Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಫೆಂಗ್ ಶುಯಿ ಶಾಸ್ತ್ರದ ಪ್ರಕಾರ ಮಕ್ಕಳು ಪರೀಕ್ಷೇಯಲ್ಲಿ ಯಶಸ್ವಿಯಾಗಲು ಇಲ್ಲಿದೆ ಟಿಪ್ಸ್!
ಮಕ್ಕಳು ಚೆನ್ನಾಗಿ ಓದಬೇಕು ಉತ್ತಮ ಅಂಕಗಳನ್ನು ತೆಗೆಯಬೇಕು ಅನ್ನೋ ಆಸೆ ಸಾಮಾನ್ಯವಾಗಿ ಎಲ್ಲಾ ಪೋಷಕರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಪೋಷಕರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡ್ತಾರೆ. ಕೆಲವೊಂದು ಸಲ ಈ ಪ್ರಯತ್ನದಲ್ಲಿ ಗೆದ್ದರೆ ಇನ್ನೂ ಕೆಲವು ಸಲ ಈ ಪ್ರಯತ್ನದಲ್ಲಿ ಸೋತು ಹೋಗುತ್ತಾರೆ.

ವಾಸ್ತು ಸಮಸ್ಯೆ ಇದ್ದಾಗ ಕೂಡ ಈ ರೀತಿ ಆಗುವುದು ಸಾಮಾನ್ಯ. ಫೆಂಗ್ ಶುಯಿ ಚೀನಿ ಶಾಸ್ತ್ರದ ಬಗ್ಗೆ ನಿಮಗೆಲ್ಲಾ ಗೊತ್ತಿರಬಹುದು. ಫೆಂಗ್ ಶುಯಿ ಚೀನಿ ಶಾಸ್ತ್ರದ ಮಕ್ಕಳು ಚೆನ್ನಾಗಿ ಓದಿ ಪರೀಕ್ಷೇಯಲ್ಲಿ ಸಕ್ಸಸ್ ಆಗೋದಕ್ಕೂ ಕೂಡ ಕೆಲವೊಂದು ಟಿಪ್ಸ್ ಗಳನ್ನು ನೀಡಲಾಗಿದೆ. ಅಷ್ಟಕ್ಕು ಆ ಟಿಪ್ಸ್ ಯಾವುದು ಅನ್ನೋದನ್ನು ತಿಳಿಯೋಣ.
1. ಮನೆಯಲ್ಲಿ ಮಕ್ಕಳಿಗೆ ಚೆನ್ನಾಗಿ ಓದಲು ಹಾಗೂ ಒಳ್ಳೆಯ ಜ್ಞಾನವನ್ನು ಸಂಪಾದಿಸಲು ಒಂದು ಉತ್ತಮವಾದ ಸ್ಥಳವನ್ನು ಆಯ್ದುಕೊಳ್ಳಿ.
2. ಮಕ್ಕಳು ಮನೆಯಲ್ಲಿ ಓದೋದಕ್ಕೆ ಕುಳಿತುಕೊಳ್ಳುವಾಗ ಎಲ್ಲೆಂದರಲ್ಲಿ ಓದಲು ಕುಳಿತು ಬಿಡುತ್ತಾರೆ. ಡೈನಿಂಗ್ ಟೇಬಲ್, ಮಂಚದ ಮೇಲೆ, ದೂರದರ್ಶನದ ಮುಂದೆ ಕುಳಿತು ಓದುತ್ತಾರೆ. ಇದಕ್ಕೆ ಅವಕಾಶ ಕೊಡಬೇಡಿ. ಅವರಿಗಾಗಿ ಮನೆಯಲ್ಲಿ ಸ್ಟಡಿ ರೂಂ ಒಂದನ್ನು ಸಿದ್ಧಪಡಿಸಿ. ಅದು ಯಾವಾಗಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಇದರ ಜೊತೆಗೆ ಗಾಳಿ, ಬೆಳಕು ಚೆನ್ನಾಗಿ ಬರುವಂತೆ ನೋಡಿಕೊಳ್ಳಿ.
3. ಸ್ಟಡಿ ರೂಂ ನಲ್ಲಿಯೂ ಕೂಡ ಮಕ್ಕಳು ಓದಲು ಕುಳಿತುಕೊಳ್ಳುವ ಜಾಗದ ಬಗ್ಗೆ ಸರಿಯಾಗಿ ಗಮನ ಕೊಡಿ. ಅವರ ಬೆನ್ನಿನ ಹಿಂದೆ ಗೋಡೆ ಇರುವಂತೆ ಕುಳಿತುಕೊಳ್ಳಬೇಕು. ಇದು ನಿಮಗೆ ಬಲವಾದ ಬೆಂಬಲವನ್ನು ನೀಡುತ್ತದೆ.
4. ಪೀರೋಪಕರಣಗಳಿಂದ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಹಾನಿಯಾಗುತ್ತದೆ. ಅದನ್ನು ತಪ್ಪಿಸುವುದು ತುಂಬಾನೇ ಮುಖ್ಯ. ನಿಮ್ಮ ಮಗುವಿನ ಸ್ಟಡಿ ರೂಂ ನಲ್ಲಿ ಪೀಠೋಪಕಣಗಳು ಇದ್ದು, ಅದರ ಚೂಪಾದ ತುದಿಗಳು ಮಕ್ಕಳಿಗೆ ತಾಗದಂತೆ ಜಾಗರೂಕತೆ ವಹಿಸಿ. ಅವುಗಳು ನಿಮ್ಮ ಮಕ್ಕಳಿಗೆ ತಾಗದಂತೆ ಅದರ ಮೇಲೆ ಬಟ್ಟೆ ಅಥವಾ ಬೇರ್ಯಾವುದಾದರೂ ವಸ್ತುಗಳನ್ನು ಇಡಿ.
