Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
F-35B ಯುದ್ಧ ವಿಮಾನ ಮಾರಾಟಕ್ಕಿದೆ..! ಓಎಲ್‌ಎಕ್ಸ್‌ನಲ್ಲಿ ಹಾಕಿದ್ಯಾರು..?
ನೀವು ಹಲವು ವಸ್ತುಗಳ ಖರೀದಿಗೆ ಆನ್‌ಲೈನ್ ಅನ್ನು ನಂಬಿಕೊಂಡಿರಬಹುದು. ಅದರಲ್ಲೂ ಹಳೆಯ ವಸ್ತು ಖರೀದಿಗೆ ನೀವು ಒಎಲ್‌ಎಕ್ಸ್‌ನಂತಹ ಆನ್ಲೈನ್ ಶಾಪಿಂಗ್ ಆಪ್‌ಗಳ ಮೊರೆ ಹೋಗಿರಬಹುದು. ಓಎಲ್‌ಎಕ್ಸ್‌ನಲ್ಲಿ ಹಳೆಯ ವಸ್ತುಗಳು ಕಡಿಮೆ ಬೆಲೆಗೆ ಸಿಗುವುದು ನೋಡಬಹುದು. ಹೀಗಾಗಿ ಜನರು ಮರುಬಳಕೆ ಮಾಡಬಹುದಾದ ಎಲ್ಲಾ ವಸ್ತುಗಳನ್ನು ಕೂಡ ಇಲ್ಲಿ ಹಾಕುತ್ತಾರೆ. ಆ ವಸ್ತುಗಳು ಯಾರಿಗೆ ಅಗತ್ಯವಿದೆಯೋ ಅವರು ಖರೀದಿ ಮಾಡುತ್ತಾರೆ.
ಇನ್ನು ಓಎಲ್‌ಎಕ್ಸ್‌ನಲ್ಲಿ ಎಂದಾದರು ಯುದ್ಧ ವಿಮಾನ ಮಾರಾಟಕ್ಕಿರುವುದು ನೋಡಿದ್ದೀರಾ? ನಿಮಗೆ ಕೇಳಿದರೆ ಅಚ್ಚರಿಯಾಗುತ್ತಿರಬಹುದು, ಓಎಲ್‌ಎಕ್ಸ್‌ನಲ್ಲಿ ಯುದ್ಧ ವಿಮಾನವೊಂದು ಮಾರಾಟಕ್ಕಿದೆ. ಹೌದು ಕೇರಳದ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿರುವ F-35B ಲೈಟ್ನಿಂಗ್ II ಯುದ್ಧ ವಿಮಾನ ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿದೆ.

ಈ ಯುದ್ಧ ವಿಮಾನ ಇಂಗ್ಲೆಂಡ್ ವಾಯುಸೇನೆಗೆ ಸೇರಿದ್ದಾಗಿದೆ. ಆದ್ರೆ ಈಗ ಕೇರಳ ವಿಮಾನ ನಿಲ್ದಾಣದಲ್ಲಿ ಅನಾಥವಾಗಿದ್ದು, ಒಎಲ್‌ಎಕ್ಸ್ ಬಳಕೆದಾರರೊಬ್ಬರ ಇದರ ಫೋಟೋ ತೆಗೆದು ಅಪ್‌ಲೋಡ್ ಸಹ ಮಾಡಿದ್ದಾರೆ. ಇದು ಬ್ರಿಟಿಷ್ ರಾಯಲ್ ನೇವಿ ಬಳಸುತ್ತಿದ್ದ F-35B ಲೈಟ್ನಿಂಗ್ II ಯುದ್ಧ ವಿಮಾನವಾಗಿದೆ.
ಕೇರಳಕ್ಕೆ ಬಂದಿರುವುದೇಕೆ?
ಇಂಗ್ಲೆಂಡ್ ಸೇನೆಗೆ ಸೇರಿದ ಈ ಯುದ್ಧ ವಿಮಾನವು ಕೇರಳಕ್ಕೆ ಬಂದಿರುವುದೇ ಒಂದು ರೋಚಕವಾಗಿದೆ. F-35B ಜೆಟ್ ವಿಶ್ವದ ಅತ್ಯಂತ ಬಲಶಾಲಿ ಹಾಗೂ ಅತ್ಯಂತ ದುಬಾರಿ ಯುದ್ಧ ವಿಮಾನಗಳಲ್ಲಿ ಒಂದಾಗಿದೆ. ಆದ್ರೆ ಇದು ಹಾರಾಟ ನಡೆಸುವಾಗ ತಾಂತ್ರಿಕ ಸಮಸ್ಯೆ ಎದುರಿಸಿದ್ದ ಕಾರಣ ಕೇರಳ ವಿಮಾಣ ನಿಲ್ದಾಣದಲ್ಲಿ ಇಳಿಯಬೇಕಾಯಿತು. ಅದರಲ್ಲಿನ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಲವು ದಿನಗಳಿಂದ ನಿಲ್ಲಿಸಲಾಗಿದೆ.
