Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
50 ನಿಮಿಷದಲ್ಲಿ ಜುಕರ್‌ಬರ್ಗ್ ಕಳೆದುಕೊಂಡಿದ್ದು ಬರೋಬ್ಬರಿ ₹820 ಕೋಟಿ..!
ಜಾಗತಿಕ ದಿಗ್ಗಜ ಸಂಸ್ಥೆ ಮೆಟಾ ಪ್ಲಾಟ್‌ಫಾರ್ಮ್‌ಗಳಲ್ಲಿ ಫೇಸ್‌ಬುಕ್ ಹಾಗೂ ಇನ್ಸ್‌ಸ್ಟಾಗ್ರಾಮ್‌ಗಳು ಕೋಟಿ ಕೋಟಿ ಬಳಕೆದಾರರ ಹೊಂದಿರುವ ಸಾಮಾಜಿಕ ಜಾಲತಾಣಗಳಾಗಿವೆ. ನಿನ್ನೆ ಕೆಲವೇ ನಿಮಿಷಗಳ ವರೆಗೆ ಈ ಎರಡೂ ಮಾಧ್ಯಮಗಳು ಕಾರ್ಯನಿರ್ವಹಿಸದೆ ಹಲವರಲ್ಲಿ ಆತಂಕ ಸೃಷ್ಟಿಸಿತ್ತು. ತಾಂತ್ರಿಕ ಕಾರಣದಿಂದಾಗಿ ಎಲ್ಲರ ಖಾತೆಯು ಒಮ್ಮೆ ಲಾಗ್ ಔಟ್ ಆಗಿ ಭಯ ಹುಟ್ಟಿಸಿತ್ತು.
ನಿಮಗೂ ಈ ರೀತಿಯ ಅನುಭವವಾಗಿರಬಹುದು. ನಿನ್ನೆ ರಾತ್ರಿ 8 ಗಂಟೆಯ ನಂತರ ಈ ರೀತಿಯ ಸಮಸ್ಯೆ ನಿಮ್ಮ ಅನುಭವಕ್ಕೂ ಬಂದಿರಬಹುದು. ನಿಮ್ಮ ಖಾತೆಗೆ ಎಷ್ಟು ಬಾರಿ ಲಾಕ್ ಇನ್ ಆಗಲು ಪ್ರಯತ್ನಿಸಿದರೂ ಪಾಸ್‌ವರ್ಡ್ ರಾಂಗ್ ಇಲ್ಲವೆ ಸೆಷನ್ ಟೈಮ್ ಔಟ್ ಎಂಬ ಸಂದೇಶ ಬಂದಿರಬಹುದು. ಇದರಿಂದ ಹಲವು ಅವರ ಫೇಸ್‌ಬುಕ್, ಇನ್ಸ್‌ಸ್ಟಾಗ್ರಾಮ್ ಹ್ಯಾಕ್ ಆಗಿರಬಹುದು ಎಂದುಕೊಂಡಿದ್ದರು. ಆದ್ರೆ ಇದು ಪ್ರಪಂಚದಾದ್ಯಂತ ಬಳಕೆದಾರರಿಗೆ ಆಗಿರುವ ತಾಂತ್ರಿಕ ದೋಷವಾಗಿತ್ತು.

ಇದು ವಿಶ್ವದಲ್ಲಿ ಶತಕೋಟಿ ಬಳಕೆದಾರರಿಗೂ ಉಂಟಾಗಿದ್ದು, ಹಲವರಿಗೆ ಒಂದು ಕ್ಷಣ ಏನಾಗುತ್ತಿದೆ ಎಂದು ತಿಳಿಯದೆ ಗೊಂದಲದಲ್ಲಿದ್ದರು. ಇದು ನಿಮಗೆ ಮಾತ್ರ ಪರಿಣಾಮ ಬೀರಿದ್ದಲ್ಲ ಇಡೀ ಕಂಪನಿಗೆ ಆ ನಿಮಿಷಗಳು ಹೊಡೆತ ಕೊಟ್ಟಿವೆ. ತಜ್ಞರ ಪ್ರಕಾರ ಕಂಪನಿಯ ಮೇಲೆ ಪ್ರಮುಖ ಆರ್ಥಿಕ ಪರಿಣಾಮವನ್ನೂ ಬೀರಿದೆ. ಈ ಮಾಧ್ಯಮಗಳ ಸರ್ವರ್ ಡೌನ್ ಆದ ಬಳಿಕ ಮೆಟಾ ಷೇರು ಬೆಲೆ 1.5ರಷ್ಟು ಕುಸಿತ ಕಂಡಿತ್ತು. ಅಂದರೆ ನೀವು ಊಹಿಸದಷ್ಟು ಮೌಲ್ಯದ ರೂಪಾಯಿ ಆ ನಿಮಿಷದಲ್ಲಿ ಕರಗಿದೆ.
ಮಾರ್ಕ್ ಜುಕರ್‌ಬರ್ಗ್‌ಗೆ ನಷ್ಟ ಆಗಿದ್ದೆಷ್ಟು..?
ಒಂದೆರಡು ನಿಮಿಷಗಳ ಕಾಲ ಈ ಸರ್ವರ್‌ಗಳು ಡೌನ್ ಆದರು ಬಳಕೆದಾರರು ಈ ಮಾಧ್ಯಮಗಳ ಬಳಸಲು ಸಾಧ್ಯವಾಗುವುದಿಲ್ಲ. ಈ ವೇಳೆ ಕಂಪನಿಗೆ ಕೋಟಿ ಕೋಟಿ ನಷ್ಟವಾಗುತ್ತದೆ. ಅದೇ ರೀತಿ ನಿನ್ನೆ ಸಹ 5O ರಿಂದ 60 ನಿಮಿಷಗಳ ಕಾಲ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಕೆಲವರಿಗೆ 2 ಗಂಟೆಗೂ ಹೆಚ್ಚು ಸಮಯ ಸಮಸ್ಯೆ ಎದುರಾಗಿತ್ತು.
