Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಇಂದು ಆಗಸದಲ್ಲಿ ಚಂದ್ರನ ವಿಸ್ಮಯ: ವರ್ಷದ ಮೊದಲ ಸೂಪರ್ ಮೂನ್ ಗೋಚರ
ಆಗಸದಲ್ಲಿ ಒಂದಲ್ಲಾ ಒಂದು ರೀತಿಯ ಕೌತುಕಗಳು ನಡೆಯುತ್ತಲೇ ಇರುತ್ತದೆ. ಹಾಗೆ ಚಂದ್ರನಲ್ಲಿಯೂ ಸಹ ಅನೇಕ ರೀತಿಯ ಅಚ್ಚರಿಯ ವಿದ್ಯಮಾನಗಳು ನಡೆಯುವುದು ನೋಡಬಹುದು. ಅದ್ರಲ್ಲೂ ಗ್ರಹಣ ಸೇರಿದಂತೆ ಸೂಪರ್‌ಮೂನ್, ಬ್ಲಡ್‌ಮೂನ್, ಪಿಂಕ್ ಮೂನ್ ಹೀಗೆ ಹಲವು ರೀತಿ ವಿಶೇಷ ವಿದ್ಯಮಾನಗಳ ನೋಡಬಹುದು. ಈಗ ವರ್ಷದ ಆರಂಭದಲ್ಲೇ ಸೂಪರ್ ಮೂನ್ ಸಂಭವಿಸುತ್ತಿದೆ. ಇಂದು 2026ರ ಮೊದಲ ಸೂಪರ್ ಮೂನ್ ಸಂಭವಿಸುತ್ತಿದೆ.
ಸೂರ್ಯ ಭೂಮಿಯ ಪರಿಭ್ರಮಣೆಯಲ್ಲಿ ಸುತ್ತುಬರುವಾಗ ಭೂಮಿಗೆ ಅತ್ಯಂತ ಹತ್ತಿರಕ್ಕೆ ಬಂದಾಗ ಸೂಪರ್ ಮೂನ್ ವಿದ್ಯಮಾನ ಸಂಭವಿಸಲಿದೆ. ಇಂದು ಕೂಡ ಚಂದ್ರ ಭೂಮಿಯ ಸಮೀಪಕ್ಕೆ ಬರಲಿದ್ದಾನೆ. ಚಂದ್ರ ಭೂಮಿಯಿಂದ ಸಾಮಾನ್ಯಕ್ಕಿಂತ ಕಡಿಮೆ ದೂರ ತಲುಪಿದಾಗ ಅದರ ಗಾತ್ರ ಮತ್ತು ಹೊಳಪು ಹೆಚ್ಚಾಗುತ್ತದೆ. ಹೀಗಾಗಿ ಎಂದಿಗಿಂತ ಚಂದ್ರನು ದೊಡ್ಡದಾಗಿ ನಮಗೆ ಕಾಣಿಸಲಿದ್ದಾನೆ.

ಈ ಹುಣ್ಣಿಮೆಯ ದಿನದಂದು ಸಾಮಾನ್ಯ ದಿನಕ್ಕಿಂತ ಅಥವಾ ಪ್ರತಿಬಾರಿ ಹುಣ್ಣಿಮೆಯ ದಿನ ನೋಡ ಸಿಗುವ ಚಂದ್ರನಿಗಿಂತ ದೊಡ್ಡದಾಗಿ ಈ ಚಂದ್ರ ಕಾಣಿಸಲಿದ್ದಾನೆ. ಈ ದಿನ ಚಂದ್ರ ಶೇ 14ರಷ್ಟು ದೊಡ್ಡದಾಗಿ ಕಾಣಿಸಲಿದ್ದಾನಂತೆ. ಅದ್ರಲ್ಲೂ ಸಾಮಾನ್ಯಕ್ಕಿಂತ 27 ಸಾವಿರ ಕಿ.ಮೀ ಹತ್ತಿರವಾಗಲಿದ್ದಾನೆ. ಈ ದಿನ ಭೂಮಿ ಸೂರ್ಯನ ಸಮೀಪ ದೂರಕ್ಕೆ ಬರುವ ದಿನವೂ ಹೌದು. ಸರಾಸರಿ ದೂರ 15 ಕೋಟಿ ಕಿ.ಮೀಕ್ಕಿಂತ 14 ಕೋಟಿ 70 ಲಕ್ಷ ಕಿ.ಮೀಗೆ ಬರಲಿದೆ. ಈ ವಿದ್ಯಮಾನ ಕೂಡ ಇಂದು ಸಂಭವಿಸುತ್ತಿದೆ. ಚಂದ್ರನಿಗೂ ಭೂಮಿ ಹತ್ತಿರವಾಗುತ್ತದೆ.
