Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಫೆಂಗ್‌ಶುಯಿ ಶಾಸ್ತ್ರ ಪ್ರಕಾರ ಈ 10 ಪ್ರಾಣಿಗಳ ಮೂರ್ತಿ ಮನೆಯಲ್ಲಿದ್ದರೆ ಸಂಪತ್ತು ವೃದ್ಧಿಸುವುದು!
ಫೆಂಗ್‌ಶುಯಿ ಶಾಸ್ತ್ರದ ಬಗ್ಗೆ ನಿಮಗೆಲ್ಲಾ ಖಂಡಿತ ಗೊತ್ತಿರುತ್ತೆ. ಫೆಂಗ್‌ಶುಯಿ ಶಾಸ್ತ್ರ ಏನು ಹೇಳುತ್ತೆ ಅಂದ್ರೆ ಕೆಲವೊಂದು ಪ್ರಾಣಿಗಳ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದಾಗುತ್ತಂತೆ. ಇದನ್ನು ಇಟ್ಟುಕೊಳ್ಳೋದ್ರಿಂದ ನಿಮ್ಮ ಮನೆಯಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ತುಂಬಿಕೊಂಡಿರುತ್ತಂತೆ. ಅಷ್ಟಕ್ಕು ಫೆಂಗ್‌ಶುಯಿ ಶಾಸ್ತ್ರದ ಪ್ರಕಾರ ಯಾವ ಹತ್ತು ಪ್ರಾಣಿಗಳ ಮೂರ್ತಿ ನಮ್ಮ ಮನೆಯಲ್ಲಿ ಇರಬೇಕು ಅನ್ನೋದನ್ನು ತಿಳಿಯೋಣ.
ಚೈನಾ ಸಂಸ್ಕೃತಿಯ ಪ್ರಕಾರ ಫೆಂಗ್‌ಶುಯಿ ಎಂದರೆ ಇದು ಕೆಲವೊಂದು ಪ್ರಾಣಿಗಳ ಚಿಹ್ನೆಯಾಗಿದೆ. ಇದನ್ನೇ ಫೆಂಗ್‌ಶುಯಿ ಎಂದು ಕರೆಯಲಾಗುತ್ತದೆ. ಇವುಗಳನ್ನು ನೀವು ನಿಮ್ಮ ಮನೆಯ ಸರಿಯಾದ ಜಾಗದಲ್ಲಿ ಇರಿಸಿದರೆ ಇದು ನಿಮಗೆ ಅದೃಷ್ಟವನ್ನು ಹೊತ್ತು ತರುತ್ತಂತೆ. ಹಾಗೂ ನಿಮ್ಮ ಮನೆಯಲ್ಲಿದ್ದ ನಕಾರಾತ್ಮಕ ಶಕ್ತಿಯನ್ನು ತೊಲಗಿಸಿ ಧನಾತ್ಮಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತಂತೆ.

1. ಬಾವಲಿ(Bat)
ಚೀನೀ ಭಾಷೆಯಲ್ಲಿ 'ಬ್ಯಾಟ್' ಎಂಬ ಪದದ ಅರ್ಥ ಸಮೃದ್ಧಿ ಎಂದಾಗುತ್ತದೆ. ಇದನ್ನು ಸಂಪತ್ತಿನ ಪುರಾತನ ಸಂಕೇತ ಅಂತಲೂ ಕರೆಯಲಾಗುತ್ತದೆ. ಇದನ್ನು ನಿಮ್ಮ ಮನೆಯ ಆಗ್ನೇಯ ಭಾಗದಲ್ಲಿ ಇಟ್ಟುಕೊಂಡರೆ ನಿಮ್ಮ ಮನೆಯಲ್ಲಿ ಸಂಪತ್ತು ಹಾಗೂ ಕ್ಷೇಮ ಹೆಚ್ಚಾಗುತ್ತಂತೆ.
