Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದುಡ್ಡು ಗಳಿಸೋದು, ಉಳಿಸೋದು ಕಷ್ಟ ಆಗ್ತಿದ್ಯಾ? ಹಾಗಾದ್ರೆ ನಿಮ್ಮ ರಾಶಿಯ ಪ್ರಕಾರ ಈ ರೀತಿ ಮಾಡಿ!
ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಗುರಿ ಇದ್ದೇ ಇರುತ್ತದೆ. ಅದ್ರಲ್ಲಿ ಹೆಚ್ಚಿನವರಿಗೆ ಸಾಕಷ್ಟು ಆಸ್ತಿ-ಅಂತಸ್ತು ಸಂಪಾದನೆ ಮಾಡಬೇಕೆಂಬ ಕನಸು ಇರುತ್ತದೆ. ನಮ್ಮ ಕೈಯಲ್ಲಿ ಸಾಕಷ್ಟು ದುಡ್ಡಿದ್ದಾಗ ಮಾತ್ರ ನಾವು ಅಂದುಕೊಂಡ ಆಸೆಗಳನ್ನೆಲ್ಲಾ ನೆರವೇರಿಸೋದಕ್ಕೆ ಸಾಧ್ಯ. ಹೀಗಾಗಿ ಪ್ರತಿಯೊಬ್ಬರಿಗೂ ದುಡ್ಡು ಮಾಡೋ ಹಠ ಇರುತ್ತೆ.
ಆದರೆ ಹೆಚ್ಚಿನವರಿಗೆ ಎಷ್ಟೇ ಕಷ್ಟ ಪಟ್ಟರೂ ಕೂಡ ಕೈಯಲ್ಲಿ ದುಡ್ಡು ಉಳಿಯೋದಿಲ್ಲ. ಇನ್ನೂ ಕೆಲವರಿಗಂತೂ ಸಂಪಾದನೆಯೇ ಕಷ್ಟವಾಗಿ ಬಿಡುತ್ತದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು. ಆಯಾ ರಾಶಿಯ ಪ್ರಕಾರ ಏನು ಪರಿಹಾರ ಮಾಡಬಹುದು ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರು ಹುಟ್ಟಿನಿಂದಲೇ ನಾಯಕತ್ವದ ಗುಣ ಹೊಂದಿರುತ್ತಾರೆ. ಈ ರಾಶಿಯ ವ್ಯಕ್ತಿಗಳು ಕ್ರಿಯಾತ್ಮಕ ಮತ್ತು ಉದ್ಯಮಶೀಲ ಪರಿಸರದಲ್ಲಿ ಅಭಿವೃದ್ಧಿ ಹೊಂದುತ್ತಾರೆ. ಈ ರಾಶಿಯವರು ಲೆಕ್ಕಾಚಾರ ಮಾಡಿ ವ್ಯವಹರಿಸಬೇಕು. ಮತ್ತು ನೀವು ಯಾವುದಾದರೂ ಕೆಲಸದಲ್ಲಿ ರಿಸ್ಕ್ ತೆಗೆದುಕೊಂಡರೆ ಮಾತ್ರ ಯಶಸ್ವಿಯಾಗೋದಕ್ಕೆ ಸಾಧ್ಯ. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕೆಂದರೆ ಹಣಕಾಸಿನ ನಿರ್ವಹಣೆ ಮಾಡೋದು ತುಂಬಾನೇ ಮುಖ್ಯವಾಗುತ್ತದೆ. ಜೊತೆಗೆ ನಿಮ್ಮ ಖರ್ಚಿನ ಬಗ್ಗೆ ಗಮನ ಕೊಡೋದು ತುಂಬಾನೇ ಮುಖ್ಯವಾಗುತ್ತದೆ.