ಇದು ಪ್ರಸ್ತುತ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶತ್ರುಗಳ ಮೇಲೆ ಕಣ್ಗಾವಲು ಇರಿಸಲು ಬಳಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಇತ್ತೀಚಿಗೆ ನಡೆದಿದ್ದ ಭಾರತೀಯ ನೌಕಾಪಡೆಯೊಂದಿಗಿನ ಜಂಟಿ ಸಮರಭ್ಯಾಸದಲ್ಲಿ ಈ ಯುದ್ಧ ವಿಮಾನ ಭಾಗಿಯಾಗಿತ್ತು, ಆದರೆ ತಾಂತ್ರಿಕ ಸಮಸ್ಯೆಯಿಂದ ಮರಳಿ ಬ್ರಿಟನ್ ನೆಲೆಗೆ ಹೋಗಲಾಗಿಲ್ಲ.
ಈ ವಿಮಾನಕ್ಕೆ ಬಹಳ ಭದ್ರತೆಯಲ್ಲಿ ಮೇಲ್ವಿಚಾರಣೆ ನಡೆಯುತ್ತಿದೆ. ಏಕೆಂದರೆ ವಿಶ್ವದ ದುಬಾರಿ ಜೆಟ್ ವಿಮಾನಗಳ ಪೈಕಿ ಇದು ಒಂದಾಗಿದೆ. ಬ್ರಿಟನ್ ಸೇನೆಯಲ್ಲಿ ಈ ವಿಮಾನ ಅತ್ಯಂತ ಬಲಶಾಲಿ ಎಂಬ ಹೆಗ್ಗಳಿಕೆ ಕೂಡ ಪಡೆದಿದೆ. ಆದ್ರೆ ಈ ವಿಮಾನ ಗುರುತಿಸಿದ ವ್ಯಕ್ತಿ ಇದರ ಫೋಟೋ ತೆಗೆದು ಒಎಲ್‌ಎಕ್ಸ್‌ನಲ್ಲಿ ಹಾಕಿದ್ದಾರೆ.
F-35B ಜೆಟ್ ವಿಮಾನವು ಸುಮಾರು 4 ಮಿಲಿಯನ್ ಯುಎಸ್ ಡಾಲರ್‌ಗೆ ಮಾರಾಟಕ್ಕಿದೆ ಎಂದು ಒಎಲ್‌ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಹಾಗೆ ಹೊಸ ಟೈರ್, ಹೊಸ ಬ್ಯಾಟರಿ, ಸ್ವಯಂಚಾಲಿಕ ಪಾರ್ಕಿಂಗ್ ವ್ಯವಸ್ಥೆ ಹೊಂದಿರು ಜೆಟ್ ಇದು ಎಂದು ಬರೆಯಲಾಗಿದೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಹ ಆಗುತ್ತಿದೆ. ಒಎಲ್‌ಎಕ್ಸ್‌ನಲ್ಲಿ ಈ ಪೋಸ್ಟ್ ನೋಡಿದ ಮಂದಿ ಶಾಕ್‌ಗೆ ಒಳಗಾಗಿದ್ದಾರೆ. ಕೆಲವರು ನಿಜವಾಗಿಯೂ ಯುದ್ಧ ವಿಮಾನ ಮಾರಾಟಕ್ಕಿದೆ ಎಂದು ಅಚ್ಚರಿ ಹೊರಹಾಕಿದ್ದಾರೆ. ಆದ್ರೆ ಈ ರೀತಿ ವಿಮಾನಗಳ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ಇದು ಸರ್ಕಾರದ ಆಸ್ತಿಯಾಗಿದೆ. ಆದ್ರೆ ಇದೊಂದು ತಮಾಷೆಯ ವಿಷಯವಾಗಿ ಚರ್ಚೆಯಾಗುತ್ತಿದೆ.
ಒಎಲ್‌ಎಕ್ಸ್ ಹೇಳಿದ್ದೇನು?
ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ವೈರಲ್ ಆಗಿತ್ತು, ಅದನ್ನೇ ಬಳಕೆದಾರರೊಬ್ಬರು ಒಎಲ್‌ಎಕ್ಸ್ ಸಂಸ್ಥೆಗೆ ಟ್ಯಾಗ್ ಈ ವಿಚಾರ ಎಷ್ಟು ಸತ್ಯ ಎಂಬುದನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಒಎಲ್‌ಎಕ್ಸ್ 'ಆತ್ಮೀಯ OLX ಬಳಕೆದಾರರೇ, ನಿಮಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ನಾವು ಇದನ್ನು ನಿಮಗಾಗಿ ತ್ವರಿತವಾಗಿ ಪರಿಹರಿಸಲು ಬಯಸುತ್ತೇವೆ. ದಯವಿಟ್ಟು ಸಂಪೂರ್ಣ ವಿವರಗಳೊಂದಿಗೆ [email protected] ಗೆ ಇಮೇಲ್ ಕಳುಹಿಸಿ ಇದರಿಂದ ನಾವು ಮತ್ತಷ್ಟು ಪರಿಶೀಲಿಸಬಹುದು' ಎಂದು ತಿಳಿಸಿದೆ.



Click it and Unblock the Notifications