2. ಡ್ರ್ಯಾಗನ್
ಫೆಂಗ್‌ಶುಯಿ ಶಾಸ್ತ್ರದ ಪ್ರಕಾರ ಮನೆಯಲ್ಲಿ ಡ್ರ್ಯಾಗನ್ ಮೂರ್ತಿಯನ್ನು ಇಟ್ಟುಕೊಳ್ಳುವುದು ತುಂಬಾನೇ ಒಳ್ಳೆಯದು. ಇದು ನಿಮ್ಮ ಜೀವನಕ್ಕೆ ಶಕ್ತಿಯನ್ನು ತರುತ್ತಂತೆ. ಡ್ರ್ಯಾಗನ್ ಮೂರ್ತಿಯನ್ನು ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿ ಇರಿಸಿದರೆ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತಂತೆ. ಅಷ್ಟೇ ಅಲ್ಲದೇ, ಕಳ್ಳರು ಹಾಗೂ ದರೋಡೆಕೋರರನ್ನು ಮನೆಯಿಂದ ದೂರ ಇಡುತ್ತಂತೆ.
3. ಜಿರಳೆ
ಫೆಂಗ್‌ಶುಯಿ ಶಾಸ್ತ್ರದ ಪ್ರಕಾರ ಜಿರಳೆಯ ಚಿಹ್ನೆ ಅಥವಾ ಮೂರ್ತಿಯನ್ನು ಅಡುಗೆ ಮನೆಯಲ್ಲಿ ಇಟ್ಟರೆ ಮನೆಯ ಸಂಪತ್ತು ವೃದ್ಧಿಯಾಗುತ್ತಂತೆ. ಅಲಂಕಾರ ಅಥವಾ ಅದೃಷ್ಟಕ್ಕಾಗಿ ಜಿರಳೆ ಮೂರ್ತಿಯನ್ನು ಅಡುಗೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಅಷ್ಟೇ ಅಲ್ಲದೇ, ಮನೆ ಅಥವಾ ಕಚೇರಿಯಲ್ಲಿ ಕೂಡ ಜಿರಳೆ ಮೂರ್ತಿಯನ್ನು ಇಟ್ಟರೆ ಉತ್ತಮ.
4. ಹಂದಿ
ಚೀನಿ ಜ್ಯೋತಿಷ್ಯ ಫೆಂಗ್‌ಶುಯಿ ಶಾಸ್ತ್ರದ ಪ್ರಕಾರ ಹಂದಿಯ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ನಿಮ್ಮ ಸಂಪತ್ತು ಹೆಚ್ಚಾಗುತ್ತಂತೆ. ಇನ್ನೂ ಇದನ್ನು ನಿಮ್ಮ ಮನೆಯ ಆಗ್ನೇಯ ಮೂಲೆಯಲ್ಲಿ ಇಡಬೇಕು. ನಮಗೆಲ್ಲಾ ಗೊತ್ತಿರೋ ಹಾಗೆ ಪ್ರಾಣಿಗಳಿಂದ ಮನುಷ್ಯರು ಹಣವನ್ನು ಗಳಿಸುತ್ತಾರೆ. ಹೀಗಾಗಿ ನಾವು ಪಿಗ್ ಬ್ಯಾಂಕ್ ನಲ್ಲಿ ಹಣವನ್ನು ಕೂಡಿಟ್ಟರೆ ಹಣವನ್ನು ಉಳಿಸೋದಕ್ಕೆ ಸಾಧ್ಯವಾಗುತ್ತದೆ. ಹೀಗಾಗಿ ಹಂದಿ ಮೂರ್ತಿಯನ್ನು ಮನೆಯಲ್ಲಿಟ್ಟರೆ ಸಮೃದ್ಧಿ ಹೆಚ್ಚಾಗುತ್ತೆ ಎನ್ನುವ ನಂಬಿಕೆಯಿದೆ.
