Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
25 ವರ್ಷದೊಳಗಿನ ವಿದ್ಯಾರ್ಥಿನಿಯರು ತಾಯಿಯಾದರೆ ₹81 ಸಾವಿರ ಪ್ರೋತ್ಸಾಹಧನ..! ಏಕೆ ಗೊತ್ತಾ?
ಹಲವು ದೇಶಗಳಲ್ಲಿ ಜನಸಂಖ್ಯೆ ಏರಿಕೆ ಬಹುದೊಡ್ಡ ಸಮಸ್ಯೆಯಾದರೆ ಮತ್ತೆ ಕೆಲವು ದೇಶಗಳಿಗೆ ಜನಸಂಖ್ಯೆಯ ಇಳಿಕೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಕೆಲವು ರಾಷ್ಟ್ರಗಳು ಹೆಚ್ಚು ಮಕ್ಕಳನ್ನು ಹೆರುವಂತೆ, ಮದುವೆಯಾಗುವಂತೆ ಪ್ರೋತ್ಸಾಹಿಸುವುದು ನೋಡಬಹುದು. ಅದರಲ್ಲಿ ಚೀನಾ ಹಾಗೂ ರಷ್ಯಾದಂತಹ ದೊಡ್ಡ ದೊಡ್ಡ ದೇಶದಲ್ಲೂ ಈಗ ಈ ರೀತಿಯ ಕ್ರಮಕ್ಕೆ ಮುಂದಾಗಲಾಗಿದೆ.
ಭಾರತದಲ್ಲಿ ಒಂದೇ ಮಗು ಹೆರುವಂತೆ ಪ್ರೋತ್ಸಾಹಿಸಲಾಗುತ್ತದೆ, ಆದ್ರೆ ಚೀನಾದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದರೂ ಅಲ್ಲಿ ಯುವ ಸಮುದಾಯದ ಕೊರತೆ ಕಾಡಬಹುದು ಎಂಬ ಆತಂಕವಿದೆ. ಹಾಗೆ ರಷ್ಯಾದಲ್ಲೂ ಕೂಡ ಹಿರಿ ವಯಸ್ಕರ ಸಂಖ್ಯೆ ಏರಿಕೆಯಾಗಿರುವುದು ಈಗ ಮಕ್ಕಳನ್ನು ಹೆಸರುವಂತೆ ಪ್ರೋತ್ಸಾಹಿಸಲಾಗುತ್ತಿದೆ.

ಇದರ ಭಾಗವಾಗಿಯೇ ರಷ್ಯಾ ಸರ್ಕಾರ ಈಗ ಹೊಸ ಯೋಜನೆ ಜಾರಿ ಮಾಡಿದೆ. ರಷ್ಯಾದ ಒಂದು ಪ್ರದೇಶವು ಜನಸಂಖ್ಯಾ ಇಳಕೆಯಿಂದ ಬಳಲುತ್ತಿದೆ, ಹೀಗಾಗಿ ಜನಸಂಖ್ಯೆ ಹೆಚ್ಚಿಸಲು ತನ್ನದೇ ಆದ ನೀತಿಗಳನ್ನು ಪರಿಚಯಿಸಿದೆ. ದಿ ಮಾಸ್ಕೋ ಟೈಮ್ಸ್ ಪ್ರಕಾರ 25 ವರ್ಷದೊಳಗಿನ ಯುವತಿಯರು ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಲು ಪ್ರೋತ್ಸಾಹಿಸಲಾಗಿದೆ.
ಹಾಗೆ ಆರೋಗ್ಯವಂತ ಮಕ್ಕಳ ಹೆರುವ ವಿದ್ಯಾರ್ಥಿನಿಯರಿಗೆ 100,000 ರೂಬಲ್ಸ್ ನೀಡಲಾಗುತ್ತದೆ. ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 81 ಸಾವಿರ ರೂಪಾಯಿ ಆಗಿರಲಿದೆ. ವಿದ್ಯಾರ್ಥಿನಿಯರ ಕುಟುಂಬಸ್ಥರ ಮನವೊಲಿಸಲು ಈ ಕ್ರಮಕ್ಕೆ ಮುಂದಾಗಲಾಗಿದೆಯಂತೆ. ರಷ್ಯಾದ ಕರೇಲಿಯಾದ ಭಾಗದಲ್ಲಿ ಈ ರೀತಿ ಹೊಸ ಯೋಜನೆ ಜಾರಿ ಮಾಡಲಾಗಿದೆ.