ವೃಷಭ ರಾಶಿ
ವೃಷಭ ರಾಶಿಯವರು ಸ್ಥಿರತೆ ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಿಕೊಳ್ಳುತ್ತಾರೆ. ಎಷ್ಟೇ ಕಷ್ಟ ಆದ್ರೂ ಕೂಡ ಇವರು ಸಂಪತ್ತನ್ನು ಕಳೆದುಕೊಳ್ಳುವವರಲ್ಲ. ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸೋದಕ್ಕೆ ವೃಷಭ ರಾಶಿಯವರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ನೀವು ಭೌತಿಕ ಆಸ್ತಿ ಮೇಲೆ ಕೇಂದ್ರೀಕರಿಸೋದಕ್ಕೆ ಹೋಗಬೇಡಿ. ಭವಿಷ್ಯಕ್ಕಾಗಿ ಉಳಿತಾಯಕ್ಕೆ ಆದ್ಯತೆ ನೀಡಿದರಷ್ಟೇ ಸಾಕು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಕುತೂಹಲ ಹೆಚ್ಚಾಗಿರುತ್ತದೆ. ಈ ಕುತೂಹಲ ಆರ್ಥಿಕ ಕ್ಷೇತ್ರದಲ್ಲಿ ಅನುಕೂಲಕರವಾಗಿರುತ್ತದೆ. ತಮ್ಮ ಹಣಕಾಸಿನ ಸಾಮರ್ಥ್ಯವನ್ನು ಹೆಚ್ಚಿಸಲು ಮಿಥುನ ರಾಶಿಯವರು ತಮ್ಮ ಹಣಕಾಸಿನ ಜ್ಞಾನ ಮತ್ತು ಕೌಶಲ್ಯಗಳನ್ನು ವಿಸ್ತರಿಸಲು ಹೂಡಿಕೆ ಮಾಡಬೇಕು. ಹಣಕಾಸಿನ ಚಟುವಟಿಕೆ ಬಗ್ಗೆ ಹಠಾತ್ ನಿರ್ಧಾರ ತೆಗೆದುಕೊಳ್ಳೋದಕ್ಕೆ ಹೋಗಬೇಡಿ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಭಾವನಾತ್ಮಕ ಭದ್ರತೆ ಮತ್ತು ಸ್ಥಿರತೆಯನ್ನು ಗೌರವಿಸುತ್ತಾರೆ. ಇವರು ತಮ್ಮ ಭಾವನಾತ್ಮಕ ಯೋಗಕ್ಷೇಮದೊಂದಿಗೆ ಹೊಂದಿಕೊಳ್ಳುವ ಹಣಕಾಸಿನ ಯೋಜನೆಯನ್ನು ರಚಿಸಲು ಆದ್ಯತೆ ನೀಡಬೇಕು. ಹಣ ಇದ್ದಾಗ ಬೇರೆ ಕಡೆ ಎಲ್ಲಿಯಾದರೂ ದೀರ್ಘಾವದಿ ಹೂಡಿಕೆ ಮಾಡಿ. ಇನ್ನೂ ತುರ್ತು ಪರಿಸ್ಥಿತಿಗಳಿಗಾಗಿ ಉಳಿತಾಯ ಮಾಡುವುದನ್ನು ಮರೀಬೇಡಿ. ಪ್ರಮುಖ ಹಣಕಾಸಿನ ನಿರ್ಧಾರಗಳನ್ನು ಮಾಡುವಾಗ ವೃತ್ತಿಪರ ಸಲಹೆಯನ್ನು ಪಡೆಯಬೇಕು.
ಸಿಂಹ ರಾಶಿ
ಸಿಂಹ ರಾಶಿಯವರು ಸ್ವಾಭಾವಿಕ ವರ್ಚಸ್ಸು ಮತ್ತು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಈ ರಾಶಿಯವರು ಉದ್ಯಮಶೀಲತೆ ಅಥವಾ ನಾಯಕತ್ವದ ಗುಣಗಳನ್ನು ಒಳಗೊಂಡಿರುವ ಕಾರಣ ವೃತ್ತಿಜೀವನದಲ್ಲಿ ಅವರು ಉತ್ತಮ ಸ್ಥಾನಕ್ಕೇರುತ್ತಾರೆ.
