Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮಾರುಕಟ್ಟೆಗೆ ಬಂದಿದೆ ನಕಲಿ ಬೆಳ್ಳುಳ್ಳಿ..!!? ಹೇಗಿದೆ ಗೊತ್ತಾ?
ಮಾರುಕಟ್ಟೆಯಲ್ಲಿ ಈಗ ಅದೆಷ್ಟೋ ವಸ್ತುಗಳು ಈಗ ಕಲಬೆರಕೆ ಸಿಗುತ್ತವೆ. ನಾವು ಎಷ್ಟೇ ಎಚ್ಚರಿಕೆ ವಹಿಸಿ ಖರೀದಿ ಮಾಡಿದರೂ ಸಹ ಅದರಲ್ಲಿ ಕಲಬೆರಕೆ ಇದ್ದೇ ಇರುತ್ತೆ. ಕೆಲವೊಮ್ಮೆ ಕಲಬೆರಕೆ ಗುರುತಿಸುವುದು ಕಷ್ಟವಾಗುತ್ತದೆ, ಮತ್ತೆ ಕೆಲವೊಮ್ಮೆ ಗುರುತಿಸಿದರೂ ಪ್ರಯೋಜನವಾಗದಂತೆ ಆಗುತ್ತದೆ. ಅದರಲ್ಲೂ ನಾವು ಸೇವಿಸುವ ಆಹಾರ ಪದಾರ್ಥಗಳು ಈಗ ಕಲಬೆರಕೆಯಾಗಿಯೇ ಬರುತ್ತವೆ.
ಪ್ರಮುಖವಾಗಿ ತುಪ್ಪ, ಜೇನು ತುಪ್ಪ, ಎಣ್ಣೆ, ಮದ್ಯ, ಅಕ್ಕಿ, ಬೇಳೆ ಹೀಗೆ ಎಲ್ಲಾ ಪದಾರ್ಥಗಳು ಸಹ ಕಲಬೆರಕೆಯೇ ಸಿಗುತ್ತವೆ. ಕೆಲವು ಬಾರಿ ತೂಕದಲ್ಲಿ ಮೋಸ, ಹಾಳಾದ ಉತ್ಪನ್ನ ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಗ್ರಾಹಕರಿಗೆ ಮೋಸ ಆಗುವುದು ನಡೆದೇ ಇರುತ್ತದೆ. ಇನ್ನು ಇತ್ತೀಚಿಗೆ ಸುಲಭ ದಾರಿಯಲ್ಲಿ ಹಣ ಮಾಡಲು ಮುಂದಾದ ಜನ ಎಲ್ಲವನ್ನು ನಕಲು ಮಾಡಿ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ.

ಮಾರುಕಟ್ಟೆಗೆ ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮೊಟ್ಟೆ ಹೀಗೆ ಒಂದಲ್ಲಾ ಒಂದು ವಸ್ತು ಮಾರುಕಟ್ಟೆಯಲ್ಲಿ ಸಿಗೋದು ನಾವು ನೋಡಿದ್ದೇವೆ. ಆದ್ರೆ ಈಗೊಂದು ವೈರಲ್ ಆಗಿರುವ ವಿಡಿಯೋದಲ್ಲಿ ನಕಲಿ ಬೆಳ್ಳುಳ್ಳಿಯೊಂದು ಅಚ್ಚರಿ ಮೂಡಿಸಿದೆ. ಬೆಳ್ಳುಳ್ಳಿ ದರ ಈಗ ಗಗನಕ್ಕೇರಿರುವ ಸಂದರ್ಭದಲ್ಲಿ ನಕಲಿ ಬೆಳ್ಳುಳ್ಳಿಯನ್ನ ಮಾರುಕಟ್ಟೆಗೆ ಬಿಡಲಾಗಿದೆ.
ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಸಿಮೆಂಟ್‌ನಿಂದ ಮಾಡಿದ ನಕಲಿ ಬೆಳ್ಳುಳ್ಳಿ ಎಂದು ತೋರುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಗ್ರಾಹಕರಲ್ಲಿ ಕಳವಳಕ್ಕೆ ಕಾರಣವಾಗಿದೆ. ಒಬ್ಬ ವ್ಯಕ್ತಿ ಎರಡು ಬೆಳ್ಳುಳ್ಳಿಯ ವಿಡಿಯೋ ಮಾಡುತ್ತಿದ್ದಾನೆ. ಆದ್ರೆ ಅದರಲ್ಲಿ ಒಂದು ನಕಲಿಯಾಗಿದೆ. ಅದರಲ್ಲಿ ಯಾವುದು ಸಿಮೆಂಟ್‌ನಿಂದ ಮಾಡಲಾದ ಬೆಳ್ಳುಳ್ಳಿ ಎಂದು ಕಂಡುಹಿಡಿಯುವುದು ಬಹುತೇಕ ಅಸಾಧ್ಯವಾಗಿದೆ. ಏಕೆಂದರೆ ಎರಡೂ ಸಹ ಒಂದೇ ರೀತಿ ಇದ್ದು, ನಕಲಿ ಎಂದು ತಿಳಿಯುವುದು ಅಸಾಧ್ಯವಾಗಿದೆ.
