Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮೇ ತಿಂಗಳಿನ ಮಗುವೇ? ಈ ತಿಂಗಳಿನ ಮಕ್ಕಳಲ್ಲಿ ಕಂಡು ಬರುವ ಕೌತುಕದ ಸಂಗತಿಗಳಿವು
ನಿಮ್ಮ ಮಗು ಮೇ ತಿಂಗಳಿನಲ್ಲಿ ಜನಿಸಿದೆಯೇ? ಅಥವಾ ನಿಮಗೆ ನವಮಾಸ ತುಂಬಿದ್ದು ಇದೇ ತಿಂಗಳು ಹೆರಿಗೆಗೆ ದಿನಾಂಕ ನೀಡಿದ್ದಾರೆಯೇ? ಮೇ ತಿಂಗಳಿನಲ್ಲಿ ಜನಿಸಿರುವ ಅಥವಾ ಇದೇ ತಿಂಗಳು ಜನಿಸಲಿರುವ ನಿಮ್ಮ ಮುದ್ದುನ ಕಂದನ ಬಗ್ಗೆ ಇಂಟೆರೆಸ್ಟಿಂಗ್ ಸಂಗತಿ ತಿಳಿದುಕೊಳ್ಳುವ ಕೌತುಕವೇ?
ವ್ಯಕ್ತಿಗಳು ಒಬ್ಬರಿಂದ ಮತ್ತೊಬ್ಬರು ಗುಣ ಸ್ವಭಾವದಲ್ಲಿ ತುಂಬಾ ಭಿನ್ನವಾಗಿರುತ್ತದೆ. ಆದರೆ ಅವರು ಜನಿಸಿದ ತಿಂಗಳಿಗೆ ತಕ್ಕಂತೆ ಅವರ ಸ್ವಭಾವದಲ್ಲಿ ಕೆಲವೊಂದು ಹೋಲಿಕೆ ಕಂಡು ಬರುವುದು ಎಂದು ಹೇಳಲಾಗುವುದು. ಮೇ ತಿಂಗಳ ಮಕ್ಕಳ ಕುರಿತು ಈ ಆಸಕ್ತಿಕರ ಸಂಗತಿಗಳನ್ನು ನೋಡೋಣ ಬನ್ನಿ:

ಮೇ ತಿಂಗಳಿನಲ್ಲಿ ಜನಿಸಿದ ಮಕ್ಕಳು ಅದೃಷ್ಟವಂತರು
ಮೇ ತಿಂಗಳಿನಲ್ಲಿ ಜನಿಸಿದ ಮಕ್ಕಳು ಅದೃಷ್ಟವಂತರು ಎಂದು ಹೇಳಲಾಗುವುದು. ಈ ತಿಂಗಳಿನಲ್ಲಿ ಜನಿಸಿದ ಮಕ್ಕಳಿಗೆ ಅದೃಷ್ಟದ ಬೆಂಬಲ ಅಧಿಕ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಯುಕೆಯಲ್ಲೂ ಇದೇ ರೀತಿಯ ನಂಬಿಕೆ ಇದೆ.
ಒಂದಂತೂ ನಿಜ , ಮಕ್ಕಳ ಶಾಲೆಗೆ ಸೇರಿಸುವ ವಿಚಾರದಲ್ಲಿ ಈ ತಿಂಗಳಿನಲ್ಲಿ ಜನಿಸಿದವರು ಅದೃಷ್ಟವಂತರೇ... ಈಗೀನ ನಿಯಮ ಪ್ರಕಾರ ಈ ಮಕ್ಕಳಿಗೆ ಸರಿಯಾದ ವಯಸ್ಸಿಗೆ ಶಾಲೆಗೆ ಸೇರಬಹುದು. ಕೆಲ ಮಕ್ಕಳಿಗೆ ಒಂದೇ ತರಗತಿಗೆ ಸೇರುವಾಗ 6 ವರ್ಷ ಕೆಲವು ತಿಂಗಳುಗಳಾಗಿರುತ್ತದೆ.
ಮೇ ತಿಂಗಳಿನಲ್ಲಿ ಜನಿಸಿದ ಮಕ್ಕಳಲ್ಲಿ ಕಾಯಿಲೆ ಕಡಿಮೆ
ಮೇ ತಿಂಗಳಿನಲ್ಲಿ ಜನಿಸಿದ ಮಕ್ಕಳಲ್ಲಿ ಕಾಯಿಲೆ ಕಡಿಮೆ, ಈ ಕುರಿತು ನಡೆಸಿದ ಅಧ್ಯಯನದಿಂದಲೂ ಇದು ಸಾಬೀತಾಗಿದೆ. ಈ ತಿಂಗಳಿನಲ್ಲಿ ಜನಿಸಿದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಿರುತ್ತದೆ ಎಂದು ಹೇಳಲಾಗುವುದು.
