Latest Updates
-
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ!
ಈ ಚಿತ್ರದಲ್ಲಿ ಅಡಗಿರುವ ಇಲಿಯನ್ನು ಹುಡುಕಲು ನಿಮಗೆ ಸಾಧ್ಯವೇ.?
ಇಂಟರ್‌ನೆಟ್‌ನಲ್ಲಿ ಸಾಕಷ್ಟು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ನಮ್ಮ ಮೆದುಳಿಗೆ ಕೆಲಸ ಕೊಡುತ್ತವೆ. ಮತ್ತೆ ಕೆಲವು ಈ ಚಿತ್ರದಲ್ಲಿರುವ ಪ್ರಾಣಿಯನ್ನು ಗುರುತಿಸುವಂತೆ ಸವಾಲು ಹಾಕುತ್ತವೆ.
ಆಪ್ಟಿಕಲ್ ಇಲ್ಯೂಷನ್ ಒಂದು ಉತ್ತಮ ಮಿದುಳಿನ ವ್ಯಾಯಾಮವಾಗಿದ್ದು ಅದು ನಿಮ್ಮ ಮೆದುಳನ್ನು ಆರೋಗ್ಯಕರವಾಗಿಡಲು ಬಹಳ ಸಹಾಯಕವಾಗಿದೆ. ಇದು ನಿಮ್ಮ ಗಮನ ಮತ್ತು ವೀಕ್ಷಣಾ ಕೌಶಲ್ಯಗಳನ್ನು ಸುಧಾರಿಸುತ್ತದೆ. ಹೀಗಾಗಿ ಇಂತಹ ಚಿತ್ರಗಳಲ್ಲಿ ಕೆಲವು ವಸ್ತುಗಳ ಹುಡುಕಾಟ ನಡೆಸುತ್ತಿದ್ದರೆ ನಿಮ್ಮ ಮೆದುಳಿನ ಕಾರ್ಯ ಚಟುವಟಿಕೆ ವೇಗ ಪಡೆದುಕೊಳ್ಳುತ್ತದೆ.

ಇನ್ನು ಥಟ್ ಅಂತ ನಮ್ಮ ಮುಂದೆ ಒಂದು ಚಿತ್ರವಿಟ್ಟು ಅದರಲ್ಲಿರುವ ಒಂದು ವಸ್ತು ಹುಡುಕಲು ಹೇಳಿದಾಗ ಒಬ್ಬೊಬ್ಬರು ಹುಡುಕ ಬಹುದು ಮತ್ತೆ ಕೆಲವರಿಗೆ ನೀವು ಹೇಳಿದ ವಸ್ತು ಕಾಣಿಸುವುದೇ ಇಲ್ಲ. ಒಂದೇ ಚಿತ್ರವನ್ನು ಹಲವು ಆಯಾಮದಲ್ಲಿ ಆಲೋಚಿಸಲು ಮೆದುಳು ಆರಂಭಿಸುತ್ತದೆ.
ಇದೇ ರೀತಿ ಇಲ್ಲೊಂದು ಚಿತ್ರ ಸಹ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದ್ದು, ಚಿತ್ರದಲ್ಲಿರುವ ಇಲಿಯನ್ನು ಹುಡುಕಲು ಜನ ಹರಸಾಹಸ ಪಡುತ್ತಿದ್ದಾರೆ. ಹೌದು ಈ ಚಿತ್ರದಲ್ಲಿ ಅಡಗಿರುವ ಇಲಿಯೊಂದನ್ನು ಗುರುತಿಸಲು ನಿಮ್ಮಿಂದ ಸಾಧ್ಯವೇ ಎಂಬುದಾಗಿ ಈ ಚಿತ್ರ ಹರಿಬಿಡಲಾಗಿದೆ.
ಆರಂಭದಲ್ಲಿ ಬಹಳ ಸುಲಭದ ಸವಾಲಾಗಿ ಕಂಡರೂ ಇಲಿ ಹುಡುಕಲು ಎಷ್ಟು ಪ್ರಯತ್ನ ಮಾಡಿದರು ಅದು ಸಾಧ್ಯವಾಗುತ್ತಿಲ್ಲ. ಅಂದರೆ ಇಲಿ ಹುಡುಕುವುದು ಕಷ್ಟವಾದ ಕೆಲಸ ಎಂದು ತಿಳಿದ ಮೇಲೆ ಜನರು ತೀರಾ ಗಮನವಿಟ್ಟು ಹುಡುಕಲು ಮುಂದಾಗಿದ್ದಾರೆ. ಇಷ್ಟಾದರೂ ಕೆಲವರಿಗೆ ಈ ಚಿತ್ರದಲ್ಲಿ ಇಲಿ ಹುಡುಕುವುದು ಕಷ್ಟವಾಗಿದೆ. ಜೊತೆಗೆ ಇಲಿ ಎಲ್ಲಿದೆ ಎಂಬ ಗೊಂದಲಕ್ಕೆ ಬಿದ್ದಿದ್ದಾರೆ.
