Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಫೆಂಗ್ ಶುಯಿ ಶಾಸ್ತ್ರ ಪ್ರಕಾರ ಈ ವಸ್ತುಗಳು ಮನೆಯಲ್ಲಿದ್ದರೆ ಸುಖ, ಸಮೃದ್ಧಿ ಹೆಚ್ಚಾಗುತ್ತಂತೆ!
ಚೀನಿ ಶಾಸ್ತ್ರ ಫೆಂಗ್ ಶುಯಿ ಏನು ಹೇಳುತ್ತೆ ಅಂದ್ರೆ ಮನೆಯಲ್ಲಿ ಸುಖ, ಸಮೃದ್ಧಿ ಹೆಚ್ಚಾಗಿ ಋಣಾತ್ಮಕ ಶಕ್ತಿ ಮನೆಯಿಂದ ಹೊರ ಹೋಗಬೇಕಂದ್ರೆ ಕೆಲವೊಂದು ವಸ್ತುಗಳು ನಮ್ಮ ಮನೆಯಲ್ಲಿ ಇರಬೇಕಂತೆ. ಆ ವಸ್ತುಗಳು ನಮ್ಮ ಮನೆಯಲ್ಲಿದ್ದರೆ ಋಣಾತ್ಮಕ ಶಕ್ತಿಯನ್ನು ಮನೆಯ ಒಳಗೆ ಬಾರದಂತೆ ತಡೆಯುತ್ತಂತೆ. ಅಷ್ಟಕ್ಕು ಸುಖ, ಸಮೃದ್ಧಿ ಹೆಚ್ಚಾಗಲು ಮನೆಯಲ್ಲಿ ಇಟ್ಟುಕೊಳ್ಳಬೇಕಾದ ವಸ್ತುಗಳು ಯಾವುದು ಅನ್ನೋದನ್ನು ತಿಳಿಯೋಣ.
1. ಬಿದಿರಿನ ಸಸ್ಯ
ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವ 2, 3 ಮತ್ತು 4 ಪದರಗಳಲ್ಲಿ ಲಭ್ಯವಾಗುವ ಬಿದಿರಿನ ಸಸ್ಯವನ್ನು ಮನೆಯಲ್ಲಿ ತಂದಿಡಬಹುದು. ಫೆಂಗ್ ಶೂಯಿ ಶಾಸ್ತ್ರದ ಪ್ರಕಾರ ಈ ಬಿದಿರಿನ ಸಸ್ಯ ಮನೆಯಲ್ಲಿದ್ದರೆ ಸಂಪತ್ತು ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ. ಈ ಅದೃಷ್ಟದ ಬಿದಿರಿನ ಸಸ್ಯವನ್ನು ನೀವು ಸುಲಭವಾಗಿ ಆರೈಕೆ ಮಾಡಬಹುದು. ಇದು ಯಾವುದೇ ಬೆಳಕಿನಲ್ಲಿ ಬದುಕಬಲ್ಲದು. ಈ ಸಸ್ಯವು ನಿಮ್ಮ ಮನೆಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ

2. ಆಮೆ
ಫೆಂಗ್ ಶೂಯಿ ಆಮೆಯನ್ನು ಮನೆಯಲ್ಲಿ ತಂದಿಟ್ಟರೆ ಅದೃಷ್ಟ ಹೆಚ್ಚಾಗುತ್ತಂತೆ. ಆಮೆಯು ದೀರ್ಘಾಯುಷ್ಯವನ್ನು ಸೂಚಿಸುತ್ತದೆ. ಗಾಜು, ಲೋಹಗಳು, ಮಣ್ಣು ಮತ್ತು ಹರಳುಗಳು ಮತ್ತು ಮರದಿಂದ ಮಾಡಲ್ಪಟ್ಟಿರುವ ಆಮೆಯನ್ನು ಕೂಡ ನೀವು ಮನೆಯಲ್ಲಿ ಇಟ್ಟುಕೊಳ್ಳಬಹುದು. ಫೆಂಗ್ ಶೂಯಿ ಆಮೆಗಳನ್ನು ನಿಮ್ಮ ಕಚೇರಿ ಅಥವಾ ಮನೆಯಲ್ಲಿ ಸರಿಯಾದ ಸ್ಥಳಗಳಲ್ಲಿ ಇಡಬೇಕು. ನಿಮ್ಮ ಉದ್ಯೋಗ, ಅದೃಷ್ಟ ಮತ್ತು ಸಮೃದ್ಧಿ ದೃಷ್ಟಿಯಿಂದ ಫೆಂಗ್ ಶುಯಿ ಆಮೆಯನ್ನು ಇಟ್ಟುಕೊಂಡರೆ ಉತ್ತಮ.