5. ಜಿಂಕೆ
ಚೀನಿ ಜ್ಯೋತಿಷ್ಯ ಫೆಂಗ್‌ಶುಯಿ ಶಾಸ್ತ್ರದ ಪ್ರಕಾರ ಜಿಂಕೆ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ಆರೋಗ್ಯ ಹಾಗೂ ಆಯಸ್ಸು ವೃದ್ಧಿಯಾಗುತ್ತಂತೆ. ಜಿಂಕೆಯು ದೀರ್ಘಾಯುಷ್ಯಕ್ಕೆ ಹೆಸರುವಾಸಿಯಾಗಿದೆ. ಹೀಗಾಗಿ ಇದನ್ನು ನಿಮ್ಮ ಮನೆಯ ಊಟದ ಕೋಣೆಯ ಆಗ್ನೇಯ ಮೂಲೆಯಲ್ಲಿ ಅಥವಾ ಮನೆಯ ಪೂರ್ವ ದಿಕ್ಕಿನಲ್ಲಿ ಇಡಬೇಕು. ಇದರಿಂದ ಮನೆಯವರಿಗೆ ಯಾವುದೇ ರೀತಿ ಆರೋಗ್ಯ ಸಮಸ್ಯೆ ಎದುರಾಗೋದಿಲ್ಲ. ಹಾಗೂ ಅವರ ಅಯಸ್ಸು ಕೂಡ ವೃದ್ಧಿಯಾಗುತ್ತಂತೆ.
6. ನಾಯಿ
ನಾಯಿ ನಂಬಿಕೆ ಮತ್ತು ನಿಷ್ಠೆಯ ಸಂಕೇತವಾಗಿದೆ. ಚೀನಿ ಜ್ಯೋತಿಷ್ಯ ಫೆಂಗ್‌ಶುಯಿ ಶಾಸ್ತ್ರದ ಪ್ರಕಾರ ನಾಯಿಯ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ನಿಮ್ಮ ಜೀವನದಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗುತ್ತಂತೆ. ಇನ್ನೂ ನಾಯಿಯ ಮೂರ್ತಿಯನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಟ್ಟರೆ ನಿಮ್ಮ ವೃತ್ತಿಯನ್ನು ರಕ್ಷಿಸುತ್ತದೆ. ಆಗ್ನೇಯ ಮೂಲೆಯಲ್ಲಿ ಇಟ್ಟರೆ ಸಂಪತ್ತನ್ನು ರಕ್ಷಿಸುತ್ತದೆ. ನಿಮ್ಮ ವೈವಾಹಿಕ ಸಂಬಂಧ ಗಟ್ಟಿಯಾಗಬೇಕೆಂದರೆ ಮನೆಯ ನೈರುತ್ಯ ಮೂಲೆಯಲ್ಲಿಡಿ.
7. ಕೋತಿ
ಚೀನಿ ಜ್ಯೋತಿಷ್ಯ ಫೆಂಗ್‌ಶುಯಿ ಶಾಸ್ತ್ರದ ಪ್ರಕಾರ ಕೋತಿಯ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ನಿಮ್ಮ ಸೃಜನಶೀಲತೆ, ಬುದ್ಧಿವಂತಿಕೆ ಮತ್ತು ನಾವೀನ್ಯತೆ ಹೆಚ್ಚಾಗುತ್ತಂತೆ. ಇನ್ನೂ ನಿಮ್ಮ ವೃತ್ತಿ, ಸಂಪತ್ತು ಮತ್ತು ಖ್ಯಾತಿ ಅಥವಾ ಮನ್ನಣೆಯನ್ನು ಕ್ರಮವಾಗಿ ಹೆಚ್ಚಾಗಲು ಕೋತಿಯ ಮೂರ್ತಿಯನ್ನು ನಿಮ್ಮ ಮನೆಯ ಉತ್ತರ, ಆಗ್ನೇಯ ಅಥವಾ ದಕ್ಷಿಣ ದಿಕ್ಕುಗಳಲ್ಲಿ ಇರಿಸಬೇಕಂತೆ. ಅದ್ರಲ್ಲೂ ಮನೆಯಲ್ಲಿ ಕೋತಿಯ ಚಿನ್ನದ ಮೂರ್ತಿ ಇದ್ದರೆ ತುಂಬಾನೇ ಒಳ್ಳೆಯದಂತೆ.