ಮೇ ತಿಂಗಳಿನಲ್ಲಿ ಜನಿಸಿದವರು ದೊಡ್ಡ ಸ್ಥಾನಕ್ಕೇರುತ್ತಾರೆ
ಮೇ ತಿಂಗಳಿನಲ್ಲಿ ಜನಿಸಿದವರು ತಮ್ಮ ವೃತ್ತಿ ಜೀವನದಲ್ಲಿ ಗುರುತಿಸಿಕೊಳ್ಳುತ್ತಾರೆ. ಹೆಚ್ ಡಿ ದೇವೇಗೌಡ, ಆನಂದ್ ಮಹೇಂದ್ರ, ರವೀಂದ್ರನಾಥ್ ಠಾಗೂರ್, ವಿಜಯ್ ದೇವರಕೊಂಡ, ನವಾಜುದ್ದೀನ್ ಸಿದ್ದೀಕ್, ನಟ ಅಜಿತ್ ಕುಮಾರ್, ಅನುಷ್ಕಾ ಶರ್ಮ, ಮಾಧುರಿ ದೀಕ್ಷಿತ್, ಮೋಹನ್ ಲಾಲ್, ಕರಣ್ ಜೋಹಾರ್, ಸಾಯಿ ಪಲ್ಲವಿ ಮುಂತಾದ ಸೆಲೆಬ್ರಿಟಿಗಳು ಮೇ ತಿಂಗಳಿನಲ್ಲಿ ಜನಿಸಿದವರು.
ಮೇ ತಿಂಗಳಿನಲ್ಲಿ ಜನಿಸಿದ ಮಕ್ಕಳಲ್ಲಿ ಈ ಗುಣ ಲಕ್ಷಣಗಳನ್ನು ಕಾಣಬಹುದು
ಡೈನಾಮಿಕ್
ಅವರು ಏನು ಮಾಡುತ್ತಾರೋ ಅದರಲ್ಲಿ ತುಂಬಾನೇ ಶ್ರದ್ಧೆವಹಿಸುತ್ತಾರೆ. ಅವರು ಉನ್ನತ ಸ್ಥಾನ ತಲುಪಲು ಸದಾ ಪ್ರಯತ್ನಿಸುತ್ತಲೇ ಇರುತ್ತಾರೆ. ಮಕ್ಕಳ ಆಸೆಗೆ ಪೋಷಕರು ಬೆಂಬಲವಾಗಿ ನಿಂತರೆ ಆ ಮಕ್ಕಳು ತುಂಬಾನೇ ದೊಡ್ಡ ಸಾಧನೆ ಮಾಡುತ್ತಾರೆ.
ತುಂಬಾ ಧನಾತ್ಮಕ ಸ್ವಭಾವದವರು
ಮೇ ತಿಂಗಳಿನಲ್ಲಿ ಜನಿಸಿದ ಮಕ್ಕಳು ಧನಾತ್ಮಕ ಸ್ವಭಾವ ಹೊಂದಿರುತ್ತಾರೆ, ಬೇಗನೆ ಸೋಲುಪ್ಪಿಕೊಳ್ಳುವುದಿಲ್ಲ. ಯಶಸ್ಸು ಸಿಗುವವರೆಗೆ ಪ್ರಯತ್ನಿಸುತ್ತಲೇ ಇರುತ್ತಾರೆ. ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಜನಿಸಿದ ಮಕ್ಕಳು ವೃತ್ತಿ ಜೀವನದಲ್ಲಿ ತುಂಬಾನೇ ಚೆನ್ನಾಗಿ ಬೆಳೆಯುತ್ತಾರೆ ಎಂದು ಹೇಳಲಾಗುವುದು. ಈ ಎರಡು ತಿಂಗಳಿನಲ್ಲಿ ವೃತ್ತಿ ಜೀವನದ ಆಯ್ಕೆ ತುಂಬಾ ಇರುತ್ತದೆ ಎಂದು ಹೇಳಲಾಗುವುದು.
ಈ ಕಾರಣಕ್ಕೆ ಸ್ವಲ್ಪ ವಿಚಿತ್ರ ಅನಿಸುತ್ತಾರೆ
ನಿಶಾಚರಿಗಳು: ಈ ತಿಂಗಳಿನಲ್ಲಿ ಜನಿಸಿದವರು ರಾತ್ರಿ ತುಂಬಾ ಹೊತ್ತು ಎಚ್ಚರವಾಗಿರುತ್ತಾರೆ, ರಾತ್ರಿ ಹೊತ್ತಿನಲ್ಲಿ ತಿರುಗಾಡುವುದು ಎಂದರೆ ತುಂಬಾನೇ ಖುಷಿ.
ಪ್ರೀತಿಯಲ್ಲಿ ಓಪನ್ ಮೈಂಡ್
ಈ ತಿಂಗಳಿನಲ್ಲಿ ಜನಿಸಿದವರು ಪ್ರೀತಿಯಲ್ಲಿ ತಮ್ಮತ್ತ ಆಕರ್ಷಿಸುವವಲ್ಲಿ ಎತ್ತಿದ ಕೈ, ಇವರು ಪ್ರೀತಿಯಲ್ಲಿ ಮುಚ್ಚುಮರೆ ಮಾಡುವುದಿಲ್ಲ, ಒಬ್ಬರನ್ನು ಇಷ್ಟಪಟ್ಟರೆ ಮನಸಾರೆ ಇಷ್ಟಪಡುತ್ತಾರೆ.
ಟ್ರಾವೆಲ್ ಮಾಡುವುದು ಎಂದರೆ ತುಂಬಾನೇ ಇಷ್ಟ
ಈ ತಿಂಗಳಿನಲ್ಲಿ ಜನಿಸಿದವರಿಗೆ ಟ್ರಾವೆಲ್ ಹುಚ್ಚು ಅಧಿಕ. ಕಾಲಿಗೆ ಚಕ್ರ ಕಟ್ಟಿದಂತೆ ಸಂಚರಿಸುತ್ತಾರೆ.



Click it and Unblock the Notifications