5. ಕೆಲವೊಂದು ಸಲ ಪುಸ್ತಕ ಚೆನ್ನಾಗಿ ಇದ್ದಾಗ ಮಾತ್ರ ನಮಗೆ ಓದೋದಕ್ಕೆ ಮನಸ್ಸಾಗುತ್ತದೆ. ಹೀಗಾಗಿ ಪುಸ್ತಕಕ್ಕೆ ಚೆನ್ನಾಗಿ ಬೈಂಡ್ ಮಾಡಿ, ಲೇಬಲ್ ಗಳನ್ನು ಅಂಟಿಸಿ. ಕೆಂಪು ಬಣ್ಣದಲ್ಲಿದ್ದರೆ ಮತ್ತೂ ಒಳ್ಳೆಯದು. ನೋಡಲೂ ಕೂಡ ಆಕರ್ಷಕವಾಗಿ ಇರಬೇಕು.
6. ಫೆಂಗ್ ಶುಯಿ ಶಾಸ್ತ್ರದ ಪ್ರಕಾರ ಮಕ್ಕಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣವಾಗಬೇಕೆಂದರೆ ಪುಸ್ತಕದ ಫೋಲ್ಡರ್‌ಗಳ ಮುಂಭಾಗ ಮತ್ತು ಹಿಂಭಾಗದ ಕವರ್‌ಗಳ ಒಳಗೆ ಕೆಂಪು ಕಾಗದವನ್ನು ಇರಿಸಿ. ಇನ್ನೂ ಪುಸ್ತಕದ ಒಳಗಿನ ಕವರ್ ಗಳ ಮೇಲೆ 9 ಸಣ್ಣ ಸುತ್ತಿನ ಕನ್ನಡಿಗಳನ್ನು ಲಗತ್ತಿಸಿ. ಇದರಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ.
7. ಮಕ್ಕಳನ್ನು ಪ್ರೋತ್ಸಾಹಿಸಲು ಅವರು ಶೈಕ್ಷಣಿಕ, ಕ್ರೀಡೆ ಅಥವಾ ಬೇರೆ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಿದಾಗ ಪ್ರಶಸ್ತಿ ಪತ್ರಗಳನ್ನು ಫ್ರೇಮ್ ಹಾಕಿ ಓದುವ ಕೋಣೆಯಲ್ಲಿ ಇರಿಸಿ. ಇನ್ನೂ ಅವರ ಗೆದ್ದ ಕಪ್ ಅಥವಾ ಶೀಲ್ಡ್ ಗಳನ್ನು ಇರಿಸಲು ಒಂದು ಶೆಲ್ಫ್ ಅನ್ನು ರಚಿಸಿ. ಇದರಿಂದ ಅವರನ್ನು ಮತ್ತಷ್ಟು ಪ್ರೇರೇಪಿಸಿದಂತೆ ಆಗುತ್ತದೆ.
8. ಮಕ್ಕಳ ಸ್ಟಡಿ ರೂಂ ನಲ್ಲಿ ಎರಡು ರೀತಿಯ ಬಲ್ಬ್ ಗಳನ್ನು ಅಳವಡಿಸಿ. ಒಂದು ಸಾಮಾನ್ಯ ಬಲ್ಬ್ ಹಾಗೂ ಮತ್ತೊಂದು ಓದಲು ಅನುಕೂಲಕರವಾದ ಬಲ್ಬ್. ಇದರಿಂದ ಅವರ ದೃಷ್ಟಿಗೆ ಯಾವುದೇ ರೀತಿ ತೊಂದರೆ ಆಗೋದಿಲ್ಲ.
9. ಸ್ಟಡಿ ರೂಂ ನ ಇಂಟಿರಿಯರ್ ಚೆನ್ನಾಗಿ ಇರುವಂತೆ ನೋಡಿಕೊಳ್ಳಿ. ಮಕ್ಕಳಿಗೆ ಇಷ್ಟವಾಗುವ ಬಣ್ಣದ ಪೈಂಟ್ ಅನ್ನು ಹಚ್ಚಿ. ಜೊತೆಗೆ ಕಾಮನ ಬಿಲ್ಲು, ನಕ್ಷತ್ರಗಳಂತಹ ಚಿತ್ರಗಳು ಮಕ್ಕಳ ಕೋಣೆಯಲ್ಲಿ ಇರಲಿ.
ಕೆಲವು ಮಕ್ಕಳಿಗೆ ಓದಿನಲ್ಲಿ ಆಸಕ್ತಿಯೇ ಇರೋದಿಲ್ಲ. ಆದರೆ ಈ ರೀತಿ ಫೆಂಗ್ ಶುಯಿ ಟಿಪ್ಸ್ ಫಾಲೋ ಮಾಡೋದ್ರಿಂದ ಅವರ ಬದುಕಿನಲ್ಲಿ ಎಲ್ಲವೂ ಒಳ್ಳೆಯದಾಗುತ್ತಂತೆ.



Click it and Unblock the Notifications