Latest Updates
-
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ!
ಸಂಭೋಗದಿಂದ ಪಾರಾಗಲು ಸತ್ತಂತೆ ನಟಿಸುವ ಹೆಣ್ಣು ಕಪ್ಪೆಗಳು..! ಈ ಕೌತುಕದ ಬಗ್ಗೆ ಗೊತ್ತಾ?
ನಿಸರ್ಗದಲ್ಲಿ ಎಷ್ಟೊಂದು ಕೌತುಕಗಳು, ಅಚ್ಚರಿಗಳು ನಡೆಯುತ್ತವೆ ಅಂದ್ರೆ ನಾವದನ್ನ ಊಹಿಸಲು ಸಹ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆಈ ಅಚ್ಚರಿಗಳು ಎಂತವರಿಗೂ ನಿಗೂಢವಾಗಿ ಕಾಣಿಸುತ್ತವೆ. ಅದರಲ್ಲೂ ಪ್ರಾಣಿ ಪ್ರಪಂಚದಲ್ಲಿ ನಡೆಯುವ ಅಚ್ಚರಿಗಳು ಕೆಲವೊಮ್ಮೆ ಉತ್ತರವೇ ಇಲ್ಲವೆ ನಿಗೂಢತೆಗಳಿದ್ದಂತೆ.
ಅದರಲ್ಲೂ ಉಭಯವಾಸಿಗಳು ಎಂದು ಕರೆಯಲ್ಪಡುವ ಕಪ್ಪೆಗಳ ಪ್ರಪಂಚದಲ್ಲಿ ಎಷ್ಟು ನಿಗೂಢತೆಗಳ ಹೊಂದಿದೆ ಎಂಬುದು ನಿಮಗೆ ಗೊತ್ತಾ? ಇಲ್ಲೊಂದು ಕಪ್ಪೆಯ ನೈಜ ಕಥೆ ಕೇಳಿದರೆ ನಿಮಗೂ ಅಚ್ಚರಿಯಾಗುತ್ತೆ. ಹೌದು ಇಲ್ಲೊಂದು ಜಾತಿಯ ಹೆಣ್ಣು ಕಪ್ಪೆಯು ತನ್ನ ಸಾವನ್ನೇ ತಾನೇ ನಕಲು ಮಾಡುತ್ತೆ ಅಂದ್ರೆ ನಂಬ್ತೀರಾ.?

ಹೌದು ಇದು ಅಚ್ಚರಿಯಾದ್ರು ಸತ್ಯವೇ. ಇಲ್ಲೊಂದು ಕಪ್ಪೆ ತಾನು ಸತ್ತಿರುವಂತೆ ನಾಟಕ ಮಾಡುತ್ತೆ ಆದ್ರೆ ಅದು ಸತ್ತಿರುವುದಿಲ್ಲ ಇದರ ಹಿಂದೊಂದು ದೊಡ್ಡ ಕಾರಣವೂ ಇದೆ. ಯುರೋಪಿಯನ್ ರಾನಾ ಟೆಂಪೊರೇರಿಯಾ ಎಂಬ ಕಪ್ಪೆಗೆ ಸ್ಫೋಟಕ ತಳಿಗಾರರು ಎಂದು ಕರೆಯಲ್ಪಡುತ್ತವೆ. ಆದರೆ ಈ ಕಪ್ಪೆಗಳು ಸಂಭೋಗದ ಸಮಯದಲ್ಲಿ ಸತ್ತಂತೆ ನಾಟಕವಾಡುತ್ತೆ.
ಈ ಕಪ್ಪೆಗಳು ಸಂಭೋಗ ಕ್ರಿಯೆಯಲ್ಲಿ ತೊಡಗುವಾಗ ಸತ್ತಿರುವಂತೆ ನಾಟಕ ಮಾಡುತ್ತವೆ. ಇದರಿಂದ ಬೇರೆ ಗಂಡು ಕಪ್ಪೆಗಳು ಈ ಕಪ್ಪೆಯ ಹತ್ತಿರವು ಸುಳಿಯುವುದಿಲ್ಲ. ಇದೊಂದು ತಂತ್ರವಾಗಿದೆ. ಆದ್ರೆ ಈ ಹೆಣ್ಣು ಕಪ್ಪೆಗಳು ಹೀಗ್ಯಾಕೆ ಮಾಡುತ್ತವೆ ಎಂಬುದಕ್ಕೆ ಒಂದು ಕಾರಣವಿದೆ. ಈ ಕಪ್ಪೆಗಳ ಸಂಭೋಗ ಕ್ರಿಯೆ ಒಂದು ದೊಡ್ಡ ಹಬ್ಬದಂತ ಇರಲಿದೆಯಂತೆ.
ಒಂದು ಹೆಣ್ಣು ಕಪ್ಪೆಗೆ 6ಕ್ಕಿಂತ ಹೆಚ್ಚು ಗಂಡು ಕಪ್ಪೆಗಳು ಸ್ಪರ್ಧೆ ಮಾಡಬೇಕಾಗುತ್ತದೆಯಂತೆ. ಅದ್ರಲ್ಲು ಸಾವಿರಾರು ಕಪ್ಪೆಗಳು ಒಂದೇ ಕೊಳದಲ್ಲಿ ತುಂಬಿಕೊಳ್ಳುತ್ತವೆ. ಈ ವೇಳೆ ಹೆಣ್ಣು ಕಪ್ಪೆ ಜೀವ ಕಳೆದುಕೊಳ್ಳುತ್ತವೆ. ಹೀಗಾಗಿ ಈ ಹೆಣ್ಣು ಕಪ್ಪೆಗಳು ತಮಗೆ ತಾವೆ ಸತ್ತಂತೆ ನಟಿಸುತ್ತವೆ. ಇದರಿಂದ ಬೇರೆ ಗಂಡು ಕಪ್ಪೆಗಳು ಇವುಗಳನ್ನು ಸಂಧಿಸಲು ಮುಂದಾಗುವುದಿಲ್ಲವಂತೆ.
