Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಇಂಟರ್‌ನೆಟ್‌ನಲ್ಲಿ ಮೊಟ್ಟ ಮೊದಲು ಹಂಚಿಕೊಂಡ ಫೋಟೋ ಇದುವೇ..! ಯಾರಿವರು ಗೊತ್ತಾ?
ಇದು ಆನ್‌ಲೈನ್ ಜಗತ್ತು. ನೀವಿಂದು ಮೊಬೈಲ್, ಇಂಟರ್‌ನೆಟ್ ಇಲ್ಲದೆ ಜೀವಿಸಲು ಸಾಧ್ಯವಿಲ್ಲ. ಒಂದು ಕ್ಷಣವು ಇಂಟರ್‌ನೆಟ್ ಇಲ್ಲವೆಂದರೆ ಇಡೀ ವಿಶ್ವವೇ ಮುಂದೆ ಸಾಗದೆ ನಿಂತುಬಿಡುತ್ತದೆ. ಈಗ ಪ್ರತಿಯೊಂದು ಅಂಶಗಳು ಆನ್‌ಲೈನ್‌ನಲ್ಲೇ ನಡೆಯುತ್ತವೆ. ಇಂಟರ್‌ನೆಟ್ ಎಂಬುದು ಜೀವನದ ಆಗುಹೋಗು ಹಾಗೂ ನಮ್ಮ ನಿತ್ಯದ ಬೇಡಿಕೆಯ ವಸ್ತುವಾಗಿ ಬದಲಾಗಿ ಬಿಟ್ಟಿದೆ.
ಇಂಟರ್‌ನೆಟ್ ಇಲ್ಲದ ಒಂದು ಪ್ರಪಂಚವನ್ನು ನಾವಿಂದು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಆದರೆ ಇದೇ ಪರಿಸ್ಥಿತಿ 10 ಅಥವಾ 20 ವರ್ಷದ ಹಿಂದೆ ಇರಲಿಲ್ಲ. ಆಗ ನಿಧಾನವಾಗಿ ಇಂಟರ್‌ನೆಟ್, ಕ್ಯಾಮರಾ, ಮೊಬೈಲ್ ಫೋನ್‌ಗಳ ಆವಿಷ್ಕಾರವಾಗಿತ್ತಿದ್ದ ಕಾಳವದು. ಎಲ್ಲೋ ಒಂದು ಬದಿಯಲ್ಲಿ ಲ್ಯಾಂಡ್‌ಲೈನ್ ಫೋನ್‌ಗಳಿದ್ದ ಕಾಲ ನೆನಪಿಸಿಕೊಳ್ಳಿ.
ಅಂದು ಇಂಟರ್‌ನೆಟ್ ಎಂಬುದು ದೂರದ ಬೆಟ್ಟದಂತೆ ಕನಸಾಗಿತ್ತು. 1990ರ ದಶಕದಲ್ಲಿ ಇಂಟರ್‌ನೆಟ್ ಇನ್ನೂ ನಡೆಯಲು ಬಾರದ ಕೂಸಿನಂತಿತ್ತು. ಎಲ್ಲೋ ದೊಡ್ಡ ದೊಡ್ಡ ಕಂಪನಿಗಳು, ಈ ಇಂಟರ್‌ನೆಟ್ ಸೌಲಭ್ಯ ಪಡೆಯುತ್ತಿದ್ದವು, ಅದೂ ಸಹ ಕೆಲವೇ ಆಯ್ದ ಪ್ರದೇಶದಲ್ಲಿ ಮಾತ್ರ ಈ ಸೌಲಭ್ಯವಿತ್ತು.

