Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
ಭಾರತ ದೇಶ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಭಾರತದ ಲೋಕಸಭಾ ಚುನಾವಣೆಗೆ ಇಂದಿನಿಂದ ಮೊದಲನೇ ಹಂತದಲ್ಲಿ ಮತದಾನವು ಆರಂಭವಾಗಿದೆ. ಒಟ್ಟಾರೆ 21 ರಾಜ್ಯಗಳ, 102 ಸ್ಥಾನಗಳಿಗೆ ಇಂದು ಮತದಾನ ನಡೆಯಲಿದ್ದು, ಒಟ್ಟಾರೆ 1,625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ತಮಿಳುನಾಡು, ರಾಜಸ್ಥಾನ, ಉತ್ತರ ಪ್ರದೇಶ ಸೇರಿ ಪ್ರಮುಖ ರಾಜ್ಯಗಳಲ್ಲಿ ಈ ದಿನ ಮತದಾನ ನಡೆಯುತ್ತಿದೆ.
ಭಾರತೀಯ ಚುನಾವಣಾ ಆಯೋಗವು ಪ್ರಕಟಿಸಿರುವ ವೇಳಾಪಟ್ಟಿಯಂತೆ, ದೇಶದಲ್ಲಿ 2024ರ ಲೋಕಸಭಾ ಚುನಾವಣೆ ಒಟ್ಟು 7 ಹಂತದಲ್ಲಿ ನಡೆಯಲಿದೆ. ಇದೀಗ ಮೊದಲನೇ ಹಂತದ ಮತದಾನ ಆರಂಭ ಆಗುತ್ತಿದೆ. ಏಪ್ರಿಲ್ 19, 26, ಮೇ 7, 13, 20, 25 ಮತ್ತು ಜೂನ್ 1 ರಂದು ವಿವಿಧ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಇನ್ನು ಇಂದಿನಿಂದ ಆರಂಭಗೊಂಡ ಚುನಾವಣೆ ಹಿನ್ನೆಲೆ ಮೊಟ್ಟ ಮೊದಲು ಮತದಾನ ಮಾಡಿದ್ದ ವ್ಯಕ್ತಿ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಮತಚಲಾಯಿಸುತ್ತಿಲ್ಲ. ಇವರು ಸ್ವತಂತ್ರ ಭಾರತದ ಮೊಟ್ಟ ಮೊದಲು ಮತದಾರರಾಗಿದ್ದು, 2022ರ ವರೆಗೂ ಮತದಾನ ಮಾಡಿದ್ದಾರೆ ಆದರೆ ಈ ಬಾರಿ ಅವರು ಮತದಾನ ಮಾಡುತ್ತಿಲ್ಲ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಮತದಾರ ಎಂಬ ದಾಖಲೆಯನ್ನು ಹೊಂದಿರುವ ಶ್ಯಾಮ್ ಸರನ್ ನೇಗಿ ಅವರು ನವೆಂಬರ್ 2022 ರಲ್ಲಿ ತಮ್ಮ 106 ನೇ ವಯಸ್ಸಿನಲ್ಲಿ ನಿಧನರಾದರು. ಹಿಮಾಚಲ ಪ್ರದೇಶದ ಕಲ್ಪಾ ಗ್ರಾಮದವರಾದ ನೇಗಿ ಅವರು 1951-1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿದಾಗ ಭಾರತದ ಮೊದಲ ಮತದಾರರ ಎಂಬ ಖ್ಯಾತಿ ಗಳಿಸಿದ್ದರು.
1951 ರಲ್ಲಿ, ಆ ಸಮಯದಲ್ಲಿ ಶಾಲಾ ಶಿಕ್ಷಕರಾಗಿದ್ದ ನೇಗಿ ಅವರು ಚುನಾವಣಾ ಕರ್ತವ್ಯದಲ್ಲಿದ್ದರು ಮತ್ತು ಚಿನಿ ಕ್ಷೇತ್ರದಲ್ಲಿ ತಮ್ಮ ಹಕ್ಕು ಚಲಾಯಿಸಿದ್ದರು, ನಂತರ ಅದನ್ನು ಕಿನ್ನೌರ್ ಎಂದು ಮರುನಾಮಕರಣ ಮಾಡಿದರು.
