Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ವರ್ಷದ ಮೊದಲ ಚಂದ್ರ ಗ್ರಹಣ ಯಾವಾಗ..? ಭಾರತದಲ್ಲಿ ಗೋಚರವಾಗಲಿದ್ಯಾ? ಇಲ್ಲಿದೆ ಮಾಹಿತಿ..!
ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಯ ಸುತ್ತ ಸಂಚರಿಸುವಾಗ ಭೂಮಿಯ ನೆರಳಿನೊಳಕ್ಕೆ ಬಂದರೆ ಆಗ ಚಂದ್ರಗ್ರಹಣವಾಗುತ್ತದೆ. ಈ ಗ್ರಹಣವಾಗಬೇಕಾದರೆ ಸೂರ್ಯ ಭೂಮಿ ಮತ್ತು ಚಂದ್ರ ಇವು ಮೂರೂ ಸುಮಾರಾಗಿ ಒಂದೇ ಸರಳ ರೇಖೆಯಲ್ಲಿರಬೇಕು. ಚಂದ್ರ ತನ್ನ ಪಥದ ಒಂದು ಪಾತಬಿಂದುವಿನಲ್ಲೋ ಇಲ್ಲವೇ ಅದರ ಹತ್ತಿರವೋ ಇದ್ದು ಸೂರ್ಯನೊಂದಿಗೆ ವಿಯುತಿಯಲ್ಲಿದ್ದರೆ ಅಂದರೆ ಹುಣ್ಣಿಮೆಯಾಗಿದ್ದರೆ ಆಗ ಚಂದ್ರ ಗ್ರಹಣವಾಗುತ್ತದೆ.
2024ರಲ್ಲಿ ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 25ರಂದು ಸಂಭವಿಸಲಿದೆ. ಇದಾದ 15 ದಿನಗಳಲ್ಲಿ ಚೈತ್ರ ಅಮವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ ಉಂಟಾಗಲಿದೆ. ಭೂಮಿ ಮತ್ತು ಚಂದ್ರನ ನಡುವೆ ಸೂರ್ಯ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ.

ಹಾಗಾದರೆ ಈ ಗ್ರಹಣ ಭಾರತದಲ್ಲಿ ಗೋಚರವಾಗಲಿದ್ಯಾ? ಗ್ರಹನ ಗೋಚರದ ಸಮಯವೇನು?, ಗ್ರಹಣ ಕಾಲದಲ್ಲಿ ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಾರ್ಚ್‌ನಲ್ಲಿ ಸಂಭವಿಸಲಿರುವ ಈ ಚಂದ್ರಗ್ರಹಣವು ವರ್ಷದ ಮೊದಲ ಗ್ರಹಣವಾಗಿದೆ. 2024 ರಲ್ಲಿ ಮುಂದಿನ ಚಂದ್ರಗ್ರಹಣವು ಮಾರ್ಚ್ 24-25 ರಂದು ಪೆನಂಬ್ರಾಲ್ ಚಂದ್ರಗ್ರಹಣವಾಗಿರುತ್ತದೆ. ಇದು ಬಣ್ಣದ ಹಬ್ಬವಾದ ಹೋಳಿಯೊಂದಿಗೆ ಸಂಬಂಧ ಹೊಂದಿದೆ, ಏಕೆಂದರೆ ಅಂದು ಹೋಳಿ ಹುಣ್ಣಿಮೆಯಾಗಿದೆ.
2024 ರಲ್ಲಿ ಚಂದ್ರಗ್ರಹಣವನ್ನು ನಾನು ಎಲ್ಲಿ ವೀಕ್ಷಿಸಬಹುದು?
ಮಾರ್ಚ್ 25 ರಂದು ನಡೆಯಲಿರುವ ಪೆನಂಬ್ರಾಲ್ ಚಂದ್ರಗ್ರಹಣವು ಅತ್ಯಂತ ಚಿಕ್ಕದಾದ ಚಂದ್ರಗ್ರಹಣವಾಗಿದ್ದು, ಇದರಲ್ಲಿ ಚಂದ್ರನು ಭೂಮಿಯ ನೆರಳಿನ ಹೊರ ಅಂಚಿನಲ್ಲಿ ಹಾದುಹೋಗುತ್ತದೆ. ಇದು ಯುರೋಪ್, ಉತ್ತರ ಮತ್ತು ಪೂರ್ವ ಏಷ್ಯಾ, ಉತ್ತರ ಅಮೆರಿಕಾ, ದಕ್ಷಿಣ ಅಮೇರಿಕಾ, ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕಾದಿಂದ ಗೋಚರಿಸುತ್ತದೆ. ಅಂದರೆ ಭಾರತದಲ್ಲಿ ಈ ಚಂದ್ರಗ್ರಹಣ ಗೋಚರವಾಗುವುದಿಲ್ಲ.
