Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಇತಿಹಾಸದಲ್ಲಿ ಮೊದಲ ಬಾರಿಗೆ ಸೋಮವಾರ ಆಪಲ್ ಫೋನ್ ಬಿಡುಗಡೆ..! ಏಕೆ ಗೊತ್ತಾ?
ನಿಮಗೆ ಆಪಲ್ ಐಫೋನ್ ಬ್ರಾಂಡ್ ಕುರಿರು ಒಂದಿಷ್ಟು ಮಾಹಿತಿ ಇರಬಹುದು. ವಿಶ್ವದ ದುಬಾರಿ ಫೋನ್‌ಗಳಲ್ಲಿ ಐಫೋನ್ ಸಹ ಒಂದಾಗಿದೆ. ಹಾಗೆ ಆಪಲ್ ಕಂಪನಿ ಸಹ ವಿಶ್ವದ ಅತ್ಯಂತ ದೊಡ್ಡ ಕಂಪನಿ ಸಹ ಆಗಿದೆ. ಆಪಲ್ ಕಂಪನಿ ಮೊಬೈಲ್ ಫೋನ್ ಹೊರತುಪಡಿಸಿ ಹತ್ತಾರು ಉತ್ಪನ್ನಗಳ ಮಾರುಕಟ್ಟಗೆ ತರುತ್ತದೆ ಎಂಬುದು ಸಹ ತಿಳಿದೇ ಇದೆ. ಲ್ಯಾಪ್‌ಟಾಪ್, ಸ್ಮಾರ್ಟ್ ವಾಚ್, ವರ್ಚುವಲ್ ಗೆಮಿಂಗ್, ಕ್ಲೌಂಡ್ ಕಂಪ್ಯೂಟಿಂಗ್ ಹೀಗೆ ಹತ್ತಾರು ಉತ್ಪನ್ನಗಳಿವೆ.
ವರ್ಷಕ್ಕೊಮ್ಮೆ ಒಂದು ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ತರುವ ಆಪಲ್ ಯುವ ಜನತೆಯನ್ನು ತನ್ನತ್ತ ಸೆಳೆಯುತ್ತದೆ. ಈ ಕಂಪನಿಗಳ ಫೋನ್‌ಗಳು ದುಬಾರಿಯಾದರು ಸಹ ಅದನ್ನು ಖರೀದಿಸಲು ಯುವಕರು ಸಾಲುಗಟ್ಟಿ ನಿಲ್ಲುವುದನ್ನು ನಾವು ನೋಡಿದ್ದೇವೆ. ಇತ್ತೀಚಿಗೆ ಭಾರತದಲ್ಲಿಯೂ ತನ್ನ ಮೊಟ್ಟ ಮೊದಲ ಸ್ಟೋರ್ ಓಪನ್ ಮಾಡಿದೆ.

ಆದರೆ ಆಪಲ್ ವರ್ಷಗಳಿಂದ ಇಷ್ಟೊಂದು ಯಶಸ್ವಿ ಕಂಪನಿಯಾಗಿ ಗುರುತಿಸಿಕೊಂಡಿರುವುದು ಅದರ ಡಿಸೈನ್ ಹಾಗೂ ಬಾಳಿಕೆಯ ಉದ್ದೇಶದಿಂದ. ಯಾವುದೇ ಕಾರಣಕ್ಕೂ ಬೆಲೆಯಲ್ಲಿ, ಅದರ ಉತ್ಪನ್ನದಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳದೆ ಮಾರುಕಟ್ಟೆ ಪ್ರವೇಶಿಸುವುದು ಇಂದಿಗೂ ನಡೆದುಕೊಂಡು ಬಂದಿದೆ.
ವಿಭಿನ್ನ, ವಿಶೇಷ ಉತ್ಪನ್ನಗಳ ಮಾರುಕಟ್ಟೆಗೆ ತರುವ ಮೂಲಕ ಹೊಸ ಹೊಸ ಪ್ರಯೋಗ ಮಾಡುವುದು ಅದರ ಮತ್ತೊಂದು ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಇನ್ನು ಆಪಲ್ ತನ್ನ ಮೊದಲ ಫೋನ್‌ನಿಂದ ಕಳೆದ ವರ್ಷದ ವರೆಗೂ ವರ್ಷಕ್ಕೆ ಒಂದು ಫೋನ್ ಮಾತ್ರ ಗ್ರಾಹಕರಿಗೆ ಪರಿಚಯಿಸುತ್ತದೆ. ಆದರೆ ಅದರಲ್ಲಿ ಎರಡರಿಂದ ಮೂರು ಆವೃತ್ತಿಗಳನ್ನು ತರುತ್ತದೆ.