ಬಳಿಕ ಆತ ಒಂದನ್ನು ಕೈಯಲ್ಲಿ ಎತ್ತಿಕೊಳ್ಳುತ್ತಾನೆ. ಆಗ ಅದು ಸಿಮೆಂಟ್‌ನಿಂದ ಮಾಡಲಾಗಿರುವ ಬೆಳ್ಳುಳ್ಳಿ ಎಂಬುದು ತಿಳಿದುಬರುತ್ತದೆ. ಏಕೆಂದರೆ ಸಿಮೆಂಟ್‌ನಿಂದ ಮಾಡಲಾದ ಬೆಳ್ಳುಳ್ಳಿಯನ್ನ ನೆಲದ ಮೇಲೆ ಹಾಕಿದಾಗ ಸರಿಯಾಗಿ ನಕಲಿ ಎಂದು ಮನವರಿಕೆಯಾಗುತ್ತಿದೆ. ಆದರೆ ಅಸಲಿಗೂ ನಕಲಿಗೂ ಯಾವುದೇ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟವಾಗುತ್ತದೆ.
ಇದು ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಮೂಟೆಗೆ ನೇರವಾಗಿ ಮಿಕ್ಸ್ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸಿಮೆಂಟ್‌ನಿಂದ ಮಾಡಲಾದ ಈ ಬೆಳ್ಳುಳ್ಳಿಯು ತುಂಬಾನೆ ಬಾರವಾಗಿರುತ್ತೆ. ಹೀಗಾಗಿ ಅದನ್ನು ಮೂಟೆಯ ಜೊತೆ ಸೇರಿಸಿದರೆ ತೂಕ ಹೆಚ್ಚಾಗುತ್ತದೆ, ಜೊತೆಗೆ ಅನುಮಾನವು ಬರುವುದಿಲ್ಲ. ಇದು ಕಳ್ಳರ ಆಲೋಚನೆಯಾಗಿದೆ.
ಸದ್ಯ ಈ ವಿಡಿಯೋ ನೋಡಿದ ಮಂದಿ ಮಾತ್ರ ಆತಂಕಕ್ಕೆ ಒಳಗಾಗಿದ್ದಾರೆ. ಈ ಪ್ರಪಂಚದಲ್ಲಿ ಯಾವುದು ಅಸಲಿ ಯಾವುದು ನಕಲಿ ಎಂದು ತಿಳಿಯುವುದೇ ದೊಡ್ಡ ಸವಾಲಾಗಿದೆ. ಯಾರಾದರು ಈ ದರದಲ್ಲಿ ಅರ್ಧ ಕೆ.ಜಿ ಬೆಳ್ಳುಳ್ಳಿ ಖರೀದಿಸಿದರೆ ಆತನಿಗೆ ಎರಡು ಸಿಮೆಂಟ್ ಬೆಳ್ಳುಳ್ಳಿ ಬಂದರೆ 30ರಿಂದ 40 ರುಪಾಯಿ ನಷ್ಟವಾದಂತೆಯೇ ಸರಿ. ಹೀಗಾಗಿ ಈಗ ಏನನ್ನೇ ಕೊಳ್ಳಬೇಕಾದರು ಎಚ್ಚರಿಕೆ ಅಗತ್ಯ ಎಂದು ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ.
ಇದರಲ್ಲಿ ರೈತರ ಕೈವಾಡ ಇದ್ದಂತೆ ಕಾಣುತ್ತಿಲ್ಲ ಮಾರುಕಟ್ಟೆಗೆ ಬಂದ ಬಳಿಕ ಅಲ್ಲಿ ಮಧ್ಯವರ್ತಿಗಳ ಕೈವಾಡ ಇರಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ರೀತಿ ಎಲ್ಲಾ ಪದಾರ್ಥಗಳು ನಕಲಿಯಾದರೆ ಖರೀದಿ ಮಾಡುವಾಗ ಎಲ್ಲಾ ವಸ್ತುಗಳನ್ನು ಪರೀಕ್ಷಿಸಿಯೇ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಬಳಕೆದಾರರು ಬರೆದುಕೊಂಡಿದ್ದಾರೆ.
ಇದನ್ನು ನೋಡಿ ಹಲವರು ಇಂತಹ ಮತ್ತೊಂದಿಷ್ಟು ವಸ್ತುಗಳು ಮಾರುಕಟ್ಟೆಗೆ ಬರಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.



Click it and Unblock the Notifications