3. ಮೂರು ಕಾಲಿನ ಕಪ್ಪೆ
ಫೆಂಗ್ ಶೂಯಿ ಶಾಸ್ತ್ರದ ಪ್ರಕಾರ ಮೂರು ಕಾಲಿನ ಕಪ್ಪೆಯನ್ನು ಮನೆಯಲ್ಲಿಟ್ಟರೆ ಇದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತಂತೆ. ಇದು ನಿಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಗೆ ಯಾವುದೇ ರೀತಿ ಧಕ್ಕೆ ಬಾರದಂತೆ ಕಾಪಾಡುತ್ತಂತೆ. ಇದು ಹಣದ ರಕ್ಷಕನಾಗಿ ಕಾರ್ಯ ನಿರ್ವಹಿಸುತ್ತದೆ. ಈ ವಿಶೇಷ ವಸ್ತುವನ್ನು ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿಯೂ ನೀಡಬಹುದು.
4. ಲಾಫಿಂಗ್ ಬುದ್ಧ
ಲಾಫಿಂಗ್ ಬುದ್ದ ನೋಡೋದಕ್ಕೆ ತುಂಬಾನೇ ಚೆಂದ ಹಾಗೂ ಇದು ನಿಮ್ಮ ಮನೆಯ ಅಂದವನ್ನು ಮತ್ತಷ್ಟು ಹೆಚ್ಚು ಮಾಡುತ್ತೆ. ಫೆಂಗ್ ಶುಯಿ ಪ್ರಕಾರ ಲಾಫಿಂಗ್ ಬುದ್ಧ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಈ ಲಾಫಿಂಗ್ ಬುದ್ಧವನ್ನು ನಿಮ್ಮ ಕಛೇರಿ ಸ್ಥಳಗಳು, ಅಂಗಡಿಗಳು ಇತ್ಯಾದಿಗಳಲ್ಲಿ ಸುಂದರವಾದ ಅಲಂಕಾರಿಕ ವಸ್ತುವಾಗಿ ಇಡಬಹುದು.
5. ವಿಂಡ್ ಚೈಮ್ (ಗಾಳಿ ಸಾಲುಗಂಟೆ)
ವಿಂಡ್ ಚೈಮ್ ನಿಮ್ಮ ಮನೆಗೆ ಆಹ್ಲಾದಕರ ನೋಟವನ್ನು ನೀಡುತ್ತದೆ. ಕನ್ನಡದಲ್ಲಿ ಇದನ್ನು ಗಾಳಿ ಗಂಟೆ ಎಂತಲೂ ಕರೆಯಲಾಗುತ್ತದೆ. ಇದನ್ನು ಮನೆಯಲ್ಲಿಟ್ಟರೆ ಸುಂದರವಾಗಿ ಕಾಣುವುದು ಮಾತ್ರವಲ್ಲ, ನಿಮ್ಮ ಮನೆಯಲ್ಲಿ ಏನಾದರೂ ಆರ್ಥಿಕ ನಷ್ಟ ಸಂಭವಿಸಿದ್ದರೆ ಆ ಪರಿಸ್ಥಿತಿಯಿಂದ ನಿಮಗೆ ಹೊರ ಬರಲು ಸಹಾಯ ಮಾಡುತ್ತದೆ.
6. ಸ್ಫಟಿಕದ ಕಮಲ (Crystal lotus)
ಫೆಂಗ್ ಶೂಯಿ ಪ್ರಕಾರ ಸ್ಫಟಿಕದ ಕಮಲ ದಂಪತಿಗಳ ಮಧ್ಯೆ ರೋಮಾನ್ಸ್ ಉತ್ತವಾಗಿರಲು ಸಹಾಯ ಮಾಡುತ್ತಂತೆ. ಅದೃಷ್ಟದ ಜೊತೆಗೆ ನಿಮ್ಮ ಮನೆಯ ವಾಸ್ತುವನ್ನು ಸರಿಪಡಿಸಲು ಕೂಡ ಇದು ಸಹಾಯ ಮಾಡುತ್ತಂತೆ. ಮನೆಯಲ್ಲಿ ಆರ್ಥಿಕ ಸಮಸ್ಯೆ ಕೂಡ ಇದರಿಂದ ನಿವಾರಣೆಯಾಗುತ್ತಂತೆ.
7. ಮ್ಯಾಂಡರಿನ್ ಬಾತುಕೋಳಿ
ಮ್ಯಾಂಡರಿನ್ ಬಾತುಕೋಳಿಗಳು ಫೆಂಗ್ ಶೂಯಿಯ ಅತ್ಯಂತ ಜನಪ್ರಿಯ ಪ್ರೀತಿಯ ಸಂಕೇತವಾಗಿದೆ. ಜೀವನದಲ್ಲಿ ನಿಜವಾದ ಪ್ರೀತಿಯನ್ನು ಹುಡುಕುತ್ತಿರುವವರಿಗೆ ನೀವು ನೀಡುವ ಅತ್ಯುತ್ತಮ ಉಡುಗೊರೆಯಾಗಿದೆ. ಇದರಿಂದ ದಂಪತಿಗಳ ಮಧ್ಯೆ ಪ್ರೀತಿ ಹಾಗೂ ಹೊಂದಾಣಿಕೆ ಉತ್ತಮವಾಗುತ್ತಂತೆ. ಹೀಗಾಗಿ ಯಾವಾಗಲೂ ಅವುಗಳನ್ನು ನೀವು ಜೋಡಿಯಾಗಿ ಇರಿಸಬೇಕು. ಮತ್ತು ಯಾರಿಗಾದರೂ ಉಡುಗೊರೆಯಾಗಿ ನೀಡಬಹುದು.
