Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಮುಂಬೈಯಲ್ಲಿ ಅರೆ ಹುಚ್ಚನಾಗಿ ಕಂಡ ಪ್ರಸಿದ್ಧ ಬಾಲಿವುಡ್ ನಟ: ಆಗ ನೋಡಿದವರು ಈಗ ಛೇ.. ಗುರುತಿಸಲೇ ಇಲ್ಲ ಅಂತಿದ್ದಾರೆ
ಅಷ್ಟೊಂದು ದೊಡ್ಡ ನಟ ಬೀದಿಯಲ್ಲಿ ಹೋಗುತ್ತಿದ್ದರೆ ಜನ ಯಾರಪ್ಪಾ ಈ ಗಲೀಜು ಮನುಷ್ಯ ಎಂದು ದೂರ ಸರಿಯುತ್ತಿದ್ದರು. ನೋಡಿದರೆ ಸ್ನಾನ ಮಾಡಿ ವರ್ಷವಾದಂಥ ಲುಕ್, ಕೆದರಿದ ಕೂದಲು, ಉದ್ದದ ಗಡ್ಡ, ಚಿಂದಿ ಬಟ್ಟೆ ಧರಿಸಿ ಅಂದೇರಿಯಲ್ಲಿ ಸುತ್ತುತ್ತಿರುವ ವ್ಯಕ್ತಿಯನ್ನು ನೋಡಿದ ಜನರು ಯಾರಪ್ಪಾ ಈತ ಆದಿ ಮಾನವನಂತೆ ವೇಷ ಭೂಷಣದಿಂದ ಸುತ್ತುತ್ತಿದ್ದಾನೆ ಅಲ್ವಾ ಎಂದು ಅಚ್ಚರಿಯಿಂದ ನೋಡಿ ಮುಂದೆ ಸಾಗುತ್ತಿದ್ದರು. ಜನರಿಗೆ ಈತ ಯಾರು ಎಂಬ ಒಂದು ಸಣ್ಣ ಕ್ಲೂ ಸಿಕ್ಕಿದ್ದರೆ ಅಲ್ಲಿಯ ಚಿತ್ರಣವೇ ಬದಲಾಗುತ್ತಿತ್ತು, ಟ್ರಾಫಿಕ್ ಜಾಮ್ ಆಗಿ ಬಿಡ್ತಾ ಇತ್ತು. ಅಷ್ಟಕ್ಕೂ ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಬಾಲಿವುಡ್ ನಟ ಅಮೀರ್ ಖಾನ್!

ಈ ಅಮೀರ್ ಖಾನ್‌ನ ಆದಿ ಮಾನವನ ಲುಕ್ ತುಂಬಾನೇ ವೈರಲ್ ಆಗ್ತಾ ಇದೆ, ನಟ ತನ್ನಿಷ್ಟಕ್ಕೆ ರಸ್ತೆಯಲ್ಲಿ ನಡೆದು ಹೋಗ್ತಾ ಇದ್ದಾರೆ, ಬಹುಶಃ ಈ ರೀತಿ ವೇಷಮರೆಸಿಕೊಳ್ಳದಿದ್ದರೆ ಅವರಿಗೆ ಅಷ್ಟೊಂದು ಫ್ರೀಯಾಗಿ ಸುತ್ತಾಡಲು ಸಾಧ್ಯವಿತ್ತೇ? ಇಷ್ಟೊಂದು ಆರಾಮವಾಗಿ ಓಡಾಡಬೇಕು ಎಂದು ಆ ನಟನಿಗೆ ಆಸೆ ಉಂಟಾಗಿರಬಹುದು. ಸಿನಿಮಾದ ಪ್ರಮೋಷನ್‌ಗೆ ಮಾಡಿರುವ ಈ ಗಿಮಿಕ್ ಮಾತ್ರ ತುಂಬಾ ಚೆನ್ನಾಗಿ ವರ್ಕ್ ಆಗಿದೆ.
To Ye Caveman Amir Khan Tha BC 😲😲
— POSITIVE FAN (@imashishsrrk) January 29, 2025
But Why ? pic.twitter.com/fRgDB6cEhr
ಅಮೀರ್‌ಖಾನ್ ಮೇಕಪ್‌ನ ಈ ವೀಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ
ಈ ಲುಕ್‌ನಲ್ಲಿ ಯಾರಿಗೂ ಒಂದಿಷ್ಟೂ ಸಂಶಯ ಬಂದಿಲ್ಲ, ಅಭಿಮಾನಿಗಳು ತುಂಬಾನೇ ಬುದ್ಧಿವಂತರು, ಮುಖ ಮುಚ್ಚಿಕೊಂಡು ಓಡಾಡಿದರೂ ಸೆಲೆಬ್ರಿಟಿಗಳನ್ನು ಕಂಡು ಹಿಡಿದು ಬಿಡುತ್ತಾರೆ. ಆದರೆ ಇಲ್ಲಿ ಅಮೀರ್ ಖಾನ್ ಅಷ್ಟೊಂದು ಜನವಿರುವ ಅಂದೇರಿಯಲ್ಲಿ ಬೀದಿ ಬದಿಯಲ್ಲಿ ಓಡಾಡಿದರೂ ಯಾರಿಗೂ ಒಂದಿಷ್ಟೂ ಸಂಶಯ ಬಂದಿಲ್ಲ.
Aamir Khan’s Caveman Transformation Video Takes the Internet by Storm .#AamirKhan #Caveman #Mumbai #bollywood #ViralVideo pic.twitter.com/NBZsxsBHWA
— Circle Of Bollywood (@CircleBollywood) January 30, 2025
ಇವರನ್ನು ಅಂದೇರಿಯಲ್ಲಿ ಕಂಡವರು ನಟನ ಗುರುತು ಸಿಗಲೇ ಇಲ್ಲ ಛೇ.. ಅಂದುಕೊಳ್ಳುತ್ತಿದ್ದಾರೆ
ಅಮೀರ್‌ಖಾನ್ ಜೊತೆ ಒಂದು ಫೋಟೋ ತೆಗಿಸಿಕೊಳ್ಳಬೇಕು ಎಂಬುವುದು ಎಷ್ಟೋ ಜನರ ಕನಸಾಗಿರುತ್ತದೆ, ನೋಡಿದರೆ ರಸ್ತೆಯಲ್ಲಿ ಅವರು ನಮ್ಮ ಪಕ್ಕದಲ್ಲಿಯೇ ಹಾದು ಹೋದರೂ ಜನರು ಮಾತನಾಡಿಸಲಿಲ್ಲ. ಅಲ್ಲಿ ಅರೆ ಹುಚ್ಚನಂತೆ ತಿರುಗಾಡಿದ್ದು ಅಮೀರ್ ಖಾನ್ ಎಂಬ ಚಿಕ್ಕ ಕ್ಲೂ ಸಿಗದಂತೆ ಸುತ್ತಾಡಿದರೆ ಅಲ್ಲಿಯ ಪರಿಸ್ಥಿತಿ ಏನಾಗುತ್ತಿತ್ತೋ... ಏನೇ ಆಗಲಿ ತಾನೊಬ್ಬ ಗ್ರೇಟ್ ನಟ ಎಂಬುವುದು ಈ ಮೂಲಕ ಕೂಡ ಸಾಬೀತು ಮಾಡಿದ್ದಾರೆ ಅಮೀರ್ ಖಾನ್...



Click it and Unblock the Notifications