Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಮೊಟ್ಟೆ ಮೊದಲ ಕೋಳಿ ಮೊದಲ ಪ್ರಶ್ನೆಗೆ ಉತ್ತರಿಸದ ಸ್ನೇಹಿತನ ಉಸಿರೇ ನಿಲ್ಲಿಸಿದ..!! ಹೀಗೊಂದು ದುರಂತ
ಮೊಟ್ಟೆ ಮೊದಲ ಕೋಳಿ ಮೊದಲ ಎಂಬ ಪ್ರಶ್ನೆ ಕೋಳಿ ಈ ಭೂಮಿಗೆ ಕಾಲಿಟ್ಟಿದ್ದಾಗಿನಿಂದಲೂ ಜೊತೆಯೇ ಇದೆ. ಆದ್ರೆ ಈವರೆಗೂ ಈ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೂ ಸೂಕ್ತ ಉತ್ತರ ಮಾತ್ರ ಸಿಕ್ಕಿಯೇ ಇಲ್ಲ. ಕೆಲವರ ಪ್ರಕಾರ ಮೊಟ್ಟೆ ಮೊದಲಾದರೆ ಮತ್ತೆ ಕೆಲವರ ಪ್ರಕಾರ ಕೋಳಿಯೇ ಮೊದಲು ಎಂಬ ಉತ್ತರ ಬರುತ್ತದೆ. ಈ ಪ್ರಶ್ನೆಗೆ ಉತ್ತರ ಸಿಗುವುದು ಸಹ ಕಷ್ಟವೇ.
ನೀವು ಸಹ ಇಂತಹ ಪ್ರಶ್ನೆಯನ್ನ ಯಾರಿಗಾದರು ಕೇಳಿರಬಹುದು. ಇಲ್ಲವೆ ನಿಮಗೆ ಈ ಪ್ರಶ್ನೆಯನ್ನ ಕೇಳಿ ಯಾರಾದರು ತಲೆ ತಿಂದಿರಬಹುದು. ಈ ಪ್ರಶ್ನೆಯನ್ನ ತಮಾಷೆಯಾಗಿ ತೆಗೆದುಕೊಂಡು ಒಂದಿಷ್ಟು ಚರ್ಚೆ ನಡೆಸಿ ಅಲ್ಲಿಗೆ ಬಿಟ್ಟುಬಿಡುವವರೇ ಹೆಚ್ಚು. ಆದ್ರೆ ಇಲ್ಲೊಂದು ಕಡೆ ಈ ಮೊಟ್ಟೆ ಮೊದಲ ಕೋಳಿ ಮೊದಲ ಎಂಬ ಪ್ರಶ್ನೆ ಒಬ್ಬನ ಜೀವವನ್ನೇ ತೆಗೆದಿದೆ.

ಇಂಡೋನೇಷ್ಯಾದ ಆಗ್ನೇಯ ಪ್ರಾಂತ್ಯದಲ್ಲಿರುವ ಮುನಾ ರೀಜೆನ್ಸಿಯಲ್ಲಿ ಇಂತಹದೊಂದು ಅಸಮಾನ್ಯ ವಿಚಿತ್ರ ಘಟನೆಯೊಂದು ನಡೆದಿದೆ. ಮೊಟ್ಟೆ ಮೊದಲ ಕೋಳಿ ಮೊದಲ ಎಂಬ ಪ್ರಶ್ನೆಗೆ ಉತ್ತರ ಹೇಳಲು ವಿಫಲನಾದ ಸ್ನೇಹಿತನನ್ನು ವ್ಯಕ್ತಿಯೊಬ್ಬ ಹತ್ಯೆ ಮಾಡಿದ್ದಾನೆ. ನಿಮಗೆ ಅಚ್ಚರಿ ಎನಿಸಬಹುದು. ಆದ್ರೆ ಈ ರೀತಿಯ ಘಟನೆ ನಡೆದೇ ಹೋಗಿದೆ.