ಇದೊಂದೆ ಟ್ರಿಕ್ಸ್ ಅಲ್ಲದೆ ಇನ್ನೂ ಹಲವಾರು ರೀತಿಯಲ್ಲಿ ಅವು ಸಂಭೋಗ ಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತವೆಯಂತೆ. ಕೆಲವೊಮ್ಮೆ ಸತ್ತಂತೆ ನಟಿಸುವುದು, ಮತ್ತೆ ಕೆಲವೊಮ್ಮೆ ಚಲನೆ ಇಲ್ಲದೆ ಬಿದ್ದುಕೊಂಡಿರುವುದು, ಇನ್ನೊಮ್ಮೆ ಕೊಳದಿಂದ ಹೊರಗೆ ಹಾರಿ ಪರಾರಿಯಾಗುತ್ತವೆಯಂತೆ. ಈ ಕಪ್ಪೆಗಳನ್ನು ಹಿಡಿದುಕೊಂಡು ಬರ್ಲಿನ್‌ನ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯದ ಸಂಶೋಧಕ ಕ್ಯಾರೊಲಿನ್ ಡಿಟ್ರಿಚ್ ಸಂಶೋಧನೆ ನಡೆಸಿದ್ದಾರಂತೆ.
ಇವು ಸಂಭೋಗದ ಬಳಿಕ 3ರಿಂದ 4 ನಿಮಿಷ ಚಲನೆಯಿಲ್ಲದೆ ತೇಲುತ್ತವೆಯಂತೆ. ಒಂದು ಹೆಣ್ಣು ಕಪ್ಪೆ ಒಂದೇ ಗಂಡು ಕಪ್ಪೆಯೊಂದಿಗೆ ಸಂಭೋಗಕ್ಕೆ ಸಿದ್ಧವಿರುತ್ತದೆ. ಒಮ್ಮೆ ಸಂಭೋಗಕ್ಕೆ ಒಳಗಾದ ಕಪ್ಪೆ ಪತ್ತೆಂದಿಗೂ ಸಂಭೋಗಕ್ಕೆ ಮುಂದಾಗುವುದಿಲ್ಲ. ಆದರೆ ಉಳಿದ ಗಂಡು ಕಪ್ಪೆಗಳು ಈ ಹೆಣ್ಣು ಕಪ್ಪೆಯತ್ತ ಆಗಮಿಸುತ್ತವೆ. ಅಲ್ಲದೆ ಅಲ್ಲಿರುವ ಬೇರೆ ಗಂಡು ಕಪ್ಪೆಗಳೊಂದಿಗೆ ಕಿತ್ತಾಡುತ್ತವೆ.
ಒಮ್ಮೆಯು ಸಂಭೋಗಕ್ಕೆ ಒಳಗಾಗದ ಹೆಣ್ಣು ಕಪ್ಪೆ ತನ್ನ ಕೀರಲು ಧ್ವನಿಯಲ್ಲಿ ಸಣ್ಣದಾಗಿ ಕೂಗುತ್ತಿರುತ್ತದೆ. ಇದು ಗಂಡು ಕಪ್ಪೆಗಳನ್ನು ಆಕರ್ಷಿಸುತ್ತದೆ. ಜೊತೆಗೆ ಕಪ್ಪೆ ಸಂಭೋಗದ ವೇಳೆ ಹೆಣ್ಣು ಕಪ್ಪೆ ನೀರಿನ ಅಡಿ ಮುಳುಗದಂತೆ ಗಂಡು ಕಪ್ಪೆ ನೀರಿನಲ್ಲಿ ಮುಳುಗಿ ಹೆಣ್ಣು ಕಪ್ಪೆ ಮೇಲೆ ಇರುವಂತೆ ನೋಡಿಕೊಳ್ಳುತ್ತದೆ.
ಸಾಮಾನ್ಯವಾಗಿ ಚಿಕ್ಕ ವಯಸ್ಸಿನ ಸಣ್ಣ ಹೆಣ್ಣು ಕಪ್ಪೆಗಳು ಸಂಭೋಗದಿಂದ ತಪ್ಪಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನವನ್ನೂ ಮಾಡುತ್ತವೆ. ಆದರೆ ಸ್ವಲ್ಪ ವಯಸ್ಸಾದ ಕಪ್ಪೆಗಳು ತಮ್ಮ ಮರಣವನ್ನೇ ನಕಲು ಮಾಡುತ್ತವೆ. ಗಂಡು ಕಪ್ಪೆಯಿಂದ ಸಂಭೋಗಕ್ಕೆ ಒಳಗಾದ ಸುಮಾರು ಶೇ.46 ಹೆಣ್ಣು ಕಪ್ಪೆಗಳು ಯಶಸ್ವಿಯಾಗಿ ಕೊಳದಿಂದ ಹಾಗೂ ಬೇರೆ ಕಪ್ಪೆಗಳಿಂದ ಪಾರಾಗುತ್ತವೆ. ಆದರೆ ಈ ಹೆಣ್ಣು ಕಪ್ಪೆಗಳು ತಮ್ಮ ಸಾವನ್ನು ನಕಲು ಮಾಡುತ್ತಿವೆ ಎಂಬುದು ಗಂಡು ಕಪ್ಪೆಗಳು ಗುರುತಿಸಲು ಸಾಧ್ಯವಾಗುವುದೇ ಇಲ್ಲವಂತೆ.



Click it and Unblock the Notifications