ಚಂದ್ರಗ್ರಹಣದ ದಿನಾಂಕ ಮತ್ತು ಸಮಯ
ಗ್ರಹಣ ಆರಂಭ- ಬೆಳಗ್ಗೆ 10:24
ಗರಿಷ್ಠ ಚಂದ್ರಗ್ರಹಣ- 12:43
ಗ್ರಹಣ ಬಿಡು ವೇಳೆ- 15:01
ಗ್ರಹಣ ಕಾಲ-04 ಗಂಟೆ 36 ನಿಮಿಷ 56 ಸೆಕೆಂಡುಗಳು
ಜ್ಯೋತಿಷ್ಯದಲ್ಲಿ ಈ ಸಮಯದಲ್ಲಿ ರಾಹುವಿನ ಕೋಪವು ಭೂಮಿಯ ಮೇಲೆ ಹೆಚ್ಚಾಗುತ್ತದೆ, ಅದರ ಅಶುಭ ಪರಿಣಾಮಗಳು ಎಲ್ಲೆಡೆ ಕಂಡುಬರುತ್ತವೆ. ಒಂದು ವರ್ಷದಲ್ಲಿ ಸುಮಾರು 4 ಗ್ರಹ ಗ್ರಹಣಗಳು ಸಂಭವಿಸುತ್ತವೆ, ಅದರಲ್ಲಿ ಎರಡು ಸೂರ್ಯಗ್ರಹಣಗಳು ಮತ್ತು ಎರಡು ಚಂದ್ರ ಗ್ರಹಣಗಳು ಸಂಭವಿಸುತ್ತವೆ. ಈ ಗ್ರಹಣದ ಸಮಯ, ಇದರಿಂದ ಅಶುಭ ಪರಿಣಾಮ ಉಂಟಾಗುವುದು, ಇದನ್ನು ತಪ್ಪಿಸಲು ಜನರು ಕೆಲ ಜನರು ಕೆಲವು ಜ್ಯೋತಿಷ್ಯ ಪರಿಹಾರ ಮಾಡುತ್ತಾರೆ.
ಗ್ರಹಣ ಸಮಯದಲ್ಲಿ ಚಂದ್ರಗ್ರಹಣ 9 ಗಂಟೆಗಳ ಮೊದಲು ಪ್ರಾರಂಭವಾಗುವುದು. ಸನಾತನ ಧರ್ಮದಲ್ಲಿ ಈ ಅವಧಿಯಲ್ಲಿ ಅನೇಕ ನಿಯಮಗಳನ್ನು ಪಾಲಿಸುವ ಸಂಪ್ರದಾಯವಿದೆ, ಇದರಿಂದ ಗ್ರಹಣದ ಅಶುಭ ಪರಿಣಾಮಗಳನ್ನು ತಪ್ಪಿಸಬಹುದು. ಗ್ರಹಣದ ಅಶುಭ ಪರಿಣಾಮಗಳು ಈ ವಸ್ತುಗಳ ಮೇಲೆ ಬೀಳದಂತೆ ಆಹಾರ ಪದಾರ್ಥಗಳಲ್ಲಿ ತುಳಸಿ ಎಲೆಗಳನ್ನು ಬಳಸುವುದು ಎಲ್ಲಾ ಮನೆಗಳಲ್ಲಿ ಆಗಾಗ್ಗೆ ಮಾಡುವ ಈ ಕಾರ್ಯಗಳಲ್ಲಿ ಒಂದಾಗಿದೆ.
ಗ್ರಹಣ ದೋಷ ತಡೆಗಟ್ಟಲು ಈ ಜ್ಯೋತಿಷ್ಯ ಪರಿಹಾರ ಒಳ್ಳೆಯದು
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಯಾವುದೇ ರಾಶಿಚಕ್ರದಲ್ಲಿ ಎರಡು ಗ್ರಹಗಳು ಸಂಕ್ರಮಿಸಿದಾಗ, ಶುಭ ಮತ್ತು ಅಶುಭ ಪರಿಣಾಮಗಳು ಕಂಡುಬರುತ್ತವೆ. ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ ಆದರೆ ರಾಹು ವಿರುದ್ಧ ದಿಕ್ಕಿನಲ್ಲಿ ಚಲಿಸುವ ಗ್ರಹವಾಗಿದ್ದು 18 ತಿಂಗಳಿಗೆ ರಾಶಿ ಬದಲಾವಣೆ ಮಾಡುವುದು. ರಾಹು-ಸೂರ್ಯ ಸಂಯೋಗ ಶೀಘ್ರದಲ್ಲೇ ಆಗಲಿದೆ. ರಾಹು ಮೀನ ರಾಶಿಯಲ್ಲಿದೆ, ಮಾರ್ಚ್‌ನಲ್ಲಿ ಸೂರ್ಯ ಮೀನ ರಾಶಿಗೆ ಸಂಚರಿಸಲಿದೆ. ಮಾರ್ಚ್ 14 ರಂದು ಮೀನ ರಾಶಿಯಲ್ಲಿ ರಾಹು ಮತ್ತು ಸೂರ್ಯನ ಸಂಯೋಗವಾಗಲಿದೆ.



Click it and Unblock the Notifications