8. ಡ್ರೀಮ್ ಕ್ಯಾಚರ್
ಡ್ರೀಮ್ ಕ್ಯಾಚರ್ ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಇದ್ದೇ ಇರುತ್ತದೆ. ಇದು ಅತ್ಯಂತ ಜನಪ್ರಿಯ ಫೆಂಗ್ ಶೂಯಿ ವಸ್ತು ಆಗಿದೆ. ಇದನ್ನು ಮನೆಯಲ್ಲಿ ಇಡೋದ್ರಿಂದ ಕೆಟ್ಟ ಕನಸುಗಳು ದೂರವಾಗುತ್ತಂತೆ. ಈ ಡ್ರೀಮ್ ಕ್ಯಾಚರ್ ಅನೇಕ ಗಾತ್ರಗಳಲ್ಲಿ ಇರುತ್ತದೆ. ಇದನ್ನು ಮಲಗುವ ಕೋಣೆಯಲ್ಲಿ ಸುಂದರವಾದ ಅಲಂಕಾರಿಕ ಭಾಗವಾಗಿಯೂ ಬಳಸಬಹುದು. ನಿಮ್ಮ ಪ್ರೀತಿಪಾತ್ರರಿಗೆ ನೀವು ಈ ಫೆಂಗ್ ಶೂಯಿ ವಸ್ತುವನ್ನು ಉಡುಗೊರೆಯಾಗಿ ನೀಡಬಹುದು ಮತ್ತು ಅವರ ಜೀವನದಲ್ಲಿ ಉತ್ತಮ ಬದಲಾವಣೆಯನ್ನು ನೋಡಬಹುದು.
9. ಸ್ಫಟಿಕದ ಗೋಳ
ಫೆಂಗ್ ಶೂಯಿ ಶಾಸ್ತ್ರದ ಪ್ರಕಾರ ಈ ಸ್ಫಟಿಕದ ಗೋಳ ನಿಮ್ಮ ವ್ಯಾಪಾರದಲ್ಲಿ ಅದೃಷ್ಟವನ್ನು ಹೆಚ್ಚು ಮಾಡುತ್ತಂತೆ. ಹಾಗೂ ಇದು ನಿಮಗೆ ಯಶಸ್ಸನ್ನು ತಂದುಕೊಡುತ್ತಂತೆ. ನಿಮ್ಮ ವೃತ್ತಿ ಜೀವನದಲ್ಲಿ ಬಹುದೊಡ್ಡ ಬದಲಾವಣೆಯನ್ನು ತರೋದಕ್ಕೆ ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಈ ಸ್ಫಟಿಕದ ಗೋಳವನ್ನು ನಿಮ್ಮ ಆಫಿಸ್ ನ ಟೇಬಲ್ ನ ಈಶಾನ್ಯ ದಿಕ್ಕಿನಲ್ಲಿ ಇಡಬಹುದು.
10. ಡ್ರ್ಯಾಗನ್
ಫೆಂಗ್ ಶೂಯಿ ಶಾಸ್ತ್ರದ ಪ್ರಕಾರ ಡ್ರ್ಯಾಗನ್ ಯಶಸ್ಸು, ಸೌಂದರ್ಯ, ಶಕ್ತಿ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ. ಇದು ನಮಗಾಗುವ ನಷ್ಟ ಮತ್ತು ಋಣಾತ್ಮಕ ಶಕ್ತಿಯನ್ನು ತಡೆ ಹಿಡಿಯುತ್ತಂತೆ. ಡ್ರ್ಯಾಗನ್ ಅನ್ನು ನಿಮ್ಮ ಬಾಗಿಲಿಗೆ ಎದುರಾಗಿ ಇರಿಸುವುದರಿಂದ ಮನೆಯ ಸಮೃದ್ಧಿ ಹೆಚ್ಚಾಗುತ್ತಂತೆ.
ಫೆಂಗ್ ಶುಯಿ ಪ್ರಕಾರ ಒಟ್ಟು 17 ವಸ್ತುಗಳಿದ್ದು, ಇದರಲ್ಲಿ ಯಾವುದಾದರೂ ಒಂದನ್ನು ಮನೆ ಅಥವಾ ಆಫಿಸ್ ನಲ್ಲಿ ಇರಿಸೋದ್ರಿಂದ ಅದೃಷ್ಟ ಹೆಚ್ಚಾಗುತ್ತೆ ಎಂದು ನಂಬಲಾಗಿದೆ.



Click it and Unblock the Notifications




