Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಈ ಚಿತ್ರದಲ್ಲಿ ಗೂಬೆಯೊಂದು ಅಡಗಿದೆ..! ಹುಡುಕಿ ನೋಡಿ.!
ಇಂಟರ್‌ನೆಟ್‌ನಲ್ಲಿ ಸಾಕಷ್ಟು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ನಮ್ಮ ಮೆದುಳಿಗೆ ಕೆಲಸ ಕೊಡುತ್ತವೆ. ಆಪ್ಟಿಕಲ್ ಇಲ್ಯೂಷನ್ ಒಂದು ಉತ್ತಮ ಮಿದುಳಿನ ವ್ಯಾಯಾಮವಾಗಿದ್ದು ಅದು ನಿಮ್ಮ ಮೆದುಳನ್ನು ಆರೋಗ್ಯಕರವಾಗಿಡಲು ಬಹಳ ಸಹಾಯಕವಾಗಿದೆ.
ಆಪ್ಟಿಕಲ್ ಇಲ್ಯೂಷನ್ ಒಂದು ಉತ್ತಮ ಮಿದುಳಿನ ವ್ಯಾಯಾಮ, ನಿಮ್ಮ ಮೆದುಳಿಗೂ ನೀವು ವ್ಯಾಯಾಮಾ ಮಾಡಿಸಬೇಕು ಎಂದುಕೊಂಡಿದ್ದರೆ ಇಂತಹ ಹಲವು ಚಿತ್ರಗಳನ್ನು ನೀವು ಗಮನಿಸಿ ಅಲ್ಲಿ ಅಡಗಿರುವ ಪ್ರಾಣಿಯನ್ನು ಹುಡುಕುವ ಯತ್ನ ಮಾಡುತ್ತಿರಬೇಕು.

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಿಮ್ಮ ಗಮನ ಮತ್ತು ವೀಕ್ಷಣಾ ಕೌಶಲ್ಯಗಳನ್ನು ಸುಧಾರಿಸುತ್ತದೆ. ಹೀಗಾಗಿ ಇಂತಹ ಚಿತ್ರಗಳಲ್ಲಿ ಕೆಲವು ವಸ್ತುಗಳ ಹುಡುಕಾಟ ನಡೆಸುತ್ತಿದ್ದರೆ ನಿಮ್ಮ ಮೆದುಳಿನ ಕಾರ್ಯ ಚಟುವಟಿಕೆ ವೇಗ ಪಡೆದುಕೊಳ್ಳುತ್ತದೆ.
ದೈಹಿಕವಾಗಿ ನಾವು ಹೇಗೆ ಸದೃಢರಾಗಿರುತ್ತೇವೋ ಅದೇ ರೀತಿ ಮೆದುಳಿಗೂ ಕೆಲಸ ಕೊಟ್ಟು ಆರೋಗ್ಯವಾಗಿಡಲು ಮುಂದಾಗಬೇಕು. ಹೀಗಾಗಿ ಯಾವಾಗಲೂ ಮೊಬೈಲ್‌ನಲ್ಲಿ ಕಾಲ ಕಳೆಯುವ ಬದಲು ಚೆಸ್ ಆಡುವುದು, ಪರಬಂಧ ಬಿಡಿವುದುವು, ಸೊಡಕುಗಳ ಆಡುವ ಅಭ್ಯಾಸ ಬೆಳೆಸಿಕೊಡಿರಬೇಕು.
ಇದೇ ರೀತಿ ಇಲ್ಲೊಂದು ಚಿತ್ರ ಸಹ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದ್ದು, ಚಿತ್ರದಲ್ಲಿರುವ ಗೂಬೆಯನ್ನು ಹುಡುಕಲು ಜನ ಹರಸಾಹಸ ಪಡುತ್ತಿದ್ದಾರೆ. ಹೌದು ಈ ಚಿತ್ರದಲ್ಲಿ ಅಡಗಿರುವ ಗೂಬೆಯೊಂದನ್ನು ಗುರುತಿಸಲು ನಿಮ್ಮಿಂದ ಸಾಧ್ಯವೇ ಎಂಬುದಾಗಿ ಈ ಚಿತ್ರ ಹರಿಬಿಡಲಾಗಿದೆ. ಆದರೆ ಈ ಚಿತ್ರದಲ್ಲಿರುವ ಗೂಬೆಯನ್ನು ಹುಡುಕುವುದು ಅಷ್ಟೊಂದು ಸುಲಭದ ಮಾತಲ್ಲ.
ನಿಮ್ಮ ದೃಷ್ಟಿ ಎಷ್ಟು ಚೆನ್ನಾಗಿದೆ ಎಂಬುದನ್ನು ನೀವು ಪರೀಕ್ಷಿಸಬೇಕಾದರೆ ಈ ಚಿತ್ರದಲ್ಲಿ ನೀವು ಗೂಬೆ ಹುಡುಕುವ ಯತ್ನ ಮಾಡಿ ನೋಡಿ. ನೀವು ಗಮನವಿಟ್ಟು ನೋಡಿದರೆ ಮಾತ್ರ ನಿಮಗೆ ಇಲ್ಲಿ ಗೂಬೆ ಎಲ್ಲಿದೆ ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗುತ್ತೆ.
