Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಡಿಸೆಂಬರ್‌ನಲ್ಲಿ 5-30ರವರೆಗೆ ಇದೆ ಈ ಪ್ರಮುಖ ಹಬ್ಬಗಳು, ವ್ರತಗಳು
ವರ್ಷದ ಕೊನೆಯ ತಿಂಗಳಿನಲ್ಲಿದ್ದೇವೆ, ಮುಂದಿನ ತಿಂಗಳಿನಿಂದ ಹೊಸ ವರ್ಷ, ಹೊಸ ನಿರೀಕ್ಷೆ. ಈ ಡಿಸೆಂಬರ್ ತಿಂಗಳು ಎಂದರೆ ಅಯ್ಯೋ ಈ ವರ್ಷ ಮುಗಿದೇ ಆಯ್ತಲ್ಲಾ ಒಂದು ಕಡೆ ಅನಿಸುತ್ತಿರುತ್ತದೆ, ಅದರ ಜೊತೆಗೆ ಒಂದಿಷ್ಟು ಸಂಭ್ರಮಗಳಿರುತ್ತದೆ. ಈ ತಿಂಗಳಿನಲ್ಲಿ ಯಾವೆಲ್ಲಾ ಹಬ್ಬಗಳಿವೆ, ವ್ರತಗಳಿವೆ ಎಂಬುವುದನ್ನು ನೋಡೋಣ ಬನ್ನಿ:
ಡಿಸೆಂಬರ್ ತಿಂಗಳಿನಲ್ಲಿ ಉತ್ಪನ್ನ ಏಕಾದಶಿ, ಪ್ರದೋಷ ವ್ರತ, ಮಾಸಿಕ ಶಿವರಾತ್ರಿ, ಕಾರ್ತಿಕ ಅಮವಾಸ್ಯೆ ಇದೆ. ಡಿಸೆಂಬರ್ 2ನೇ ತಿಂಗಳಿನಲ್ಲಿ ಧನು ಸಂಕ್ರಾಂತಿ ಇದೆ. ಸೂರ್ಯ ಧನು ರಾಶಿಗೆ ಸಂಚರಿಸಿದಾಗ ಧನು ಸಂಕ್ರಾಂತಿ ಉಂಟಾಗುತ್ತದೆ. ವಿನಾಯಕ ಚತುರ್ಥಿ, ವಿವಾಹ ಪಂಚಮಿ ಇದೆ. ವಿವಾಹ ಪಂಚಮಿಯಂದು ರಾಮ-ಸೀತೆ ವಿವಾಹವಾದರು ಎಂದು ಹೇಳಲಾಗಿದೆ.

ಈ ತಿಂಗಳಿನಲ್ಲಿ ಸುಬ್ರಹ್ಮಣ್ಯ ಷಷ್ಠಿ ಇದೆ. ಗೀತ ಜಯಂತಿ, ವೈಕುಂಠ ಏಕಾದಶಿ ಇದೆ. ದತ್ತಾತ್ರೇಯ ಜಯಂತಿ, ಅನ್ನಪೂರ್ಣ ಜಯಂತಿಯನ್ನು ಕೂಡ ಈ ತಿಂಗಳಿನಲ್ಲಿ ಆಚರಿಸಲಾಗುವುದು. ಈ ತಿಂಗಳಿನಲ್ಲಿ ಕ್ರಿಸ್ಮಸ್ ಹಬ್ಬವಿದೆ.. ಹೀಗೆ ಡಿಸೆಂಬರ್ ತಿಂಗಳು ಸಂಭ್ರಮದಿಂದ ಕೂಡಿದೆ.
ಕಾಲ ಭೈರವ ಜಯಂತಿ, ಮಂಗಳವಾರ
ಡಿಸೆಂಬರ್ 5ರಂದು ಕಾಲಾಷ್ಟಮಿ, ಕಾಲ ಭೈರವ ಜಯಂತಿಯನ್ನು ಆಚರಿಸಲಾಗುವುದು. ಈ ದಿನ ಮಾಸಿಕ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುವುದು.
ಉತ್ಪನ್ನ ಏಕಾದಶಿ, ಶನಿವಾರ
ಡಿಸೆಂಬರ್ 9ರಂದು ಆಚರಿಸಲಾಗುವುದು. ಈ ದಿನ ಶ್ರೀ ವಿಷ್ಣುವನ್ನು ಆರಾಧಿಸಲಾಗುವುದು. ಶ್ರೀ ವಿಷ್ಣುವನ್ನು ಉಪವಾಸವಿದ್ದು ಆರಾಧನೆ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುವುದು.
ಪ್ರದೋಷ ವ್ರತ, ಭಾನುವಾರ
ಶನಿವಾರ ಶ್ರೀವಿಷ್ಣುವಿನ ಆರಾಧನೆ ಮಾಡಿದರೆ ಡಿಸೆಂಬರ್ 10ರಂದು ಪ್ರದೋಷ ವ್ರತ ಆಚರಿಸಲಾಗುವುದು. ಈ ದಿನ ಶಿವನ ಆರಾಧನೆ ಮಾಡಲಾಗುವುದು.
