ್‌ನಲ್ಲಿಯೂ ನಡೆದಿದೆ ಎಂದು ತಿಳಿದುಬಂದಿದೆ. ಈ ವಿಡಿಯೋ ನೋಡಿದ ಮಂದಿ ನಿಜಕ್ಕೂ ಶಾಕ್ ಆಗಿದ್ದಾರೆ. ಎಂದಿಗೂ ಆಕಾಶದಿಂದ ಮೀನುಗಳ ಬೀಳುತ್ತಿರುವುದನ್ನು ಕನಸಿನಲ್ಲೂ ಊಹಿಸದ ಮಂದಿ ಈ ವಿಡಿಯೋ ನೋಡಿ ಶಾಕ್ ಆಗಿದ್ದಾರೆ.
ವಿಡಿಯೋದಲ್ಲಿ ಏನಿದೆ?
ವಾಹನಗಳು ತುಂಬಿರುವ ರಸ್ತೆಯಲ್ಲಿ ಮಳೆ ಬೀಳುತ್ತಿದೆ, ಈ ಮಳೆಯ ಜೊತೆಗೆ ಮೀನುಗಳು ಸಹ ಆಕಾಶದಿಂದ ಬೀಳುತ್ತಿವೆ. ವಿಡಿಯೋ ಮಾಡುತ್ತಿರುವ ವ್ಯಕ್ತಿ ಅಲ್ಲಿ ಬಿದ್ದಿರುವ ಮೀನನ್ನು ಎತ್ತಿಕೊಳ್ಳುತ್ತಿರುವುದನ್ನು ನಾವು ನೋಡಬಹುದು. ಇದಕ್ಕೆ ಸಮುದ್ರದಲ್ಲಿ ಏಳುವ ಸುಂಟರಗಾಳಿ ಕಾರಣ ಎನ್ನಲಾಗುತ್ತದೆ. ಇಲ್ಲಿಯೂ ಇದೇ ಪ್ರಕ್ರಿಯೆ ಕಾರಣವಾಗಿರಬಹುದು ಎಂದು ನಂಬಲಾಗಿದೆ.
ಸಮುದ್ರದಲ್ಲಿ ಬಲವಾದ ಸುಂಟರಗಾಳಿ ಎದ್ದಾಗ ನೀರಿನ ಸೆಳೆಯ ತಂಬಾನೆ ಪ್ರಭಾವಶಾಲಿಯಾಗಿರುತ್ತೆ. ಈ ವೇಳೆ ಸಮುದ್ರದಲ್ಲಿ ಇರುವ ಮೀನುಗಳು ಈ ಗಾಳಿಯ ಸೆಲೆಗೆ ಸಿಲುಕುತ್ತವೆ. ಬಳಿಕ ಅವು ನೀರನಿಂದ ಹಾಳಿಯಲ್ಲಿ ಹಾರಾಡಿ ಆಕಾಶದತ್ತ ತೆರಳುತ್ತವೆ. ಮೇಲಕ್ಕೆ ತೆರಳುವ ಮೀನುಗಳು ಗಾಳಿಯಲ್ಲಿ ಎಸೆಯಲ್ಪಡುತ್ತವೆ. ಹೀಗಾಗಿ ಮಳೆಯ ಜೊತೆ ಮೀನುಗಳು ಸಹ ಭೂಮಿಗೆ ಬೀಳುತ್ತವೆ.
ಆದರೆ ಈ ವಿದ್ಯಮಾನ ಸಮುದ್ರದ ಬದಿಯಲ್ಲಿಯೋ ಅಥವಾ ನದಿಯ ಹತ್ತಿರದಲ್ಲೇ ನಡೆಯಬೇಕು ಎಂಬುದೇನಿಲ್ಲ. ಈ ಸುಂಟರಗಾಳಿ ಎಷ್ಟು ಶಕ್ತಿಶಾಲಿಯಾಗಿರುತ್ತೆ ಅಂದ್ರೆ, ಸಮುದ್ರ, ನದಿ ಇಲ್ಲದಿರುವ ಜಾಗದಲ್ಲೂ ಮೀನಿನ ಮಳೆಗೆ ಕಾರಣವಾಗಬಹುದು. ಹೀಗಾಗಿ ಈ ಮೀನಿನ ಮಳೆ ಇಂದಿಗೂ ಅಚ್ಚರಿಗೆ ಕಾರಣವಾಗಿರುತ್ತದೆ.
ನೆಟ್ಟಿಗರು ಹೇಳೋದೇನು?
ಇನ್ನು ಈ ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ಒಂದೊಂದು ರೀತಿ ಪ್ರತಿಕ್ರಿಯಿಸಿದ್ದಾರೆ. ಕೆಲವರಿಗೆ ಇದೊಂದು ಅಚ್ಚರಿಯ ಜೊತೆಗೆ ಶಾಕ್ ಸಹ ಆಗಿದೆ. ಏಕೆಂದರೆ ಹಲವರಿಗೆ ಈ ವಿದ್ಯಮಾನ ನಿಜವಾಗಲು ನಂಬಲು ಸಾಧ್ಯವಿಲ್ಲದ ಅಚ್ಚರಿಗೆ ಕಾರಣವಾಗಿದೆ. ಈ ರೀತಿ ಮೀನಿನ ಮಳೆಯಾಗುವುದು ನಾವು ಕನಸಿನಲ್ಲೂ ಊಹಿಸಿರಲಿಲ್ಲ. ಇದು ಅಸಲಿಯೋ ನಕಲಿಯೋ ಯಾರಾದರು ಖಚಿತಪಡಿಸಿ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿ ವರ್ಷ ಮೆಕ್ಸಿಕೋದಲ್ಲಿ ಮೀನಿನ ಮಳೆ
ಮೆಕ್ಸಿಕೋದಲ್ಲಿ ವರ್ಷವೂ ಈ ರೀತಿ ಮೀನಿನ ಮಳೆಯಾಗುತ್ತದೆ. ನಿಮಗೆ ಅಚ್ಚರಿ ಎನಿಸಬಹುದು, ಇಲ್ಲಿನ ಜನರ ಪ್ರಕಾರ ಇಲ್ಲಿ ಮೀನಿನ ಮಳೆಯಾಗಲು ಕಾರಣವಿದೆ. ಅದೇನೆಂದರೆ ಒಂದು ಸಮಯದಲ್ಲಿ ಇಲ್ಲಿ ವಾಸಿಸುವ ಜನರು ಹಸಿವಿನಿಂದ ಸಾಯುತ್ತಿದ್ದರಂತೆ. ಆಗ ಅವರ ದೇವರು ಮೂರು ದಿನಗಳವರೆಗೆ ಮೀನುಗಳ ಮಳೆ ಸುರಿಸಿದನಂತೆ. ಹೀಗೆ ಅಂದಿನಿಂದ ಇಂದಿನವರೆಗೂ ಇಲ್ಲಿ ಮೀನಿ ಮಳೆಯಾಗುತ್ತಿದೆ ಎಂದು ಸ್ಥಳೀಯರು ಹೇಳಿಕೊಳ್ಳುತ್ತಾರೆ.



Click it and Unblock the Notifications