ಈ ಯೋಜನೆಯ ಪಡೆಯಬೇಕಾದರೆ ವಿದ್ಯಾರ್ಥಿಯು ಕರೇಲಿಯಾದಲ್ಲಿ ವಾಸಿಸುತ್ತಿರುವ ಪ್ರಮಾಣ ಪತ್ರದ ಜೊತೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಹಾಗೆ ಹುಟ್ಟಿದ ಮಗು ಸಾವನಪ್ಪಿದರೆ ಈ ಯೋಜನೆಯ ಫಲಾನುಭವಿಗಳಾಗುವುದಿಲ್ಲ. ಅಂಗವೈಕಲ್ಯ ಹೊಂದಿರುವ ಮಕ್ಕಳಿಗೆ ಜನ್ಮ ನೀಡುವ ತಾಯಂದಿರು ಪಾವತಿಗೆ ಅರ್ಹರಾಗಿದ್ದಾರೆಯೇ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಇಲ್ಲ.
2024ರ ಮೊದಲ 6 ತಿಂಗಳಲ್ಲಿ ರಷ್ಯಾದಲ್ಲಿ ಕೇವಲ 5,99,600 ಮಕ್ಕಳು ಜನಿಸಿದ್ದು ಇದು ದೇಶದ ಜನನ ದರದಲ್ಲಿ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಇಳಿದಿರುವುದನ್ನು ಸೂಚಿಸುತ್ತದೆ. ಹಾಗೆ ಇದು ಕಳೆದ 25 ವರ್ಷದಲ್ಲೇ ಕನಿಷ್ಟ ಎಂದು ತಿಳಿದುಬಂದಿದೆ. ಕರೇಲಿಯಾ ಪ್ರದೇಶದಲ್ಲಿ ಜನಸಂಖ್ಯೆ ವಿಪರೀತ ಕುಸಿತ ಕಂಡಿದೆ. ಹೀಗಾಗಿ ಸರ್ಕಾರ ಈ ರೀತಿಯ ಕ್ರಮಕ್ಕೆ ಮುಂದಾಗಿದೆಯಂತೆ.
ಹಾಗೆ ಯುವತಿಯರಿಗೆ ಮಕ್ಕಳನ್ನು ಪಡೆಯಲು ಹಾಗೂ ಮದುವೆಗೆ ಪ್ರೋತ್ಸಾಹಿಸುವ ಇತರೆ ಯೋಜನೆಗಳನ್ನೂ ಕೂಡ ಬೇರೆ ಪ್ರದೇಶಗಳಿಗೆ ಜಾರಿ ಮಾಡಲು ಸರ್ಕಾರ ಆಲೋಚಿಸಿದೆ ಎಂದು ವರದಿಯಾಗಿದೆ. ಈಗಾಗಲೇ ಟಾಮ್ಸ್ಕ್ ನಗರದಲ್ಲಿ ಈ ರೀತಿಯ ಮತ್ತೊಂದು ಯೋಜನೆ ಜಾರಿಯಲ್ಲಿದೆ. ಹಾಗೆ ಅಲ್ಲಿ ಮಗುವನ್ನು ಹೆಸರು ಪ್ರತಿಯೊಬ್ಬ ತಾಯಿಗೂ ಸರ್ಕಾರವೇ ಹಣ ನೀಡುತ್ತಾ ಬಂದಿದೆ. ಅಲ್ಲಿ ಎರಡು ಮಗು ಹೆರುವ ಮಹಿಳೆಗೆ ಬರೋಬ್ಬರಿ 7 ಲಕ್ಷ ರೂಪಾಯಿ ನೀಡಲಾಗುತ್ತದೆ.
ರಷ್ಯಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ವಲಸೆ ಹೆಚ್ಚಾಗಿದೆ, ಉಕ್ರೇನ್ ನಡುವಿನ ಸಂಘರ್ಷದ ನಂತರ ಈ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆಯಂತೆ. ವಯಸ್ಕ ಮರಣ ಪ್ರಮಾಣ ಏರಿಕೆ, ಜನನ ಪ್ರಮಾಣ ಇಳಿಕೆ ಕಂಡುಬಂದಿದೆ. ಹೀಗಾಗಿ ರಷ್ಯಾ ಸರ್ಕಾರ ಹಲವು ರೀತಿಯ ಉಪಕ್ರಮಗಳ ಜಾರಿ ಮಾಡಲು ನಿರ್ಧರಿಸಿದೆ. ಆದರೆ ಭವಿಷ್ಯದ ದಿನಗಳಲ್ಲಿ ಈ ಯೋಜನೆಗಳಿಂದ ಬಹುದೊಡ್ಡ ಸಮಸ್ಯೆ ತರಬಹುದುಎ ಎಂಬ ವಾದ ಕೂಡ ಇದೆ. ಜನಸಂಖ್ಯಾ ಏರಿಕೆ ಕೈ ತಪ್ಪಿ ಬೆಳೆಯಬಹುದು ಎಂಬ ಆತಂಕ ಕೂಡ ಇದೆ.



Click it and Unblock the Notifications
