Latest Updates
-
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ
Festivals In November 2025: ನವೆಂಬರ್ ಹಬ್ಬಗಳ ಪಟ್ಟಿ..ಬ್ಯಾಂಕ್ ರಜಾ ದಿನಗಳ ಮಾಹಿತಿ ಇಲ್ಲಿದೆ!
Festivals In November 2025: ಹಿಂದೂ ಕ್ಯಾಲೆಂಡರ್ ಪ್ರಕಾರವಾಗಿ ಪ್ರತಿ ತಿಂಗಳಲ್ಲಿ ಹಲವು ರೀತಿಯ ಹಬ್ಬಗಳು ಬರುವುದು ನೋಡಬಹುದು. ಈಗ ಅಕ್ಟೋಬರ್ ಅಂತ್ಯಗೊಂಡು ನವೆಂಬರ್ ಹತ್ತಿರವಾಗುತ್ತಿದೆ. ನವೆಂಬರ್‌ನಲ್ಲಿ ಹಲವು ರೀತಿಯ ಶುಭ ಯೋಗಗಳು, ಶುಭ ದಿನಗಳು, ಹಬ್ಬಗಳು ಹಾಗೆ ಏಕಾದಶಿ, ವ್ರತಾಚರಣೆಗಳಿವೆ. ಹಾಗೆ ಪೂರ್ಣಿಮೆ, ಅಮಾವಾಸ್ಯೆ ಸೇರಿದಂತೆ ಹಲವು ವಿಚಾರಗಳನ್ನು ನಾವಿಂದು ನೋಡಬಹುದು.
ನವೆಂಬರ್‌ನಲ್ಲಿ ದೇವ ದೀಪಾವಳಿ, ಕಾರ್ತಿಕ ಪೂರ್ಣಿಮೆ, ತುಳಸಿ ವಿವಾಹ, ಏಕಾದಶಿ, ಕಾರ್ತಿಕ ದೀಪೋತ್ಸವಗಳು ನಡೆಯಲಿವೆ. ಹೀಗಾಗಿ ಈ ನವಂಬರ್ ಆಧ್ಯಾತ್ಮಿಕವಾಗಿ ಹಿಂದೂಗಳಿಗೆ ಅತ್ಯಂತ ಶ್ರೇಷ್ಠ ಅಥವಾ ನವೆಂಬರ್‌ನ ಪ್ರಮುಖ ದಿನಗಳು, ಬ್ಯಾಂಕ್ ರಜಾ ದಿನಗಳು ಸೇರಿದಂತೆ ಶುಭ ಮುಹೂರ್ತಗಳ ಕುರಿತಾಗಿ ಇಲ್ಲಿ ತಿಳಿದುಕೊಳ್ಳೋಣ.

ನವೆಂಬರ್ ತಿಂಗಳಿನ ಪ್ರತಿಯೊಂದು ಹಬ್ಬಗಳ ಪಟ್ಟಿ ಇಲ್ಲಿದೆ.
- ನವೆಂಬರ್ 01- ಶನಿವಾರ ಕನ್ನಡ ರಾಜ್ಯೋತ್ಸವ, ದೇವುತ್ಥಾನ ಏಕಾದಶಿ
- ನವೆಂಬರ್ 2- ಭಾನುವಾರ ತುಳಸಿ ವಿವಾಹ
- ನವೆಂಬರ್ 4- ವೈಕುಂಠ ಏಕಾದಶಿ
- ನವೆಂಬರ್ 5- ಬುಧವಾರ ದೇವ್ ದೀಪಾವಳಿ, ಗುರುನಾನಕ್ ಜಯಂತಿ, ಹುಣ್ಣಿಮೆ
- ನವೆಂಬರ್ 8- ಶನಿವಾರ ಕನಕದಾಸ ಜಯಂತಿ, ಸಂಕಷ್ಟ ಚತುರ್ಥಿ,
- ನವೆಂಬರ್ 10- ಸೋಮವಾರ ಕಾರ್ತಿಕ ಸೋಮವಾರ,
- ನವೆಂಬರ್ 14- ಶುಕ್ರವಾರ ಮಕ್ಕಳ ದಿನಾಚರಣೆ, ನೆಹರು ಜನ್ಮದಿನ,
