Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಪರೂಪದಲ್ಲಿ ಅಪರೂಪ: ಮೂರು ಕಾಲಿನ ಅಂಟಿಕೊಂಡ ಅವಳಿಗಳ ಜನನ
ಭೂಮಿ ಮೇಲೆ ಎಷ್ಟೆಲ್ಲಾ ಚಿತ್ರ ವಿಚಿತ್ರ ವಿದ್ಯಮಾನಗಳು ನಡೆಯುತ್ತವೆ ಎಂಬುದನ್ನು ನಾವು ನೋಡಿದ್ದೇವೆ. ಜೊತೆಗೆ ಹುಟ್ಟುವ ಮಕ್ಕಳು ಸಹ ಹಲವು ಬಾರಿ ವಿಚಿತ್ರವಾಗಿ ಜನಿಸುವ ಪ್ರಕರಣಗಳು ವರದಿಯಾಗುತ್ತವೆ. ಯಾವುದೇ ತಾಯಿ ಜನ್ಮ ನೀಡುವಾಗ ತನ್ನ ಮಗು ಆರೋಗ್ಯವಂತವಾಗಿರಲಿ ಎಂದೇ ಮೊದಲಾಗಿ ಪ್ರಾರ್ಥಿಸುತ್ತಾಳೆ. ಆರೋಗ್ಯವಿದ್ದರೆ ಉಳಿದ್ದದ್ದೆಲ್ಲಾ. ಒಂದು ವೇಳೆ ಯಾವುದಾದರೂ ನ್ಯೂನ್ಯತೆ ಅಥವಾ ವಿರೂಪವನ್ನು ಹೊತ್ತೇ ಜನಿಸಿದರೆ?.
ಹೌದು ಇಲ್ಲೊಂದು ಪ್ರಕರಣದಲ್ಲಿ ವಿಚಿತ್ರ ರೀತಿಯ ಮಗು ಜನಿಸಿದೆ. ಅತ್ಯಂತ ಅಪರೂಪದ ಘಟನೆಯಲ್ಲಿ, ಇಂಡೋನೇಷ್ಯಾದಲ್ಲಿ ಜನಿಸಿದ ಅವಳಿಗಳು ನಾಲ್ಕು ಕೈಗಳು, ಮೂರು ಕಾಲುಗಳು ಮತ್ತು ಹಿಂದು ಮುಂದಾದ ದೇಹ ರಚನೆ ಹೊಂದಿದ್ದಾರೆ.

(ಫೋಟೋ ಕೃಪೆ: Amjcaserep.com)
ನೋಡಲು ವಿಚಿತ್ರವಾಗಿ ಕಂಡು ಎರಡು ಮಕ್ಕಳ ದೇಹ ಮಧ್ಯದಲ್ಲಿ ಬೆಸೆದಿದೆ. ಎರಡು ತಲೆ ಎರಡು ಬದಿಗಳಲ್ಲಿದೆ. ಇಂತಹ ಅವಳಿಗಳನ್ನು ವೈಜ್ಞಾನಿಕವಾಗಿ ಇಶಿಯೋಪಾಗಸ್ ಟ್ರಿಪಸ್ ಎಂದು ಕರೆಯಲಾಗುತ್ತದೆ ಮತ್ತು ಎರಡು ಮಿಲಿಯನ್ ಪ್ರಕರಣದಲ್ಲಿ ಇದು ಬಲು ಅಪರೂಪದ ಪ್ರಕರಣವಾಗಿದೆ.
'ಸ್ಪೈಡರ್ ಟ್ವಿನ್ಸ್' ಎಂದೂ ಕರೆಯಲ್ಪಡುವ ಅಂತಹ ಸಂಯೋಜಿತ ಅವಳಿಗಳ ಬೆರಳೆಣಿಕೆಯಷ್ಟು ಮಾತ್ರ ದಾಖಲಿಸಲಾಗಿದೆ - ಇಂಡೋನೇಷಿಯಾದ ಹುಡುಗರ ಪ್ರಕರಣವನ್ನು ಅಮೇರಿಕನ್ ಜರ್ನಲ್ ಆಫ್ ಕೇಸ್ ರಿಪೋರ್ಟ್ಸ್‌ನಲ್ಲಿ ಪ್ರಕಟಿಸಲಾಗಿದೆ. ಅವಳಿ ಮಕ್ಕಳು 2018 ರಲ್ಲಿ ಜನಿಸಿದರು, ಆದರೆ ಈ ಪ್ರಕರಣವನ್ನು ಈ ವಾರ ಜರ್ನಲ್‌ನಲ್ಲಿ ಪ್ರಕಟಿಸಿದೆ. 5 ವರ್ಷಗಳ ಬಳಿಕ ಈ ರೀತಿ ಪ್ರಕರಣದ ಕುರಿತು ಚರ್ಚೆ ಆರಂಭವಾಗಿದೆ.