ಚಿತ್ರದಲ್ಲಿ ಹತ್ತಾರು ಪ್ರಾಣಿ, ವಸ್ತು, ಗೊಂಬೆಗಳಿರುವುದನ್ನು ನಾವು ನೋಡಬಹುದು. ಇದು ನಮ್ಮ ಮೆದುಳಿನ ಕ್ರಿಯಾತ್ಮಕ ಹಾರ್ಮೋನ್ ಪ್ರಸಾರಕ್ಕೆ ಕಾರಣವಾಗುತ್ತದೆ. ಇಲ್ಲಿ ನಮ್ಮ ಮೆದುಳು ಹುಡುಕಾಟಕ್ಕಿಳಿಯುತ್ತದೆ. ಜೊತೆಗೆ ಹತ್ತಾರು ವಸ್ತುಗಳ ನಡುವೆ ಇಲಿಯನ್ನು ಹುಡುಕುವುದು ಕಷ್ಟವಾಗುತ್ತದೆ. ಚಿತ್ರದಲ್ಲಿ ಒಂದು ಲೈಬ್ರೆರಿ ರೀತಿಯ ವಿನ್ಯಾಸ ನಾವು ನೋಡಬಹುದು. ಅಲ್ಲಿ ಬೆಕ್ಕು ಸಹ ಇದೆ. ಬೆಕ್ಕಿನ ಮಾಲೀಕರು ಇಲಿಯನ್ನು ಹುಡುಕುವಂತೆ ಬೆಕ್ಕಿಗೆ ಹೇಳುತ್ತಿರುವ ಪ್ರಸಂಗದಂತೆ ಈ ಚಿತ್ರ ತೋರಿಸುತ್ತಿದೆ.
ಈಗ ಈ ಚಿತ್ರ ನೋಡುಗರು ಬೆಕ್ಕಿನ ರೀತಿ ಚಿಂತಿಸಬೇಕಿದೆ. ಈ ಚಿತ್ರದಲ್ಲಿ ನೀವು ಇಲಿಯನ್ನು ಹುಡುಕಲು ಕಷ್ಟಪಡುತ್ತಿದ್ದರೆ ಅದು ಎಲ್ಲಿದೆ ಎಂಬುದನ್ನು ನಾವು ಹೇಳುತ್ತೇವೆ. ಈ ಚಿತ್ರದ ಬಲಭಾಗದ ಮೇಲ್ಭಾಗದಲ್ಲಿರುವ ಚಿಕ್ಕ ದೀಪದ ಪಕ್ಕದಲ್ಲಿ ಬಿಳಿ ಬಣ್ಣದಲ್ಲಿ ಇಲಿಯೊಂದು ಕಾಣಿಸುತ್ತಿದೆ. ಇದನ್ನು ಗಮನವಿಟ್ಟು ನೋಡಿದಾಗ ಮಾತ್ರ ನಮ್ಮ ಕಣ್ಣಿಗೆ ಬೀಳುತ್ತದೆ.
ಇಂತಹ ಚಿತ್ರಗಳು ನಿಮ್ಮ ಮೆದಳಿನ ಕಾರ್ಯಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ. ನಮ್ಮ ದೇಹಕ್ಕೆ ವ್ಯಾಯಾಮ ಎಂಬುದು ಎಷ್ಟು ಮುಖ್ಯವೋ ಮೆದುಳಿಗೂ ಸಹ ವ್ಯಾಯಾಮ ಅಷ್ಟೇ ಮುಖ್ಯ. ಮೆದುಳು ಯೋಚಿಸುವುದನ್ನೇ ಬಿಟ್ಟು ಜಡವಾದರೆ ಬುದ್ಧಿ ಮಂಕಾಗುತ್ತದೆ. ನೀವು ಸಣ್ಣ ಪುಟ್ಟ ಸಮಸ್ಯೆಯಲ್ಲಿ ಸಿಲುಕಿದಾಗ ಮೆದುಳು ಸರಿಯಾದ ಸ್ಪಂದನೆ ಅಥವಾ ಅದರಿಂದ ಹೊರಬರುವ ಮಾರ್ಗ ಹುಡುಕುವಲ್ಲಿ ವಿಫಲವಾಗಬಹುದು. ಹೀಗಾಗಿ ಪಜಲ್‌ಗಳು, ಪದಬಂಧ, ಪ್ರಶ್ನೋತ್ತರ ಮಾಲಿಕೆ, ಬ್ರೈನ್ ಟೀಸರ್‌ನಂತಹ ಕೆಲವು ಚಟುವಟಿಕೆಗೆ ಆಗಾಗ ಒಳಗಾಗುತ್ತಿರಬೇಕು. ಇಂತಹದನ್ನು ಹೆಚ್ಚಾಗಿ ಮಕ್ಕಳಿಗೆ ನೀಡಿದಾಗ ಅವರ ಬುದ್ಧಿ ಬೆಳೆವಣಿಗೆ ಹಾಗೂ ಮೆದುಳಿನ ಕಾರ್ಯ ಚುರುಕಾಗುತ್ತದೆ.
ನಿಮಗೂ ಈ ಚಿತ್ರದಲ್ಲಿ ಇಲಿ ಹುಡುಕಲು ಸಾಧ್ಯವಾಗದಿದ್ದರೆ ಇದನ್ನು ನಿಮ್ಮ ಸ್ನೇಹಿತರಿಗೆ ಹಂಚಿ ಅವರಿಗೂ ಇಲಿ ಹುಡುಕುವಂತೆ ಹೇಳಿ ನೋಡಿ.



Click it and Unblock the Notifications


