Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ಎಮ್ಮೆ ಕೊಟ್ಟಿಗೆಗೆ ಫ್ಯಾನ್-ಎಸಿ ಹಾಕಿಸಿದ ಹೃದಯವಂತ ರೈತ..! ವಿಡಿಯೋ ವೈರಲ್
ದಕ್ಷಿಣ ಭಾರತದಲ್ಲಿ ಎಲ್ಲೆಲ್ಲೂ ಮಳೆಯಾಗುತ್ತಿದ್ದರೆ ಉತ್ತರ ಭಾರತ ಬಿಸಿಲಿನಿಂದಾಗಿ ಕುದಿಯುತ್ತಿದೆ. ಉತ್ತರದ ಹಲವು ಭಾಗದಲ್ಲಿ ಮಳೆಗಾಗಿ ಜನರು ಪ್ರಾರ್ಥಿಸುವ ಸ್ಥಿತಿ ಇದೆ ಏಕೆಂದರೆ ಬಿಸಿಗಾಳಿ ಜನರನ್ನು ಅಕ್ಷರಶಃ ಹೈರಾಣಾಗಿಸಿದೆ. ಜನರು ಮನೆಯಿಂದ ಹೊರಬರಲಾಗದ ಸ್ಥಿತಿ ತಲುಪಿದ್ದಾರೆ.
ಇದೆಲ್ಲದರ ನಡುವೆ ಬಿಸಿಗಾಳಿಗೆ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 90ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರೆ ಇತ್ತ ನೂರಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಸಿಲಿನ ತಾಪ ತಾಳಲಾಗದೆ ಅವರು ದಕ್ಷಿಣದತ್ತ ಪ್ರವಾಸ ಬಂದಿರುವುದು ಸಹ ನಾವು ನೋಡಬಹುದು. ಈ ಬಿಸಿಗಾಳಿ ಇನ್ನೆರಡು ದಿನ ಮುಂದುವರೆಯುವ ಸಾಧ್ಯತೆ ಸಹ ಇದೆ.

ಜನರಿಗೆ ಮನೆಯಿಂದ ಹೊರಬರಲಾಗದ ಪರಿಸ್ಥಿತಿ ಇರುವಾಗ ಮನೆಯಿಂದ ಹೊರಗಿರುವ ಪ್ರಾಣಿಗಳ ಪಾಡು ಯಾವ ರೀತಿ ಆಗಿದೆ ಎಂಬುದನ್ನು ನೀವು ಊಹಿಸಿಕೊಳ್ಳಿ. ಏಕೆಂದರೆ ಸರಿಯಾದ ಸಮಯಕ್ಕೆ ನೀರು, ಫ್ಯಾನ್, ಎಸಿ ಇದ್ದರೂ ಬಿಸಿ ತಾಳಲಾಗದೆ ನಾವು ಪರದಾಡುವಾಗ ನೀರು ಸಹ ಸಿಗದಂತಹ ಪರಿಸ್ಥಿತಿ ಪ್ರಾಣಿಗಳಿಗೆ ಬಂದಿದೆ.