ಅದರಲ್ಲೂ ಆಪಲ್ ಯಾವುದೇ ಉತ್ಪನ್ನವನ್ನಾದರು ಶುಕ್ರವಾರದಂದು ಮಾತ್ರವೇ ಜಗತ್ತಿಗೆ ಪರಿಚಯಿಸುತಿತ್ತು. ಆದರೆ ಇದೆ ಮೊಟ್ಟ ಮೊದಲ ಬಾರಿಗೆ ತನ್ನ ಐಫೋನ್ 16 ಸೀರಿಸ್ ಅನ್ನು ಸೋಮವಾರದಂದು ಬಿಡುಗಡೆ ಮಾಡುತ್ತಿರುವು ಕುತೂಹಲಕ್ಕೆ ಕಾರಣವಾಗಿದೆ.
ಐಫೋನ್ 16 ಈವೆಂಟ್ ಅನ್ನು ಸೋಮವಾರ, ಸೆಪ್ಟೆಂಬರ್ 9, 2024 ರಂದು ನಡೆಸುತ್ತಿದೆ. ಇದು ಗ್ರಾಹಕರು ಮಾತ್ರವಲ್ಲ ಇಡೀ ಟೆಕ್ ಜಗತ್ತಿನ ಗಮನ ಸೆಳೆದಿದೆ. ಶುಕ್ರವಾರದ ಲಾಂಚ್ ಈವೆಂಟ್‌ಗಳಿಂದ ಸೋಮವಾರಕ್ಕೆ ಶಿಫ್ಟ್ ಮಾಡಿರಲು ಕಾರಣ ಏನಿರಬಹುದು ಎಂದು ಹುಡುಕಲು ಜನರು ಮುಂದಾಗಿದ್ದಾರೆ.
ಆಪಲ್ ಸಾಂಪ್ರದಾಯಿಕವಾಗಿ ತನ್ನ ಪ್ರಮುಖ ಐಫೋನ್‌ಗಳನ್ನು ಶುಕ್ರವಾರದಂದು ಬಿಡುಗಡೆ ಮಾಡಲು ಆದ್ಯತೆ ನೀಡಿದೆ. ಮೊಟ್ಟ ಮೊದಲ ಫೋನ್ ಐಫೋನ್ 5 ಸೆಪ್ಟೆಂಬರ್ 21, 2012 ರಂದು ಬಿಡುಗಡೆ ಮಾಡಲಾಗಿತ್ತು, ಆಗಿನಿಂದ ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಒಂದು ಹೊಸ ಮೊಬೈಲ್ ಅದು ಶುಕ್ರವಾರವೇ ಲಾಂಚ್ ಆಗುತ್ತಿತ್ತು.
ಕಾನೂನು ಹೋರಾಟದ ಭಯ
ಆಪಲ್ ಸಂಸ್ಥೆ ಬಹುದೊಡ್ಡ ತೆರಿಗೆ ಸಂಕಷ್ಟ ಸಿಲುಕಿದೆ. ಯುರೋಪಿಯನ್ ಕಮಿಷನ್‌ನಿಂದ ಭಾರಿ ದಂಡವನ್ನು ಎದುರಿಸುತ್ತಿದೆ. ದೀರ್ಘಾವಧಿಯ ತೆರಿಗೆ ವಿವಾದಕ್ಕೆ ಸಂಬಂಧಿಸಿದಂತೆ ಆಪಲ್ ದಾಖಲೆಯ ದಂಡ ಪಾವತಿಗೆ ಸೂಚಿಸುವ ಸಾಧ್ಯತೆ ಇದೆ. 2004ರಿಂದ 2014ರ ನಡುವಿನ ತೆರಿಗೆ ವಿವಾದ ಇದಾಗಿದ್ದು ಬಹುದೊಡ್ಡ ದಂಡ ಬೀಳಬಹುದು ಎಂದು ಅಂದಾಜಿಸಲಾಗಿದೆ.
ಈ ಕುರಿತಂತೆ ಸೆ.10ರಂದು ಅಂತಿಮವಾಗಿ ತೀರ್ಪು ಸಹ ಬರಬಹುದು. ಹೀಗಾಗಿ ಈ ತೀರ್ಪಿನ ನಡುವೆ ದೊಡ್ಡ ಲಾಂಚ್ ಈವೆಂಟ್ ಅನ್ನು ಇಟ್ಟುಕೊಳ್ಳುವುದು ಅಪಾಯವೆಂದು ಅರಿತಿರುವ ಸಂಸ್ಥೆ ಒಂದು ದಿನ ಮುಂಚಿತವಾಗಿ ಹೊಸ ಫೋನ್ ಬಿಡುಗಡೆಗೆ ಮುಂದಾಗಿದೆ ಎಂದು ವರದಿಯಾಗಿದೆ.
ಇನ್ನೊಂದು ಕಡೆ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಕಣ ರಂಗೇರಿದ್ದು, ಸೆ.10 ಎಂದು ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ನಡುವಿನ ಮೊದಲ ಚಚೇ ಏರ್ಪಡುತ್ತಿದೆ, ಈ ಹಿನ್ನೆಲೆ ಆಪಲ್ ತನ್ನ ಬಿಡುಗಡೆ ದಿನಾಂಕ ಸೋಮವಾರಕ್ಕೆ ಶಿಫ್ಟ್ ಮಾಡಿದೆ ಎನ್ನಲಾಗಿದೆ.



Click it and Unblock the Notifications