2025ರ ಕೊನೆಯ ಸೂಪರ್‌ಮೂನ್ ಡಿಸೆಂಬರ್ 4ರ ಗುರುವಾರ ಗೋಚರಿಸಿತ್ತು. 2024ರ ಕೊನೆಯ ಸೂಪರ್‌ಮೂನ್ ಅಕ್ಟೋಬರ್ 17ರಂದು ಕಾಣಿಸಿತ್ತು. ಚಂದ್ರನ ಹತ್ತಿರದ ಭಾಗವು ಸಂಪೂರ್ಣವಾಗಿ ಪ್ರಕಾಶಮಾನವಾಗಿರುತ್ತದೆ ಮತ್ತು ಚಂದ್ರನು ಸರಾಸರಿಗಿಂತ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತಾನೆ. ಹುಣ್ಣಿಮೆಯು ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಗೆ ಹತ್ತಿರವಿರುವಾಗ, ಪೆರಿಜಿ ಎಂದು ಕರೆಯಲ್ಪಡುವ ಬಿಂದುವಿನೊಂದಿಗೆ ಹೊಂದಿಕೆಯಾದಾಗ "ಸೂಪರ್ ಮೂನ್" ಸಂಭವಿಸುತ್ತದೆ.
ಯಾವಾಗ ನೋಡಬಹುದು?
ಈ ಸೂಪರ್ ಮೂನ್ ಸಾಮಾನ್ಯವಾಗಿ ಎಲ್ಲಾ ಭಾಗದಲ್ಲೂ ಗೋಚರವಾಗುತ್ತದೆ. ಮೋಡ ಕವಿದ ವಾತಾವರಣ ಇಲ್ಲದಿದ್ದರೆ ಸುಲಭವಾಗಿ ವೀಕ್ಷಿಸಬಹುದು. ಇಂದು (ಜನವರಿ 3ರಂದು) ಸಂಜೆ 5 ಗಂಟೆಯಿಂದ ನೀವು ವೀಕ್ಷಿಸಬಹುದು. ಈ ಸಮಯದಲ್ಲಿ ಚಂದ್ರನು 362,641 ಕಿ. ಮೀ ದೂರದಲ್ಲಿ ಕಾಣಿಸಿಕೊಳ್ಳುತ್ತಾನೆ ಮತ್ತು ಅದರ ಪೂರ್ಣ ಹಂತದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದು ತಿಳಿದುಬಂದಿದೆ.
ಈ ವರ್ಷ ಮೂರು ಸೂಪರ್ ಮೂನ್ ಸಂಭವಿಸಲಿದೆ. ಜನವರಿಯ ಇಂದು ಮೊದಲ ಸೂಪರ್‌ಮೂನ್ ಸಂಭವಿಸಲಿದೆ. ಹಾಗೆ ನವೆಂಬರ್‌ನಲ್ಲಿ ಹಾಗೆ ಕೊನೆಯದಾಗಿ ಡಿಸೆಂಬರ್‌ನಲ್ಲಿ 3ನೇ ಸೂಪರ್‌ಮೂನ್ ಸಂಭವಿಸುತ್ತಿದೆ. 2025ರಲ್ಲಿ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಸೂಪರ್ ಮೂನ್ ವರದಿಯಾಗಿತ್ತು. ಸದ್ಯ ಈಗಾಗಲೆ ಹಲವು ಕಡೆ ಸೂಪರ್ ಮೂನ್ ಗೋಚರವಾಗುತ್ತಿದೆ. ಭಾರತದಲ್ಲೂ ನೀವು ಸುಲಭವಾಗಿ ವೀಕ್ಷಿಸಬಹುದು. ಇಂದು ಈ ಅವಕಾಶ ತಪ್ಪಿಸಿಕೊಂಡರೆ ಮತ್ತೆ ನವಂಬರ್ ವರೆಗೂ ಕಾಯಬೇಕಾಗುತ್ತದೆ.



Click it and Unblock the Notifications