ಹೀಗಾಗಿ ಪ್ರಾಣಿಗಳು ನೀರಿನಲ್ಲದೆ ಕುಸಿದು ಬೀಳುವುದು, ತಾಪಮಾನ ತಾಳಲಾಗದೆ ಪ್ರಾಣ ಬಿಡುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದವು. ಕೋತಿಗಳು ಮರದಿಂದ ಕೆಳಗೆ ಬೀಳುವುದು, ಕಾಗೆ, ಬಾವಲಿ ನೆಲಕ್ಕೆ ಬಿದ್ದು ಸಾಯುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇದೆ. ಈ ನಡುವೆ ಸಾಕು ಪ್ರಾಣಿಗಳನ್ನು ಈ ತಾಪಮಾನದಿಂದ ರಕ್ಷಿಸಲು ಜನರು ಉಪಾಯಗಳ ಕಂಡುಕೊಂಡಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ತಾನು ಸಾಕಿರುವ ಎಮ್ಮೆಗಳನ್ನು ತಾಪಮಾನದಿಂದ ರಕ್ಷಿಸಲು ಎರಡು ಎಸಿ ಮತ್ತು ಫ್ಯಾನ್‌ಗಳನ್ನು ಕೊಟ್ಟಿಗೆಯಲ್ಲಿ ಅಳವಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೈತನ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ಕೇಳಿಬಂದಿದೆ. ಸಾಕು ಪ್ರಾಣಿಗಳ ಕುರಿತು ಆತನಿಗಿರುವ ಕಾಳಜಿಗೆ ಜನ ಸೆಲ್ಯೂಟ್ ಎಂದಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಎಮ್ಮೆ ಕೊಟ್ಟಿಗೆಯಲ್ಲಿ ಫ್ಯಾನ್ ಹಾಗೂ ಎಸಿ ಸಹ ಹಾಕಿರುವುದನ್ನು ನಾವು ನೋಡಬಹುದು. ಮೇಲ್ಭಾಗದಲ್ಲಿ ಫ್ಯಾನ್ ಚಾಲನೆಯಲ್ಲಿದೆ ಮತ್ತು ಗೋಡೆಯ ಮೇಲೆ ಎರಡು ಎಸಿಗಳನ್ನು ಅಳವಡಿಸಲಾಗಿದೆ. ಜನರು ತಮ್ಮ ಮನೆಯಲ್ಲಿರುವ ಎಸಿ ಆನ್ ಮಾಡುವ ಮೊದಲು ವಿದ್ಯುತ್ ಬಿಲ್ ಬಗ್ಗೆ ಎರಡು ಬಾರಿ ಯೋಚಿಸುತ್ತಾರೆ. ಆದರೆ ಇಲ್ಲಿ ಎಮ್ಮೆಗಳ ಕೊಟ್ಟಿಗೆಯಲ್ಲಿ ಎರಡು ಎಸಿಗಳನ್ನು ಅಳವಡಿಸಲಾಗಿದೆ.
ವೈರಲ್ ವಿಡಿಯೋಗೆ ಜನರ ಪ್ರತಿಕ್ರಿಯೆ ಏನು?
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ @Gulzar_sahab ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿದ ಮಂದಿ ಅಚ್ಚರಿ ಜೊತೆಗೆ ಆತನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆತನ ಹೊಟ್ಟೆ ತುಂಬಿಸುವ ಪ್ರಾಣಿಗಳನ್ನು ಆತ ಕೊನೆಗೂ ಕೈಬಿಟ್ಟಿಲ್ಲ ಅವುಗಳಿಗೂ ಆರಾಮದಾಯಕ ಜೀವನ ನೀಡಲು ಆತ ಮುಂದಾಗಿದ್ದಾನೆ ಎಂದು ಆತನ ಕಾರ್ಯ ಹೊಗಳಿದ್ದಾರೆ.
ಅಲ್ಲದೆ ಇದ್ದರೆ ಈ ರೀತಿ ಸಾಕು ಪ್ರಾಣಿಗಳ ಮಾಲೀಕರು ಇರಬೇಕು. ಎಮ್ಮೆಗಳಿಗೂ ಇಷ್ಟೊಂದು ಸೌಕರ್ಯ ಮಾಡಿಕೊಟ್ಟಿರುವ ಈತ ನಿಜವಾಗಿಯೂ ಹೃದಯವಂತ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಜೊತೆಗೆ ಈ ಪ್ರಾಣಿಗಳು ಎಷ್ಟು ಪುಣ್ಯ ಮಾಡಿವೆ ನೋಡಿ, ನಾನು ಮನೆಯಲ್ಲಿ ಫ್ಯಾನ್ ಕೆಳಗೆ ಇದ್ದರೂ ಬಿಸಿ ಗಾಳಿಯಿಂದ ತಲ್ಲಣಗೊಂಡಿದ್ದೇನೆ. ಆದ್ರೆ ಈ ಎಮ್ಮೆಗಳು ಎಸಿಯ ತಣ್ಣನೆಯ ಗಾಳಿಯಲ್ಲಿ ಎಂಜಾಯ್ ಮಾಡುತ್ತಿವೆ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಸಿಗಾಳಿ ಕೊನೆಯಾಗುವರೆಗೂ ಆ ಎಮ್ಮೆಗಳು ಎಸಿಯ ತಂಪಾದ ಗಾಳಿ ಸವಿಯಲಿ ಎಂದು ಹಾರೈಸಿದ್ದಾರೆ.



Click it and Unblock the Notifications
