Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಪುರುಷರಿಗೆ ಬಲಗಣ್ಣು ಮಹಿಳೆಯರಿಗೆ ಎಡಗಣ್ಣು ಹಾರಿದರೆ ಏನರ್ಥ?
ಒಮ್ಮೊಮ್ಮೆ ನಮ್ಮ ಬಲಗಣ್ಣು ಅಥವಾ ಎಡಗಣ್ಣು ಹಾರುವುದು, ಈ ರೀತಿಯಾದಾಗ ಶುಭ, ಅಶುಭ ಎಂಬ ನಂಬಿಕೆಗಳಿವೆ. ಪುರುಷರಿಗೆ ಬಲಗಣ್ಣು ಹಾರಿದರೆ ಒಳ್ಳೆಯದು, ಮಹಿಳೆಯರಿಗೆ ಎಡಗಣ್ಣು ಹಾರಿದರೆ ಒಳ್ಳೆಯದು ಎಂದು ಹೇಳುತ್ತಾರೆ. ಕೆಲವೊಮ್ಮೆ ಕೆಲವೊಂದು ಗಂಟೆಗಳವರೆಗೆ ಈ ರೀತಿಯಾಗಿ ನಂತರ ಸರಿಹೋಗುವುದು.

ಆದರೆ ಇನ್ನು ಕೆಲವೊಮ್ಮೆ ಒಂದು ದಿನವಾದ ಕಣ್ರೆಪ್ಪೆ ಹಾರುವುದು ನಿಲ್ಲುವುದಿಲ್ಲ.
ಈ ರೀತಿ ಕಣ್ಣು ಹಾರಿದಾಗ ಅದನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಈ ರೀತಿ ಕಣ್ಣು ಹಾರುವುದರ ಹಿಂದಿರುವ ನಂಬಿಕೆಗಳೇನು? ವೈಜ್ಞಾನಿಕ ಕಾರಣಗಳೇನು ಎಂಬುವುದೆಲ್ಲಾ ಎಂದು ನೋಡೋಣ ಬನ್ನಿ:
ಕಣ್ಣುಅದುರುವುದು ಅಥವಾ ಹಾರುವುದರ ಹಿಂದಿರುವ ನಂಬಿಕೆಗಳು
* ವೈದಿಕ ಶಾಸ್ತ್ರದ ಪ್ರಕಾರ ಬಲಗಣ್ಣು ಹಾರಿದರೆ ಒಳ್ಳೆಯದು, ಎಡಗಣ್ಣು ಹಾರಿದರೆ ಒಳ್ಳೆಯದಲ್ಲ ಎಂಬ ನಂಬಿಕೆ ಇದೆ. ನಮ್ಮ ಬಲಗಣ್ಣು ಹಾರಿದರೆ ಏನೋ ಶುಭ ಸೂಚನೆಯಾಗಿದೆ ಎಂದು ಜನರು ಹೇಳಿದರೆ, ಎಡಗಣ್ಣು ಅಶುಭದ ಸೂಚನೆಯಾಗಿದೆ ಎಂದು ಹೇಳಲಾಗುವುದು.
ಲಿಂಗದ ಆಧಾರದ ಮೇಲೂ ಹೇಳಲಾಗುವುದು
ಪುರುಷರ ಬಲಗಣ್ಣು ಹಾರಿದರೆ ತುಂಬಾ ಒಳ್ಳೆಯದು, ಪುರುಷರಿಗೆ ಬಲಗಣ್ಣು ಹಾರಿದರೆ ಅವರ ಇಷ್ಟಾರ್ಥಗಳು ನೆರವೇರಲಿದೆ ಎಂಬುವುದರ ಸೂಚನೆಯಾಗಿದೆ. ಮಹಿಳೆಯರಿಗೆ ಎಡಗಣ್ಣು ಹಾರಿದರೆ ತುಂಬಾ ಒಳ್ಳೆಯದು. ಎಡಗಣ್ಣು ಹಾರಿದರೆ ಒಳ್ಳೆಯದಾಗುತ್ತದೆ ಎಂಬೆಲ್ಲಾ ನಂಬಿಕೆಗಳಿವೆ. ಇವುಗಳು ನಂಬಿಕೆಗಳೇ, ಮೂಢನಂಬಿಕೆಗಳೇ ಎಂಬುವುದು ಅವರವರ ಇಚ್ಛೆಗೆ ಬಿಟ್ಟದ್ದು.
ಇದರ ಹಿಂದಿರುವ ವೈಜ್ಞಾನಿಕ ಕಾರಣಗಳೇನು?
ಕಣ್ಣು ಹಾರುವುದರ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ. ಕಣ್ಣಿನ ಬಳಿಯ ನರಗಳು ದುರ್ಬಲವಾದಾಗ ಅಥವಾ ಬಳಲಿದಾಗ ಈ ರೀತಿ ಉಂಟಾಗುವುದು. . ಡಿಮ್ ಲೈಟ್‌ನಲ್ಲಿ ಕೆಲಸ ಮಾಡಿದಾಗ, ಸರಿಯಾಗಿ ನಿದ್ದೆ ಮಾಡದಿದ್ದರೆ, ತುಂಬಾ ಕೆಫೀನ್ ಪದಾರ್ಥಗನ್ನು ಸೇವಿಸಿದಾಗ, ನರ ಸಂಬಂಧಿತ ಸಮಸ್ಯೆ ಉಂಟಾದಾಗ, ತುಂಬಾ ಹೊತ್ತು ಕಂಪ್ಯೂಟರ್ ಮುಂದೆ ಕೂರುವುದರಿಂದ ಈ ರೀತಿ ಉಂಟಾಗುವುದು.
ಯಾವಾಗ ವೈದ್ಯರನ್ನು ಕಾಣಬೇಕು?
ಕಣ್ಣು ಹಾರಿದಾಗ ಯಾವುದೇ ಸಮಸ್ಯೆ ಇಲ್ಲ, ಕಣ್ಣು ಕೆಂಪಗಾದರೆ ವೈದ್ಯರಿಗೆ ತೋರಿಸಬೇಕು.
ವಿಟಮಿನ್ ಕೊರತೆಯಿಂದ ಕಣ್ಣು ಹಾರುವುದೇ?
ವಿಟಮಿನ್ ಬಿ 12, ವಿಟಮಿನ್ ಡಿ, ಮೆಗ್ನಿಷ್ಯಿಯಂ , ಎಲೆಕ್ಟ್ರೋಲೈಟ್ಸ್ ಕೊರತೆಯಾದಾಗ ಈ ರೀತಿ ಉಂಟಾಗುವುದು.



Click it and Unblock the Notifications