ಅಂತಹ 60 ಪ್ರತಿಶತಕ್ಕಿಂತಲೂ ಹೆಚ್ಚು ಪ್ರಕರಣಗಳಲ್ಲಿ, ಅವಳಿಗಳಲ್ಲಿ ಒಬ್ಬರು ಸಾಯುತ್ತಾರೆ. ಆದರೆ ಒಮ್ಮೆ ಅವರು ಬದುಕುಳಿದರೆ ಮುಂದೆ ಯಾವ ಅನಾರೋಗ್ಯ ಸಮಸ್ಯೆಯೂ ಎದುರಾಗದಂತೆ ದಿನ ಕಳೆಯಲಿದ್ದಾರೆ. ಆದರೆ ಈ ಅವಳಿಗಳು ಮುಂದೆ ಕೆಲವು ವರ್ಷಗಳ ಕಾಲ ಕುಳಿತುಕೊಳ್ಳಲು ಒದ್ದಾಡಬೇಕಾಗುತ್ತದೆ. ಆದರೆ ಮಲಗಲು ಯಾವುದೇ ಸಮಸ್ಯೆ ಇಲ್ಲ.
ಈ ಅವಳಿಗಳ ಮೂರನೇ ಕಾಲನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆರವು ಮಾಡಲಾಗಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಏಕೆಂದರೆ ಆ ಕಾಲಿನ ಕಾರಣದಿಂದ ಸಹೋದರರು ಕುಳಿತುಕೊಳ್ಳಲು ಪರದಾಡುತ್ತಿದ್ದರು. ಆದರೆ ಕಾಲನ್ನು ಶಸ್ತ್ರಿಚಿಕಿತ್ಸೆ ಮೂಲಕ ತೆಗೆದ ಬಳಿಕ ನೇರವಾಗಿ ಕುಳಿತುಕೊಳ್ಳಲು ಸಾಧ್ಯವಾಯಿತು. ಆದರೆ ಅವಳಿಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಬೇರ್ಪಡಿಸುವ ಯೋಚನೆ ಇಲ್ಲವಂತೆ. ಒಂದು ವೇಳೆ ಇಬ್ಬರನ್ನು ಬೇರ್ಪಡಿಸಿದರೆ ಅವರ ಜೀವಕ್ಕೆ ಹಾನಿಯಾಗಬಹುದು ಎನ್ನಲಾಗಿದೆ.
ಆದರೆ ಇಬ್ಬರ ಬೇರ್ಪಡಿಸುವ ಕಾರ್ಯಕ್ಕೆ ಇನ್ನೂ ಅವಕಾಶಗಳಿವೆಯಂತೆ. ಈ ಶಸ್ತ್ರಚಿಕಿತ್ಸೆ ಬಹಳ ಕ್ಲಿಷ್ಟವಾಗಿದ್ದು, ಒಂದು ವೇಳೆ ಇಬ್ಬರಲ್ಲಿ ಒಬ್ಬರ ಜೀವಕ್ಕೆ ಹಾನಿಯಾಗುವ ಸಂಭವವೇ ಹೆಚ್ಚಾಗಿರುತ್ತೆ ಎನ್ನುವುದು ವೈದ್ಯರ ಮಾತಾಗಿದೆ.
ಈ ರೀತಿಯ ಮಕ್ಕಳು ಜನಿಸಲು ಭ್ರೂಣಾವಸ್ಥೆಯಲ್ಲಿ ಉಂಟಾಗುವ ಕೋಶಗಳ ಬೆಳವಣಿಗೆ ಕಾರಣವಂತೆ. ಕೋಶಗಳ ವಿಭಜನೆಯ ಸಮಯದಲ್ಲಿ ಅಡಚಣೆ ಅಥವಾ ನ್ಯೂನತೆ ಉಂಟಾದಲ್ಲಿ ಈ ರೀತಿ ಕೋಶಗಳ ರೂಪುಗೊಳ್ಳುವಿಕೆಗೆ ಕಾರಣವಾಗುತ್ತದೆ.
ಇದಕ್ಕೂ ಮೊದಲು ಸಹ ಈ ರೀತಿಯ ವಿಚಿತ್ರ ರೀತಿಯ ಮಕ್ಕಳು ಜನಿಸಿದ್ದ ಪ್ರಕರಣಗಳಿದ್ದವು. ಎರಡು ತಲೆ ಒಟ್ಟಿಗೆ ಅಂಟಿಕೊಂಡು ಜನಿಸುವುದು, ಮೂರು ಕೈ ಮೂರು ಕಾಲು, ಒಂದು ಕಣ್ಣು ಹೀಗೆ ಕೋಶಗಳ ನ್ಯೂನತೆಯಿಂದ ಜನಿಸುವ ಮಕ್ಕಳ ಪ್ರಕರಣಗಳು ವರದಿಯಾಗಿವೆ. ಆದರೆ ಈ ರೀತಿ ಸ್ಪೈಡರ್ ಬೇಬಿ ಪ್ರಕರಣಗಳು ಬಲು ಅಪರೂಪವಾಗಿದೆ. ಒಂದು ಬಿಲಿಯನ್ ಪ್ರಕರಣದಲ್ಲಿ ಒಂದು ಕೇಸ್ ಈ ರೀತಿಯ ಮಕ್ಕಳ ಹುಟ್ಟಿಗೆ ಕಾರಣವಾಗಲಿದೆ. ಸದ್ಯ ಈ ಮಕ್ಕಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ಅಚ್ಚರಿಗೆ ಕಾರಣವಾಗಿದೆ.



Click it and Unblock the Notifications