(ಫೋಟೋ ಕೃಪೆ-Quora)
ಆದ್ರೆ 1990ರ ದಶಕದಲ್ಲಿ ಅದಾಗಲೆ ಡಿಜಿಟಲ್ ಕ್ಯಾಮರಾಗಳು ಎಲ್ಲೆಡೆ ಸದ್ದು ಮಾಡುತ್ತಿದ್ದವು. ಇಲ್ಲಿ ಮೊದಲ ಕ್ಯಾಮರಾಗಳು ಹೊರಬಂದಾಗ ಫೋಟೋ ತೆಗೆಯಲು ಗಂಟೆಗಳೇ ಕಾಯಬೇಕಿತ್ತು ಬರುಬರುತ್ತಾ ಡಿಜಿಟಲ್ ಕ್ಯಾಮರಾಗಳು ಈ ಸಮಯವನ್ನು ಕಡಿಮೆ ಮಾಡಿರುವ ಜೊತೆಗೆ ಇನ್ನು ಅನೇಕ ಬದಲಾವಣೆ ತಂದವು.
ಇದಲ್ಲದೆ ಮೊಟ್ಟ ಮೊದಲ ಬಾರಿಗೆ ಡಿಜಿಟಲ್ ಕ್ಯಾಮರಾದಲ್ಲಿ ತೆಗೆದಿದ್ದ ಫೋಟೋವನ್ನು ಇಂಟರ್‌ನೆಟ್‌ಗ ಅಪ್‌ಲೋಡ್ ಮಾಡಿದ್ದು ಸಹ ಇದೇ ಸಮಯದಲ್ಲಿ. ಹೌದು ಮೊಟ್ಟ ಮೊದಲ ಬಾರಿಗೆ ಇಂಟರ್‌ನೆಟ್‌ನಲ್ಲಿ ಪೋಸ್ಟ್ ಆಗಿದ್ದು, ಈ ನಾಲ್ಕು ಮಂದಿ ಯುವತಿಯರ ಫೋಟೋ. ನಾವಿಂದು ಇಂಟರ್‌ನೆಟ್‌ನಲ್ಲಿ ಕೋಟಿ ಕೋಟಿ ಫೋಟೋಗಳ ನೋಡುತ್ತೇವೆ. ಆದ್ರೆ ಈ ನಾಲ್ಕು ಯುವತಿಯರ ಫೋಟೋ ಮೊಟ್ಟ ಮೊದಲ ಬಾರಿಗೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು.
ಯಾರು ಈ ಯುವತಿಯರು?
ಜುಲೈ 18, 1992ರಲ್ಲಿ ಮೊಟ್ಟ ಮೊದಲ ಬಾರಿಗೆ ಸಿಲ್ವಾನೋ ಡಿ ಜೆನ್ನಾರೋ ಎಂಬ ಫೋಟೋಗ್ರಾಫರ್ ತೆಗೆದಿದ್ದ ಈ ಫೋಟೋವನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿತ್ತು. ಇವರು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಯುವ ವಿಜ್ಞಾನಿಗಳಾಗಿದ್ದರಂತೆ. ಅವರ ಫೋಟೋವನ್ನು ಸಿಲ್ವಾನೋ ಡಿ ಜೆನ್ನಾರೋ ಸೆರೆ ಹಿಡಿದಿದ್ದ.
ಆದರೆ ಈ ಚಿತ್ರವನ್ನು ಆತ ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡುವ ಯಾವ ಉದ್ದೇಶವನ್ನು ಆತ ಹೊಂದಿರಲಿಲ್ಲವಂತೆ ಆದರೆ ಸಿಲ್ವಾನೋ ಅವರ ಸಹೋದ್ಯೋಗಿ ಒಬ್ಬ ಹೊಸದಾಗಿ ವೆಬ್‌ಸೈಟ್ ಆರಂಭಿಸಿದ್ದನು. ಪಠ್ಯೇತರ ಚಟುವಟಿಕೆಯನ್ನು ಪಟ್ಟಿ ಮಾಡುವ ಸಣ್ಣದಾದ ವೆಬ್‌ಸೈಟ್ ಅದಾಗಿತ್ತು. ಅದರಲ್ಲಿ ಮ್ಯೂಸಿಕ್ ಬ್ಯಾಂಡ್‌ನ ಕ್ಯಾಟಗರಿಯಲ್ಲಿ ಈ ಫೋಟೋವನ್ನು ಮೊದಲು ಅಪ್‌ಲೋಡ್ ಮಾಡಲು ನಿರ್ಧರಿಸಿದರಂತೆ. ಬಳಿಕ ಈ ಫೋಟೋವನ್ನು ಇಂಟರ್‌ನೆಟ್ ಸಹಾಯದ ಮೂಲಕ ಮೊಟ್ಟ ಮೊದಲ ಬಾರಿಗೆ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿತ್ತು.