ಈ ಉತ್ತರ ಗೊತ್ತಿರದ ಸ್ನೇಹಿತನ ಕೊಲೆ ಮಾಡಿದ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಡಿಆರ್ ಎಂಬ ಮೊದಲಕ್ಷರದಿಂದ ಗುರುತಿಸಲಾಗಿದೆ ಮತ್ತು ಅವನ ಸ್ನೇಹಿತ ಕದಿರ್ ಮಾರ್ಕಸ್ ಹತ್ಯೆಯಾಗಿದ್ದಾನೆ. ಇಬ್ಬರು ಬಹಳ ಕಾಲದಿಂದಲೂ ಉತ್ತಮ ಸ್ನೇಹಿತರಾಗಿದ್ದರು. ಆದರೆ ಜುಲೈ 24ರಂದು ಇಬ್ಬರು ಮದ್ಯಪಾನ ಮಾಡಲು ಒಟ್ಟಿಗೆ ಸೇರಿದ್ದರು. ಈ ವೇಳೆ ಈ ಅಚಾತುರ್ಯ ನಡೆದಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಮದ್ಯಪಾನ ಮಾಡುವಾಗ ನಡುವೆ ಈ ಪ್ರಶ್ನೆ ಇಬ್ಬರಿಗೂ ಕಾಡಿದೆ. ಮೊಟ್ಟೆ ಮೊದಲ ಕೋಳಿ ಮೊದಲ ಎಂಬುದನ್ನು ಡಿಆರ್ ಎಂಬಾತ ಮಾರ್ಕಸ್‌ಗೆ ಕೇಳಿದ್ದಾನೆ. ಆದರೆ ಆತ ಒಂದೊಂದು ಬಾರಿ ಒಂದೊಂದು ಉತ್ತರ ನೀಡಿದ್ದಾನೆ. ಅಲ್ಲದೆ ಕೊನೆಯಲ್ಲಿ ಇದಕ್ಕೆ ಉತ್ತರ ಗೊತ್ತಿಲ್ಲದಂತೆ ಸುಮ್ಮನಿದ್ದಾನೆ. ಆದರೆ ಮದ್ಯದ ಅಮಲಿನಲ್ಲಿದ್ದ ಡಿಆರ್ ಒದೇ ಒದೇ ಆತನಿಗೆ ಕೇಳುತ್ತಲೇ ಇದ್ದಾನೆ. ಈ ಚರ್ಚೆ ಅಲ್ಲಿಗೆ ಬಿಟ್ಟು ಮಾರ್ಕಸ್ ಸುಮ್ಮನಾಗಲು ಮುಂದಾಗುತ್ತಾನೆ. ಜೊತೆಗೆ ಮನೆಗೆ ತೆರಳು ಸಿದ್ಧನಾಗುತ್ತಾನೆ.
ಈ ವೇಳೆ ಡಿಆರ್ ಕಂಠಪೂರ್ತಿ ಕುಡಿದು ಈ ಪ್ರಶ್ನೆ ಉತ್ತರ ನೀಡದೆ ಮನೆಗೆ ಹೋಗಬೇಡ ಎಂದು ಹೊಸ ಖ್ಯಾತೆ ತೆಗೆದಿದ್ದ, ಇದು ಮತ್ತೆ ಜಗಳಕ್ಕೆ ಕಾರಣವಾಗಿದೆ. ಈ ವೇಳೆ ಡಿಆರ್ ಬಳಿ ಇದ್ದ ಚಾಕುವಿನಿಂದ ಇರಿದಿದ್ದಾನೆ. ಆತ ತಪ್ಪಿಸಿಕೊಂಡು ಓಡಲು ಮುಂದಾದಾಗ ಬೈಕ್‌ನಲ್ಲಿ ತೆರಳಿ ಹಿಂದಿನಿಂದ ಆತನಿಗೆ ಚುಚ್ಚಿದ್ದಾನೆ. ತಕ್ಷಣ ಅಲ್ಲಿದ್ದವರು ಮಾರ್ಕಸ್‌ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ.