ಆಗ, ಪರ್ವತ ರಾಜ್ಯದ ಹಿಮದಿಂದ ಆವೃತವಾಗಿರುವ ಪ್ರದೇಶಗಳಲ್ಲಿ ಮತದಾನವು ದೇಶದ ಇತರ ಸ್ಥಳಗಳಿಗಿಂತ ಮುಂದಿತ್ತು. ಈ ಮೂಲಕ ಸ್ವತಂತ್ರ ಭಾರತದಲ್ಲಿ ಮತದಾನ ಮಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ರಜಾಪ್ರಭುತ್ವದಲ್ಲಿ ದೃಢವಾದ ನಂಬಿಕೆಯುಳ್ಳ ನೇಗಿ ಅವರು ತಮ್ಮ ಜೀವಿತಾವಧಿಯಲ್ಲಿ ಎಂದಿಗೂ ಮತವನ್ನು ತಪ್ಪಿಸಲಿಲ್ಲ ಮತ್ತು ಒಟ್ಟು 34 ಬಾರಿ ಮತ ಚಲಾಯಿಸಿದ್ದರು, ಅವರ ಕೊನೆಯ ಮತವು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಚಲಾಯಿಸಿದ್ದರು.
ಮತದಾನ ನಡೆಯುತ್ತಿರುವ ರಾಜ್ಯಗಳು
ತಮಿಳುನಾಡು ರಾಜ್ಯದ ಎಲ್ಲಾ 39 ಲೋಕಸಭೆ ಕ್ಷೇತ್ರಗಳಿಗೂ ಚುನಾವಣೆ ಶುರುವಾಗಿದ್ದು, ಈ ಸಮಯದಲ್ಲೇ ರಾಜಸ್ಥಾನದ 25 ಸ್ಥಾನಗಳ ಪೈಕಿ 12, ಉತ್ತರ ಪ್ರದೇಶದಲ್ಲಿ 80 ಸ್ಥಾನಗಳ ಪೈಕಿ 8 ಸ್ಥಾನ, ಮಧ್ಯಪ್ರದೇಶದ 29 ಸ್ಥಾನ ಪೈಕಿ 6 ಸ್ಥಾನ, ಮಹಾರಾಷ್ಟ್ರದಲ್ಲಿ 48 ಸ್ಥಾನಗಳ ಪೈಕಿ 5 ಸ್ಥಾನ, ಉತ್ತರಾಖಂಡದ ಎಲ್ಲಾ 5 ಸ್ಥಾನಕ್ಕೆ, ಅಸ್ಸಾಂನ 14 ಸ್ಥಾನಗಳ ಪೈಕಿ 5 ಸ್ಥಾನಗಳಿಗೆ & ಬಿಹಾರ ರಾಜ್ಯದಲ್ಲಿ ಒಟ್ಟು 40 ಸ್ಥಾನಗಳ ಪೈಕಿ 4 ಸ್ಥಾನಗಳಿಗೆ ಮತದಾನ ಆರಂಭವಾಗಿದೆ.
ಒಟ್ಟಾರೆ 543 ಲೋಕಸಭಾ ಸ್ಥಾನ
ಭಾರತದಲ್ಲಿ ಒಟ್ಟಾರೆ 543 ಲೋಕಸಭಾ ಸ್ಥಾನ ಇದ್ದು ಈ ಪೈಕಿ ಇಂದು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ ಭಾರತೀಯ ಚುನಾವಣಾ ಆಯೋಗ.
ಒಂದೇ ಹಂತದಲ್ಲಿ ತಮಿಳುನಾಡಿಗೆ ಚುನಾವಣೆ
ತಮಿಳುನಾಡು ರಾಜ್ಯದ ಎಲ್ಲಾ 39 ಲೋಕಸಭೆ ಕ್ಷೇತ್ರಗಳಿಗೂ ಚುನಾವಣೆ ಇಂದು ನಡೆಯಲಿದ್ದು ಒಂದೇ ಹಂತದಲ್ಲಿ ಮತದಾನ ಮುಕ್ತಾಯವಾಗಲಿದೆ. ಹೀಗಾಗಿ ತಮಿಳುನಾಡು ರಾಜ್ಯದಲ್ಲಿ, ಬಿಗಿ ಭದ್ರತೆ ಕೈಗೊಳ್ಳಲಾಗಿದೆ.



Click it and Unblock the Notifications