ಸಿಂಹ ರಾಶಿಯವರು ನಿವೃತ್ತಿಯ ನಂತರ ಉಳಿತಾಯಕ್ಕೆ ಹೆಚ್ಚಿನ ಪ್ರಧಾನ್ಯತೆಯನ್ನು ನೀಡಬೇಕು. ನೀವು ಭವಿಷ್ಯದಲ್ಲಿ ಬಲವಾದ ಆರ್ಥಿಕ ಅಡಿಪಾಯವನ್ನು ನಿರ್ಮಿಸುವತ್ತ ಗಮನಹರಿಸಬೇಕು. ಸಿಂಹ ರಾಶಿಯವರು ಐಷಾರಾಮಿ ವಸ್ತುಗಳ ಮೇಲೆ ಹೆಚ್ಚು ಖರ್ಚು ಮಾಡೋದಕ್ಕೆ ಹೋಗಬೇಡಿ. ಇದರಿಂದ ಸಂಪತ್ತಿನ ಅಸಮತೋಲನ ಉಂಟಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರು ಬಜೆಟ್ ಬಗ್ಗೆ ಪ್ಲಾನ್ ಮಾಡಿಕೊಳ್ಳೋದು ತುಂಬಾನೇ ಮುಖ್ಯವಾಗುತ್ತದೆ. ನಿಮ್ಮ ಖರ್ಚು ಹಾಗೂ ವೆಚ್ಚಗಳ ಬಗ್ಗೆ ಹೆಚ್ಚಿನ ಗಮನ ನೀಡುವುದು ತುಂಬಾನೇ ಮುಖ್ಯವಾಗುತ್ತದೆ. ಜೊತೆಗೆ ಭವಿಷ್ಯದ ಉಳಿತಾಯದ ಬಗ್ಗೆ ಕೂಡ ಗಮನ ನೀಡಿ. ಹೀಗಾಗಿ ನಿಮ್ಮ ಖರ್ಚನ್ನು ಮಿತವ್ಯಯ ಗೊಳಿಸಿ ಪ್ರಸ್ತುತ ಕ್ಷಣವನ್ನು ಆನಂದಿಸಿ. ನೀವು ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ.
ತುಲಾ ರಾಶಿ
ತುಲಾ ರಾಶಿಯವರು ಹಣಕಾಸು ಸೇರಿದಂತೆ ಜೀವನದ ಎಲ್ಲಾ ಅಂಶಗಳಲ್ಲಿ ಸಮತೋಲನ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ತುಲಾ ರಾಶಿಯವರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಜಂಟಿ ಉದ್ಯಮದಲ್ಲಿ ಮನಸ್ಸನ್ನು ಕೇಂದ್ರೀಕರಿಸೋದು ತುಂಬಾನೇ ಮುಖ್ಯವಾಗುತ್ತದೆ. ಇನ್ನೂ ಹಣ ಸಂಪಾದಿಸಲು ಯಾವುದೇ ಕಾರಣಕ್ಕೂ ಅನ್ಯಾಯದ ಮಾರ್ಗವನ್ನು ತುಳಿಯಬೇಡಿ. ತುಲಾ ರಾಶಿಯವರು ಹಣಕಾಸಿನ ವಿಷಯಗಳಿಗೆ ಬಂದಾಗ ಅನಿರ್ದಿಷ್ಟತೆಯನ್ನು ತಪ್ಪಿಸುವುದು ಮತ್ತು ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮುಖ್ಯ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ದೀರ್ಘಾವಧಿಯ ಹಣಕಾಸು ಯೋಜನೆ ಮತ್ತು ಹೂಡಿಕೆ ತಂತ್ರಗಳಲ್ಲಿ ಉತ್ಕೃಷ್ಟರಾಗಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಹಣ ಕಾಸನ್ನು ಕೂಡಿಡೋದನ್ನು ಮರೀಬೇಡಿ. ಹೆಚ್ಚು ಸಾಲ ಮಾಡೋದಕ್ಕೆ ಹೋಗಬೇಡಿ. ಹಾಗೂ ದುಡ್ಡಿನ ವಿಚಾರದಲ್ಲಿ ಕಾರ್ಯ ತಂತ್ರಗಳನ್ನು ರೂಪಿಸುವುದು ತುಂಬಾನೇ ಮುಖ್ಯವಾಗುತ್ತದೆ.