ನಂತರ ಮರಣೋತ್ತರ ಪರೀಕ್ಷೆ ನೆರವೇರಿಸಿದಾಗ ಚಾಕುವಿನಿಂದ ಮಾರ್ಕಸ್‌ಗೆ ಬರೋಬ್ಬರಿ 15ಕ್ಕೂ ಹೆಚ್ಚು ಬಾರಿ ಇರಿದಿರುವುದು ತಿಳಿದುಬಂದಿದೆ. ಪೊಲೀಸರು ಡಿಆರ್‌ನನ್ನು ಬಂಧಿಸಿದ್ದು, ಇಂಡೋನೇಷ್ಯಾದಲ್ಲಿ ಕೊಲೆ ಅಪರಾಧಿಗೆ 18 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತದೆ.
ಮೊಟ್ಟೆ ಮೊದಲ ಕೋಳಿನೇ ಮೊದಲ..?
ಮೊಟ್ಟೆ ಮೊದಲ ಕೋಳಿ ಮೊದಲ ಎಂಬ ಪ್ರಶ್ನೆಗೆ ಇತ್ತೀಚಿಗೆ ಒಮ್ಮತವಲ್ಲದ ಉತ್ತರ ಕಂಡುಕೊಳ್ಳಲಾಗಿತ್ತು. ಬ್ರಿಟಿಷ್ ವಿಜ್ಞಾನಿಗಳು ಉತ್ತರವನ್ನು ಕಂಡುಕೊಂಡಿದ್ದರು. ಬ್ರಿಟಿಷ್ ವಿಜ್ಞಾನಿಗಳ ಪ್ರಕಾರ ಕೋಳಿ ಪ್ರಪಂಚಕ್ಕೆ ಮೊದಲು ಬಂದಿತ್ತಂತೆ. ಶೆಫೀಲ್ಡ್ ಮತ್ತು ವಾರ್ವಿಕ್ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳು ಈ ದೀರ್ಘಕಾಲದ ಒಗಟನ್ನು ಭೇದಿಸಿದ್ದಾರೆ.
ಮೊಟ್ಟೆಯ ಚಿಪ್ಪುಗಳು ಕೋಳಿಯ ಮೊಟ್ಟೆಯಲ್ಲಿ ಮಾತ್ರ ಕಂಡುಬರುವ ಪ್ರೋಟೀನ್‌ನ ಮೇಲೆ ಅವಲಂಬಿತವಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆದ್ದರಿಂದ, ಮೊಟ್ಟೆ ಕೋಳಿಯೊಳಗೆ ಇದ್ದರೆ ಮಾತ್ರ ಅದು ರೂಪುಗೊಳ್ಳುತ್ತದೆ. ಓವೊಕ್ಲೆಟಿನ್-17 ಅಥವಾ OC-17 ಎಂಬ ನಿರ್ದಿಷ್ಟ ಪ್ರೋಟೀನ್ ಶೆಲ್‌ನ ಬೆಳವಣಿಗೆಯನ್ನು ವೇಗಗೊಳಿಸಲು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ದಾಖಲೆ ವಿವರಿಸುತ್ತದೆ. ಮರಿ ಒಳಗೆ ಬೆಳೆಯುವಾಗ ಹಳದಿ ಲೋಳೆ ಮತ್ತು ಅದರ ರಕ್ಷಣಾತ್ಮಕ ದ್ರವಗಳನ್ನು ಇರಿಸಲು ಈ ಗಟ್ಟಿಯಾದ ಶೆಲ್ ಅವಶ್ಯಕವಾಗಿದೆ. ಇದು ಕೋಳಿಯ ಹೊಟ್ಟೆಯಲ್ಲಿ ಅಭಿವೃದ್ಧಿಯಾಗುತ್ತದೆ. ಹೀಗಾಗಿ ಮೊಟ್ಟೆ ಬರುವ ಮೊದಲು ಕೋಳಿ ಭೂಮಿ ಮೇಲಿತ್ತು ಎಂಬುದು ಅವರ ವಾದವಾಗಿದೆ.



Click it and Unblock the Notifications