- ನವೆಂಬರ್ 15- ಶನಿವಾರ ಸಂಕಷ್ಟ ಚತುರ್ಥಿ,
- ನವೆಂಬರ್ 17- ಸೋಮವಾರ ಬಸವನಗುಡಿ ಕಡಲೆಕಾಯಿ ಪರಿಷೆ, ಕಾರ್ತಿಕ ಸೋಮವಾರ, ಪ್ರದೋಷ ವ್ರತ
- ನವೆಂಬರ್ 18- ಮಾಸಿಕ ಶಿವರಾತ್ರಿ
- ನವೆಂಬರ್ 20- ಅಮಾವಾಸ್ಯೆ
- ನವೆಂಬರ್ 26- ಸುಬ್ರಮಣ್ಯ ಸೃಷ್ಠಿ
ನವೆಂಬರ್ ತಿಂಗಳ ಬ್ಯಾಂಕ್ ರಜಾ ದಿನಗಳು
ಆಯಾ ರಾಜ್ಯಗಳ ವೇಳಾಪಟ್ಟಿಯ ಅನುಗುಣವಾಗಿ ಬ್ಯಾಂಕ್‌ಗಳು ರಜೆ ನೀಡುತ್ತವೆ. ಈ ನವೆಂಬರ್ ತಿಂಗಳಲ್ಲಿಯೂ ಹಲವು ದಿನಗಳ ಕಾಲ ಬ್ಯಾಂಕಿಂಗ್ ಸೇವೆ ಅಲಭ್ಯವಾಗಬಹುದು. ಆನ್‌ಲೈನ್ ವಹಿವಾಟುಗಳು ಎಂದಿನಂತೆ ಇರಲಿದೆ. ಈ ನವೆಂಬರ್‌ನಲ್ಲಿ ಬರೋಬ್ಬರಿ 11 ದಿನಗಳ ಕಾಲ ಬ್ಯಾಂಕ್ ಮುಚ್ಚಿರಲಿದೆ.
- ನವೆಂಬರ್ 1 ಶನಿವಾರ: ಕನ್ನಡ ರಾಜ್ಯೋತ್ಸವ, ಹರ್ಯಾಣ ದಿನ, ಪುದುಚೇರಿ ದಿನ, ಕುತ್
- ನವೆಂಬರ್ 2 ಭಾನುವಾರ ರಜೆ
- ನವೆಂಬರ್ 5 ಬುಧವಾರ: ಕಾರ್ತಿಕ ಪೂರ್ಣಿಮಾ, ಗುರುನಾನಕ್ ಜಯಂತಿ
- ನವೆಂಬರ್ 7 ಶುಕ್ರವಾರ: ವಂಗಲಾ ಹಬ್ಬ ಮೇಘಾಲಯದಲ್ಲಿ ರಜೆ
- ನವೆಂಬರ್ 8 ಶನಿವಾರ: ಕನಕದಾಸ ಜಯಂತಿ ಹಾಗೂ ಎರಡನೇ ಶನಿವಾರ
- ನವೆಂಬರ್ 9 ಭಾನುವಾರ ರಜೆ
- ನವೆಂಬರ್ 11 ಮಂಗಳವಾರ: ಲಹಬಾಬ್ ಡುಚೆನ್ ಹಬ್ಬ ಸಿಕ್ಕಿಂ ರಾಜ್ಯದಾದ್ಯಂತ ರಜೆ
- ನವೆಂಬರ್ 12 ಭಾನುವಾರ ರಜೆ
- ನವೆಂಬರ್ 22 ನಾಲ್ಕನೇ ಶನಿವಾರ
- ನವೆಂಬರ್ 23 ಭಾನುವಾರ ರಜೆ
- ನವೆಂಬರ್ 30 ಭಾನುವಾರ ರಜೆ
ಕರ್ನಾಟಕದಲ್ಲಿ ಗುರುನಾನಕ್ ಜಯಂತಿಯ ಹಿನ್ನಲೆಯಲ್ಲಿ ಸ್ಥಳೀಯ ರಜೆ ಹಾಗೆ 5 ಭಾನುವಾರ ಮತ್ತು 2 ಶನಿವಾರ ಹೊರತುಪಡಿಸಿ ಉಳಿದಂತೆ ಯಾವುದೇ ದಿನ ಬ್ಯಾಂಕ್ ಬಂದ್ ಆಗಿರುವುದಿಲ್ಲ.



Click it and Unblock the Notifications