ಧನು ರಾಶಿ
ಧನು ರಾಶಿಯವರು ಹೂಡಿಕೆ ಬಗ್ಗೆ ಗಮನ ನೀಡುವುದು ತುಂಬಾನೇ ಮುಖ್ಯವಾಗುತ್ತದೆ. ನೀವು ಗಮನವಿಟ್ಟು ಹೂಡಿಕೆ ಮಾಡೋದ್ರಿಂದ ಆರ್ಥಿಕವಾಗಿ ನಿಮಗೆ ಉತ್ತಮ ಲಾಭ ಗಳಿಸೋದು ಸಾಧ್ಯವಾಗುತ್ತದೆ. ಆರ್ಥಿಕವಾಗಿ ಯಾವುದೇ ಯೋಜನೆಗಳನ್ನು ರೂಪಿಸಿದರೂ ಕೂಡ ದೀರ್ಘಾವಧಿ ದೃಷ್ಟಿಕೋನವನ್ನು ಇಟ್ಟುಕೊಂಡರೆ ಉತ್ತಮ. ಹಠಾತ್ ವೆಚ್ಚವನ್ನು ತಪ್ಪಿಸಿದರೆ ಉತ್ತಮ.
ಮಕರ ರಾಶಿ
ಮಕರ ರಾಶಿಯವರು ಮಹಾತ್ವಾಕಾಂಕ್ಷೆ ನಿರ್ಣಯವನ್ನು ಹೊಂದಿದ್ದಾರೆ. ಈ ರಾಶಿಯವರು ತಮ್ಮ ಗುರಿಯನ್ನು ಸಾಧಿಸಲು ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಮಕರ ರಾಶಿಯವರು ದೀರ್ಘಾವಧಿಯ ಸಂಪತ್ತು ಕ್ರೋಢೀಕರಣ, ರಿಯಲ್ ಎಸ್ಟೇಟ್ ಅಥವಾ ವ್ಯಾಪಾರ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಕೇಂದ್ರೀಕರಿಸಬೇಕು. ಇನ್ನೂ ಕೆಲಸದ ಕಡೆಗೆ ಹೆಚ್ಚು ಕೇಂದ್ರೀಕರಿಸೋದಕ್ಕೆ ಹೋಗಿ ನಿಮ್ಮ ಸ್ವಯಂ ಆರೈಕೆಗೆ ಆಧ್ಯತೆ ನೀಡೋದನ್ನು ಮರೀಬೇಡಿ.
ಕುಂಭ ರಾಶಿ
ಕುಂಭ ರಾಶಿಯವರು ಮುಂದಾಲೋಚನೆಯುಳ್ಳವರಾಗಿರುತ್ತಾರೆ. ಪರ್ಯಾಯ ಹಣಕಾಸು ತಂತ್ರಗಳನ್ನು ರೂಪಿಸುವುದು ಮತ್ತು ಹೂಡಿಕೆ ಮಾಡೋದ್ರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ದುಡ್ಡಿಗೆ ಸಂಬಂಧಿಸಿದಂತೆ ಯಾವುದೇ ರೀತಿ ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
ಮೀನ ರಾಶಿ
ಮೀನ ರಾಶಿಯವರು ತಮ್ಮನ್ನು ತಾವು ಮೊದಲು ನಂಬಬೇಕು. ತುರ್ತು ಪರಿಸ್ಥಿತಿಗಾಗಿ ಉಳಿತಾಯ ಮಾಡೋದನ್ನು ಮರೀಬೇಡಿ. ಹೂಡಿಕೆ ಮೇಲೆ ಕೇಂದ್ರೀಕರಿಸೋದು ತುಂಬಾನೇ ಮುಖ್ಯವಾಗುತ್ತದೆ. ಇನ್ನೂ ಹಣ ಇದ್ದಾಗ ಐಷಾರಾಮಿ ಜೀವನಕ್ಕಾಗಿ ಖರ್ಚು ಮಾಡೋದಕ್ಕೆ ಹೋಗಬೇಡಿ. ಇದರಿಂದ ನಿಮಗೆ ಸಮಸ್ಯೆ ಉಂಟಾಗಬಹುದು. ಖರ್ಚು ಹಾಗೂ ವೆಚ್ಚಗಳನ್ನು ಸರಿದೂಗಿಸಿಕೊಂಡು ಹೋಗುವುದು ಮುಖ್ಯವಾಗುತ್ತದೆ.



Click it and Unblock the Notifications