ಆದರೆ ಈ ಬಾರಿ ಉಂಟಾದ ತಾಂತ್ರಿಕ ಸಮಸ್ಯೆಯಿಂದಾಗಿ ಜುಕರ್‌ಬರ್ಗ್ ಕಳೆದುಕೊಂಡ ಹಣ ಎಷ್ಟು ಎಂಬುದನ್ನು ತಜ್ಞರು ಈಗ ಬಹಿರಂಗಪಡಿಸಿದ್ದಾರೆ. ವೆಡ್‌ಬುಶ್ ಸೆಕ್ಯುರಿಟೀಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾನ್ ಐವ್ಸ್, ಡೈಲಿಮೇಲ್.ಕಾಮ್‌ಗೆ ಮಂಗಳವಾರ ಮಾರ್ಕ್ ಜುಕರ್‌ಬರ್ಗ್ ಸುಮಾರು $100 ಮಿಲಿಯನ್ ಆದಾಯವನ್ನು ಕಳೆದುಕೊಂಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಅಂದರೆ ಭಾರತೀಯ ರೂಪಾಯಿಯಲ್ಲಿ ಸರಿ ಸುಮಾರು 820 ಕೋಟಿ ರೂಪಾಯಿಗಳಾಗುತ್ತದೆ.
ಮೆಟಾ ಮಾಧ್ಯಮಗಳು ಡೌನ್ ಆಗಿದ್ದು ಇದೇ ಮೊದಲಲ್ಲ
ಮೆಟಾಗೆ ಸೇರಿರುವ ಸಾಮಾಜಿಕ ಮಾಧ್ಯಮಗಳ ಸರ್ವರ್‌ಗಳು ಡೌನ್ ಆಗಿರುವುದು ಇದು ಮೊದಲಲ್ಲ. ವರ್ಷದಲ್ಲಿ ಒಮ್ಮೆಯಾದರು ಈ ರೀತಿಯ ತಾಂತ್ರಿಕ ಸಮಸ್ಯೆಗೆ ಒಳಗಾಗುತ್ತಲೆ ಇರುತ್ತವೆ. ಜೊತೆಗೆ ಒಂದಿಷ್ಟು ಹಣ ಕಳೆದುಕೊಳ್ಳುತ್ತವೆ. ಆದರೆ ಈ ಬಾರಿ ತುಸು ಹೆಚ್ಚು ಸಮಯ ತಾಂತ್ರಿಕ ಸಮಸ್ಯೆ ಎದುರಿಸಿದೆ. ಕಳೆದ ವರ್ಷ ಜೂನ್ 16ರಂದು ಬಳಕೆದಾರರು ಇದೇ ರೀತಿಯ ಸಮಸ್ಯೆ ಎದುರಿಸಿದ್ದರು. ಅಂದು ವಾಟ್ಸಾಪ್ ಸಹ ಡೌನ್ ಆಗಿ ಮೆಸೇಜ್‌ಗಳು ವಾಯ್ಸ್ ನೋಟ್‌ಗಳು ಸಹ ಸೆಂಡ್ ಆಗುತ್ತಿರಲಿಲ್ಲ. ಎಂದಿನಂತೆ ಕೋಟಿ ಕೋಟಿ ಬಳಕೆದಾರರು ಸಮಸ್ಯೆಯನ್ನು ರಿಪೋರ್ಟ್ ಮಾಡಿದ್ದರು. ಇದಾದ ಕೆಲ ನಿಮಿಷದಲ್ಲಿ ತಾಂತ್ರಿಕ ಸಮಸ್ಯೆ ಬಗೆಹರಿದಿತ್ತು.
ಕ್ಷಮೆ ಕೋರಿದ ಮೆಟಾ ವಕ್ತಾರ ಆಂಡಿ ಸ್ಟೋನ್
"ನಮ್ಮ ಸೇವೆಗಳನ್ನು ಬಳಸಲು ಜನರು ತೊಂದರೆ ಎದುರಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ. ನಾವು ಇದೀಗ ಈ ಸಮಸ್ಯೆ ಸರಿಪಡಿಸಲು ಕೆಲಸ ಮಾಡುತ್ತಿದ್ದೇವೆ" ಎಂದು ಮೆಟಾ ವಕ್ತಾರ ಆಂಡಿ ಸ್ಟೋನ್ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.
ನಂತರದ ಪೋಸ್ಟ್‌ನಲ್ಲಿ, ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಸ್ಟೋನ್ ಮಾಹಿತಿ ಹಂಚಿಕೊಂಡರು. "ಇಂದು ತಾಂತ್ರಿಕ ಸಮಸ್ಯೆಯು ನಮ್ಮ ಕೆಲವು ಸೇವೆಗಳನ್ನು ಬಳಸಲು ಜನರಿಗೆ ತೊಂದರೆ ಉಂಟುಮಾಡಿದೆ. ಸಮಸ್ಯೆಗೆ ಒಳಗಾದ ಪ್ರತಿಯೊಬ್ಬರಿಗೂ ನಾವು ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸಿದ್ದೇವೆ ಮತ್ತು ಯಾವುದೇ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ, ಎಂದಿದ್ದರು.



Click it and Unblock the Notifications