Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮಗಳ ಮೊದಲ ಋತುಸ್ರಾವ ಸಂಭ್ರಮಿಸಿದ ಕುಟುಂಬ! ನೆಟ್ಟಿಗರಲ್ಲಿ ಕಣ್ಣೀರು ತರಿಸಿದ ವಿಡಿಯೋ!
ಭಾರತೀಯ ಸಂಸ್ಕೃತಿಯಲ್ಲಿ ಋತುಸ್ರಾವವನ್ನು ಗೌಪ್ಯವಾಗಿಡುವುದು ನಡೆದುಕೊಂಡು ಬಂದಿದೆ. ಅದ್ರಲ್ಲೂ ಮಹಿಳೆಯರ ವೈಯಕ್ತಿಕ ವಿಚಾರವಾಗಿ ಇದನ್ನು ಪರಿಗಣಿಸಲಾಗುತ್ತದೆ. ಹಾಗೆ ಋತುಸ್ರಾವದ ವಿಚಾರವು ಬಹಳ ಗೌಪ್ಯವಾಗಿ ಹಾಗೆ ಯಾರಿಗೂ ತಿಳಿಸದಂತೆ ನೋಡಿಕೊಳ್ಳುತ್ತಾರೆ. ಹಾಗೆ ಮೊದಲ ಬಾರಿಗೆ ಋತುಸ್ರಾವಕ್ಕೆ ಒಳಗಾಗುವುದು ಮನೆಯಲ್ಲಿ ಸಂಭ್ರಮ ಇರುವುದು ಸಹಜ. ಆದ್ರೆ ಕೆಲವು ಕಡೆ ಇಂದಿಗೂ ಋತುಸ್ರಾವವನ್ನು ತಪ್ಪಾಗಿ ಗ್ರಹಿಸುವುದು, ಅಥವಾ ಅಶುಭ ಎಂದು ಪರಿಗಣಿಸುವುದು ನೋಡಬಹುದು.
ಆದ್ರೆ ಇಲ್ಲೊಂದು ಕುಟುಂಬ ಹುಡುಗಿಯ ಮೊದಲ ಋತುಸ್ರಾವದ ವಿಚಾರವನ್ನು ಆಚರಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ಆಯುಷಾ ಎಂಬ ಹುಡುಗಿ ಇನ್‌ಸ್ಟಾಗ್ರಾಮ್‌ನಲ್ಲಿ , ನಿಮ್ಮ ಕುಟುಂಬವು ನಿಮ್ಮ ಮೊದಲ ಋತುಸ್ರಾವವನ್ನು ಈ ರೀತಿ ಆಚರಿಸುತ್ತದೆ ಎಂಬ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಹುಡುಗಿಯ ಕುಟುಂಬವು ತನ್ನ ಮೊದಲ ಮುಟ್ಟನ್ನು ಹೇಗೆ ಆಚರಿಸಿತು ಎಂಬುದನ್ನು ವಿಡಿಯೋ ವಿವರಿಸುತ್ತದೆ. ಆಕೆಯ ತಂದೆ ಸಂತೋಷ ಮತ್ತು ಕಾಳಜಿಯಿಂದ ತುಂಬಿ ಆಕೆಯನ್ನು ತಬ್ಬಿಕೊಳ್ಳುವುದು ನೋಡಬಹುದು. ಆಕೆಗೆ ಮುಟ್ಟಿನ ಸಮಯದಲ್ಲಿ ಪ್ರೀತಿ ಮತ್ತು ಬೆಂಬಲವನ್ನು ತೋರಿಸುವುದು ನೋಡಬಹುದು.
ಕುಟುಂಬ ಸದಸ್ಯರು ಒಬ್ಬೊಬ್ಬರಾಗಿ ಆಕೆಯ ಪಾದಗಳನ್ನು ಮುಟ್ಟಿ ಹಣವನ್ನು ಇಟ್ಟು ಆಕೆಯನ್ನು ಗೌರವಿವಿಸಿ ಮನೆಯೊಳಗೆ ಬರಮಾಡಿಕೊಳ್ಳಲಾಗುತ್ತಿದೆ. ಕುಟುಂಬದಲ್ಲಿ ಋತುಚಕ್ರದ ಆಚರಣೆಗೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರಿಗೆ ಇದು ಅಚ್ಚರಿ ಎನಿಸಿದೆ ಹಾಗೆ ಮತ್ತೆ ಕೆಲವರಿಗೆ ಇದೊಂದು ಶಿಕ್ಷಣ ನೀಡುವುದು ಸಮಾಜದಲ್ಲಿನ ರೂಡಿಯನ್ನು ಬದಲಾಯಿಸುವ ಆಶಾದಾಯಕ ಬೆಳವಣಿಗೆ ಎಂದು ಹಲವರು ಹೇಳಿದ್ದಾರೆ.