8. ಇಲಿ
ಚೀನಿ ಜ್ಯೋತಿಷ್ಯ ಫೆಂಗ್‌ಶುಯಿ ಶಾಸ್ತ್ರದ ಪ್ರಕಾರ ಇಲಿಯ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ನಿಮ್ಮ ಪ್ರೇಮ ಜೀವನ ಉತ್ತಮಗೊಳ್ಳುತ್ತಂತೆ. ಹೀಗಾಗಿ ಇಲಿಯ ಮೂರ್ತಿಯನ್ನು ಮನೆಯ ನೈಋತ್ಯ ಮೂಲೆಯಲ್ಲಿ ಇಟ್ಟರೆ ಉತ್ತಮ. ಇದರಿಂದ ನಿಮ್ಮ ವೈವಾಹಿಕ ಜೀವನ ಉತ್ತಮವಾಗುವುದು ಮಾತ್ರವಲ್ಲದೇ, ಪ್ರೀತಿಗಾಗಿ ಎದುರು ನೋಡುತ್ತಿರುವವರೂ ಕೂಡ ಉತ್ತಮ ಸಂಗಾತಿಯನ್ನು ಪಡೆಯುತ್ತಾರಂತೆ.
9. ಹಾವು
ಚೀನಿ ಜ್ಯೋತಿಷ್ಯ ಫೆಂಗ್‌ಶುಯಿ ಶಾಸ್ತ್ರದ ಪ್ರಕಾರ ಹಾವಿನ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ನಮ್ಮಲ್ಲಿ ಉತ್ಸಾಹ, ಬುದ್ಧಿವಂತಿಕೆ ಹೆಚ್ಚಾಗುತಂತೆ. ಈ ಮೂರ್ತಿಯನ್ನು ನಿಮ್ಮ ಮನೆಯ ನೈಋತ್ಯ ಮೂಲೆಯಲ್ಲಿ ಇಡಬೇಕು. ಅಷ್ಟೇ ಅಲ್ಲದೇ, ಸಮೃದ್ಧಿಯನ್ನು ಆಕರ್ಷಿಸಲು ಕೂಡ ಇದನ್ನು ಬಳಕೆ ಮಾಡಲಾಗುತ್ತದೆ. ಇನ್ನೂ ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಕೂಡ ಈ ಮೂರ್ತಿಯನ್ನು ಇಟ್ಟರೆ ಉತ್ತಮ.
10. ಆನೆ
ಚೀನಿ ಜ್ಯೋತಿಷ್ಯ ಫೆಂಗ್‌ಶುಯಿ ಶಾಸ್ತ್ರದ ಪ್ರಕಾರ ಆನೆಯ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ಮನೆಗೆ ಒಳ್ಳೆಯದಾಗುತ್ತಂತೆ. ಆನೆಯು ರಕ್ಷಣೆ ಮತ್ತು ಅದೃಷ್ಟದ ಸಂಕೇತವಾಗಿದೆ. ಅದ್ರಲ್ಲೂ ಬಿಳಿ ಆನೆಗಳನ್ನು ವಿಶೇಷವಾಗಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅವುಗಳು ಶಕ್ತಿ, ಬುದ್ಧಿವಂತಿಕೆ ಮತ್ತು ಫಲವತ್ತತೆಯನ್ನು ಪ್ರತಿನಿಧಿಸುತ್ತಾರೆ. ಫೆಂಗ್‌ಶುಯಿ ಶಾಸ್ತ್ರದ ಪ್ರಕಾರ ಅದೃಷ್ಟವನ್ನು ಆಕರ್ಷಿಸುತ್ತಂತೆ. ಇನ್ನೂ ನಿಮ್ಮ ಮನೆಯ ಸಂಪತ್ತು ಇರುವ ಜಾಗದಲ್ಲಿ ಆನೆಯ ಮೂರ್ತಿಯನ್ನು ಇಟ್ಟರೆ ಅದು ಮತ್ತಷ್ಟು ಸಂಪತ್ತನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ.
ಫೆಂಗ್‌ಶುಯಿ ಚೀನಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಹತ್ತು ಪ್ರಾಣಿಗಳು ಮನೆಗೆ ಎಲ್ಲಾ ವಿಧದಲ್ಲೂ ಒಳ್ಳೆಯದನ್ನೇ ಮಾಡುತ್ತೆ ಎಂದು ನಂಬಲಾಗಿದೆ.



Click it and Unblock the Notifications