ಇನ್ನೂ ನೀವು ಈ ಚಿತ್ರದಲ್ಲಿ ಗೂಬೆ ಹುಡುಕಲು ವಿಫಲರಾಗಿದ್ದರೆ ನಾವು ಹೇಳುತ್ತೇವೆ ನೋಡಿ. ಈ ಮರದ ಮಧ್ಯದಲ್ಲಿ ಗೂಬೆಯ ತಲೆ ಮಾತ್ರ ಕಾಣುತ್ತಿದೆ. ಗಮನವಿಟ್ಟು ನೋಡಿದಾಗ ಮಾತ್ರ ಇದು ನಮ್ಮ ಕಣ್ಣಿಗೆ ಬೀಳುತ್ತದೆ. ಮರದ ಬಣ್ಣ ಹಾಗೂ ಗೂಬೆಯ ಬಣ್ಣ ಎರಡೂ ಒಂದೇ ರೀತಿ ಇರುವುದರಿಂದ ಅಷ್ಟು ಸುಲಭವಾಗಿ ಗೂಬೆಯನ್ನು ಹುಡುಕಲು ಇಲ್ಲಿ ಸಾಧ್ಯವಾಗುವುದಿಲ್ಲ.
ಇನ್ನು ಈ ಗೂಬೆಯನ್ನು ಮೊದಲೇ ನೀವು ಹುಡುಕಿದ್ದರೆ ನಿಮ್ಮ ಕಣ್ಣಿನ ದೃಷ್ಟಿಗೊಂದು ಸಲಾಮ್, ಆದರೆ ನೆಟ್ಟಿಗರು ಸಹ ಈ ಗೂಬೆ ಹುಡುಕುವಲ್ಲಿ ಯಡುವಿದ್ದಾರೆ. ಬಹುತೇಕ ಮಂದಿ ಗೂಬೆ ಹುಡುಕುವಲ್ಲಿ ವಿಫಲರಾಗಿದ್ದಾರೆ.
ಇನ್ನು ಈ ಆಪ್ಟಿಕಲ್ ಇಲ್ಯೂಷನ್ ಎಂಬ ಪದ ಎಲ್ಲಿಂದ ಹುಟ್ಟಿಕೊಂಡಿತು ಎಂಬುದನ್ನು ಇಂದು ಕಥೆ ಇದೆ. ಈ ಕಥೆ ಪ್ರಾಚೀನ ಗ್ರೀಸ್ ವರೆಗೂ ನಮ್ಮನ್ನು ಕರೆದೊಯ್ಯುತ್ತದೆ.
ಪುರಾತನ ಗ್ರೀಸ್‌ನಲ್ಲಿ ಚರ್ಚ್, ದೇವಾಲಯದ ಮೇಲಿನ ಗೋಡೆಯಲ್ಲಿ ವೃತ್ತಾಕಾರದ ಗೆರೆಗಳಿರುವ ಜಲೇಬಿಯಂತಹ ರಚನೆ ಇರುವುದನ್ನು ನಾವು ನೋಡಬಹುದು. ಇದು ಸುಂದರವಾಗಿ ಕಂಡರು ಆಪ್ಟಿಕಲ್ ಇಲ್ಯುಷನ್ ರೀತಿ ಕಾಣುತ್ತಿತ್ತು, ಈ ರಚನೆಯ ಕಾರಣದಿಂದಾಗಿ ಇಡೀ ಗೋಡೆ ಹಿಂದಕ್ಕೆ ಸಾಗಿದಂತೆ ಕಾಣುತ್ತಿತ್ತು, ಇದು ವಾಸ್ತುಶಿಲ್ಪದ ಅತ್ಯುತ್ತಮ ಇಂಜಿನಿಯರಿಂಗ್ ಎನಿಸಿಕೊಂಡಿತ್ತು.
ಈ ಆಪ್ಟಿಕಲ್ ಇಲ್ಯುಷನ್‌ಗಳು ಮೆದುಳು ಮತ್ತು ಕಣ್ಣುಗಳ ನಡುವಿನ ಸಾಟಿಯಿಲ್ಲದ ಸಮನ್ವಯದಲ್ಲಿ ಮತ್ತೊಂದು ವ್ಯಾಯಾಮವಾಗುತ್ತವೆ. ಮರದಲ್ಲಿ ಜಾಣತನದಲ್ಲಿ ಮರೆಯಾಗಿರುವ ಗೂಬೆ ಸಹ ನಮ್ಮ ಕಣ್ಣಿಗೂ ಹಾಗೂ ಮೆದುಳಿಗೂ ವ್ಯಾಯಾಮ ನೀಡುತ್ತದೆ. ನೀವು ಸಹ ಗೂಬೆ ಹುಡುಕುವಲ್ಲಿ ಸಮಯ ತೆಗೆದುಕೊಂಡರೆ ಇದನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಗೂಬೆ ಹುಡುಕಲು ಹೇಳಿ.



Click it and Unblock the Notifications