ಆದರೆ ಮುಂದೊಂದು ದಿನ ಇಂಟರ್‌ನೆಟ್‌ನಲ್ಲಿ ಕೋಟಿ ಕೋಟಿ ಪೋಟೋಗಳು ಅಪ್ಲೋಡ್ ಆಗಲಿವೆ. ಅದರಲ್ಲಿ ನಾವು ಅಪ್ಲೋಡ್ ಮಾಡಿದ್ದ ಫೋಟೋ ಮೊಟ್ಟ ಮೊದಲ ಫೋಟೋ ಆಗಿರಲಿದೆ ಎಂಬ ಕಲ್ಪನೆಯೂ ಅವರಿಗೆ ಇರಲಿಲ್ಲವಂತೆ.
ಈ ಫೋಟೋ ಅಪ್ಲೋಡ್ ಆದ ಬಳಿಕ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು, ಫೋಟೋದಲ್ಲಿರುವ ಯುವತಿಯರು ಸಹ ಎಲ್ಲೆಡೆ ಸುದ್ದಿಯಾದರು. ಅವರು ಯಾರು ಎಂದು ಜನರು ಹುಡುಕಾಡಲು ಆರಂಭಿಸಿದ್ದರು. ಜೊತೆಗೆ ಈ ಕಂಪನಿ ಹೆಸರು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಅಲ್ಲದೆ ಫೋಟೋ ಸೆರೆ ಹಿಡಿದಿದ್ದ ಸಿಲ್ವಾನೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ. ಜೊತೆಗೆ ಈ ವೆಬ್‌ಸೈಟ್ ಸಹ ಮನೆ ಮಾತಾಯಿತು.
ಹೀಗೆ ಮೊದಲ ಫೋಟೋ ಅಪ್ಲೋಡ್ ಮಾಡಿದ ಬಳಿಕ ಇತರೆ ವೆಬ್‌ಸೈಟ್‌ಗಳು ಕೇವಲ ಅಕ್ಷರ ವಿನ್ಯಾಸದಿಂದ ಫೋಟೋ ಅಳವಡಿಸಲು ಮುಂದಾದವು. ಹೀಗಾಗಿ ಫೋಟೋಗಳು ಹಂಚಿಕೊಳ್ಳಬಹುದಾದ ದೊಡ್ಡ ಇಂಟರ್‌ನೆಟ್ ಜಾಲ ಆರಂಭಗೊಂಡಿತ್ತ. ಫೋಟೋಗಳ ಹಂಚಿಕೊಳ್ಳಲೆಂದೆ ವೆಬ್‌ಸೈಟ್‌ಗಳು ಆರಂಭವಾದವು. ಎಲೆಕ್ಟ್ರಾನಿಕ್ ಮೇಲ್‌ಗಳಲ್ಲೂ ಡಿಜಿಟಲ್ ಫೋಟೋಗಳ ಹಂಚಿಕೊಳ್ಳಲು ಜನ ಆರಂಭಿಸಿದ್ದರು. ನಿಧಾನವಾಗಿ ಇಂಟರ್‌ನೆಟ್ ಜಗತ್ತನ್ನು ಆವರಿಸಿಕೊಳ್ಳುತ್ತಾ ಬಂದು ಬಳಿಕ ಫೇಸ್‌ಬುಕ್, ಇನ್ಸ್‌ಸ್ಟಾಗ್ರಾಮ್‌ನಂತಹ ಹಲವು ಪ್ಲಾಟ್‌ಫಾರ್ಮ್‌ಗಳು ಹೆಚ್ಚು ಫೇಮಸ್ ಆದವು.



Click it and Unblock the Notifications