ಮಾಸಿಕ ಶಿವರಾತ್ರಿ, ಸೋಮವಾರ
ಡಿಸೆಂಬರ್ 11ರಂದು ಮಾಸಿಕ ಶಿವರಾತ್ರಿ ಆಚರಿಸಲಾಗುವುದು. ಶಿವ ಭಕ್ತರು ಈ ದಿನ ಶಿವನ ಮಂತ್ರಗಳನ್ನು ಪಠಿಸುತ್ತಾ ಈ ದಿನ ಆಚರಣೆ ಮಾಡುತ್ತಾರೆ.
ಕಾರ್ತಿಕ ಅಮವಾಸ್ಯೆ
ಡಿಸೆಂಬರ್ 12ರಂದು ಕಾರ್ತಿಕ ಅಮವಾಸ್ಯೆ, ಈ ದಿನ ಕಾರ್ತಿಕ ಮಾಸ ಮುಕ್ತಾಯವಾಗಲಿದೆ
ಡಿಸೆಂಬರ್ 13ರಿಮದ ಮಾರ್ಗಶಿರ ಮಾಸ ಪ್ರಾರಂಭವಾಗುವುದು.
ಧನು ಸಂಕ್ರಾಂತಿ
ಡಿಸೆಂಬರ್ 16ರಂದು ಧನು ಸಂಕ್ರಾಂತಿ ಆಚರಿಸಲಾಗುವುದು. ಇದೇ ದಿನ ವಿನಾಯಕ ಚತುರ್ಥಿ ಕೂಡ ಇದೆ.
ವಿವಾಹ ಪಂಚಮಿ, ಭಾನುವಾರ
ಡಿಸೆಂಬರ್ 17ರಂದು ವಿವಾಹ ಪಂಚಮಿ ಆಚರಿಸಲಾಗುವುದು.
ಸುಬ್ರಹ್ಮಣ್ಯ ಷಷ್ಠಿ
ಡಿಸೆಂಬರ್ 18ರಂದು ಸುಬ್ರಮ್ಮಣ್ಯ ಷಷ್ಠಿ ಆಚರಿಸಲಾಗುವುದು. ಇದೇ ದಿನ ಸ್ಕಂದ ಷಷ್ಠಿ ಆಚರಿಸಲಾಗುವುದು.
ಮಾಸಿಕ ದುರ್ಗಾಷ್ಟಮಿ
ಮಾಸಿಕ ದುರ್ಗಾಷ್ಟಮಿಯನ್ನು ಡಿಸೆಂಬರ್ 20ರಂದು ಆಚರಿಸಲಾಗುವುದು.
ವರ್ಷದ ಅತಿ ಕಡಿಮೆ ದಿನ
ಡಿಸೆಂಬರ್ 22ರಂದು ವರ್ಷದ ಅತಿ ಕಡಿಮೆ ದಿನವಾಗಿದೆ.
ಮೋಕ್ಷದ ಏಕಾದಶಿ, ಶನಿವಾರ
ಡಿಸೆಂಬರ್ 23ರಂದು ವೈಕುಂಠ ಏಕಾದಶಿ, ಮೋಕ್ಷದ ಏಕಾದಶಿ ಆಚರಿಸಲಾಗುವುದು.
ಹನುಮಾನ್ ಜಯಂತಿ
ಡಿಸೆಂಬರ್ 24ರಂದು ಕರ್ನಾಟಕದಲ್ಲಿ ಹನುಮಾನ್ ಜಯಂತಿ ಆಚರಿಸಲಾಗುವುದು.
ರೋಹಿಣಿ ವ್ರತ, ಕ್ರಿಸ್ಮಸ್
ಡಿಸೆಂಬರ್ 25ರಂದು ರೋಹಿಣಿ ವ್ರತವಿದೆ, ಈ ದಿನ ಯೇಸುಕ್ರಿಸ್ತ ಜನಿಸಿದ ದಿನವನ್ನು ಆಚರಿಸಲಾಗುವುದು.
ದತ್ತಾತ್ರೇಯ ಜಯಂತಿ
ಡಿಸೆಂಬರ್ 26ರಂದು ಆಚರಿಸಲಾಗುವುದು. ಮಾರ್ಗಶಿರ ಮಾಸದ ಹುಣ್ಣಿಮೆಯಂದು ಭಗವಾನ್ ದತ್ತಾತ್ರೇಯರ ಜನ್ಮ ದಿನವನ್ನು ದತ್ತಾತ್ರೇಯ ಜಯಂತಿ ಎಂದು ಆಚರಿಸಲಾಗುವುದು. ಇದೇ ದಿನ ಅನ್ನಪೂರ್ಣ ದೇವಿಯ ಜನ್ಮ ದಿನವನ್ನು ಆಚರಿಸಲಾಗುವುದು.
ಮಂಡಲ ಪೂಜೆ
ಡಿಸೆಂಬರ್ 27ರಂದು ಕೇರಳದ ಶಬರಿ ಮಲೆ ಬೆಟ್ಟದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೆ ನಡೆಯಲಿದೆ. ಈ ದಿನ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
ಆಕ್ರುತ ಸಂಕಷ್ಠಿ ಚತುರ್ಥಿ
ಡಿಸೆಂಬರ್ 30ರಂದು ಗಣಪತಿಯ ಆರಾಧನೆಗೆ ಶ್ರೇಷ್ಠವಾದ ದಿನವಾಗಿದೆ.



Click it and Unblock the Notifications