ಹೆಣ್ಣು ಮಗಳು ಮೊದಲ ಬಾರಿಗೆ ಋತುಸ್ರಾವಕ್ಕೆ ಒಳಗಾದಾಗ ಹಲವು ಮನೆಯಲ್ಲಿ ಸಂಭ್ರಮಿಸುತ್ತಾರೆ. ಆದ್ರೆ ಅದನ್ನು ಪ್ರಚಾರ ಪಡಿಸಲು ಹೋಗುವುದಿಲ್ಲ ಎಂದು ಹಲವುರು ಪ್ರತಿಕ್ರಿಯಿಸಿದ್ದಾರೆ. ಅದ್ರಲ್ಲೂ ಹಿಂದೂ ಸಂಪ್ರದಾಯದಲ್ಲಿ ಈ ಋತುಚಕ್ರದ ಸಮಯವನ್ನು ವಿಶೇಷವಾಗಿಸುತ್ತಾರೆ. ಇನ್ನು ಹಲವು ಸಮುದಾಯಗಳು, ಜನರಲ್ಲಿ ಇದನ್ನು ನಿಷಿದ್ಧಿತ ವಿಚಾರ ಎಂಬುದಾಗಿಯೂ ಕರೆಯಲಾಗುತ್ತದೆ.
ಈ ವಿಡಿಯೋ ವೈರಲ್ ಆದ ಬಳಿಕ ಸಾವಿರಾರು ಮಂದು ಪ್ರತಿಕ್ರಿಯಿಸಿದ್ದಾರೆ. ಕೆಲವರು ಮನೆಯವರು ಈ ನಡೆಯನ್ನು ಪ್ರಶಂಸಿಸಿದ್ದಾರೆ. ಮತ್ತೆ ಕೆಲವರು ಇದನ್ನು ಟೀಕಿಸಿರುವುದು ಸಹ ನೋಡಬಹುದು. ಪ್ರತಿಯೊಬ್ಬ ಹುಡುಗಿಯೂ ಮೊದಲ ಬಾರಿಗೆ ತನ್ನ ಋತುಚಕ್ರವನ್ನು ಅನುಭವಿಸಿದಾಗ ಅದು ಆಕೆಗೆ ಶಿಕ್ಷೆ ಎನಿಸಬಾರದು. ಆಕೆ ಎಲ್ಲಾ ಗೌರವಕ್ಕೂ ಅಹರ್ಳು ಎನಿಸಬೇಕು ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಸನಾತನ ಧರ್ಮದಲ್ಲಿ ಮಹಿಳೆಯನ್ನು ದೇವಿ ಎಂದು ಪರಿಗಣಿಸಲಾಗುತ್ತದೆ. ಹಾಗೆ ಕೆಲವರನ್ನು ಅಶುದ್ಧ ಎಂದು ಪರಿಹಣಿಸುವವರ ನಡುವೆ ಈ ವಿಡಿಯೋ ನನ್ನ ಕಣ್ಣಲ್ಲಿ ನೀರು ತರಿಸುತ್ತಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
'ಹುಡುಗಿಯ ಮೊದಲ ಮುಟ್ಟನ್ನು ಆಚರಿಸುವುದರ ಅರ್ಥವೇನು, ಅದರ ನಂತರ ಪ್ರತಿ ತಿಂಗಳು ಫ್ರಿಡ್ಜ್ ಅನ್ನು ಮುಟ್ಟಬಾರದು, ಅಡುಗೆಮನೆಗೆ ಕಾಲಿಡಬಾರದು, ಅವಳ ಕೋಣೆಯಿಂದ ಹೊರಗೆ ಹೋಗಬಾರದು .... ಮತ್ತು ಎಲ್ಲಕ್ಕಿಂತ ಕೆಟ್ಟದಾಗಿ, ಒಂಟಿಯಾಗಿ ತಿನ್ನಬೇಕು ಮತ್ತು ಅವಳ ಪಾತ್ರೆಗಳನ್ನು ಪ್ರತ್ಯೇಕವಾಗಿ ತೊಳೆಯಬೇಕು? ಮುಟ್ಟಿನ ಮೊದಲ ದಿನ ಆಚರಣೆಗೆ ಅರ್ಹವಾಗಿದ್ದರೆ, ಪ್ರತಿ ಚಕ್ರಕ್ಕೂ ಅದೇ ಗೌರವ, ಕಾಳಜಿ ಮತ್ತು ಘನತೆ ಅರ್ಹವಾಗಿದೆ' ಎಂದು ಒಬ್ಬರು ಹೇಳಿದ್ದಾರೆ. ಒಂದು ದಿನ ಮಾತ್ರವಲ್ಲ ಪ್ರತಿ ಬಾರಿಯೂ ಆಕೆಗೆ ಇದೇ ಗೌರವ ಸಿಗಲಿ ಎಂದು ಆಕೆ ಬರೆದುಕೊಂಡಿದ್ದಾಳೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಯ ಜೊತೆಗೆ ವೈರಲ್ ಕೂಡ ಆಗಿದೆ. ಹಲವರು ಹಲವು ರೀತಿಯ ಅಭಿಪ್ರಾಯ ಹೊರಹಾಕಿದ್ದಾರೆ.



Click it and Unblock the Notifications
